• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Pramod Muthalik: ಮಂಡ್ಯ ಅರ್ಚಕರ ಕೊಲೆ ಹಿಂದೆ ಇಸ್ಲಾಮಿಕ್ ಜಿಹಾದ್ ಶಂಕೆ; ಪ್ರಮೋದ್ ಮುತಾಲಿಕ್ ಆರೋಪ

Pramod Muthalik: ಮಂಡ್ಯ ಅರ್ಚಕರ ಕೊಲೆ ಹಿಂದೆ ಇಸ್ಲಾಮಿಕ್ ಜಿಹಾದ್ ಶಂಕೆ; ಪ್ರಮೋದ್ ಮುತಾಲಿಕ್ ಆರೋಪ

ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್

ಹುಂಡಿ ಹಣಕೋಸ್ಕರ ಹತ್ಯೆ ನಡೆದಿದೆ ಎಂದರೆ ನನಗೆ ಅನುಮಾನವಾಗುತ್ತಿದೆ. ಇದರ ಇಂದೆ ಇಸ್ಲಾಮಿಕ್ ಜಿಹಾದ್ ಕೆಲಸ ಮಾಡಿದರೂ ಮಾಡಿರಬಹುದು. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಪ್ರಮೋದ್ ಮುತಾಲಿಕ್ ಅನುಮಾನ ವ್ಯಕ್ತಪಡಿಸಿದ್ದಾರೆ.

  • Share this:

ಮಂಡ್ಯ (ಸೆ. 12): ಮಂಡ್ಯದಲ್ಲಿ ಮೂವರು ಅರ್ಚಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ಹೊರಹಾಕಿದ್ದಾರೆ. ಹುಂಡಿ ಹಣಕೋಸ್ಕರ ಹತ್ಯೆ ನಡೆದಿದೆ ಎಂದರೆ ನನಗೆ ಅನುಮಾನವಾಗುತ್ತಿದೆ. ಇದರ ಇಂದೆ ಇಸ್ಲಾಮಿಕ್ ಜಿಹಾದ್ ಕೆಲಸ ಮಾಡಿದರೂ ಮಾಡಿರಬಹುದು. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಮಂಡ್ಯ ನಗರದ ಅರ್ಚಕರ ಹತ್ಯೆಯನ್ನ ಖಂಡಿಸುತ್ತೇನೆ. ಮುಜರಾಯಿ ದೇವಸ್ಥಾನಗಳಲ್ಲಿ ಎಲ್ಲಾ ಕಡೆ ಸಿಸಿ ಕ್ಯಾಮರಾಗಳಿವೆ. ಇಲ್ಲಿ ಸಿಸಿ ಕ್ಯಾಮರಾ ಕೆಟ್ಟುಹೋಗಿದೆ ಎಂದು ಸಬೂಬು ಹೇಳುತ್ತಿದ್ದಾರೆ. ಸಿಸಿ ಕ್ಯಾಮರ ಸರಿಪಡಿಸುವಷ್ಟು ಬುದ್ದಿ ಇಲ್ವ ಅವರಿಗೆ? ಮುಜರಾಯಿ ಇಲಾಖೆಯ ಅಧಿಕಾರಿಗಳನ್ನು ತಕ್ಷಣವೇ ಸಸ್ಪೆಂಡ್ ಮಾಡಬೇಕು. ಅಮಾಯಕ ಅರ್ಚಕರ ಹತ್ಯೆ ನಡೆದಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆದ ಬಳಿಕ ಸತ್ಯಾಂಶ ಹೊರಬೀಳಲಿದೆ ಎಂದಿದ್ದಾರೆ.


ಹುಂಡಿ ಹಣಕೋಸ್ಕರ ಹತ್ಯೆ ನಡೆದಿದೆ ಎಂದರೆ ನನಗೆ ಅನುಮಾನವಾಗುತ್ತಿದೆ. ಇದರ ಇಂದೆ ಇಸ್ಲಾಮಿಕ್ ಜಿಹಾದ್ ಕೆಲಸ ಮಾಡಿದರೂ ಮಾಡಿರಬಹುದು. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ಇದೊಂದು ರೀತಿಯ ಭಯವನ್ನು ನಿರ್ಮಾಣ ಮಾಡುತ್ತಿದೆ. ಭಯ ಸೃಷ್ಟಿ ಮಾಸಿ, ಹಣಕ್ಕೆ ಡೈವರ್ಟ್ ಮಾಡುವ ಪ್ರಕ್ರಿಯೆ ಕೂಡ ಆಗಿರಬಹುದು ಎಂದು ಮುತಾಲಿಕ್ ಅನುಮಾನ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಅನೈತಿಕ ಚಟುವಟಿಕೆಯಿಂದಲೇ ಜಮೀರ್ ಅಹಮದ್ ಉನ್ನತ ಮಟ್ಟಕ್ಕೇರಿದ್ದಾರೆ; ರೇಣುಕಾಚಾರ್ಯ ಟೀಕೆ


ಮಂಡ್ಯದ ಅರಕೇಶ್ವರ ದೇವಸ್ಥಾನದ ಪೂಜಾರಿಗಳಾಗಿದ್ದ ಗಣೇಶ್, ಪ್ರಕಾಶ್ ಮತ್ತು ಆನಂದ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ದೇವಸ್ಥಾನದ ಹುಂಡಿಯನ್ನು ಕಳ್ಳತನ ಮಾಡಿದ್ದರು. ಮಂಡ್ಯದ ಶ್ರೀ ಅರ್ಕೇಶ್ವರ ದೇವಾಲಯದ ಪ್ರಾಂಗಣದಲ್ಲಿ ಮಲಗಿದ್ದ ಗಣೇಶ್ (35), ಪ್ರಕಾಶ್ (36) ಮತ್ತು ಆನಂದ್ (33) ಅವರನ್ನು ಶುಕ್ರವಾರ ಬೆಳಗ್ಗಿನ ಜಾವ ಹತ್ಯೆಗೈದು ಹುಂಡಿಯ ಹಣವನ್ನು ಕಳ್ಳತನ ಮಾಡಲಾಗಿತ್ತು. ಅವರು ದೇವಾಲಯದ ಅರ್ಚಕರು ಮತ್ತು ಕಾವಲುಗಾರರಾಗಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.


ಮೂವರು ರಾತ್ರಿ ಗೋಪುರ ಮುಖ್ಯದ್ವಾರದ ಬಾಗಿಲಿನ ಚಿಲಕವನ್ನು ಒಳಗಿನಿಂದ ಹಾಕಿಕೊಂಡು ಮಲಗಿದ್ದರು. ಉತ್ತರ ದಿಕ್ಕಿನ ಕಾಂಪೌಂಡ್ ಪಕ್ಕದಲ್ಲಿರುವ ಮರವನ್ನೇರಿ ದೇವಾಲಯದ ಒಳಗೆ ಪ್ರವೇಶಿಸಿರುವ ದರೋಡೆಕೋರರು ಮೊದಲು ಮೂವರನ್ನು ಕೊಲೆ ಮಾಡಿ ನಂತರ ಹುಂಡಿ ಒಡೆದಿದ್ದಾರೆ. ಬೆಳಗ್ಗೆ ಬೇರೆ ಅರ್ಚಕರು ದೇವಸ್ಥಾನಕ್ಕೆ ಬಂದಾಗ ಈ ಕೊಲೆಯ ವಿಚಾರ ಬಯಲಾಗಿತ್ತು.

Published by:Sushma Chakre
First published: