• Home
  • »
  • News
  • »
  • state
  • »
  • Azaan Dance: ಅಜಾನ್​ಗೆ ನೃತ್ಯ, ಇವರಿಗೆ ಬೇರೆ ಹಾಡು ಸಿಗಲಿಲ್ಲವಾ? ಪ್ರಮೋದ್ ಮುತಾಲಿಕ್ ಆಕ್ರೋಶ

Azaan Dance: ಅಜಾನ್​ಗೆ ನೃತ್ಯ, ಇವರಿಗೆ ಬೇರೆ ಹಾಡು ಸಿಗಲಿಲ್ಲವಾ? ಪ್ರಮೋದ್ ಮುತಾಲಿಕ್ ಆಕ್ರೋಶ

ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್

ಈ ಘಟನೆಗೆ ಕಾರಣರಾದವರನ್ನು ಅಮಾನತು ಮಾಡಬೇಕು. ಈ ಭಾಗದಿಂದಲೇ ಹಿಜಾಬ್ ಪ್ರಕರಣ ಆರಂಭವಾಗಿತ್ತು. ಇಂತಹ ಘಟನೆಗಳು ನಡೆಯದಂತೆ ತಡೆಯಬೇಕಿದೆ ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

  • News18 Kannada
  • Last Updated :
  • Karnataka, India
  • Share this:

ಉಡುಪಿಯ ಕುಂದಾಪುರದ (Kundapur, Udupi) ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಅಜಾನ್​ಗೆ ನೃತ್ಯ (Azan Dance) ಮಾಡಿರುವ ಕುರಿತು ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Mutalik) ಆಕ್ರೋಶ ಹೊರ ಹಾಕಿದ್ದಾರೆ. ಮದರ್​ ಥೆರೆಸಾ ಶಾಲೆಯಲ್ಲಿ ಅಜಾನ್ ಪ್ರಾರ್ಥನೆಯನ್ನು ನೃತ್ಯದ‌ ಮೂಲಕ ಪ್ರದರ್ಶನ ಮಾಡಲಾಗಿತ್ತು. ಇವರಿಗೆ ಬೇರೆ ಯಾವುದೇ ಹಾಡು (Song) ಸಿಗಲೇ‌ ಇಲ್ಲವೇ ಎಂದು ಪ್ರಶ್ನಿಸಿದ ಪ್ರಮೋದ್ ಮುತಾಲಿಕ್, ಹಿಂದೂ ಹುಡುಗಿಯರಿಂದ (Hindu Girls) ಅಜಾನ್ ಹಾಡಿಗೆ ನೃತ್ಯ ಮಾಡಿಸಿದ್ದಾರೆ. ಅಲ್ಲಾ ಒಬ್ಬನೇ ದೇವರು, ಅಲ್ಲಾ ಬಿಟ್ಟು ಬೇರೆ ದೇವರು ಪೂಜಿಸಬಾರದು ಎಂಬ ಉದ್ದೇಶ ಇವರದ್ದಾಗಿದೆ. ಆರು ಜ‌ನ ಹಿಂದೂ ವಿದ್ಯಾರ್ಥಿನಿಯರಿಂದ ನೃತ್ಯ ಮಾಡಿಸಿದ್ದಾರೆ. ವ್ಯವಸ್ಥಿತವಾಗಿ ಕುಲಗೆಡಿಸುವ ಉದ್ದೇಶ ಇದರಲ್ಲಿದೆ ಎಂದು ಆರೋಪಿಸಿದರು.


ಈ ಘಟನೆಗೆ ಕಾರಣರಾದವರನ್ನು ಅಮಾನತು ಮಾಡಬೇಕು. ಈ ಭಾಗದಿಂದಲೇ ಹಿಜಾಬ್ ಪ್ರಕರಣ ಆರಂಭವಾಗಿತ್ತು. ಇಂತಹ ಘಟನೆಗಳು ನಡೆಯದಂತೆ ತಡೆಯಬೇಕಿದೆ ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.


ಹಂತಕನಿಗೆ ಗಲ್ಲು ಶಿಕ್ಷೆ ಆಗಲಿ


ದೆಹಲಿಯ ಶ್ರದ್ಧಾ ಕೇಸ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಪ್ರಮೋದ್ ಮುತಾಲಿಕ್, ಈ ಘಟನೆ ಇಡೀ ಮಾನವ ಕುಲಕ್ಕೆ ಕಳಂಕ. ತಾಲಿಬಾನ್​​​ಕ್ಕಿಂತ ಅತೀತವಾದಂತ ಕ್ರೌರ್ಯ‌ ಮೆರೆದ ಹಂತಕನಿಗೆ ಗಲ್ಲು ಶಿಕ್ಷೆ‌ನೀಡಬೇಕು. ಇವನಿಗೆ ಜೀವಾವಧಿ ಹಾಗೂ ಇತರೆ ವಿಚಾರವಾಗಿ ಕೋರ್ಟ್​​ ವಿಳಂಬ ಮಾಡಬಾರದು ಎಂದರು.


ಈ ರೀತಿಯ ಪ್ರವೃತ್ತಿ ಕೂಡಲೇ ನಿಲ್ಲಿಸಬೇಕು. ಕೋರ್ಟ್ ಒಂದೇ ತಿಂಗಳಲ್ಲಿ ಈ ಸಂಬಂಧ ತೀರ್ಪು ನೀಡಬೇಕು. ಇದರ ಬಗ್ಗೆ ಹಿಂದೂ ಹುಡುಗಿಯರು ಪಾಠ ಕಲಿಯಬೇಕು. ಕಳೆದ 20 ವರ್ಷಗಳಿಂದ ಲವ್ ಜಿಹಾದ್ ಘಟನೆಗಳು ನಡೆಯುತ್ತ ಬಂದಿವೆ. ಹಿಂದೂ ಯುವತಿಯರು ಮುಸ್ಲಿಂ ಯುವಕರ ಬೆನ್ನು ಹತ್ತಬೇಡಿ ಎಂದು ಕರೆ ಕೊಟ್ಟರು.


pramod mutalik reacts on Azaan Dance Controversy mrq
ಅಜಾನ್​ಗೆ ಮಕ್ಕಳಿಂದ ನೃತ್ಯ


ಪೋಷಕರೇ ಮಕ್ಕಳ ಬಗ್ಗೆ ಗಮನ ಕೊಡಿ


ಈಗ ಶ್ರದ್ಧಾ ಘಟನೆ ಮೂಲಕ ಪಾಠ ಕಲಿಯಬೇಕಿದೆ. ಈಗಲೂ ಪಾಠ ಕಲಿಯದೇ ಹೊದರೇ ಹಾಳಾಗಿ ಹೋಗ್ತಿರಾ ಎಂದು ಎಚ್ಚರಿಕೆ ನೀಡಿದರು. ಹಿಂದೂ ಯುವತಿಯರ ತಂದೆ-ತಾಯಿ ಎಚ್ಚರದಿಂದ ಇರಬೇಕು ಪಾಲಕರು ಕೂಡ ತಮ್ಮ‌ ಹೆಣ್ಣು ಮಕ್ಕಳು ಯಾರೊಂದಿಗೆ ವ್ಯವಹಾರ ಮಾಡುತ್ತಿದ್ದಾರೆ ಎಂದು ಗಮನಿಸಬೇಕು ಎಂದು ಪೋಷಕರಿಗೆ ಸಲಹೆ ನೀಡಿದರು.


ಇದನ್ನೂ ಓದಿ: Hijab Row: ಹಿಜಾಬ್ ತೀರ್ಪು ನೀಡಿದ ಮುಖ್ಯ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ; ದೂರು ದಾಖಲು


ಮುಸ್ಲಿಂ ಗುತ್ತಿಗೆದಾರ


ಮೈಸೂರು ಗುಂಬಜ್ ಮಾದರಿ ಬಸ್ ನಿಲ್ದಾಣ ವಿವಾದಕ್ಕೆ ಪ್ರತಿಕ್ರಿಯಿಸಿ ಸಂಸದ ಪ್ರತಾಪ್ ಸಿಂಹ ಅವರಿಗೆ ಬೆಂಬಲ ನೀಡಿದರು. ಇದೊಂದು ಇಸ್ಲಾಮಿಕರಣ, ವ್ಯವಸ್ಥಿತವಾಗಿ ಬಸ್​ ಶೆಲ್ಟರ್ ಮಾಡಲಾಗಿದೆ. ಇದೊಂದು ಮುಸ್ಲಿಂ ಗುತ್ತಿಗೆದಾರ, ಎಂಜಿನೀಯರ್ ಮಾಡಿರುವ ಇಸ್ಲಾಮಿಕರಣ ಎಂದು ಆರೋಪಿಸಿದರು.


ಅರಮನೆಗೆ ಹೋಲಿಕೆ ಮಾಡೋದು ಸರಿ ಅಲ್ಲ


ಬಸ್​ ನಿಲ್ದಾಣವನ್ನು ಮೈಸೂರು ಅರಮನೆ‌ ಹೋಲಿಸಿ ಸಮರ್ಥನೆ‌ ಮಾಡಲಾಗುತ್ತಿದೆ. ಇದನ್ನು ಅರಮನೆಗೆ ಹೋಲಿಕೆ ಮಾಡಬಾರದು. ಬಸ್​ ನಿಲ್ದಾಣದ ಮೇಲೆ ಗುಂಬಜ್ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.


pramod mutalik reacts on Azaan Dance Controversy mrq
ಪ್ರಮೋದ್ ಮುತಾಲಿಕ್


ಹುಬ್ಬಳ್ಳಿಯಲ್ಲಿ ನಿರಂತರವಾಗಿ ಮತಾಂತರ ಘಟನೆಗಳು ನಡೆಯುತ್ತಿವೆ. ಶ್ರೀಧರ್ ಘಟನೆ, ನವನಗರದಲ್ಲಿ ನಡೆದಿದೆ. ಬಡ ಕುಟುಂಬದಲ್ಲಿದ್ದ ಸುಮಾರು 800 ಜನರನ್ನು ಮತಾಂತರ ಮಾಡಲಾಗಿತ್ತು. ಅದರಲ್ಲಿ 400 ಜನರನ್ನು ವಾಪಸ್ ತರಲಾಗಿತ್ತು. ಆದರೂ ಮತ್ತೆ ಈಗ ಮನೆಗಳನ್ನು ಒಡೆಯುವ ಕೆಲಸ ನಡೆಸಿದ್ದಾರೆ ಎಂದರು.


ಇದನ್ನೂ ಓದಿ:  Udupi: ಅಜಾನ್​​ಗೆ ಮಕ್ಕಳಿಂದ ನೃತ್ಯ; ಹಿಂದೂ ಸಂಘಟನೆಗಳ ಆಕ್ರೋಶ


ಕ್ರಿಶ್ಚಿಯನ್ನರಿಂದ ಮನಸ್ಸುಗಳನ್ನು ಒಡೆಯುವ ಕೆಲಸ


ಪತ್ನಿಯನ್ನು ಮತಾಂತರ ಮಾಡಿದ್ದಾರೆ. ಗಂಡನಿಗೆ ಆಕೆ ಒತ್ತಡ ಹಾಕಿದ್ದಾಳೆ. ಮತಾಂತರ ಆಗು ಇಲ್ಲವಾದರೆ ಸಂಸಾರ ಮಾಡೋದಿಲ್ಲ ಎಂದಿದ್ದಾಳೆ. ಕ್ರಿಶ್ಚಿಯನ್‌ರು ಮನಸ್ಸು, ಮನೆಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಮತಾಂತರ ನಿಷೇಧ ಕಾಯಿದೆ ಇದೆ. ಈಗಾಗಲೇ ಕಾನೂನು ರಚನೆ ಆಗಿದೆ, ಆದರೆ ಅದು ಪಾಲನೆ ಅಗ್ತಿಲ್ಲ. ಈ ಬಗ್ಗೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ. ಸರ್ಕಾರ ಕೂಡಲೇ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.

Published by:Mahmadrafik K
First published: