Hijab Row: ಸೊಕ್ಕಿನಿಂದ ವರ್ತನೆ ಮಾಡುತ್ತ ಹಿಜಾಬ್ ಧರಿಸಿ ಬಂದವರ ಮೇಲೆ ಕೇಸ್ ಹಾಕಿ: ಪ್ರಮೋದ್ ಮುತಾಲಿಕ್

ಹಿಜಾಬ್ ಧರಿಸಿದ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಆಡಳಿತ ಮಂಡಳಿ ಹೇಗೆ ಅನುಮತಿ ನೀಡಿದೆ. ಇದಕ್ಕೆ ಅವರು ಸಹ ಜವಾಬ್ದಾರರು ಆಗಿದ್ದಾರೆ. ಹಿಜಾಬ್ ಧರಿಸಲು ಅವಕಾಶ ಮಾಡಿಕೊಟ್ಟಿದ್ದು ಹೇಗೆ ಎಂದು ಪ್ರಮೋದ್ ಮುತಾಲಿಕ್ ಪ್ರಶ್ನೆ ಮಾಡಿದರು.

ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್

  • Share this:
ಕಾಲೇಜಿಗೆ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು (Muslim Students) ಹಿಜಾಬ್ (Hijab) ಧರಿಸಿಕೊಂಡು ಬರುತ್ತಿದ್ದಾರೆ ಎಂದು ಆರೋಪಿಸಿ ಮಂಗಳೂರಿನಲ್ಲಿ (Mangaluru) ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು (Students), ಕಟ್ಟುನಿಟ್ಟಿನ ನಿಯಮಗಳ ಜಾರಿಗೆ ಒತ್ತಾಯಿಸಿದ್ದಾರೆ. ಈ ಪ್ರತಿಭಟನೆ ಕುರಿತು ಶ್ರೀರಾಮ ಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್ (Srirama Sena Founder Pramod Mutalik) ಪ್ರತಿಕ್ರಿಯಿಸಿದ್ದಾರೆ. ಧಾರವಾಡದಲ್ಲಿ (Dharwad) ಮಾಧ್ಯಮಗಳ ಜೊತೆ ಮಾತನಾಡಿದ ಪ್ರಮೋದ್ ಮುತಾಲಿಕ್, ಕರ್ನಾಟಕ ಹೈಕೋರ್ಟ್ (Karnataka High Court) ತೀರ್ಪು ನೀಡಿದ ಬಳಿಕ ರಾಜ್ಯ ಶಾಂತಿಯಿಂದಿದೆ. ಈಗ ಮತ್ತೆ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ನ್ನು ಕೆದಕುವ ಪ್ರಯತ್ನವನ್ನು ಮಾಡುತ್ತಿರೋದು ಸರಿ ಅಲ್ಲ ಎಂದು ಹೇಳಿದ್ದಾರೆ.   

ಹೈಕೋರ್ಟ್ ಆದೇಶ ಧಿಕ್ಕರಿಸಿ ಹಿಜಾಬ್ ಧರಿಸೋದು ತಪ್ಪು. ನ್ಯಾಯಾಲಯ ನಮಗೆ ಸಂಬಂಧ ಇಲ್ಲ ಎಂಬಂತೆ ಮಾಡುತ್ತಿದ್ದಾರೆ. ಕುರಾನ್ ಆಧಾರದ ಮೇಲೆ ನಾವು ನಡೆಯೋರು ಎನ್ನುವವರ ಉದ್ಧಟತನ ಇದಾಗಿದೆ  ಎಂದು ಆಕ್ರೋಶ ಹೊರಹಾಕಿದರು.

ಹಿಜಾಬ್ ಧರಿಸಿ ಬಂದವರ ಮೇಲೆ ಕೇಸ್ ಹಾಕಿ

ಸೊಕ್ಕಿನಿಂದ ವರ್ತನೆ ಮಾಡುತ್ತ ಹಿಜಾಬ್ ಧರಿಸಿ ಬಂದವರ ಮೇಲೆ ಕೇಸ್ ಹಾಕಬೇಕು. ವಿದ್ಯಾರ್ಜನೆ ಮುಖ್ಯ ಅಲ್ಲ, ಹಿಜಾಬ್ ಮುಖ್ಯ ಅನ್ನೋ ವಿದ್ಯಾರ್ಥಿಗಳನ್ನು ಕಾಲೇಜುಗಳಿಂದ ಕಿತ್ತಾಕಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:  Girl Suicide: ಮದುವೆ ಆಗಲು ಮತಾಂತರದ ಕಂಡಿಷನ್; ಲವ್ ಜಿಹಾದ್​ಗೆ ಯುವತಿ ಬಲಿ; ಆರೋಪಿ ಪರಾರಿ

ಹಿಜಾಬ್ ಧರಿಸಿದ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಆಡಳಿತ ಮಂಡಳಿ ಹೇಗೆ ಅನುಮತಿ ನೀಡಿದೆ. ಇದಕ್ಕೆ ಅವರು ಸಹ ಜವಾಬ್ದಾರರು ಆಗಿದ್ದಾರೆ. ಹಿಜಾಬ್ ಧರಿಸಲು ಅವಕಾಶ ಮಾಡಿಕೊಟ್ಟಿದ್ದು ಹೇಗೆ ಎಂದು ಪ್ರಮೋದ್ ಮುತಾಲಿಕ್ ಪ್ರಶ್ನೆ ಮಾಡಿದರು.

ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಮುತಾಲಿಕ್ ಒತ್ತಾಯ

ಹಿಜಾಬ್ ವಿರುದ್ಧ ಎಬಿವಿಪಿ ಸಂಘಟನೆ ಪ್ರತಿಭಟನೆ ಮಾಡುತ್ತಿರೊದು ಸರಿಯಾದ ಕ್ರಮ. ಸರ್ಕಾರ ಕೂಡಲೇ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿನಿಯರ ಮೇಲೆ ಕ್ರಮ ಜರುಗಿಸಬೇಕು ಎಂದು ಮುತಾಲಿಕ್ ಒತ್ತಾಯಿಸಿದರು.

ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ರಾಜ್ಯಾದ್ಯಂತ ಈ ವಿವಾದ ದೊಡ್ಡದಾಗುತ್ತದೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆ ಆಗಲಿದೆ ಎಂದು ಹೇಳಿದರು.

ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ

ಇನ್ನೂ ಇದೇ ವಿಷಯದ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಇದರಲ್ಲಿ ಸರ್ಕಾರ, ಪೊಲೀಸರು, ಶಿಕ್ಷಣ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈಗಾಗಲೇ ಹಿಜಾಬ್ ಕುರಿತು ಕೋರ್ಟ್ ತೀರ್ಮಾನ ಆಗಿದೆ. ಬೇಕಿದ್ದರೆ ಸುಪ್ರಿಂಕೋರ್ಟ್‌ನಲ್ಲಿ ಹೋರಾಡಬಹುದು. ಹೈಕೋರ್ಟ್ ಆದೇಶ ಆಗಿ. ದೆಅದನ್ನು  ಪಾಲನೆ ಮಾಡದಿದ್ದರೆ ಹೇಗೆ ಎಂದು ಕಿಡಿಕಾರಿದರು.

ಇದಕ್ಕೆಲ್ಲಾ ಕಾಂಗ್ರೆಸ್ ಕುಮ್ಮಕ್ಕು

ದೇಶದ ಸಂವಿಧಾನಕ್ಕೆ ಇವರ ಬದ್ಧತೆ ಇಲ್ಲವಾ? ಈ ರೀತಿಯಲ್ಲಿ ಕಾನೂನು, ಕೋರ್ಟ್, ಸಂವಿಧಾನಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳಬಾರದು. ಹೀಗೆ ನಡೆದುಕೊಳ್ಳುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇದೆಲ್ಲ ಕಾಂಗ್ರೆಸ್ ಕುಮ್ಮಕ್ಕಿನಿಂದಲೇ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ

ಮಂಗಳೂರು ವಿಶ್ವವಿದ್ಯಾಲಯ (Mangaluru University) ವ್ಯಾಪ್ತಿಯಲ್ಲಿ ಬರುವ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್​ ಧರಿಸಿ ಬರುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು (Student) ಬೃಹತ್​ ಪ್ರತಿಭಟನೆ (Protest) ನಡೆಸಿದರು. ಶಾಲಾ-ಕಾಲೇಜುಗಳಲ್ಲಿ ಹಿಜಾಬ್​ಗೆ ನಿರ್ಬಂಧ ಇದ್ದರೂ ಅನೇಕ ವಿದ್ಯಾರ್ಥಿಗಳು  ಹಿಜಾಬ್​ ಧರಿಸಿಯೇ ಬರ್ತಿದ್ದಾರೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಇದನ್ನೂ ಓದಿ: Govt School: ವಿವಾದಕ್ಕೆ ಗ್ರಾಸವಾದ ಸರಕಾರಿ ಶಾಲೆಯಲ್ಲಿ ನಡೆದ ಗಣಪತಿ ಹವನ

ನಿಯಮ ಪಾಲಿಸುವಂತೆ ಒತ್ತಾಯ

ನಗರದ ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುತ್ತಿದ್ದಾರೆ. ನಿಯಮದಂತೆ ಹಿಜಾಬ್ ಧರಿಸಿ ಕಾಲೇಜಿಗೆ ಬರಲು ಅವಕಾಶವಿಲ್ಲ. ಆದರೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದಾರೆ. ಆದ್ದರಿಂದ ಹಿಜಾಬ್ ವಿರುದ್ಧ ಕಟ್ಟುನಿಟ್ಟಾಗಿ ನಿಯಮ ಪಾಲಿಸಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
Published by:Mahmadrafik K
First published: