Kali Swamyಗಳಿಗೆ ಮಸಿ ಬಳಿದಿರೋದು ಅಕ್ಷಮ್ಯ ಅಪರಾಧ, ಮುಸ್ಲಿಂ ಸಮುದಾಯ ಇತಿಹಾಸ ಒಪ್ಪಿಕೊಳ್ಳಲಿ: ಪ್ರಮೋದ್ ಮುತಾಲಿಕ್

ಈಗಾಗಲೇ ರಾಮಮಂದಿರ ಪೂರ್ಣ ಪ್ರಮಾಣ ಹಿಂದೂಗಳ ಕೈಗೆ ಬಂದಿದೆ. ಅದೇ ಮಾದರಿಯಲ್ಲಿ ಜ್ಞಾನವ್ಯಾಪಿ ಮಸೀದಿ ಕೂಡು ಹಿಂದೂಗಳದ್ದೆ. ಸ್ನೇಹ, ಸೌಹಾರ್ದತೆಯಿಂದ ಹಿಂದೂಗಳಿಗೆ ಬಿಟ್ಟು ಕೊಡಬೇಕು.

ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್

  • Share this:
ಧಾರವಾಡ: ಕಾಳಿ ಸ್ವಾಮೀಜಿಗಳಿಗೆ (Kali Swamiji) ಮಸಿ (Ink) ಬಳಿದಿರುವುದು ಅಕ್ಷಮ್ಯ ಅಪರಾಧ. ಕನ್ನಡ (Kannada) ವಿರೋಧಿಯಾಗಿ ಅವರು ಮಾತಾಡಿಲ್ಲ, ನಾನು ಅವರ ಜೊತೆ ಮಾತಾಡಿದ್ದೇನೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Mutalik) ಹೇಳಿದರು. ಧಾರವಾಡದಲ್ಲಿ (Dharwad) ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಸುದ್ದಿ ಪ್ರಕಾರ ಅವರು ಕೆಂಪೇಗೌಡರಿಗೆ (Kempegowda), ಕುವೆಂಪು (Kuvempu) ಅವರಿಗೆ ಬೈದಿದಾರೆ ಎಂದಿದೆ. ಆದರೆ ಆ ರೀತಿ ಅವರು ಯಾವ ಸಂದರ್ಭದಲ್ಲೂ ಬೈದಿಲ್ಲ. ಅಕಸ್ಮಾತ್ ಆ ರೀತಿ ಏನಾದ್ರು ಇದ್ದರೆ ದಾಖಲೆ ಬಿಡುಗಡೆ ಮಾಡಬೇಕು. ಯಾರು ದಾಳಿ ಮಾಡಿದ್ದಾರೆ ಅವರು ಬಿಡುಗಡೆ ಮಾಡಲಿ. ಈ‌ ರೀತಿ ಸನ್ಯಾಸಿಗಳ ಮೇಲೆ ಹಲ್ಲೆ ಮಾಡುವದು ಅಕ್ಷಮ್ಯ ಅಪರಾಧ, ನೀವು ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. 

ಕನ್ನಡ ಪರ ಹೋರಾಟಗಾರರಿಗೆ ನೋವಾಗಿದ್ದರೆ ಕೂತಕೊಂಡು ಚರ್ಚೆ ಮಾಡಬಹುದು. ಏನಾದರೂ ತಪ್ಪು ಎನಿಸಿದ್ದರೆ ಕೇಸ್ ಹಾಕಬಹುದಾಗಿತ್ತು. ಈ ರೀತಿ ಖಾವಿಧಾರಿ ಸನ್ಯಾಸಿಗೆ ಮಸಿ ಬಳಿಯುವಂತಾದ್ದು ಅಪರಾಧ. ನೀವು ತಪ್ಪು ಮಾಡಿದ್ದಿರಿ. ಶ್ರೀರಾಮ ಸೇನೆ ಸಂಘಟನೆ ಇದನ್ನ ಖಂಡಿಸುತ್ತೆ, ವಿರೋಧಿಸ್ತೇವೆ. ಕೂಡಲೇ ಕ್ಷಮೆ ಕೇಳಬೇಕು, ಯಾರೆಲ್ಲಾ ಇದ್ದಾರೆ ಅವರ ಮೇಲೆ ಸರ್ಕಾರ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇವತ್ತು ಕಾಳಿ ಸ್ವಾಮೀಜಿ, ನಾಳೆ ಇನ್ನೊಬ್ಬ ಖಾವಿಧಾರಿ ಮೇಲೆ ಕಿಡಿಗೆಡಿಗಳು ಮುಂದುವರೆಸುತ್ತಾರೆ. ಇದನ್ನು ಹದ್ದು ಬಸ್ತಿನಲ್ಲಿಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ವಾರಣಾಸಿ ಕೋರ್ಟ್ ಆದೇಶದ ಬಗ್ಗೆ ಪ್ರತಿಕ್ರಿಯೆ

ಇದೇ ಸಂದರ್ಭದಲ್ಲಿ ವಾರಣಾಸಿ ಕೋರ್ಟ್ ತೀರ್ಪು ವಿಚಾರವಾಗಿ ಮಾತನಾಡಿ, ಕೋರ್ಟ್ ತೀರ್ಪು ಸಮರ್ಪಕವಾಗಿದೆ. ಗೋಡೆ ಮೇಲಿನ ಹಿಂದೂ ಚಿಹ್ನೆಗಳು ಇರೋದನ್ನು ಹತ್ತಾರು ವರ್ಷದಿಂದ ಪೂಜೆ ಮಾಡುತ್ತ ಬಂದಿದ್ದಾರೆ. ಮುಲಾಯಂ ಸಿಂಗ್ ಅವಧಿಯಲ್ಲಿ ಅದನ್ನು ನಿಲ್ಲಿಸಿದ್ದರು. ಮುಸ್ಲಿಂರ ಓಲೈಕೆಗಾಗಿ ನಿರ್ಮಿಸಿದ್ದರು, ಅದಕ್ಕಾಗಿ ಅಲ್ಲಿನವರು ಕೋರ್ಟ್‌ಗೆ ಹೋಗಿ ಸರ್ವೆ ಆದೇಶ ಮಾಡಿಸಿದ್ದರು. ಸರ್ವೇ ಮಾಡಲು ಹೋದಾಗ ತಡೆದಿದ್ದರು. ನಿನ್ನೆ ಸರ್ವೆ ಮಾಡಲು ತೀರ್ಪು ಆಗಿದೆ, ಮೇ  17ರೊಳಗೆ ವರದಿ ಕೊಡಲು ಹೇಳಿದ್ದನ್ನು ಮುತಾಲಿಕ್ ಅವರು ಸ್ವಾಗತಿಸಿದರು.

ಇದನ್ನೂ ಓದಿ:  Male Mahadeshwara Temple: 34 ದಿನಗಳಲ್ಲಿ 2 ಕೋಟಿಗೂ ಅಧಿಕ ನಗದು, 127 ಗ್ರಾಂ ಚಿನ್ನ, 3 ಕೆಜಿ ಬೆಳ್ಳಿ ಸಂಗ್ರಹ

ಸರ್ವೆ‌ಗೆ ಅಡ್ಡಿ ಮಾಡೋದು ನೋಡಿದ್ರೆ ಇದು ದಾದಾಗಿರಿ ಮಾಡಿದಂತೆ‌ ಕಾಣುತ್ತಿದೆ. ಅಲ್ಲಿರೋದು ಕಾಶೀ ವಿಶ್ವನಾಥನ ದೇವಸ್ಥಾನ. ಔರಂಗಜೇಬನ ಕಾಲದಲ್ಲಿ ದೇವಸ್ಥಾನ ಒಡೆದು ಮಸೀದಿ ಮಾಡಿದ್ದಾರೆ. ಮಸೀದಿ ಎದುರಿಗೆ ಬಸವಣ್ಣ ಇದಾನೆ, ಅಂದ್ರೆ ಮಸೀದಿಗೂ ಬಸವಣ್ಣನಿಗೂ ಸಂಬಂಧ ಇಲ್ಲ. ಅಲ್ಲಿ ಈಶ್ವರ ಲಿಂಗ ಇತ್ತು ಅನ್ನೋದಕ್ಕೆ ಆ ಬಸವಣ್ಣನೇ ಆಧಾರ.

ಇತಿಹಾಸವನ್ನು ಮುಸ್ಲಿಂ ಸಮಾಜ ಒಪ್ಪಿಕೊಳ್ಳಲಿ

ಜ್ಞಾನವ್ಯಾಪಿ ಮಸೀದಿ ಅಂತಾ ಹೆಸರಿದೆ, ಅದು ಸಂಸ್ಕೃತ ಶಬ್ದ. ಕೋರ್ಟ್ ಸರ್ವೆಗೆ ಅವಕಾಶ ಕೊಟ್ಟಿದೆ, ಈಗ ತಡೆದರೆ ಬೀಗ ಒಡೆದು ಹೋಗಬೇಕು, ತಡೆಯೋದು ಯಾಕೆ. ಒಳಗಡೆ ಏನು ಬಾಂಬ್ ಇದಾವಾ, ಯಾಕೆ ಹೆದರಬೇಕು. ಸತ್ಯವನ್ನು, ಇತಿಹಾಸವನ್ನು ಮುಸ್ಲಿಂ ಸಮಾಜ ಒಪ್ಪಿಕೊಳ್ಳಬೇಕು ಎಂದರು.

ದೇವಸ್ಥಾನ ಒಡೆದು ಮಸೀದಿ ಕಟ್ಟಿದ ದಾಖಲೆ ಇದೆ

ಈಗಾಗಲೇ ರಾಮಮಂದಿರ ಪೂರ್ಣ ಪ್ರಮಾಣ ಹಿಂದೂಗಳ ಕೈಗೆ ಬಂದಿದೆ. ಅದೇ ಮಾದರಿಯಲ್ಲಿ ಜ್ಞಾನವ್ಯಾಪಿ ಮಸೀದಿ ಕೂಡು ಹಿಂದೂಗಳದ್ದೆ. ಸ್ನೇಹ, ಸೌಹಾರ್ದತೆಯಿಂದ ಹಿಂದೂಗಳಿಗೆ ಬಿಟ್ಟು ಕೊಡಬೇಕು. ನಮ್ಮ ನಿಮ್ಮಲ್ಲಿ ಬಾಂಧವ್ಯ ಚೆನ್ನಾಗಿ ಇರುತ್ತೆ, ಇಲ್ಲವಾದರೆ ಸಂಘರ್ಷ, ದ್ವೇಷ ಮತ್ತೆ ಮತ್ತೆ ಉಳಿಯುತ್ತದೆ. ಕಾಶೀ, ಮಥುರಾ ಅಷ್ಟೇ ಅಲ್ಲ, ಸಾವಿರಾರೂ ದೇವಸ್ಥಾನ ಒಡೆದು ಮಸೀದಿ ಕಟ್ಟಿದ ದಾಖಲೆ ಇದೆ. ಆ ಎಲ್ಲ ದೇವಸ್ಥಾನಗಳು ಬರಬೇಕು.

ಇದನ್ನೂ ಓದಿ:  Kali Swamy: ಪೂಜೆ ಮುಗಿಸಿ ಹಿಂದಿರುಗ್ತಿದ್ದ ಕಾಳಿ ಸ್ವಾಮಿ ಮುಖಕ್ಕೆ ಮಸಿ: ನಾನು ನಿಮ್ಮನ್ನ ತಲುಪಿದ್ದೇನೆ ಅಂದ್ರು ಸ್ವಾಮೀಜಿ

ಈ ಕಾಯಿದೆ ಪೂರ್ಣ ರದ್ದು ಮಾಡಬೇಕು

1991 ಕಾಯಿದೆ ಬಂದಿದೆ, 1947ರ ದೇವಸ್ಥಾನ, ಮಸೀದಿ ಹೇಗಿದೆಯೋ ಹಾಗೇ  ಇರಬೇಕು ಅಂತಿದೆ. ಯಾವುದನ್ನೂ ಬದಲಿಸಬಾರದು ಅಂತಾ ಇದೆ, ಇದು ಮುಸ್ಲಿಂರನ್ನು ಓಲೈಸಲು ಮಾಡಿದ್ದಾಗಿದೆ, ಈ ಕಾಯಿದೆ ಪೂರ್ಣ ರದ್ದು ಮಾಡಬೇಕೆಂದು ಒತ್ತಾಯಿಸಿದರು
Published by:Mahmadrafik K
First published: