ಉಡುಪಿ: ಸಚಿವ ಸುನೀಲ್ ಕುಮಾರ್ (Minister Sunil Kumar) ಅವರು ಪ್ರತಿನಿಧಿಸುತ್ತಿರುವ ಉಡುಪಿ (Udupi) ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರವನ್ನು (Karkala Assembly constituency) ಬಿಟ್ಟುಕೊಡುವಂತೆ ಶ್ರೀರಾಮಸೇನೆ (Sri Ram Sena) ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Mutalik) ಆಗ್ರಹಿಸಿದ್ದಾರೆ. ಉಡುಪಿಯ ಕಾರ್ಕಳದಲ್ಲಿ ಮಾತನಾಡಿದ ಅವರು, “ನನ್ನನ್ನು ಬೆಳೆಸಿದ ಗುರುಗಳು ಬಂದಿದ್ದಾರೆ ಎಂದು ನಿಮ್ಮ ಕ್ಷೇತ್ರ ತ್ಯಾಗ ಮಾಡಿ, ಬೇರೆ ಕಡೆ ಎಲ್ಲಾದರೂ ನೀವು ಚುನಾವಣೆಗೆ ಸ್ಪರ್ಧಿಸಿ. ನಿಮ್ಮಲ್ಲಿ ನಿಜವಾಗಿ ಹಿಂದುತ್ವ (Hindutva), ಆರ್ಎಸ್ಎಸ್ (RSS) ನಿಷ್ಠೆ ಇದ್ದರೆ ಕ್ಷೇತ್ರ ತ್ಯಾಗ ಮಾಡಿ” ಎಂದು ಸವಾಲು ಹಾಕಿದ್ದಾರೆ. ಇನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮಸೇನೆ ಸ್ಪರ್ಧಿಸಲಿದೆ ಅಂತ ಈಗಾಗಲೇ ಸ್ಪಷ್ಟಪಡಿಸಿರುವ ಪ್ರಮೋದ್ ಮುತಾಲಿಕ್, 25 ಕ್ಷೇತ್ರಗಳಲ್ಲಿ ಪ್ರಖರ ಹಿಂದೂವಾದಿಗಳಿಗೆ ಟಿಕೆಟ್ ನೀಡುವುದಾಗಿ ಘೋಷಿಸಿದ್ದರು. ಇದೀಗ ಖುದ್ದು ಪ್ರಮೋದ್ ಮುತಾಲಿಕ್ ಅವರು ಕಾರ್ಕಳದಲ್ಲಿ ಸ್ಪರ್ಧಿಸುತ್ತಾರಾ ಎಂಬ ಚರ್ಚೆ ಶುರುವಾಗಿದೆ.
ಸುನೀಲ್ ಕುಮಾರ್ಗೆ ಪ್ರಮೋದ್ ಮುತಾಲಿಕ್ ಸವಾಲು
ಸಚಿವ ಸುನೀಲ್ ಕುಮಾರ್ಗೆ ಅವರು ಪ್ರತಿನಿಧಿಸುವ ಕಾರ್ಕಳ ಕ್ಷೇತ್ರದಲ್ಲೇ ನಿಂತು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ. ಪ್ರಮೋದ್ ಮುತಾಲಿಕ್ ಹಿಂದುತ್ವ ಮತ್ತು ನಿಮ್ಮ ಹಿಂದುತ್ವ ಒಂದೇ ತಕ್ಕಡಿಯಲ್ಲಿ ಇಡೋಣ. ಯಾರು ಹಿಂದುತ್ವಕ್ಕೋಸ್ಕರ ಇದ್ದಾರೆ ಅನ್ನೋದನ್ನ ಜನರ ಮುಂದೆ ಇಡೋಣ ಎಂದಿದ್ದಾರೆ.
“ನನಗಾಗಿ ಕಾರ್ಕಳ ಕ್ಷೇತ್ರ ತ್ಯಾಗಮಾಡಿ”
ನನ್ನನ್ನು ಬೆಳೆಸಿದ ಗುರುಗಳು ಬಂದಿದ್ದಾರೆ ಎಂದು ನೀವು ಪ್ರತಿನಿಧಿಸುವ ಕಾರ್ಕಳ ಕ್ಷೇತ್ರ ತ್ಯಾಗ ಮಾಡಿ ಅಂತ ಸುನೀಲ್ ಕುಮಾರ್ಗೆ ಮುತಾಲಿಕ್ ಆಗ್ರಹಿಸಿದ್ದಾರೆ. ಬೇರೆ ಕಡೆ ಎಲ್ಲಾದರೂ ಚುನಾವಣೆಗೆ ಸ್ಪರ್ಧಿಸಿ, ನಿಮ್ಮಲ್ಲಿ ನಿಜವಾಗಿ ಹಿಂದುತ್ವ , ಆರ್ ಎಸ್ ಎಸ್ ಇದ್ದರೆ ಕ್ಷೇತ್ರ ತ್ಯಾಗ ಮಾಡಿ. ಕ್ಷೇತ್ರ ನನಗೆ ಬಿಟ್ಟು ಕೊಡಿ, ನಾನು ಹಿಂದುತ್ವ ಏನೆಂದು ತೋರಿಸುತ್ತೇನೆ ಅಂತ ಮುತಾಲಿಕ್ ಹೇಳಿದ್ದಾರೆ.
ಇದನ್ನೂ ಓದಿ: Pramod Mutalik: ಶ್ರೀರಾಮಸೇನೆಯಿಂದ 25 ಪ್ರಖರ ಹಿಂದುತ್ವವಾದಿಗಳ ಸ್ಪರ್ಧೆ! ಹಿಂದೂಗಳ ರಕ್ಷಣೆಗಾಗಿ ಚುನಾವಣೆ ಎಂದ ಮುತಾಲಿಕ್
“ತಾತ, ಮುತ್ತಾತನಿಂದ ಮೊಮ್ಮಗನ ತನಕ ಗಳಿಸಿದ್ದು ಸಾಕು”
ಈಗ ನನಗೆ ನಿಮ್ಮ ಕ್ಷೇತ್ರ ಬಿಟ್ಟುಕೊಡಿ, ಐದು ವರ್ಷದ ನಂತರ ಮತ್ತೆ ನಿಮ್ಮನ್ನು ನಿಲ್ಲಿಸುತ್ತೇನೆ ಅಂತ ಮುತಾಲಿಕ್ ಹೇಳಿದ್ದಾರೆ. ಯಾವ ದಾರಿಯಲ್ಲಿ ನಡೆಯಬೇಕೆಂದು ನಾನು ತೋರಿಸಿಕೊಡುತ್ತೇನೆ, ಈಗ ನಡೆದದ್ದು ಮತ್ತು ಗಳಿಸಿದ್ದು ಸಾಕು, ತಾತ ಮುತ್ತಾತನಿಂದ ಮರಿ ಮೊಮ್ಮಗನ ತನಕ ಗಳಿಸಿದ್ದು ಸಾಕು ಅಂತ ಸುನೀಲ್ ಕುಮಾರ್ ವಿರುದ್ಧ ಮುತಾಲಿಕ್ ಗುಡುಗಿದ್ದಾರೆ.
“ಹಿಂದುತ್ವದ ವೇದಿಕೆಯಲ್ಲಿ ನಿಂತು ಚರ್ಚಿಸೋಣ ಬನ್ನಿ”
ತಲವಾರು ಹಿಡಿದುಕೊಂಡು ಬಂದವರ ಮುಂದೆ ಹೋರಾಟ ಮಾಡಿದವನು ನಾನು, ಭಯಾನಕವಾದ ತುರ್ತುಪರಿಸ್ಥಿತಿಯಲ್ಲಿ ಹೋರಾಟ ಮಾಡಿದ ಗಂಡುಗಲಿ ನಾನು. ಫೋನ್ ಮಾಡಿಸಿ ನನಗೆ ಭಯಪಡಿಸುವ ಚಿಲ್ಲರೆ ಕೆಲಸ ಮಾಡಬೇಡಿ ಅಂತ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ. ಹಿಂದುತ್ವದ ವೇದಿಕೆಯಲ್ಲಿ ಇಬ್ಬರು ನಿಂತು ಚರ್ಚೆ ಮಾಡೋಣ ಅಂತ ಆಹ್ವಾನಿಸಿದ್ದಾರೆ. ಚರ್ಚೆಗೆ ಬರುವ ತಾಕತ್ತಿದೆಯಾ ನಿಮಗೆ? ಅಂತ ಪ್ರಶ್ನಿಸಿರುವ ಮುತಾಲಿಕ್, ನಿಮ್ಮ ದುಡ್ಡು ಅಹಂಕಾರ, ಸೊಕ್ಕು, ದರ್ಪ ಇವೆಲ್ಲವನ್ನೂ ಬಿಟ್ಟು ಬಿಡಿ. ಕಾರ್ಯಕರ್ತರನ್ನು ಹೆದರಿಸುತ್ತಾರೆ ಅಂದರೆ ಹತ್ತು ಪಟ್ಟು ಜನ ನನ್ನ ಜೊತೆ ಬರುತ್ತಾರೆ ಅಂತ ಎಚ್ಚರಿಸಿದ್ದಾರೆ.
ಶ್ರೀರಾಮಸೇನೆಯಿಂದ 25 ಪ್ರಖರ ಹಿಂದುತ್ವವಾದಿಗಳ ಸ್ಪರ್ಧೆ
ಇನ್ನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಶ್ರೀರಾಮಸೇನೆಯಿಂದ 25 ಪ್ರಖರ ಹಿಂದುತ್ವವಾದಿಗಳನ್ನು ಸ್ವತಂತ್ರವಾಗಿ 25 ಕ್ಷೇತ್ರಗಳಲ್ಲಿ ಕಣಕ್ಕಿಳಿಸಲಾಗುವುದು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಈಗಾಗಲೇ ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ