ಉಡುಪಿ: ಕಾರ್ಕಳ ಶಾಸಕ ಸುನಿಲ್ ಕುಮಾರ್ (Karkala MLA Sunil Kumar) ವಿರುದ್ಧ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Mutalik) ದೂರು ದಾಖಲಿಸಿದ್ದಾರೆ. ಕಾರ್ಕಳ ನಗರದ ಠಾಣೆಗೆ ಬೆಂಬಲಿಗರೊಂದಿಗೆ ತೆರಳಿದ ಪ್ರಮೋದ್ ಮುತಾಲಿಕ್, ಶಾಸಕರ ವಿರುದ್ಧ ಮಾನಹಾನಿ ಕೇಸ್ ದಾಖಲಿಸಿದ್ದಾರೆ. ಬಿಜೆಪಿ (BJP) ವಿಜಯೋತ್ಸವ ಸಭೆಯಲ್ಲಿ ಮುತಾಲಿಕ್ ವಿರುದ್ಧ ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದ್ದರು. ಮುತಾಲಿಕ್ ಒಬ್ಬ ಡೀಲ್ ಮಾಸ್ಟರ್ ಎಂದು ನೇರ ಆರೋಪ ಮಾಡಿದ್ದರು. ಈ ಹಿನ್ನೆಲೆ ಪ್ರಮೋದ್ ಮುತಾಲಿಕ್ ಇಂದು ದೂರು ದಾಖಲಿಸಿದ್ದಾರೆ. ಇತ್ತೀಚೆಗೆ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಸುನಿಲ್ ಕುಮಾರ್ ಮತ್ತು ಪ್ರಮೋದ್ ಮುತಾಲಿಕ್ ಮುಖಾಮುಖಿಯಾಗಿದ್ದರು. ಚುನಾವಣೆಯಲ್ಲಿ ಪ್ರಮೋದ್ ಮುತಾಲಿಕ್ ಕೇವಲ ಸುಮಾರು 4 ಸಾವಿರ ಮತಗಳನ್ನು ಪಡೆದುಕೊಂಡಿದ್ದರು.
ಸುನಿಲ್ ಕುಮಾರ ಹೇಳಿದ್ದೇನು?
ನೈಜ ಹಿಂದುತ್ವದ ಹೆಸರಲ್ಲಿ ಡೀಲ್ ಮಾಸ್ಟರ್ ಬಂದ್ರು, ಮೊದಲ ಬಾರಿಗೆ ಪ್ರಮೋದ್ ಮುತಾಲಿಕ್ ಹೆಸರು ಬಳಸುತ್ತಿದ್ದೇನೆ. ಯಾಕೆ ಇಲ್ಲಿಗೆ ಬಂದ್ರಿ ನೀವು? ಮುಂದಿನ ಲೋಕಸಭೆಗೆ ಎಲ್ಲಿಗೆ ಡೀಲ್ ಮಾಡಲು ಹೊರಟಿದ್ದೀರಾ ಎಂದು ಸುನಿಲ್ ಕುಮಾರ್ ಪ್ರಶ್ನೆ ಮಾಡಿದ್ದರು.
ನಾನು ಹತ್ತು ಬಾರಿ ಹೇಳುತ್ತಿದ್ದೇನೆ ಪ್ರಮೋದ್ ಮುತಾಲಿಕ್ ಒಬ್ಬ ಡೀಲ್ ಮಾಸ್ಟರ್ ಎಂದು ಹತ್ತು ಬಾರಿ ಹೇಳಲು ಸಿದ್ಧ. ಹಣ ಸಿಗುತ್ತೆ ಅಂದ್ರೆ ಏನು ಬೇಕಾದರೂ ಮಾಡಬಲ್ಲರು. ಅಭಿವೃದ್ಧಿಯನ್ನ ಅಪಹಾಸ್ಯ, ಅವಮಾನ ಮಾಡಿದ್ರು.
ಇದನ್ನೂ ಓದಿ: Bengaluru Crime News: ಅಪ್ಪ ಇನ್ನೂ 20 ವರ್ಷ ಬದುಕುತ್ತಿದ್ರು, ಹಾಗಾಗಿ ಕೊಂದೆ; ಪೊಲೀಸರ ಮುಂದೆ ಮಗನ ಶಾಕಿಂಗ್ ಹೇಳಿಕೆ
ಪರಶುರಾಮ ಕ್ಷೇತ್ರದ ಅಣೆಕಟ್ಟು ಜಾಗದಲ್ಲಿ ನೀರಿಲ್ಲ ಎಂದು ಮುತಾಲಿಕ್ ಹಾಗೂ ಬೆಂಬಲಿಗರು ಕ್ರಿಕೆಟ್ ಆಡಿದ್ರು, ಅಣೆಕಟ್ಟು ಮೇಲಿಂದ ಹಾರಿ ಎತ್ತರವೂ ಗೊತ್ತಾಗತ್ತೆ ಎಂದು ಸವಾಲೆಸೆದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ