ಯಾರೂ ಆರೆಸ್ಸೆಸ್ ಪ್ರಶ್ನಿಸಬಾರದಾ? ತೊಗಾಡಿಯಾ ಉಚ್ಚಾಟನೆಗೆ ಮುತಾಲಿಕ್ ಅಕ್ರೋಶ


Updated:April 16, 2018, 3:01 PM IST
ಯಾರೂ ಆರೆಸ್ಸೆಸ್ ಪ್ರಶ್ನಿಸಬಾರದಾ? ತೊಗಾಡಿಯಾ ಉಚ್ಚಾಟನೆಗೆ ಮುತಾಲಿಕ್ ಅಕ್ರೋಶ
ಪ್ರಮೋದ್ ಮುತಾಲಿಕ್

Updated: April 16, 2018, 3:01 PM IST
- ಚಂದ್ರಕಾಂತ್ ಸುಗಂಧಿ, ನ್ಯೂಸ್18 ಕನ್ನಡ

ಬೆಳಗಾವಿ(ಏ. 16): ವಿಶ್ವ ಹಿಂದೂ ಪರಿಷತ್​ನ ಅಂತಾರಾಷ್ಟ್ರಿಯ ಅಧ್ಯಕ್ಷ ಸ್ಥಾನದಿಂದ ಪ್ರವೀಣ್ ಭಾಯ್ ತೊಗಾಡಿಯಾ ಅವರನ್ನು ಉಚ್ಚಾಟನೆ ಮಾಡಿರುವ ಕ್ರಮಕ್ಕೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಅತ್ಯಂತ ನೀಚ, ನಿರ್ಲಜ್ಜ ಹಾಗೂ ಖಂಡನೀಯ ಕಾರ್ಯ. ತೊಗಾಡಿಯಾ ಉಚ್ಚಾಟನೆ ಹಿಂದೆ ಮೋದಿ, ಆರೆಸ್ಸೆಸ್ ಕೈವಾಡ ಇದೆ. ಯಾರೂ ಕೂಡ ಆರೆಸ್ಸೆಸ್ ವಿರುದ್ಧ ಧ್ವನಿ ಎತ್ತದಂತೆ ಆಗಿದೆ, ಎಂದು ಮುತಾಲಿಕ್ ವಿಷಾದಿಸಿದ್ದಾರೆ.

ರಾಮ ಮಂದಿರ ಕಟ್ಟುವ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ಹಿಂದು ವೋಟು ಒಗ್ಗೂಡಿಸಲು ತೊಗಾಡಿಯಾ ಬೇಕು. ಈಗ ಅಧಿಕಾರಕ್ಕೆ ಬಂದ ಮೇಲೆ ಅವರು ಬೇಡವಾಗಿದೆ. ಪ್ರವೀಣ್ ತೊಗಾಡಿಯಾ ಮಾಡಿದ ಅಪರಾಧವಾದರೂ ಏನು? ತಮ್ಮ ಅವಧಿಯಲ್ಲಿ ರಾಮಮಂದಿರ ನಿರ್ಮಿಸಿ ಎಂದು ಹೇಳಿದ್ದೇ ತಪ್ಪಾ? ಗೋಹತ್ಯೆ, ಸಮಾನ ನಾಗರಿಕ ಸಂಹಿತೆ ಜಾರಿ ಮಾಡಿ ಅಂತ ಒತ್ತಾಯಿಸಿದ್ದೇ ತಪ್ಪಾ? ಎಂದು ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.

ತೊಗಾಡಿಯಾ ಉಚ್ಚಾಟನೆ ಖಂಡಿಸಿ ರಾಜ್ಯಾದ್ಯಂತ 22 ಜಿಲ್ಲೆಗಳಲ್ಲಿ ಶ್ರೀರಾಮ ಸೇನೆ ಉಪವಾಸ ಸತ್ಯಾಗ್ರಹ ನಡೆಲು ನಿರ್ಧರಿಸಿದೆ. ಬೆಂಗಳೂರಿನಲ್ಲಿ ನಾಳೆ ನಡೆಯಲಿರುವ ಸತ್ಯಾಗ್ರಹಕ್ಕೆ 5 ಹಿಂದೂ ಪರ ಸಂಘಟನೆಗಳು ಬೆಂಬಲ ನೀಡಲಿವೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

ಪ್ರಕಾಶ್ ರೈಗೆ ತಿರುಗೇಟು:
ದೇಶಕ್ಕೆ ಬಿಜೆಪಿ ಕ್ಯಾನ್ಸರ್ ಇದ್ದಂತೆ ಎಂದು ನಟ ಪ್ರಕಾಶ್ ರೈ ನೀಡಿದ ಹೇಳಿಕೆಯನ್ನು ಪ್ರಮೋದ್ ಮುತಾಲಿಕ್ ಆಕ್ಷೇಪಿಸಿದ್ದಾರೆ. ಗೌರಿ ಲಂಕೇಶ್ ಹತ್ಯೆ ನಂತರ ಪ್ರಕಾಶ್ ರೈ ಘೋರಿಯಿಂದ ಹೊರಬಂದಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲೇ ಎಂಎಂ ಕಲಬುರ್ಗಿ, ಗೌರಿ, ಪನ್ಸಾರೆ ಹತ್ಯೆಗಳಾಗಿವೆ. ಕಾಂಗ್ರೆಸ್ ಸರಕಾರದ ವೈಫಲ್ಯದ ಬಗ್ಗೆ ರೈ ಮಾತನಾಡಬೇಕು. ಬಯ್ಯೋದಾದರೆ ಎಲ್ಲರನ್ನೂ ಬೈಯಿರಿ. ಇಲ್ಲವಾದರೆ ನೀವ ಕಾಂಗ್ರೆಸ್ ಏಜೆಂಟ್ ಎಂಬುದು ಸಾಬೀತಾಗುತ್ತದೆ ಎಂದು ಪ್ರಮೋದ್ ಮುತಾಲಿಕ್ ಕಿವಿಮಾತು ಹೇಳಿದ್ದಾರೆ.

ನಟನಾಗಿ ಎಲ್ಲಾ ಭಾಷೆಯಿಂದ ಆಗುವ ಲಾಭ ಬೇಕು. ಕಾವೇರಿ, ಮಹದಾಯಿ ಮತ್ತು ಕೃಷ್ಣ ನದಿ ಬಗ್ಗೆ ಅವರು ಮಾತನಾಡೊಲ್ಲ, ಎಂದು ರೈ ವಿರುದ್ಧ ಮುತಾಲಿಕ್ ಟೀಕೆ ಮಾಡಿದ್ದಾರೆ.
First published:April 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...