ವೋಟಿಗೆ ಬರುವ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳನ್ನು ಒದೆಯಿರಿ: ಮುತಾಲಿಕ್ ವಿವಾದಾತ್ಮಕ ಕರೆ


Updated:April 22, 2018, 2:40 PM IST
ವೋಟಿಗೆ ಬರುವ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳನ್ನು ಒದೆಯಿರಿ: ಮುತಾಲಿಕ್ ವಿವಾದಾತ್ಮಕ ಕರೆ
ಶಿವಸೇನೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವೇಳೆ ಪ್ರಮೋದ್ ಮುತಾಲಿಕ್

Updated: April 22, 2018, 2:40 PM IST
- ಮಂಜುನಾಥ ಯಡಳ್ಳಿ, ನ್ಯೂಸ್18 ಕನ್ನಡ

ಧಾರವಾಡ: ವೋಟ್ ಕೇಳಲು ಬರುವ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು‌ ಒದೆಯಿರಿ ಎಂದು ಶಿವಸೇನೆ ಕರ್ನಾಟಕ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶಿವಸೇನೆ ಅಭ್ಯರ್ಥಿಗಳ 2 ನೇ ಪಟ್ಟಿಯ 36 ಅಬ್ಯರ್ಥಿಗಳ ಹೆಸರು ಬಿಡುಗಡೆಗೊಳಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುತ್ತಲಿಕ್, ಮಹದಾಯಿ ಸಮಸ್ಯೆ ಇತ್ಯರ್ಥ ಮಾಡದೇ ಇರುವ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳನ್ನ ಒದಿಯಿರಿ ಎಂದು ಮತದಾರರಿಗೆ ಕರೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ಕಳೆದ ಮೂರು ದಶಕಗಳಿಂದ ಹೋರಾಟ ಮಾಡುತ್ತಾ ಬಂದರೂ ಕೆಲವು ರಾಜಕೀಯ ನಾಯಕರುಗಳು ಈ ಹೋರಾಟವನ್ನ ತಮ್ಮ ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಾರೆಯೇ ಹೊರತು ಸಮಸ್ಯೆ ಬಗೆಹರಿಸುವಲ್ಲಿ ಮುಂದಾಗುತ್ತಿಲ್ಲ ಎಂದು ರಾಜಕೀಯ ನಾಯಕರುಗಳ ವಿರುದ್ಧ ಕಿಡಿಕಾರಿದರು.

ಕಾಂಗ್ರೆಸ್, ಬಿಜೆಪಿಯವರ ಆಸ್ತಿ ಹೇಗೆ ಬೆಳೆಯುತ್ತಿವೆ ಎಂಬುದು ಅವರ ಆಸ್ತಿ ಘೋಷಣೆ ನೋಡಿದರೆ ಗೊತ್ತಾಗುತ್ತದೆ. ಬಡವರು, ನೇಕಾರರು, ರೈತರು, ಕೂಲಿಕಾರರು ಎಲ್ಲಿದ್ದಾರೋ ಅಲ್ಲಿಯೇ ಇದ್ದಾರೆ. ಅಲ್ಲದೇ ಡಿ.ಕೆ. ಶಿವಕುಮಾರ್ ಆಸ್ತಿ ಒಂದೇ ವರ್ಷದಲ್ಲಿ 300 ಕೋಟಿ ಜಾಸ್ತಿಯಾಗಿದೆ. ಈ ರಾಜಕೀಯ ನೀಚರು ಮಾತ್ರ ಬಂಗಲೆ ಮೇಲೆ‌ ಬಂಗಲೆ ಕಟ್ಟುತ್ತಿದ್ದಾರೆ. ಇವರನ್ನೆಲ್ಲ‌ ಒದಿಯಿರಿ, ತಿರಸ್ಕಾರ ಮಾಡಿ ಎಂದ ಮುತಾಲಿಕ್ ಹರಿಹಾಯ್ದರು.

ಬಿಜೆಪಿಯಲ್ಲಿ ನಿಷ್ಠವಂತ ಕಾರ್ಯಕರ್ತರಿಗೆ ಟಿಕೆಟ್ ನೀಡದೇ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಭ್ರಷ್ಟರನ್ನ ತನ್ನ ಪಕ್ಷಕ್ಕೆ ಸೇರಿಸಿಕೊಂಡಿದೆ. ಅಲ್ಲದೇ ಬಿಜೆಪಿ ತಂದೆ-ಮಗ, ಪತಿಪತ್ನಿಗೆ ಟಿಕೆಟ್ ನೀಡಿದೆ ಎಂದು ಮುತಾಲಿಕ್ ವಿಷಾದಿಸಿದರು.

ದತ್ತ ಪೀಠಕ್ಕಾಗಿ ತಾವು ಪೊಲೀಸರಿಂದ ಏಟು ತಿಂದು ರಕ್ತ ಹರಿಸಿದ್ದೆವು. ಹೋರಾಟ ಇಲ್ಲಿವರೆಗೆ ತಂದವರು ಸಹ ತಾವೆಯೇ. ಅದರಿಂದ ಕರಾವಳಿ ಪ್ರದೇಶ ಇಂದು ಬಿಜೆಪಿ ಪರವಾಗಿದೆ. ಆದರೆ ವಿವಾದ ಬಗೆಹರಿಸದೆ, ಅದನ್ನು ಜೀವಂತವಾಗಿಟ್ಟುಕೊಂಡು ಬಿಜೆಪಿಯವರು ರಾಜಕೀಯ ಮಾಡಿದ್ದಾರೆ ಎಂದು ಆರೋಪಿಸಿದ ಮುತಾಲಿಕ, ಮಾಜಿ ಸಚಿವ ಸಿ.ಟಿ. ರವಿ ಅವರನ್ನು ಲೂಟಿ ರವಿ, ಕೋಟಿ‌ ರವಿ ಎಂದು ಟೀಕಿಸಿದರು.

ಇದೇ  ಸಂದರ್ಭದಲ್ಲಿ ಕರ್ನಾಟಕದಲ್ಲಿ ಶಿವಸೇನೆ ಪರವಾಗಿ ಪ್ರಚಾರಕ್ಕೆ ಪ್ರವೀಣಭಾಯ್ ತೊಗಾಡಿಯಾ ಬರಲಿದ್ದಾರೆ ಎಂದೂ ಮುತಾಲಿಕ್ ತಿಳಿಸಿದರು.
First published:April 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ