• Home
 • »
 • News
 • »
 • state
 • »
 • National Youth Conference: 'ನಮಸ್ಕಾರ್ ಅಕ್ಷಯ್​ ಜೀ'-ಸುದ್ದಿಗೋಷ್ಠಿಯಲ್ಲೇ ಆ್ಯಕ್ಷನ್ ಕಿಂಗ್ ಅಕ್ಷಯ್​​ ಕುಮಾರ್​ಗೆ ಪ್ರಲ್ಹಾದ್ ಜೋಶಿ ಕರೆ

National Youth Conference: 'ನಮಸ್ಕಾರ್ ಅಕ್ಷಯ್​ ಜೀ'-ಸುದ್ದಿಗೋಷ್ಠಿಯಲ್ಲೇ ಆ್ಯಕ್ಷನ್ ಕಿಂಗ್ ಅಕ್ಷಯ್​​ ಕುಮಾರ್​ಗೆ ಪ್ರಲ್ಹಾದ್ ಜೋಶಿ ಕರೆ

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಜನವರಿ 12 ರಂದು ಉತ್ಸವದ ಉದ್ಘಾಟನೆ ನಡೆಯಲಿದ್ದು, ಪ್ರಧಾನಿ ನರೇಂದ್ರ‌ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಒಟ್ಟು 7,500 ಜನ ದೇಶದ ವಿವಿಧೆಡೆಯಿಂದ ಆಗಮಿಸಲಿದ್ದಾರೆ.

 • News18 Kannada
 • 4-MIN READ
 • Last Updated :
 • Hubli-Dharwad (Hubli), India
 • Share this:

ಧಾರವಾಡ : ಜನವರಿ 12ರಿಂದ ರಾಷ್ಟ್ರೀಯ ಯುವಜನ ಮಹೋತ್ಸವ ಕಾರ್ಯಕ್ರಮ ಧಾರವಾಡದಲ್ಲಿ ಆರಂಭವಾಗಲಿದ್ದು, ಐದು ದಿನಗಳ ಕಾಲ ನಡೆಯಲಿದೆ. ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದು, ಈ ಕುರಿತಂತೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ 26ನೇ ರಾಷ್ಟ್ರೀಯ ಯುವಜನ ಮಹೋತ್ಸವ ನಡೆಯುತ್ತಿರುವುದು ಕರ್ನಾಟಕ್ಕೆ ಹೆಮ್ಮೆಯ ವಿಚಾರವಾಗಿದೆ. ಜನವರಿ 12ರಿಂದ 15ರ ವರೆಗೂ ಯುವಜನ ಮಹೋತ್ಸವ ನಡೆಯಲಿದೆ ಎಂದು ತಿಳಿಸಿದ್ದಾರೆ.


ಯುವಜನ ಮಹೋತ್ಸವ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ


ಸುದ್ದಿಗೋಷ್ಠಿ ನಡೆಸಿ ಯುವಜನ ಮಹೋತ್ಸವ ಕುರಿತಂತೆ ಮಾಹಿತಿ ನೀಡಿದ ಸಚಿವರು, ಇದು ರಾಷ್ಟ್ರೀಯ ಯುವ ಸಪ್ತಾಹದ ಭಾಗವಾಗಿ ನಡೆಯುತ್ತಿರೋ ಉತ್ಸವ. ಜನವರಿ 12 ರಂದು ಉತ್ಸವದ ಉದ್ಘಾಟನೆ ನಡೆಯಲಿದ್ದು, ಪ್ರಧಾನಿ ನರೇಂದ್ರ‌ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಒಟ್ಟು 7,500 ಜನ ದೇಶದ ವಿವಿಧೆಡೆಯಿಂದ ಆಗಮಿಸಲಿದ್ದಾರೆ. ಹಲವಾರು ವೇದಿಕೆಗಳಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು, ಸ್ಥಳೀಯ ಕಲಾವಿದರಿಗೂ ಅವಕಾಶ ಇರುತ್ತದೆ.


ಇದನ್ನೂ ಓದಿ: Free Ration: ಜನಸಾಮಾನ್ಯರಿಗೆ ಕೇಂದ್ರದ ಹೊಸ ವರ್ಷದ ಉಡುಗೊರೆ, ಮೋದಿ ಮಹತ್ವದ ನಿರ್ಧಾರ?


ಆದರೆ ಇನ್ನು, ಉದ್ಘಾಟನೆ ಸ್ಥಳ ಇನ್ನೂ ನಿಗದಿಯಾಗಿಲ್ಲ. ಕರ್ನಾಟಕ ಕಾಲೇಜ್ ಆವರಣದಲ್ಲಿ ಬಹುತೇಕ ಕಾರ್ಯಕ್ರಮಗಳು ನಡೆಯಲಿವೆ. ಹುಬ್ಬಳ್ಳಿ-ಧಾರವಾಡದ ಅನೇಕ‌ ಕಡೆಗಳಲ್ಲಿ ಕಾರ್ಯಕ್ರಮಗಳು ನಡೆಯುತ್ತವೆ. ಇದರಲ್ಲಿ ದೇಶದ ಸಾಂಸ್ಕ್ರತಿಕ, ಭೂಗೋಳಿಕ ಐಕ್ಯತೆ ಇರಲಿದೆ. ವಿವಿಧತೆಯಲ್ಲಿ ಏಕತೆಯನ್ನು ಪ್ರತಿನಿಧಿಸುವ ಉತ್ಸವ ಇದಾಗಲಿದೆ. ಜ. 12ರಂದು ಮಧ್ಯಾಹ್ನ 1:30ಕ್ಕೆ‌ ಪ್ರಧಾನಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಾರೆ. ಪ್ರಧಾನಿಗಳ ಕಾರ್ಯಕ್ರಮದ ಭದ್ರತಾ ವಿಚಾರ ಇದೆ, ಹೀಗಾಗಿ‌ ಇನ್ನೂ ಸ್ಥಳ‌ ನಿಗದಿಯಾಗಿಲ್ಲ ಎಂದು ತಿಳಿಸಿದರು.ಸುದ್ದಿಗೋಷ್ಠಿ ನಡೆದಾಗಲೇ ಬಾಲಿವುಡ್ ನಟ ಅಕ್ಷಯಕುಮಾರ ಕಾಲ್


ಇನ್ನು, ಸುದ್ದಿಗೋಷ್ಠಿ ನಡೆಸುತ್ತಿರುವಾಗಲೇ ಕೇಂದ್ರ ಸಚಿವರು, ಬಾಲಿವುಡ್​​ ಕಿಲಾಡಿ, ನಟ ಅಕ್ಷಯ್​ ಕುಮಾರ್​ ಅವರಿಗೆ ಕರೆ ಮಾಡಿ ಯುವಜನ ಮಹೋತ್ಸವಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು. ಜನವರಿ 12ಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ಸವ ಉದ್ಘಾಟಿಸಲಿದ್ದಾರೆ. ಆದ್ದರಿಂದ ಇಂತಹ ಮಹತ್ವ ಕಾರ್ಯಕ್ರಮದಲ್ಲಿ ನೀವು ಭಾಗಿಯಾಗಬೇಕು. ಜನವರಿ 16ರಂದು ಕಾರ್ಯಕ್ರಮದ ಅಂತಿಮ ದಿನದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಸಲಾಗುತ್ತದೆ. ಮೊದಲ ದಿನ ಮೋದಿ ಅವರು ಉದ್ಘಾಟನೆ ಮಾಡಲಿದ್ದು, ನೀವು ಅಂತಿಮ ದಿನ ಕಾರ್ಯಕ್ರಮಕ್ಕೆ ಹಾಜರಾಗಬೇಕು ಎಂದು ಅಕ್ಷಯ್​ ಕುಮಾರ್​ಗೆ ಮನವಿ ಮಾಡಿದರು.


ಇದನ್ನೂ ಓದಿ: Akshay Kumar: ಬಾಲಿವುಡ್​ ನಟ ಅಕ್ಷಯ್ ಕುಮಾರ್ ಬಳಿ ಇದ್ಯಾ 260 ಕೋಟಿ ಮೌಲ್ಯದ ಜೆಟ್​!?


ಇದಕ್ಕೆ ಉತ್ತರಿಸಿದ್ದ ಅಕ್ಷಯ್​ ಅವರು, ಪೂರ್ವ ನಿಗದಿ ಕಾರ್ಯಕ್ರಮಗಳು ಇರುವ ಕಾರಣ ಜನವರಿ 12ಕ್ಕೆ ಆಗಮಿಸೋದಾಗಿ ತಿಳಿಸಿದರು. ಅಂದು ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿರುವ ಕಾರಣ ಭದ್ರತೆ ಹೆಚ್ಚಿರುತ್ತದೆ. ಆದ್ದರಿಂದ ಸಮಾರೋಪಕ್ಕೆ ಆಗಮಿಸುವಂತೆ ಜೋಶಿ ಮನವಿ ಮಾಡಿದರು. ಅಲ್ಲದೇ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಮತ್ತೆ ಕರೆ ಮಾಡುವಾಗಿ ಹೇಳಿದರು. ಕೊನೆಗೆ ಕುಟುಂಬ ಸದಸ್ಯರೆಲ್ಲ ಆರೋಗ್ಯವಾಗಿರಿ ಎಂದು ಶುಭಕೋರಿದ ಅಕ್ಷಯ್​ಗೆ ಶುಭ ಕೋರಿ ಜೋಶಿ ಕರೆ ಕಟ್​ ಮಾಡಿದರು.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು