HOME » NEWS » State » PRAKASH RATHORE NOMINATED FOR MLC ON SPORTS QUOTA

ವಿಧಾನಪರಿಷತ್​ಗೆ ರಣಜಿ ಮಾಜಿ ಕ್ರಿಕೆಟಿಗನ ನಾಮನಿರ್ದೇಶನ


Updated:October 30, 2018, 9:42 PM IST
ವಿಧಾನಪರಿಷತ್​ಗೆ ರಣಜಿ ಮಾಜಿ ಕ್ರಿಕೆಟಿಗನ ನಾಮನಿರ್ದೇಶನ
ಪ್ರಕಾಶ್ ರಾಠೋಡ್
  • Share this:
- ಮಹೇಶ್ ವಿ. ಶಟಗಾರ, ನ್ಯೂಸ್18 ಕನ್ನಡ

ವಿಜಯಪುರ(ಅ. 30): ಕ್ರಿಕೆಟ್​ನಲ್ಲಿ ರಾಜ್ಯ ರಣಜಿ ತಂಡವನ್ನು ಪ್ರತಿನಿಧಿಸಿದ್ದ ಪ್ರಕಾಶ ರಾಠೋಡ್ ಅವರಿಗೆ ಎರಡನೇ ಬಾರಿಗೆ ವಿಧಾನ ಪರಿಷತ್ತಿನ ಸದಸ್ಯರಾಗುವ ಯೋಗ ಕೂಡಿ ಬಂದಿದೆ. ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಬೇನಾಳ ತಾಂಡಾ ಮೂಲದವರಾದ ಪ್ರಕಾಶ ರಾಠೋಡ ಅವರನ್ನು ರಾಜ್ಯ ಸಮ್ಮಿಶ್ರ ಸರಕಾರ ಕ್ರೀಡಾ ಕೋಟಾದಡಿ ವಿಧಾನ ಪರಿಷತ್ತಿಗೆ ನಾಮಕರಣ ಮಾಡಿದೆ.

ಈ ಹಿಂದೆ 1980 ರಿಂದ 1994ರ ವರೆಗೆ ರಣಜಿ ಕ್ರಿಕೆಟ್​ನಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಪ್ರಕಾಶ ರಾಠೋಡ ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲಸಿದ್ದಾರೆ. ಈ ಹಿಂದೆ ಕ್ರೀಡಾ ಕೋಟದಡಿಯೇ ಪ್ರಕಾಶ ರಾಠೋಡ 2006 ರಿಂದ 2010ರವರೆಗೆ ವಿಧಾನ ಪರಿಷತ್ತಿಗೆ ನಾಮ ನಿರ್ದೇಶಿತರಾಗಿದ್ದರು.

ವಿಜಯಪುರ ಜಿಲ್ಲೆಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ: 

ಪ್ರಕಾಶ ರಾಠೋಡ ಅವರ ತಂದೆ ಕೆ.ಟಿ. ರಾಠೋಡ ಈ ಹಿಂದೆ ಕೆಪಿಸಿಸಿ ಅಧ್ಯಕ್ಷರಾಗಿದ್ದವರು. ಅಲ್ಲದೇ, ಪ್ರಕಾಶ ರಾಠೋಡ 2009 ಮತ್ತು 2014ರಲ್ಲಿ ವಿಜಯಪುರ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಸೋತಿದ್ದಾರೆ. ಪ್ರಕಾಶ ರಾಠೋಡ ದಲಿತ ಲಂಬಾಣಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
First published: October 30, 2018, 9:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories