ಪ್ರಕಾಶ್ ರೈ ಸಾಧ್ಯವಾದ್ರೆ 3 ಕಾಸಿಗೆ ಮಾನಹಾನಿ ಕೇಸು ದಾಖಲಿಸಲಿ: ಪ್ರತಾಪ್ ಸಿಂಹ ತಿರುಗೇಟು

ಪ್ರತಾಪ್ ಸಿಂಹ

ಪ್ರತಾಪ್ ಸಿಂಹ

 • News18
 • Last Updated :
 • Share this:
  - ಪುಟ್ಟಪ್ಪ, ನ್ಯೂಸ್ 18 ಕನ್ನಡ

  ಮೈಸೂರು,(ಫೆ.28): ಸಂಸದ ಪ್ರತಾಪ್​ಸಿಂಹ ವಿರುದ್ಧ ಮಾನಹಾನಿ ಕೇಸು ದಾಖಲಿಸಿದ್ದ ಪ್ರಕಾಶ್ ರೈ  ಗೆ ಮೈಸೂರಿನಲ್ಲಿ ಸಂಸದ ಪ್ರತಾಪ್​ಸಿಂಹ ತಿರುಗೇಟು ನೀಡಿದ್ದಾರೆ.

  ಸಮಾಜದಲ್ಲಿ ರೈ ಮಾನ ಮರ್ಯಾದೆಗೆ ಇರುವ ಮೌಲ್ಯ 1 ರೂ. ಅಷ್ಟೇ. ಈ ಸತ್ಯವನ್ನು ಅವರು ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾರೆ. ನಟ ಪ್ರಕಾಶ್ ರೈಯನ್ನು ನಾನು ಅಭಿನಂದಿಸುತ್ತೇನೆ. ಸಮಾಜದಲ್ಲಿ ಅವರ ನಡವಳಿಕೆಗೆ 3 ಕಾಸಿನ ಬೆಲೆ ಇದೆ. ಪ್ರಕಾಶ್ ರೈ ಮೌಲ್ಯ 1 ರೂ.ಗೆ ಜಾಸ್ತಿ ಆಗಿದ್ದಕ್ಕೆ ಅಭಿನಂದನೆ . ರೈ ಸಾಧ್ಯವಾದ್ರೆ 3 ಕಾಸಿಗೆ ಮಾನಹಾನಿ ಕೇಸು ದಾಖಲಿಸಲಿ ಎಂದು ಸಂಸದ ಪ್ರತಾಪ್​ಸಿಂಹ ತಿರುಗೇಟು ನೀಡಿದ್ದಾರೆ.

  ಪ್ರಕಾಶ್ ರೈ ನಿಜ ಜೀವನದಲ್ಲೂ ಖಳನಾಯಕರಾಗಿದ್ದಾರೆ. ನಟ ಪ್ರಕಾಶ್ ರೈ ನಿಲುವುಗಳಲ್ಲೂ ದ್ವಂದ್ವ ಇದೆ. ಪ್ರಕಾಶ್​ರಾಜ್ ಹೆಸರಿನಲ್ಲಿ ನನಗೆ ನೋಟೀಸ್ ನೀಡಿದ್ದರು. ಮೈಸೂರಿಗೆ ಬಂದು ಪ್ರಕಾಶ್ ರೈ ಹೆಸರಿನಲ್ಲಿ ಕೇಸ್​ ಹಾಕಿದ್ದಾರೆ.  ಇದರಿಂದಲೇ ಗೊತ್ತಾಗುತ್ತೆ ರೈಗೆ ಎರಡೆರಡು ಮನಸ್ಥಿತಿ ಇದೆ ಅಂತ. ಹೀಗಾಗಿ ಅವರ ಮೌಲ್ಯ 1 ರೂ. ಅಂತ ಅವರೇ ನಿರ್ಧಾರ ಮಾಡಿಕೊಂಡಿದ್ದಾರೆ. ಇದಕ್ಕಾಗಿ ನಾನು ಅವರಿಗೆ ಅಭಿನಂದಿಸುತ್ತೇನೆ ಎಂದು ಲೇವಡಿ ಮಾಡಿದ್ದಾರೆ.

  ಪ್ರಕಾಶ್ ರೈ ಅವರೇ ನಿಮಗೆ ಅಷ್ಟು ಆಸಕ್ತಿ ಇದ್ದರೆ ಸಮಾಜಕ್ಕೆ ಬನ್ನಿ. 28 ಕ್ಷೇತ್ರಗಳಲ್ಲಿ ಎಲ್ಲಾದರೂ ಚುನಾವಣೆಗೆ ನಿಲ್ಲಿ. 28 ಕ್ಷೇತ್ರದಲ್ಲೂ ನಿಮ್ಮನ್ನ ಸೋಲಿಸಿ ಕಳುಹಿಸುತ್ತೇವೆ. ಇಂಥವರಿಗೆ ಓಟು ಹಾಕಬೇಡಿ ಅಂತೀರಲ್ಲ. ಅದನ್ನು  ಜನರು ನಿರ್ಧಾರ ಮಾಡ್ತಾರೆ. ನೀವು ಓಟು ಹಾಕಬೇಡಿ ಅಂತ ಹೇಳಿದ ತಕ್ಷಣ ನಿಮ್ಮ ಮಾತನ್ನ ಯಾರು ಕೇಳಲ್ಲ ಎಂದು ಪ್ರಕಾಶ್ ರೈ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

  ನನಗೆ ಅವರು ಒಂದು ರೂ ಬೆಲೆ ಕಟ್ಟುವ  ಅವಶ್ಯಕತೆ ಇಲ್ಲ. ಸಿದ್ದರಾಮಯ್ಯ ಇರುವ ಕ್ಷೇತ್ರದಲ್ಲಿ ಜನ ನನ್ನ ಆಯ್ಕೆ ಮಾಡಿ ನನ್ನ ಬೆಲೆ ಸಾಬೀತು ಮಾಡಿದ್ದಾರೆ. ಪ್ರಕಾಶ್ ರೈ ಅಂತಹ ಮೂರು ಕಾಸಿನ ಬೆಲೆ ಇರುವವರು ನನ್ನಂಥವನಿಗೆ ಬೆಲೆ ಕಟ್ಟೋಕಾಗೋಲ್ಲ ಎಂದು ಪ್ರತಾಪ್ ಸಿಂಹ ರೈ ವಿರುದ್ಧ ಗರಂ ಆಗಿದ್ದಾರೆ.

  ಕೇರಳದಲ್ಲಿ‌ ಭಯಮುಕ್ತ ವಾತಾವರಣ ಇದೆ ಅಂತ ಇವರು ಹೇಳ್ತಾರೆ. ಆದರೆ ಕರ್ನಾಟಕದಲ್ಲಿ ಭಯ ಮುಕ್ತವಾಗಿ‌ ಮಾತನಾಡುತ್ತಿದ್ದಾರೆ. ಭಯ ಮುಕ್ತ ವಾತಾವರಣ ಇರುವುದು ಕರ್ನಾಟಕದಲ್ಲಿ. ಮೈಸೂರಿಗೆ ಬಂದು‌ ನನ್ನ ಬಗ್ಗೆ ಮಾತಾಡಿ ನ್ಯಾಯಾಲಯಕ್ಕೆ ಹೋಗಿದ್ದಾರೆ. ಆದರೆ ಅವರಿಗೆ ಏನಾದ್ರು ಆಯ್ತಾ ? ಆದ್ರೆ ಹೇಳೋದು ಮಾತ್ರ ಕೇರಳದಲ್ಲಿ ಉಸಿರಾಡುವ ವಾತಾವರಣ ಇದೆ ಅಂತ ಎಂದು ರೈ ವಿರುದ್ಧ ಸಿಂಹ ಕಿಡಿಕಾರಿದ್ದಾರೆ.

   
  First published: