-ಪರೀಕ್ಷಿತ್ ಶೇಟ್, ನ್ಯೂಸ್ 18 ಕನ್ನಡ
ಉಡುಪಿ(ಏ.24): ಹಿರಿಯ ನಟ ಪ್ರಕಾಶ್ ರೈ ಮತ್ತೆ ಬಿಜೆಪಿ ವಿರುದ್ಧ ಟೀಕಾ ಪ್ರಹಾರಗೈದಿದ್ದಾರೆ. ಅಮಿತ್ ಶಾ ನೀವು ಯಾರು? ನೀವು ಮಹಾನ್ ರಾಜಕೀಯ ಚಾಣಾಕ್ಯನಾ? ದೇಶದ ಪ್ರಗತಿಗೆ ನೀವು ಏನು ಮಾಡಿದ್ದೀರಿ ? ಅಂತ ನಟ ಪ್ರಕಾಶ್ ರೈ ಪ್ರಶ್ನಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಕಾಶ್ ರೈ , ಮೋದಿ, ಅಮಿತ್ ಶಾ, ಯೋಗಿ ಆದಿತ್ಯಾನಾಥ್ ಬಂದರೆ ಬಿಎಸ್ ವೈ ಕೈಕಟ್ಟಿ ನಿಲ್ಲುತ್ತಾರೆ. ಯಡಿಯೂರಪ್ಪನಿಗೆ ಸ್ವಾಭಿಮಾನ ಇಲ್ಲ . ಬಿಜೆಪಿ ಒಂದು ವೇಳೆ ಅಧಿಕಾರಕ್ಕೆ ಬಂದರೆ ಮೂರು ತಿಂಗಳೂ ಯಡಿಯೂರಪ್ಪ ಸಿಎಂ ಆಗಿ ಉಳಿಯಲ್ಲ ಅಂತ ಪ್ರಕಾಶ್ ರಾಜ್ ಭವಿಷ್ಯ ನುಡಿದಿದ್ದಾರೆ. ಬಿಜೆಪಿಯವರು ತೀಟೆ ತೀರಿಸ್ಕೊಳ್ಳೋದಕ್ಕೆಂದೇ ಮುಖ್ಯಮಂತ್ರಿಗಳಾಗ್ತಾರೆ ಎಂದು ಲೇವಡಿ ಮಾಡಿದರು.
ಬಿಜೆಪಿ ಒಂದು ಪ್ರಾಣಾಂತಿಕ ಕಾಯಿಲೆ: ಬಿಜೆಪಿ ಒಂದು ಪ್ರಾಣಾಂತಿಕ ಕಾಯಿಲೆ, ಮೊದಲು ಆ ಸಮಸ್ಯೆ ಬಗೆಹರಿಸಬೇಕು. ಭಾರತ ಇನ್ನೊಂದು ಪಾಕಿಸ್ತಾನ ಆಗಬಾರದು ಎಂದ ಪ್ರಕಾಶ್ ರಾಜ್, ರಾಜ್ಯದ ಜನ ಜಾಗೃತೆಯಿಂದಿರಿ. ಚುನಾವಣೆಗೆ ಮುನ್ನ ಗಲಭೆಯಾಗುವ ಸಾಧ್ಯತೆಯಿದೆ. ಅಮಿತ್ ಶಾ ಚುನಾವಣಾ ತಂತ್ರ ಮಾಡುತ್ತಿದ್ದಾರೆ ಅಂತ ಪ್ರಕಾಶ್ ರೈ ಭವಿಷ್ಯ ನುಡಿದಿದ್ದಾರೆ. ಇದೇವೇಳೆ, ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪನಿಗಿಂತ ಬೆಟರ್.ಕೊನೆಯ ಎರಡು ವರ್ಷ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ಪ್ರಕಾಶ್ ರೈ ಹಾಡಿ ಹೊಗಳಿದ್ದಾರೆ.
ಧರ್ಮ ಎನ್ನುವುದು ದೀಪದಂತೆ: ನಾನು ಎಡಪಂಥಿ, ಬಲಪಂಥಿ ಎರಡೂ ವಿಚಾರವನ್ನೂ ಸ್ವಾಗತಿಸುವೆ. ನಾನು ಹಿಂದೂ ಸಹಿತ ಯಾವ ಧರ್ಮದ ವಿರೋಧಿಯೂ ಅಲ್ಲ. ನಾನು ಹಿಂದೂ ಧರ್ಮ ವಿರೋಧಿ ಎನ್ನುವುದು ತಪ್ಪು ಕಲ್ಪನೆ. ಧರ್ಮ ಎನ್ನುವುದು ದೀಪದಂತೆ, ಅದು ಬೆಳಕನ್ನು ನೀಡಬೇಕು. ಧರ್ಮದಿಂದ ಸರಕಾರ ನಡೆಸುವಂತಾಗಬಾರದು. ಅದು ಪ್ರಜಾಪ್ರಭುತ್ವ ಸಿದ್ದಾಂತಕ್ಕೆ ವಿರುದ್ದವಾಗಿದೆ ಎಂದಿದ್ದಾರೆ.
ಬಿಜೆಪಿ ಧರ್ಮದ ಬಗ್ಗೆ ಮಾತಾಡಲು ಗುತ್ತಿಗೆ ಪಡೆದಿಲ್ಲ: ಸೆಕ್ಯುಲರ್ ಎನ್ನುವುದು ಪಾಶ್ಚಾತ್ಯ ಕಲ್ಪನೆ. ಭಾರತದಲ್ಲಿ ಎಲ್ಲರಿಗೂ ಒಂದು ಜಾತಿಯಿದೆ. ಮನುಷ್ಯ ವಿರೋಧಿ ಧರ್ಮವಿಲ್ಲ. ಮನುಷ್ಯನನ್ನು ಕೊಲ್ಲಲು ಧರ್ಮ ಕಲಿಸಿಲ್ಲ. ಬಿಜೆಪಿಗರು ಹಿಂದೂ ಧರ್ಮ ಬಗ್ಗೆ ಮಾತಾಡಲು ಗುತ್ತಿಗೆ ಪಡೆದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
First published:
April 24, 2018, 5:51 PM IST