ವರಸೆ ಬದಲಾಯಿಸಿದ ಪ್ರಕಾಶ್​ ಹುಕ್ಕೇರಿ; ಮತ್ತೆ ಕಾಂಗ್ರೆಸ್​​ ಪರ ಪ್ರಚಾರಕ್ಕಿಳಿದ ಮಾಜಿ ಸಂಸದ

ಇತ್ತೀಚೆಗೆ ಬಿಜೆಪಿ ಪರ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್​ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು.

ಪ್ರಕಾಶ್​ ಹುಕ್ಕೇರಿ

ಪ್ರಕಾಶ್​ ಹುಕ್ಕೇರಿ

  • Share this:
ಚಿಕ್ಕೋಡಿ (ಡಿ. 24):  ಮೊನ್ನೆ ಮೊನ್ನೆ ಅಷ್ಟೆ ಕಾಂಗ್ರೇಸ್​ನ ಹಿರಿಯ ನಾಯಕ ಪ್ರಕಾಶ ಹುಕ್ಕೇರಿ ನಾನು ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತೇನೆ. ದಿವಂಗತ ಸುರೇಶ್ ಅಂಗಡಿ ಕುಟುಂಬದ ಪರವಾಗಿ ನಾನು ನಿಲ್ಲುತ್ತೇನೆ. ಅವರ ಕುಟುಂಬದವರಿಗೆ ಟಿಕೆಟ್ ನೀಡಿದರೆ, ನನ್ನ ಮಗನನ್ನು ಗೆಲ್ಲಿಸಿಕೊಂಡು ಬಂದ ಹಾಗೆ ಅವರ ಕುಟುಂಬದ ಸದಸ್ಯರ ಗೆಲುವಿಗೆ ಕೆಲಸ ಮಾಡುತ್ತೇನೆ ಎಂದು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್​ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು.  ಅಷ್ಟೇ ಅಲ್ಲದೆ,  ಕಾಂಗ್ರೆಸ್​​ ಹೈ ಕಮಾಂಡ್ ನಮ್ಮ ಮೇಲೆ ಏನು ಕ್ರಮ ಕೈಗೊಳ್ಳುತ್ತದೆಯೋ ಕೈಗೊಳ್ಳಲಿ ಎಂದು ಹೇಳಿ ಪಕ್ಷಕ್ಕೆ ಸವಾಲ್​ ಹಾಕಿದ್ದರು. ಆದರೆ, ಇಂದು ದಿಢೀರ್​ ಎಂದು ಯೂಟರ್ನ್​ ಹೊಡೆದಿದ್ದು, ಮತ್ತೆ ಕಾಂಗ್ರೆಸ್​ ಪಕ್ಷದ ಪರ ಪ್ರಚಾರಕ್ಕೆ ಮುಂದಾಗಿದ್ದಾರೆ. ಗ್ರಾಮ ಪಂಚಾಯತಿ ಚುನಾವಣೆ ಪ್ರಚಾರ ಸಭೆ ಮಾಡಿದ ಅವರ ನಡೆ ಜನರಲ್ಲಿ ಗೊಂದಲ ಮೂಡಿಸಿತು. 

ತಮ್ಮ ಮಗ ಗಣೇಶ್​ ಹುಕ್ಕೇರಿಯ ರಾಜಕೀಯ ಭವಿಷ್ಯದ ಹಿನ್ನಲೆ ಪ್ರಕಾಶ್​ ಹುಕ್ಕೇರಿ ಬಿಜೆಪಿ ಪರ ವಾಲಿದ್ದಾರೆ. ಇದೇ ಹಿನ್ನಲೆ ಅವರು ಕಮಲ ನಾಯಕರ ಪರ ಹೇಳಿಕೆ ನೀಡುತ್ತಿದ್ದಾರೆ. ಅವರು ಪಕ್ಷ ತೊರೆಯುವ ಸಾಧ್ಯತೆ ಇದೆ ಎಂಬ ಮಾತುಗಳು ಕೂಡ ಕೇಳಿ ಬಂದಿದ್ದವು. ಆದರೆ, ಈಗ ಮತ್ತೆ ಪ್ರಕಾಶ್​ ಹುಕ್ಕೇರಿ ವರಸೆ ಬದಲಾಯಿಸಿದ್ದಾರೆ. ಗ್ರಾಮ ಪಂಚಾಯತಿ ಚುನಾವಣೆಗೆ ಕಾಂಗ್ರೆಸ್​​ ನಾಯಕರನ್ನು ಕರೆಸಿ  ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಹುಕ್ಕೇರಿ ವಿರುದ್ಧ ಜಾರಿಯಾದ ನೋಟಿಸ್​.

ಪ್ರಕಾಶ್​ ಹುಕ್ಕೇರಿ ನಡುವಳಿಕೆ ಗಮನಿಸಿದ ಕಾಂಗ್ರೆಸ್​ ಅವರಿಗೆ ನೋಟಿಸ್​ ಜಾರಿ ಮಾಡುವ ಮೂಲಕ ಬಿಸಿ ಮುಟ್ಟಿಸಿದೆ. ಇದರಿಂದ ಎಚ್ಚೆತ್ತ ಹುಕ್ಕೇರಿ ಈಗ ಮತ್ತೆ ಕಾಂಗ್ರೆಸ್​ ನಾಯಕರ ಸಮಾಧಾನ ಪಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ

ಇದನ್ನು ಓದಿ: ಮುಂಬರುವ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸಿದ್ದರಾಮಯ್ಯ ಸೋಲು ; ಸಚಿವ ಶ್ರೀ ರಾಮುಲು ಭವಿಷ್ಯ

ಇದೇ ಕಾರಣಕ್ಕೆ  ಗ್ರಾಮ ಪಂಚಾಯತಿ ಚುನಾವಣೆ ಪ್ರಚಾರಕ್ಕೆ ಬರುವಂತೆ ಮಾಜಿ ಸಚಿವ ಎಂ ಬಿ ಪಾಟೀಲ್ ಅವರನ್ನ ಸ್ವತಃ ಪ್ರಕಾಶ ಹುಕ್ಕೇರಿಯವರೆ ಫೋನ್ ಮಾಡಿ ಕರೆದಿದ್ದಾರೆ.  ಕುರಿತು ಮಾತನಾಡಿದ ಎಂಬಿ ಪಾಟೀಲ್​,  ಪ್ರಕಾಶ್ ಹುಕ್ಕೇರಿ ನಮಗೆ ಪೋನ್ ಮಾಡಿ, ಚಿಕ್ಕೋಡಿ ಸದಲಗಾ ಕಾರ್ಯಕರ್ತರ ಸಭೆ ಆಯೋಜನೆ ಮಾಡಿದ್ದು,  ನೀವು ಬರಲೇಬೇಕು ಎಂದು ಒತ್ತಾಯಿಸಿದ ಹಿನ್ನಲೆ ಸಭೆಗೆ ಬಂದಿದ್ದೇವೆ ಎಂದು ತಿಳಿಸಿದರು. 

ಒಟ್ಟಿನಲ್ಲಿ ಸುರೇಶ್ ಅಂಗಡಿ ಮೇಲಿನ ಗೌರವ ಪ್ರೀತಿ. ಅವರ ಕುಟುಂಬದ ಮೇಲಿನ ಕಾಳಜಿಗಾಗಿ ಪ್ರಕಾಶ ಹುಕ್ಕೇರಿ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ ಎನ್ನುವುದು ಸತ್ಯವಾಗಿದ್ದರೂ ಸಹ ಇವರ ಈ ಇಬ್ಬಗೆಯ ರಾಜಕೀಯ ನೀತಿ ಸದ್ಯ ಕಾರ್ಯಕರ್ತರು ಮತ್ತು ಜಿಲ್ಲಾ ನಾಯಕರನ್ನು ಹುಬ್ಬೇರಿಸುವಂತೆ ಮಾಡಿದ್ದಂತೂ ಸುಳ್ಳಲ್ಲ.
Published by:Seema R
First published: