ನಾನು ಅಭ್ಯರ್ಥಿಯಾಗುವಂತೆ ಗ್ರೀನ್ ಸಿಗ್ನಲ್ ನೀಡಿದ್ದು ನಿಜ, ದೇವೇಗೌಡರು ಬಂದರೆ ಸ್ವಾಗತ; ಪ್ರುಜ್ವಲ್​ ರೇವಣ್ಣ

ಪ್ರಜ್ವಲ್​ ರೇವಣ್ಣ ಅವರ ರಾಜಕೀಯ ಪ್ರವೇಶಕ್ಕಾಗಿ ತಮ್ಮ ಕ್ಷೇತ್ರ ತ್ಯಾಗಕ್ಕಾಗಿ ದೇವೇಗೌಡ ಅವರು ಮುಂದಾಗಿದ್ದರು. ಅಲ್ಲದೇ ಜಿಲ್ಲೆ ಪಕ್ಷ ಸಂಘಟನೆ ಜವಾಬ್ದಾರಿಯನ್ನು ಪ್ರಜ್ವಲ್​ ಹೆಗಲಿಗೆ ಹಾಕಿದ್ದರು. ಆದರೆ, ಪ್ರಜ್ವಲ್​ ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದು ಅನುಮಾನ ಎನ್ನುತ್ತಿದೆ ರೇವಣ್ಣ ಕುಟುಂಬದ ಹೇಳಿಕೆಗಳು

Seema.R | news18
Updated:February 23, 2019, 4:26 PM IST
ನಾನು ಅಭ್ಯರ್ಥಿಯಾಗುವಂತೆ ಗ್ರೀನ್ ಸಿಗ್ನಲ್ ನೀಡಿದ್ದು ನಿಜ, ದೇವೇಗೌಡರು ಬಂದರೆ ಸ್ವಾಗತ; ಪ್ರುಜ್ವಲ್​ ರೇವಣ್ಣ
ಎಚ್.ಡಿ.ದೇವೇಗೌಡ, ಪ್ರಜ್ವಲ್ ರೇವಣ್ಣ
Seema.R | news18
Updated: February 23, 2019, 4:26 PM IST
ಹಾಸನ (ಫೆ.23): ಹಾಸನ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ದೇವೇಗೌಡ ಅವರು ನಿಲ್ಲುತ್ತಾರೋ ಅಥವಾ ಅವರ ಮೊಮ್ಮಗ ನಿಲ್ಲುತ್ತಾರೋ ಎಂಬ ಕುತೂಹಲ ದಿನಕ್ಕೆ ಒಂದೊಂದು ತಿರುವು ಪಡೆಯುತ್ತಿದೆ.

ಪ್ರಜ್ವಲ್​ ರೇವಣ್ಣ ಅವರ ರಾಜಕೀಯ ಪ್ರವೇಶಕ್ಕಾಗಿ ತಮ್ಮ ಕ್ಷೇತ್ರ ತ್ಯಾಗಕ್ಕಾಗಿ ದೇವೇಗೌಡ ಅವರು ಮುಂದಾಗಿದ್ದರು. ಅಲ್ಲದೇ ಜಿಲ್ಲೆ ಪಕ್ಷ ಸಂಘಟನೆ ಜವಾಬ್ದಾರಿಯನ್ನು ಪ್ರಜ್ವಲ್​ ಹೆಗಲಿಗೆ ಹಾಕಿದ್ದರು. ಆದರೆ, ಪ್ರಜ್ವಲ್​ ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದು ಅನುಮಾನ ಎನ್ನುತ್ತಿದೆ ರೇವಣ್ಣ ಕುಟುಂಬದ ಹೇಳಿಕೆಗಳು.

ಈ ಹಿಂದೆ ಮಾತನಾಡಿದ ಭವಾನಿ ರೇವಣ್ಣ ದೇವೇಗೌಡ ಅವರೇ ಚುನಾವಣೆಗೆ ನಿಲ್ಲಲಿ ಎಂದಿದ್ದರು. ಕಳೆದೆರಡು ದಿನಗಳ ಹಿಂದೆ ಮಾತನಾಡಿದ ಲೋಕೋಪಯೋಗಿ ಸಚಿವ ರೇವಣ್ಣ,  ದೇವೇಗೌಡ ಅವರು ನಿಲ್ಲಬೇಕು ಎಂಬುದೇ ನಮ್ಮ ಆಶಯ. ಅವರೇ ನಮ್ಮ ಮೊದಲ ಆದ್ಯತೆ ಎಂದಿದ್ದರು.

ಈಗ ಈ ಕುರಿತು ಮಾತನಾಡಿರುವ ಪ್ರಜ್ವಲ್​ ರೇವಣ್ಣ, ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ವಿಚಾರ ಕುರಿತು ದೇವೇಗೌಡ ಅವರ  ಮಾತೇ ಅಂತಿಮ.  ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ಇಲ್ಲ. ಈ ಕುರಿತು ಮಾಧ್ಯಮಗಳು ಗೊಂದಲ ಸೃಷ್ಟಿಸಿವೆ.  ನಾನು ಅಭ್ಯರ್ಥಿಯಾಗುವಂತೆ ಗ್ರೀನ್ ಸಿಗ್ನಲ್ ನೀಡಿದ್ದು ನಿಜ. ನಾವು ಯಾರು ನಾವೇ ನಿಲ್ಲುತ್ತೇವೆ ಎಂದಿಲ್ಲ. ದೇವೇಗೌಡರು ಬಂದರೇ ಸ್ವಾಗತ ಅಲ್ಲ, ಅದು ಅವರು ಹಕ್ಕು. ದೇವೇಗೌಡರೇ ಸ್ಪರ್ಧಿಸಿದ್ರೆ ಅಧಿಕ ಮತಗಳಿಂದ ಗೆಲ್ಲಿಸುತ್ತೇವೆ ಎಂದರು.

ಇದನ್ನು ಓದಿ: ರಾಜ್ಯದ ದಲಿತ ಮತಗಳ ಮೇಲೆ ಬಿಜೆಪಿ ಕಣ್ಣು; ಮೀಸಲು ಕ್ಷೇತ್ರದ ಜವಾಬ್ದಾರಿ ಶ್ರೀರಾಮುಲು ಹೆಗಲಿಗೆ

ಮೊಮ್ಮಗನಿಗಾಗಿ ಕ್ಷೇತ್ರ ತ್ಯಾಗಕ್ಕೆ ಮುಂದಾಗಿದ್ದ ದೇವೇಗೌಡರು ಬೆಂಗಳೂರು ಉತ್ತರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿತ್ತು. ಆದರೆ, ಕ್ಷೇತ್ರ ಬದಲಾವಣೆ ಈಗ ಸುಲಭವಾಗಿಲ್ಲ ಎಂಬ ಬಗ್ಗೆ ಮಾತು ಕೇಳಿಬಂದಿತು. ಅಲ್ಲದೇ ಈ ಲೋಕಸಭಾ ಚುನಾವಣೆ ತಮ್ಮ ಕೊನೆಯ ಚುನಾವಣೆ ಎಂಬುದಾಗಿ ದೇವೇಗೌಡರು ಹೇಳಿದ್ದು, ಈ ಹಿನ್ನಲೆಯಲ್ಲಿ ಅವರ ಸ್ವಕ್ಷೇತ್ರದಲ್ಲಿ ಗೆಲುವು ಸಾಧಿಸಲಿ ಎಂಬ ಮಾತು ಕೇಳಿ ಬಂದಿದೆ ಎನ್ನಲಾಗಿದೆ.
Loading...

First published:February 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626