ಜಿಡಿಟಿ ಮನೆಗೆ ಆಗಮಿಸಿ, ಜನ್ಮ ದಿನದ ಶುಭಾಶಯ ಕೋರಿದ ಸಂಸದ ಪ್ರಜ್ವಲ್ ರೇವಣ್ಣ

ಕೊನೆಗೆ ದೂರವಾಣಿಯಲ್ಲಿ ಮೂಲಕ ಜಿಟಿಡಿ ಜೊತೆ ಮಾತನಾಡಿದ ಪ್ರಜ್ವಲ್ ರೇವಣ್ಣ,  ನೀವು ಎಲ್ಲಿದ್ದೀರಾ ಹೇಳಿ, ಅಲ್ಲಿಗೆ ಬರುತ್ತೇನೆ. ಇಂದು ನಿಮ್ಮನ್ನು 5 ನಿಮಿಷವಾದರೂ ಭೇಟಿಯಾಗಬೇಕು ಎಂದು ಹೇಳಿದರು. ಆಗ ಜಿಟಿಡಿ ತಾವು ಇರುವ ವಿಳಾಸ ಹೇಳಿದರು.  ಶಾಸಕರಾದ ಅಶ್ವಿನ್‌ಕುಮಾರ್, ಕೆ.ಮಹದೇವು ಅವರು ಪ್ರಜ್ವಲ್ ಜೊತೆಗಿದ್ದರು.

HR Ramesh | news18-kannada
Updated:November 25, 2019, 9:43 PM IST
ಜಿಡಿಟಿ ಮನೆಗೆ ಆಗಮಿಸಿ, ಜನ್ಮ ದಿನದ ಶುಭಾಶಯ ಕೋರಿದ ಸಂಸದ ಪ್ರಜ್ವಲ್ ರೇವಣ್ಣ
ಜಿಟಿಡಿಗೆ ಜನ್ಮದಿನದ ಶುಭಾಶಯ ಕೋರಿದ ಸಂಸದ ಪ್ರಜ್ವಲ್ ರೇವಣ್ಣ.
  • Share this:
ಮೈಸೂರು: ಸಂಸದ ಪ್ರಜ್ವಲ್ ರೇವಣ್ಣ ಇಂದು ಜಿಟಿಡಿ ಮನೆಗೆ ತೆರಳಿ, ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರಿಗೆ 70ನೇ ಹುಟ್ಟುಹಬ್ಬದ ಶುಭಾಶಯ ಕೋರಿದರು. 

ಮೈಸೂರಿನ ಜಿಟಿಡಿ ನಿವಾಸಕ್ಕೆ ರಾತ್ರಿ ಪ್ರಜ್ವಲ್ ರೇವಣ್ಣ ಆಗಮಿಸಿದರು. ಆದರೆ ಪ್ರಜ್ವಲ್ ಭೇಟಿಗೆ ಜಿಟಿಡಿ ಸಿಗಲಿಲ್ಲ. ಪೂರ್ವನಿಯೋಜಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮನೆಯಿಂದ ಹೊರಗೆ ತೆರಳಿದ್ದರು. ಈ ವೇಳೆ ಪ್ರಜ್ವಲ್ ಅವರು ಜಿಟಿಡಿ ಅವರ ಹೆಂತಿ ಲಲಿತಾ ಅವರೊಂದಿಗೆ ಮಾತುಕತೆ ನಡೆಸಿದರು. ಕೊನೆಗೆ ದೂರವಾಣಿಯಲ್ಲಿ ಮೂಲಕ ಜಿಟಿಡಿ ಜೊತೆ ಮಾತನಾಡಿದ ಪ್ರಜ್ವಲ್ ರೇವಣ್ಣ,  ನೀವು ಎಲ್ಲಿದ್ದೀರಾ ಹೇಳಿ, ಅಲ್ಲಿಗೆ ಬರುತ್ತೇನೆ. ಇಂದು ನಿಮ್ಮನ್ನು 5 ನಿಮಿಷವಾದರೂ ಭೇಟಿಯಾಗಬೇಕು ಎಂದು ಹೇಳಿದರು. ಆಗ ಜಿಟಿಡಿ ತಾವು ಇರುವ ವಿಳಾಸ ಹೇಳಿದರು. ಅದಾದ ಬಳಿಕ ಜಿಟಿಡಿ ಆಗಮಿಸಿದಾಗ ಅವರಿಗೆ ಪೇಟ ತೊಡಿಸಿ, ಹುಟ್ಟುಹಬ್ಬದ ಶುಭಾಶಯ ಕೋರಿದರು.

ಈ ವೇಳೆ ಹರೀಶ್ ಗೌಡ, ಶಾಸಕರಾದ ಅಶ್ವಿನ್‌ಕುಮಾರ್, ಕೆ.ಮಹದೇವು ಅವರು ಪ್ರಜ್ವಲ್ ಜೊತೆಗಿದ್ದರು.

ಇದನ್ನು ಓದಿ: ನಾನು ಈಗಾಗಲೇ ಗೆದ್ದಿದ್ದೇನೆ - ಯಾರನ್ನೇ ಸಚಿವರನ್ನಾಗಿ ಮಾಡ್ಲಿ, ನಾನು ಯಾವ ಸಿಎಂಗೂ ಕಮ್ಮಿಯಿಲ್ಲ ; ಎಂಟಿಬಿ ನಾಗರಾಜ್

 

First published:November 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ