• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Pralhad Joshi: ಕರ್ನಾಟಕಕ್ಕೆ ನರೇಂದ್ರ ಮೋದಿ ಆದೇಶ ಪಾಲಿಸುವ ಸಿಎಂ ಮತ್ತು ಮಂತ್ರಿ ಬೇಕಾಗಿದೆ: ಪ್ರಹ್ಲಾದ್ ಜೋಶಿ

Pralhad Joshi: ಕರ್ನಾಟಕಕ್ಕೆ ನರೇಂದ್ರ ಮೋದಿ ಆದೇಶ ಪಾಲಿಸುವ ಸಿಎಂ ಮತ್ತು ಮಂತ್ರಿ ಬೇಕಾಗಿದೆ: ಪ್ರಹ್ಲಾದ್ ಜೋಶಿ

ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ

ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ

ಮೋದಿ ವೇಗಕ್ಕೆ ಕೆಲಸ ಮಾಡಲಾಗದಿದ್ದರೂ ಮೋದಿ ಆದೇಶ ಪಾಲಿಸುವ ಒಬ್ಬ ಸಿಎಂ ಮತ್ತು ಮಂತ್ರಿ ಇದ್ದಾಗ ರಾಜ್ಯದ ಅಭಿವೃದ್ಧಿ ಆಗುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು

  • News18 Kannada
  • 5-MIN READ
  • Last Updated :
  • Hubli-Dharwad (Hubli), India
  • Share this:

ಧಾರವಾಡ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವೇಗಕ್ಕೆ ಕೆಲಸ ಮಾಡದಿದ್ದರೂ ಮೋದಿ ಆದೇಶ ಪಾಲಿಸುವ ಮುಖ್ಯಮಂತ್ರಿ ರಾಜ್ಯಕ್ಕೆ ಬೇಕಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದ್ದಾರೆ. ಧಾರವಾಡದ ಜೆಎಸ್‌ಎಸ್ ಸಂಸ್ಥೆಯಲ್ಲಿ ನಡೆದ (Karnataka BJP) ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪಿಎಂ ನರೇಂದ್ರ ಮೋದಿ ಅವರ ಆದೇಶ ಪಾಲಿಸುವ ಸಿಎಂ ಮತ್ತು ಒಬ್ಬ ಮಂತ್ರಿ ಬೇಕು ಎಂದು ಹೇಳಿದರು.


ನಮ್ಮದು ಒಂದು ಒಕ್ಕೂಟ ವ್ಯವಸ್ಥೆ, ಕೇಂದ್ರ ಮತ್ತು ರಾಜ್ಯಕ್ಕೆ ಬೇರೆ ಬೇರೆ ಆಯಾಮ ಇರುತ್ತದೆ ಎಂದ ಪ್ರಹ್ಲಾದ್ ಜೋಶಿ, ಕೇಂದ್ರ ಮತ್ತು ರಾಜ್ಯ ಒಂದೇ ದಿಕ್ಕಿನಲ್ಲಿ ಹೋಗಬೇಕು. ದೃಷ್ಟಿಕೋನ ಒಂದೇ ರೀತಿ ಇರಬೇಕು. ಹಾಗೆ ಆಗದಿದ್ದಲ್ಲಿ ಅಭಿವೃದ್ಧಿ ಆಗಲು ಸಾಧ್ಯವಿಲ್ಲ. ಕೇಂದ್ರ ಮತ್ತು ರಾಜ್ಯ ಒಂದೇ ರೀತಿ ವಿಚಾರ ಮಾಡಿದಾಗ ಅಭಿವೃದ್ಧಿ ಆಗುತ್ತವೆ ಎಂದರು.


ಇದನ್ನೂ ಓದಿ: Siddaramaiah: ಶೋಭಾ ಕರಂದ್ಲಾಜೆಯನ್ನು ವಿಚಾರಣೆಗೊಳಪಡಿಸಿ ಚುನಾವಣಾ ಪ್ರಚಾರದಿಂದ ನಿಷೇಧಿಸಿ: ಸಿದ್ದರಾಮಯ್ಯ ಆಕ್ರೋಶ


ಮೋದಿ ಆದೇಶ ಪಾಲಿಸುವ ಸಿಎಂ ಬೇಕು


ರಾಜ್ಯ ಅಭಿವೃದ್ದಿ ಆಗಬೇಕಾದರೆ ಎರಡೂ ಕಡೆ ಒಂದೇ ಬಗೆಯ ಸರ್ಕಾರ ಬರಬೇಕು. ಮೋದಿ ವೇಗಕ್ಕೆ ತಕ್ಕಂತೆ ಕೆಲಸ ಮಾಡುವವರು ಬೇಕು. ಮೋದಿ ವೇಗಕ್ಕೆ ಕೆಲಸ ಮಾಡಲಾಗದಿದ್ದರೂ ಮೋದಿ ಆದೇಶ ಪಾಲಿಸುವ ಒಬ್ಬ ಸಿಎಂ ರಾಜ್ಯದಲ್ಲಿ ಇರಬೇಕು, ಜೊತೆಗೆ ಒಬ್ಬ ಮಂತ್ರಿ ಕೂಡ ಬೇಕು ಎಂದರು.


ಮೋದಿ ವೇಗಕ್ಕೆ ಕೆಲಸ ಮಾಡಲಾಗದಿದ್ದರೂ ಮೋದಿ ಆದೇಶ ಪಾಲಿಸುವ ಒಬ್ಬ ಸಿಎಂ ಮತ್ತು ಮಂತ್ರಿ ಇದ್ದಾಗ ರಾಜ್ಯದ ಅಭಿವೃದ್ಧಿ ಆಗುತ್ತದೆ ಎಂದ ಜೋಶಿ, ದೇಶಕ್ಕೆ ಒಳ್ಳೆಯದಾಗಲು ರಾಜ್ಯಗಳಲ್ಲಿಯೂ ಒಳ್ಳೆಯ ಸರ್ಕಾರ ಬರಬೇಕು. ರಾಜ್ಯದ ಚುನಾವಣೆಯಲ್ಲಿಯೂ ಈಗ ರಾಷ್ಟ್ರದ ಚಿಂತನೆ ಅಡಗಿದೆ ಎಂದು ಹೇಳಿದರು.


ಇದನ್ನೂ ಓದಿ: Narendra Modi Conversation: ರಾಜ್ಯದ 50 ಲಕ್ಷ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ ಸಂವಾದ; ಪಕ್ಷದಲ್ಲಿ ತುಂಬಿದ ಉತ್ಸಾಹ


ಮೋದಿ ಬಗ್ಗೆ ರಾಮದಾಸ್ ಮೆಚ್ಚುಗೆ


ಮೈಸೂರು : ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕಕ್ಕೆ ಏನೆಲ್ಲಾ ಪ್ರಯೋಜನಗಳು ಆಗಲಿವೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ಧಾರೆ ಎಂದು ಶಾಸಕ ಎಸ್‌ಎ ರಾಮದಾಸ್ ಹೇಳಿದ್ದಾರೆ.


top videos



    ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ರಾಮದಾಸ್, ಕೆ ಆರ್ ಕ್ಷೇತ್ರ ಸಂಘಟನೆಯಲ್ಲಿ ಮೊದಲ ಸ್ಥಾನದಲ್ಲಿರುವುದನ್ನು ಪ್ರಧಾನಿ ಮೋದಿ ಉಲ್ಲೇಖಿಸಿದ್ದು ಸಂತಸ ತಂದಿದೆ. ಕೆ ಆರ್ ಕ್ಷೇತ್ರದಲ್ಲಿ ಕಳೆದೊಂದು ವರ್ಷದಿಂದ ಬೂತ್ ಮಟ್ಟದಲ್ಲಿ ಆಲ್ ಓಟ್ಸ್ ಬಿಜೆಪಿ ಓಟ್ಸ್, ಆಲ್ ಬೂತ್ಸ್ ಬಿಜೆಪಿ ಬೂತ್ಸ್ ಎಂಬ ಗುರಿಯೊಂದಿಗೆ ಕೆಲಸ ಮಾಡಿದ್ದೇವೆ. ಕೆ ಆರ್ ಕ್ಷೇತ್ರದ 265 ಬೂತ್ ಗಳ ಪೈಕಿ 226 ಬೂತ್ ಗಳು ಬಿಜೆಪಿ ಬೂತ್ ಗಳಾಗಿವೆ. ಈ ಹಿಂದೆಯೇ ಹೇಳಿರುವಂತೆ ಈ ಬಾರಿಯ ಚುನಾವಣೆಯಲ್ಲಿ 50 ಸಾವಿರ ಮತಗಳ ಅಂತರದಿಂದ ಕೆ ಆರ್ ಕ್ಷೇತ್ರವನ್ನು ನಾವು ಗೆಲ್ಲುತ್ತೇವೆ‌ ಎಂದು ಹೇಳಿದರು.

    First published: