Actress Soundarya: ನಟಿ ಸೌಂದರ್ಯ ಕನಸು ನನಸಾಗಿಸಿದ ಪ್ರಗತಿ ಚಾರಿಟೇಬಲ್ ಟ್ರಸ್ಟ್

ಶ್ರೀ ಮಂಜುನಾಥ ಸಿನಿಮಾ ಚಿತ್ರೀಕರಣದ ವೇಳೆ ಗ್ರಾಮಕ್ಕೆ ಭೇಟಿ ನೀಡಿದ್ದ ಸೌಂದರ್ಯ, ತಾವು ಓದಿದ ಶಾಲೆಗೆ ಏನಾದರು ಸಹಾಯ ಮಾಡಬೇಕೆಂಬ ಆಸೆಯಿಂದ ಬೀಳುವ ಹಂತದಲ್ಲಿದ್ದ ಶಾಲಾ ಕೊಠಡಿ ಪಕ್ಕದಲ್ಲೇ ಹೊಸ ಕೊಠಡಿಯನ್ನ ನಿರ್ಮಿಸಿ ಕೊಡುಗೆಯಾಗಿ ನೀಡಿದ್ದರು.

ನಟಿ ಸೌಂದರ್ಯ

ನಟಿ ಸೌಂದರ್ಯ

  • Share this:
ದಕ್ಷಿಣ ಭಾರತದ ಖ್ಯಾತ ಚಲನಚಿತ್ರ ನಟಿ, ದಿವಂಗತ ಸೌಂದರ್ಯ (Actress Soundarya) ಅವರ ಹುಟ್ಟೂರು, ಕೋಲಾರ (Kolar) ಜಿಲ್ಲೆಯ ಮುಳಬಾಗಿಲು ತಾಲೂಕಿನ ಗಂಜಿಗುಂಟೆ (Ganjihunte, Mulabagilu) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ (Primary School) ಹೊಸ ಸ್ವರೂಪ ಸಿಕ್ಕಿದೆ. 2001 ರಲ್ಲಿ ಬೀಳುವ ಹಂತದಲ್ಲಿದ್ದ ಶಾಲಾ ಕಟ್ಟಡ ಗಮನಿಸಿದ್ದ ನಟಿ ಸೌಂದರ್ಯ ಅವರು, ತಾವು ಓದಿದ ಶಾಲೆಗೆ ಕೊಡುಗೆಯಾಗಿ, ಒಂದೂವರೆ ಲಕ್ಷ ವೆಚ್ಚದಲ್ಲಿ ಸುಸರ್ಜಿತ ಒಂದು ಶಾಲಾ ಕೊಠಡಿ (Classroom) ನಿರ್ಮಿಸಿ ಕೊಟ್ಟಿದ್ದವರು, ಮೂಲತಃ ಗಂಜಿಗುಂಟೆ ಗ್ರಾಮದವರೇ ಆದ ಸೌಂದರ್ಯ, ಇದೇ ಶಾಲೆಯಲ್ಲಿ 5 ನೇ ತರಗತಿವರೆಗೂ ಓದಿದವರು. ಹಾಗಾಗಿಯೇ ನಟಿ ಸೌಂದರ್ಯ ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ, ಗ್ರಾಮದ ಬಗ್ಗೆ ವಿಶೇಷ ಕಾಳಜಿ ಇರಿಸಿಕೊಂಡಿದ್ದರು.

ಶ್ರೀ ಮಂಜುನಾಥ ಸಿನಿಮಾ ಚಿತ್ರೀಕರಣದ ವೇಳೆ ಗ್ರಾಮಕ್ಕೆ ಭೇಟಿ ನೀಡಿದ್ದ ಸೌಂದರ್ಯ, ತಾವು ಓದಿದ ಶಾಲೆಗೆ ಏನಾದರು ಸಹಾಯ ಮಾಡಬೇಕೆಂಬ ಆಸೆಯಿಂದ ಬೀಳುವ ಹಂತದಲ್ಲಿದ್ದ ಶಾಲಾ ಕೊಠಡಿ ಪಕ್ಕದಲ್ಲೇ ಹೊಸ ಕೊಠಡಿಯನ್ನ ನಿರ್ಮಿಸಿ ಕೊಡುಗೆಯಾಗಿ ನೀಡಿದ್ದರು.

ಮುಂದೆ ಗ್ರಾಮದ ಶಾಲೆಗೆ ಕಾಂಪೌಂಡ್ ನಿರ್ಮಿಸಿ, ಸುತ್ತಲೂ ಗಿಡಗಳನ್ನ ನೆಟ್ಟು ಹೈಟೆಕ್ ಟಚ್ ನೀಡಬೇಕು ಎಂಬುದು ಸೌಂದರ್ಯ ಅವರ ಕನಸಾಗಿತ್ತು. ಆದರೆ ಅವರ ಅಕಾಲಿಕ ನಿಧನ ನಂತರ ಶಾಲೆ ಅಭಿವೃದ್ಧಿ ಕಾಣದೇ ಶಾಲೆಯ ಮೂರು ಕೊಠಡಿಗಳು ಮಳೆಯಾದರೆ ಸೋರುವ ಪರಿಸ್ಥಿತಿ ಇತ್ತು. ಶಾಲಾ ಕಾಂಪೌಂಡ್ ಸಹ ಕುಸಿದು ಬೀಳುವಂತಿತ್ತು.

Pragati charitable trust gave hitech touch to ganjigante government school rrk mrq
ಶಾಲಾ ಕಟ್ಟಡ


ಪ್ರಗತಿ ಚಾರಿಟೇಬಲ್ ಟ್ರಸ್ಟ್ ನಿಂದ ಶಾಲೆಗೆ ಹೊಸ ಸ್ವರೂಪ

ಶಾಲೆಯ ದುಸ್ಥಿತಿಯನ್ನ  ಗಮನಿಸಿದ ಬೆಂಗಳೂರಿನ ಪ್ರಗತಿ ಚಾರಿಟೆಬಲ್ ಟ್ರಸ್ಟ್ ನ ಅಧ್ಯಕ್ಷ್ಯ ಮುನೇಶ್,  ನಟಿ ಸೌಂದರ್ಯ ಅವರ ಕನಸನ್ನ ನನಸಾಗಿಸಲು ಇದೀಗ ಶಾಲೆಯ ನೋಟವನ್ನ ಬದಲಿಸಿದ್ದಾರೆ. ಮೂರು ಕೊಠಡಿಗಳ ಮೇಲ್ಛಾವಣಿ ಸರಿಪಡಿಸಿದ್ದು, ಕೊಠಡಿಗಳಿಗೆ ಸುಣ್ಣ ಬಣ್ಣ, ಶಾಲೆಯ ಕಾಂಪೌಂಡ್ ದುರಸ್ತಿ ಮಾಡಿಸಿ, ಗೋಡೆ ಮೇಲೆ ಬಣ್ಣ ಬಣ್ಣದ ಪೇಂಟಿಂಗ್ಸ್ ಮಾಡಿಸಿ ಹೈಟೆಕ್ ಟಚ್ ನೀಡಿದ್ದಾರೆ.

ಇದನ್ನೂ ಓದಿ: Soundarya: ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಾರೆ ಸೌಂದರ್ಯ ತದ್ರೂಪಿ; ಯಾರು ಈಕೆ?

ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ದೃಷ್ಟಿಯಿಂದ ಉಪಯುಕ್ತ ಮಾಹಿತಿಯುಳ್ಳ ಚಿತ್ರಗಳ ಪೇಂಟಿಂಗ್ ಮಾಡಲಾಗಿದೆ. ಅದರ  ಜೊತೆಗೆ ಅಡುಗೆ ಕೋಣೆ ಸರಿಪಡಿಸಿದ್ದು, ಶಾಲಾ ಆವರಣದಲ್ಲಿ ನೂರಕ್ಕು ಹೆಚ್ಚು ಗಿಡಗಳನ್ನ ನೆಡುವ ಕಾರ್ಯವನ್ನು ಸಂಸ್ಥೆಯವರು ಹಮ್ಮಿಕೊಂಡಿದ್ದಾರೆ.

Pragati charitable trust gave hitech touch to ganjigante government school rrk mrq
ಶಾಲಾ ಕಟ್ಟಡ


ವಿದ್ಯಾರ್ಥಿಗಳು, ಶಿಕ್ಷಕರಿಂದ ಸಂಸ್ಥೆ ಕಾರ್ಯಕ್ಕೆ ಮೆಚ್ಚುಗೆ

ಇತ್ತೀಚಿಗೆ ಸುರಿದ ಮಳೆಯಿಂದಾಗಿ ಗಂಜಿಗುಂಟೆ ಗ್ರಾಮದ ಶಾಲೆಯು ಸೋರುತ್ತಿತ್ತು. ಹಾಗಾಗಿ ದಾನಿಗಳಿಂದ ಶಾಲೆಯ ದುರಸ್ತಿ ಮಾಡಿಸಲು ಶಿಕ್ಷಕರು ಮುಂದಾಗಿದ್ದರು. ಶಿಕ್ಷಕಿ ವರಲಕ್ಷ್ಮಿ ಅವರು, ಶಾಲೆಯ ಸ್ಥಿತಿಯನ್ನ ಅಧ್ಯಕ್ಷ್ಯ ಮುನೇಶ್ ಅವರ ಗಮನಕ್ಕೆ ತಂದಿದ್ದಾರೆ. ಬಳಿಕ ಶಾಲೆಯ ಇತಿಹಾಸ ಗಮನಿಸಿದ ಮುನೇಶ್, ತಮ್ಮ ಸಂಸ್ಥೆಯಿಂದ ಕೈಲಾದಷ್ಡು ಸಹಾಯ ಮಡೊದಾಗಿ ಭರವಸೆ ನೀಡಿದ್ದರು.

Pragati charitable trust gave hitech touch to ganjigante government school rrk mrq
ಶಾಲಾ ಕಟ್ಟಡ


ಗ್ರಾಮದ ಸುತ್ತಮುತ್ತಲೂ ಖಾಸಗಿ ಶಾಲೆಗಳಿದ್ದರೂ ಉತ್ತಮ ಕಲಿಕೆ ಸಿಗುವ ಹಿನ್ನೆಲೆ ಗಂಜಿಗುಂಟೆ  ಶಾಲೆಯಲ್ಲಿ 60ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಸುಣ್ಣ ಬಣ್ಣವೇ ಕಾಣದ ಶಾಲೆಯ ಗೋಡೆಗಳ ಹೊರನೋಟ, ಒಳನೋಟ ಬದಲಾಗಿದ್ದಕ್ಕೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.

Pragati charitable trust gave hitech touch to ganjigante government school rrk mrq
ಶಾಲಾ ಕಟ್ಟಡ


ಸೌಂದರ್ಯ ಓದಿದ್ದ ಶಾಲೆ ಅಭಿವೃದ್ಧಿ ಮಾಡಿದ್ದಕ್ಕೆ ಹೆಮ್ಮೆ

ಈ ಬಗ್ಗೆ ಮಾತನಾಡಿರುವ ಪ್ರಗತಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ್ಯ ಮುನೇಶ್, ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕೆ ನಮ್ಮ ಸಂಸ್ಥೆ ಒತ್ತು ನೀಡುತ್ತಿದೆ. ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಶಾಲೆಗಳನ್ನ ದುರಸ್ಥಿ ಮಾಡಿದ್ದೇವೆ. ನಟಿ ಸೌಂದರ್ಯ ಅವರ ಹುಟ್ಟೂರಿನ ಶಾಲೆ ಅಭಿವೃದ್ಧಿ ಮಾಡಿದ್ದಕ್ಕೆ ಹೆಮ್ಮೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಹುಟ್ಟೂರು ಗಂಜಿಗುಂಟೆ ಮರೆಯದ ನಟಿ ಸೌಂದರ್ಯ, ಗ್ರಾಮದಲ್ಲಿ ಸುಸಜ್ಜಿತ ಶಾಲೆ, ಲೈಬ್ರರಿ, ಶಾಲಾ ಕಟ್ಟಡದ ಸುತ್ತ ಮೈದಾನ, ಕಾಂಪೌಂಡ್, ಹಸಿರ ವಾತಾವರಣ ನಿರ್ಮಿಸುವ ಕನಸು ಕಟ್ಟಿದ್ದರು. ಅದರ ಮೊದಲ ಭಾಗವಾಗಿಯೇ ಸೌಂದರ್ಯ ಅವರು ಶಾಲಾ ಕಟ್ಟಡ ನಿರ್ಮಾಣ ಮಾಡಿಸಿದ್ದರು.

Pragati charitable trust gave hitech touch to ganjigante government school rrk mrq
ಶಾಲಾ ಕಟ್ಟಡ


2001ರಲ್ಲಿ ಒಂದೂವರೆ ಲಕ್ಷ ಹಣ ನೀಡಿದ್ದ ಸೌಂದರ್ಯ

ಆದರೆ  ಶಾಲಾ ಕೊಠಡಿ ನಿರ್ಮಿಸಲು 2001 ರಲ್ಲಿ ತಾನು ನೀಡಿದ ಒಂದೂವರೆ ಲಕ್ಷ ಹಣದಲ್ಲಿ ಗುತ್ತಿಗೆದಾರರು, ಹೈಟೆಕ್ ಕೊಠಡಿ ನಿರ್ಮಿಸಿದೇ ಸಾಮಾನ್ಯವಾದ ಕೊಠಡಿ  ನಿರ್ಮಿಸಿ ನಿರಾಸೆ ಮೂಡಿಸಿದ್ದರು. ಹಾಗಾಗಿ ಶಾಲಾ ಕೊಠಡಿ ಉದ್ಘಾಟನೆಗೂ ನಟಿ ಸೌಂದರ್ಯ ಅವರು ಬರಲೇ ಇಲ್ಲ.

ಇದನ್ನೂ ಓದಿ:  ಸಂಜಯ್ ಗಾಂಧಿ to ನಟಿ ಸೌಂದರ್ಯ.. ವೈಮಾನಿಕ ಅಪಘಾತಗಳಲ್ಲಿ ಮೃತರಾದ ಖ್ಯಾತನಾಮರು ಇವರೆಲ್ಲಾ..

ಸೌಂದರ್ಯ ಅವರ ಅಕಾಲಿಕ ನಿಧನದಿಂದ ಗ್ರಾಮಕ್ಕೆ ಗ್ರಾಮವೇ ತೆರಳಿ ಅವರ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿ ಕಂಬನಿ ಮಿಡಿದಿದ್ದರು. ಆದರೀಗ ಸೌಂದರ್ಯ ಅವರು ಓದಿದ ಶಾಲೆಗೆ ಹೈಟೆಕ್ ಟಚ್ ಸಿಕ್ಕಿದರೂ, ಸೌಂದರ್ಯ ಅವರು ಸ್ವಂತ ಹಣ ನೀಡಿ ಕಟ್ಟಿಸಿರುವ ಕೊಠಡಿ ಈಗ ಬೀಳುವ ಹಂತದಲ್ಲಿದೆ. ಸೌಂದರ್ಯ ಅವರ ಕೊಡುಗೆಯಾಗಿ ನೀಡಿದ ಕಟ್ಟಡಕ್ಕೆ ಹೊಸ ಟಚ್ ನೀಡುವುದಾಗಿ ಪ್ರಗತಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ್ಯ ಮುನೇಶ್ ಭರವಸೆ ನೀಡಿದ್ದು, ಇದಕ್ಕೆ ಶಿಕ್ಷಣ ಇಲಾಖೆಯ ಸಹಕಾರವನ್ನು ಕೋರಿದ್ದಾರೆ.
Published by:Mahmadrafik K
First published: