ವೈದ್ಯರ ನಿರ್ಲಕ್ಷಕ್ಕೆ ನಟ ಪುನೀತ್​ ರಾಜ್​​​ಕುಮಾರ್ ಅಭಿಮಾನಿ ಸಾವು

ವೈದ್ಯರ ನಿರ್ಲಕ್ಷ್ಯದ ವಿರುದ್ಧ ಭೂಮಿಕಾ ತಂದೆ ಮೆಡಿಕಲ್​ ಬೋರ್ಡ್​ಗೆ ದೂರು ನೀಡಿದ್ದರು. ಬೋರ್ಡ್​ನಲ್ಲಿ ಪ್ರಕರಣ ಇತ್ಯರ್ಥವಾಗುವುದಕ್ಕೂ ಮೊದಲೇ ಬಾಲಕಿ ಸಾವನಪ್ಪಿದ್ದಾಳೆ ಎಂದು ಆರೋಪಿಸಲಾಗಿದೆ.

G Hareeshkumar | news18
Updated:August 22, 2019, 10:47 PM IST
ವೈದ್ಯರ ನಿರ್ಲಕ್ಷಕ್ಕೆ ನಟ ಪುನೀತ್​ ರಾಜ್​​​ಕುಮಾರ್ ಅಭಿಮಾನಿ ಸಾವು
ಪುನೀತ್​​ ರಾಜ್​​ಕುಮಾರ್
  • News18
  • Last Updated: August 22, 2019, 10:47 PM IST
  • Share this:
ಬೆಂಗಳೂರು (ಆ.22) :  ವೈದ್ಯರ ನಿರ್ಲಕ್ಷಕ್ಕೆ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ನಡೆದಿದೆ.  ಮೃತ ನತದೃಷ್ಟೆ ಬಾಲಕಿಯನ್ನು ಭೂಮಿಕಾ ಎಂದು ಗುರುತಿಸಲಾಗಿದೆ. ಈಕೆ ನಟ ಪುನೀತ್​​ ರಾಜ್​​ ಕುಮಾರ್​​ ಅಭಿಮಾನಿ ಎನ್ನಲಾಗಿದೆ.

ಕುರ ಆಗಿದೆ ಎಂದು ಭೂಮಿಕಾಳನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಔಷಧಿಯ ಓವರ್​ಡೋಸ್​ನಿಂದಾಗಿ  ಭೂಮಿಕಾ ಕಿಡ್ನಿ ಕಳೆದುಕೊಂಡಿದ್ದಳು. ಆ ನಂತರ ಉಸಿರಾಟದ ಸಮಸ್ಯೆ ಎಂದು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಭೂಮಿಕಾ ಪರಿಸ್ಥಿತಿ ಗಂಭೀರವಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಳು. ಆ ನಂತರ ಬಾಲಕಿ ಕೋಮಾಗೆ ಹೋಗಿದ್ದಳು ಎನ್ನಲಾಗಿದೆ.

ಕೋಮಾಗೆ ಹೋಗುವ ಮುನ್ನ ಭೂಮಿಕಾ ತನ್ನ ತಂದೆಗೆ ಪತ್ರ ಬರೆದು ನಟ ಪುನೀತ್​ ರಾಜ್​ಕುಮಾರ್​ ಅವರನ್ನು ನೋಡುವ ಆಸೆ ವ್ಯಕ್ತಪಡಿಸಿದ್ದಳು.

ಇದನ್ನೂ ಓದಿ : ಜನ್ಮದಿನದ ಶುಭಾಶಯ ತಿಳಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಯತ್ನಿಸಿದ್ದ ಯಶ್ ಅಭಿಮಾನಿ ಸಾವು

ವೈದ್ಯರ ನಿರ್ಲಕ್ಷ್ಯದ ವಿರುದ್ಧ ಭೂಮಿಕಾ ತಂದೆ ಮೆಡಿಕಲ್​ ಬೋರ್ಡ್​ಗೆ ದೂರು ನೀಡಿದ್ದರು. ಬೋರ್ಡ್​ನಲ್ಲಿ ಪ್ರಕರಣ ಇತ್ಯರ್ಥವಾಗುವುದಕ್ಕೂ ಮೊದಲೇ ಬಾಲಕಿ ಸಾವನಪ್ಪಿದ್ದಾಳೆ ಎಂದು ಆರೋಪಿಸಲಾಗಿದೆ.

ಭೂಮಿಕಾ ಸಾವನ್ನ ಖಂಡಿಸಿ ಪೋಷಕರು ರಾಜರಾಜೇಶ್ವರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಕುಂಬಳಗೋಡು ಪೊಲೀಸರು ಭೂಮಿಕಾ ಕುಟುಂಬಸ್ಥರನ್ನು ಸಮಾಧಾನ ಪಡಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ಕುಂಬಳಗೋಡು ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ : ಗಂಗಾಧರ್​ ವಾಗಟ
First published: August 22, 2019, 7:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading