• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Puneeth Rajkumar: ಕರುನಾಡಿನ ಮುಖಪುಟದಂತಿದ್ದ ಸಜ್ಜನ ಕಣ್ಮರೆ... ಸರ್ಕಾರಿ ಜಾಹೀರಾತುಗಳಿಗೆ ಅಪ್ಪುನೇ ಬೇಕಿತ್ತು

Puneeth Rajkumar: ಕರುನಾಡಿನ ಮುಖಪುಟದಂತಿದ್ದ ಸಜ್ಜನ ಕಣ್ಮರೆ... ಸರ್ಕಾರಿ ಜಾಹೀರಾತುಗಳಿಗೆ ಅಪ್ಪುನೇ ಬೇಕಿತ್ತು

ಮತದಾನದ ಜಾಗೃತಿ ಇರಲಿ, ಮಕ್ಕಳ ಶಿಕ್ಷಣದ ಕುರಿತ ಅರಿವಿರಲಿ ಸರ್ಕಾರಿ ಜಾಹೀರಾತುಗಳಿಗೆ  ಪುನೀತ್​ ರಾಜ್​ ಕುಮಾರ್  ಇರಲೇಬೇಕು.

ಮತದಾನದ ಜಾಗೃತಿ ಇರಲಿ, ಮಕ್ಕಳ ಶಿಕ್ಷಣದ ಕುರಿತ ಅರಿವಿರಲಿ ಸರ್ಕಾರಿ ಜಾಹೀರಾತುಗಳಿಗೆ ಪುನೀತ್​ ರಾಜ್​ ಕುಮಾರ್ ಇರಲೇಬೇಕು.

ಮತದಾನದ ಜಾಗೃತಿ ಇರಲಿ, ಮಕ್ಕಳ ಶಿಕ್ಷಣದ ಕುರಿತ ಅರಿವಿರಲಿ ಸರ್ಕಾರಿ ಜಾಹೀರಾತುಗಳಿಗೆ ಪುನೀತ್​ ರಾಜ್​ ಕುಮಾರ್ ಇರಲೇಬೇಕು.

  • Share this:

ಪುನೀತ್​ ರಾಜ್​ ಕುಮಾರ್ (​Puneeth Rajkumar) ಕೇವಲ ನಟ ಮಾತ್ರನಾಗಿರಲಿಲ್ಲ. ಕನ್ನಡ ನಾಡು, ನುಡಿಯ ಅಸ್ಮಿತೆಯ ಪ್ರತೀಕವಾಗಿ ಕನ್ನಡಿಗರಲ್ಲಿ ನೆಲೆಸಿದ್ದರು. ತಂದೆ ನಡೆದ ಮಾರ್ಗದಲ್ಲಿ ಸಾಗಿದವರು ನಟ ಪುನೀತ್​ ರಾಜ್​ಕುಮಾರ್​, ಇದೇ ಕಾರಣಕ್ಕಾಗಿ ಅಪ್ಪು ಪ್ರತಿ ಮನೆಯ ಮಗನಾಗಿದ್ದರು. ಡಾ ರಾಜ್​ ಕುಮಾರ್​ರಂತೆಯೇ (Dr Rajkumar) ನಾಡು ನುಡಿಯ ಬಗ್ಗೆ ಅಪಾರ ಗೌರವ ಹೊಂದಿದ್ದವರು ಅವರು. ಚಿಕ್ಕವಯಸ್ಸಿನಲ್ಲಿಯೇ ಸಿನಿಮಾಗಳಲ್ಲಿ ನಟಿಸಿ ರಾಷ್ಟ್ರೀಯ ಪ್ರಶಸ್ತಿ (National Award) ಗೆದ್ದವರು. ಕನ್ನಡದ ಸಜ್ಜನರ ನಟರಲ್ಲಿ ಒಬ್ಬರಾಗಿದ್ದ ಅವರು ವ್ಯಕ್ತಿತ್ವದ ವಿಷಯದಲ್ಲೂ ಅತಿ ಹೆಚ್ಚು ಪಾರದರ್ಶಕತೆ ಹೊಂದಿದ್ದರು. ಇದೇ ಕಾರಣದಿಂದಲೇ ಸರ್ಕಾರಿ ಜಾಹೀರಾತು ಎಂದರೆ ಅಲ್ಲಿ ಪುನೀತ್​ ರಾಜ್​​ ಕುಮಾರ್​ ಇರಲೇಬೇಕು. ಚುನಾವಣೆ ಜಾಗೃತಿ ಇರಲಿ, ಮಕ್ಕಳ ಶಿಕ್ಷಣದ ಕುರಿತ ಅರಿವಿರಲಿ ಅಲ್ಲಿ ಪುನೀತ್​ ರಾಜ್​ ಕುಮಾರ್ ಮಾತ್ರ ಏಕೈಕ ಆಯ್ಕೆ.


ಪುನೀತ್​ ರಾಜ್​ ಕುಮಾರ್​ ಸರ್ಕಾರಿ ಜಾಹೀರಾತು
ತಂದೆಯಂತೆ ಪುನೀತ್​ ಎಲ್ಲಾ ವರ್ಗದ ಅಭಿಮಾನಿಗಳ ನೆಚ್ಚಿನ ಹೀರೋ. ಸಹಜ, ಸರಳತೆ ಮೂಲಕ ಜನ ಮನ ಗೆದ್ದ ಅವರು ಕೌಟುಂಬಿಕ ಸಿನಿಮಾ ಇರಲಿ, ಆಕ್ಷ್ಯನ್​ ಇರಲಿ ಎಲ್ಲದಕ್ಕೂ ಸೈ ಎನ್ನುತ್ತಿದ್ದರು ಪುನೀತ್​​. ಇದೇ ಕಾರಣಕ್ಕೆ ಚಿಕ್ಕವರಿಂದ ಹಿಡಿದು ದೊಡ್ಡವರ ವರೆಗೆ ಅಪ್ಪು ಕಂಡರೆ ಬಹು ಪ್ರೀತಿ. ಹಾಗಾಗಿಯೇ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಶಿಕ್ಷಣದ ಹಕ್ಕು, ಎಲ್​ಇಡಿ ಬಲ್ಬ್​, ಕೆಎಂಎಫ್​ ಹಾಲು ಸೇರಿದಂತೆ ಅನೇಕ ಜಾಹೀರಾತಿನಲ್ಲಿ ನಟಿಸಿದ್ದರು.


ರಾಜ್ಯ ಸರ್ಕಾರದ ಪ್ರವಾಸೋದ್ಯಮ, ತಂದೆಯ ಹುಟ್ಟೂರು ಚಾಮರಾಜನಗರ ಜಿಲ್ಲೆ ಅಭಿವೃದ್ಧಿಯ ರಾಯಭಾರಿಯಾಗಿದ್ದರು.


ಇದನ್ನು ಓದಿ: ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ…ಅಭಿಮಾನಿಗಳ ಅಪ್ಪು ಇನ್ನಿಲ್ಲ


ಪಿಆರ್​ಕೆ ಮೂಲಕ ಅನೇಕ ಹೊಸಬರಿಗೆ ವೇದಿಕೆ
ತಾಯಿಯ ಮುದ್ದಿನ ಮಗನಾಗಿದ್ದ ಪುನೀತ್​ ರಾಜ್​ ಕುಮಾರ್​ ತಮ್ಮದೇ ಬ್ಯಾನರ್​ನಲ್ಲಿ ಪಿಎಆರ್​​ಕೆ ಪ್ರೋಡಕ್ಷನ್​ ಹುಟ್ಟುಹಾಕಿದರು. ತಮ್ಮ ಪ್ರೊಡಕ್ಷನ್​ ಮೂಲಕ ಅನೇಕ ಹೊಸ ಪ್ರತಿಭೆಗಳಿಗೆ ವೇದಿಕೆ ಮಾಡಿಕೊಟ್ಟಿದ್ದರು. ಕವಲು ದಾರಿ, ಫ್ರೆಂಚ್​ ಬಿರಿಯಾನಿ, ಲಾ ಮುಂತಾದದ ಸಿನಿಮಾಗಳ ಮೂಲಕ ಅನೇಕ ಯುವ ಪ್ರತಿಭೆಗಳಿಗೆ ಅವಕಾಶ ನೀಡಿದ್ದರು.


ಇದನ್ನು ಓದಿ: ನೆಚ್ಚಿನ ಶಿವಣ್ಣನ ಚಿತ್ರಕ್ಕೆ ಶುಭ ಹಾರೈಸಿದ್ದೆ ಪುನೀತ್​ ರಾಜ್​ ಕುಮಾರ್​ ಮಾಡಿದ ಕಡೆಯ ಟ್ವೀಟ್​​


ಹೃದಯಶ್ರೀಮಂತಿಕೆಯ ನಟ
ನಟ ಪುನೀತ್​​ ಕೂಡ ತಾಯಿ ಪಾರ್ವತಮ್ಮ ಅವರಂತೆ ಸದ್ದಿಲ್ಲದೇ ಅನೇಕ ಸಹಾಯಗಳನ್ನು ಮಾಡುತ್ತಿದ್ದರು. ಅನಾಥಾಶ್ರಮ, ಶಕ್ತಿಧಾಮದ ಅನೇಕ ದುರ್ಬಲರ ಪಾಲಿನ ಆಶಾಕಿರಣವಾಗಿದ್ದರು. ಸಿನಿಮಾಗಳಲ್ಲಿ ಅವರು ಹಾಡುತ್ತಿದ್ದ ಹಾಡಿನ ಸಂಭಾವನೆಯನ್ನು ಅವರು ತಮ್ಮ ಸಾಮಾಜಿಕ ಕಾರ್ಯಗಳ ಸೇವೆಗೆ ಮೀಸಲಾಗಿರಿಸಿದ್ದರು. ಕೊಪ್ಪಳದ ಸರ್ಕಾರಿ ಶಾಲೆಗೂ ದೇಣಿಗೆ ನೀಡಿ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದರು.


ಇತ್ತೀಚೆಗಷ್ಟೇ ಕುರಿಗಾಹಿಗಳೊಂದಿಗೆ ಕುಳಿತು ಊಟ ಮಾಡಿ ಮನಗೆದ್ದಿದ್ದ ಅಪ್ಪು


ಪುನೀತ್​ ಕೂಡ ಅಪ್ಪನಂತೆಯೇ ಅಭಿಮಾನಿಗಳಲ್ಲಿ ದೇವರನ್ನು ಕಂಡವರು. ಇದೇ ಕಾರಣಕ್ಕೆ ಅವರ ಜೊತೆಯೇ ಬೆರೆಯುತ್ತಿದ್ದರು. ಇತ್ತೀಚೆಗೆ ಕೊಪ್ಪಳಕ್ಕೆ ಭೇಟಿ ನೀಡಿದ್ದ ಪುನೀತ್​ ರಾಜ್​​ ಕುಮಾರ್​ ಅಲ್ಲಿನ ಕುರಿಗಾಹಿಗಳೊಂದಿಗೆ ನೆಲದ ಮೇಲೆ ಕುಳಿತು ಊಟ ಮಾಡಿದ್ದರು. ಅವರ ಮಕ್ಕಳನ್ನು ಎತ್ತಿಕೊಂಡು ಕ್ಷಣ ಕಳೆದಿದ್ದ ಪುನೀತ್​ ಫೋಟೋಗಳು ಅಭಿಮಾನಿಗಳ ಮನ ಗೆದ್ದಿತ್ತು.

top videos
    First published: