• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Power Cut: ಬೇಸಿಗೆ ಮುನ್ನವೇ ಶುರುವಾಯ್ತಾ ಲೋಡ್​ ಶೆಡ್ಡಿಂಗ್? ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ

Power Cut: ಬೇಸಿಗೆ ಮುನ್ನವೇ ಶುರುವಾಯ್ತಾ ಲೋಡ್​ ಶೆಡ್ಡಿಂಗ್? ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ವಿದ್ಯುತ್ ಕಡಿತ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈಗಾಗಲೇ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಕಾಮಗಾರಿ ಕೆಲಸಗಳು ನಡೆಯುತ್ತಿವೆ. ಈ ಹಿನ್ನೆಲೆ ಬೆಸ್ಕಾಂ ಬೆಂಗಳೂರಿಗರಿಗೆ ವಿದ್ಯುತ್ ಕಡಿತದ ಬಿಸಿ ಮುಟ್ಟಿಸಿದೆ. ಇಲ್ಲಿ ನಾವು ಫೆಬ್ರವರಿ 13 ಮತ್ತು 14 ರಂದು ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ ಎಂಬುದನ್ನು ನೋಡೋಣ.

ಮುಂದೆ ಓದಿ ...
  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

    ಈಗಾಗಲೇ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಕಾಮಗಾರಿ ಕೆಲಸಗಳು ನಡೆಯುತ್ತಿವೆ. ಈ ಹಿನ್ನೆಲೆ ಬೆಸ್ಕಾಂ (BESCOM) ಬೆಂಗಳೂರಿಗರಿಗೆ ವಿದ್ಯುತ್ ಕಡಿತದ ಬಿಸಿ ಮುಟ್ಟಿಸಿದೆ. ಬೆಂಗಳೂರಿನ ಹೆಬ್ಬಾಳ, ಶಿವಾಜಿನಗರ, ಕೆಂಗೇರಿ, ಪದ್ಮನಾಭನಗರ, ನೆಲಮಂಗಲ ಸೇರಿದಂತೆ ಹಲವು ಭಾಗಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ನಾಲ್ಕನೇ ತ್ರೈಮಾಸಿಕ ನಿರ್ವಹಣಾ ವೇಳಾಪಟ್ಟಿಯಂತೆ ನಿಯತಕಾಲಿಕವಾಗಿ ಕೆಲವು ನಿರ್ವಹಣಾ ಕಾರ್ಯ ನಡೆಸುವ ಸಂಬಂಧ ಬೆಂಗಳೂರಿನ (Bengaluru) ಕೆಲವು ಪ್ರದೇಶಗಳಲ್ಲಿ (Some Areas) ವಿದ್ಯುತ್ ವ್ಯತ್ಯಯ (Power Cut) ಉಂಟಾಗಲಿದೆ. ಇಲ್ಲಿ ನಾವು ಯಾವ ದಿನದಂದು ಎಷ್ಟು ಗಂಟೆಯಿಂದ ಎಷ್ಟು ಗಂಟೆಯವರೆಗೆ ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ ಎಂಬುದನ್ನು ನೋಡೋಣ.


    ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ!


    ನಾಲ್ಕನೇ ತ್ರೈಮಾಸಿಕಕ್ಕೆ ನಿರ್ವಹಣಾ ವೇಳಾಪಟ್ಟಿಯ ಪ್ರಕಾರ ನಿಯತಕಾಲಿಕ ನಿರ್ವಹಣೆ ಕಾರ್ಯಗಳನ್ನು ಕಂಪ್ಲೀಟ್ ಮಾಡಲು ಹಾಗೂ ಕೆಲವು ಕಡೆಗಳಲ್ಲಿ ಉಪ-ಕೇಂದ್ರಗಳ ಬದಲಾವಣೆಗೆ, ಟ್ರಾನ್ಸ್‌ಫಾರ್ಮರ್‌ ಬದಲಾವಣೆ, ಮೆಂಟೇನೆನ್ಸ್ ಕೆಲಸ, ಪವರ್ ಟ್ರಾನ್ಸ್‌ಫಾರ್ಮರ್ ಸ್ತಂಭದ ಎತ್ತರ ಮತ್ತು ವಿಸ್ತರಣೆ ಹಿನ್ನೆಲೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ.


    ಫೆಬ್ರವರಿ 13 ರಂದು: ಬೆಂಗಳೂರಿನ ಕನಕಪುರ ಆರ್.ಆರ್.ನಗರ ವಿಭಾಗ, ರಾಜಾಜಿನಗರ, ಕೆಂಗೇರಿ ಪ್ರದೇಶಗಳ ಸುತ್ತಮುತ್ತ ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ. ಹಾರೋಬೆಲೆ, ಕೋಡಿಹಳ್ಳಿ ಮತ್ತು ಹುಣಸನಹಳ್ಳಿ, ಹುಕುಂದಾ ಬಸವೇಶ್ವರ ನಗರ, ವಿಜಯನಗರ, ಗೋವಿಂದರಾಜ ನಗರ, ಕಾಮಶಿಪಾಳ್ಯ,




    ಆರ್‌ಪಿಸಿ ಲೇಔಟ್, ಬಿನ್ನಿ ಲೇಔಟ್, ಪ್ರಶಾಂತ್ ನಗರ, ಹೊಸಹಳ್ಳಿ ವಿಜಯನಗರ, ಆರ್‌ಪಿಸಿ ಲೇಔಟ್, ಸರ್ವಿಸ್ ರಸ್ತೆ, ವಿಜಯನಗರ 7ನೇ ಮುಖ್ಯದಿಂದ 13ನೇ ಮುಖ್ಯವರೆಗೆ, ಇಸ್ಟ್ ಸ್ಟೇಜ್ ತಿಮ್ಮೇನಹಳ್ಳಿ, ಎಂಸಿ ಲೇಔಟ್ ಭಾಗ, ಬಿನ್ನಿ ಲಾಯೌಟ್, ಮಾರ್ನಳ್ಳಿ ವಿನಾಯಕ ಲೇಔಟ್ ಭಾಗ, ಪಿಸಿ ಇಂಡಸ್ಟ್ರಿಯಲ್ ಏರಿಯಾ,


    ಕಾವೇರಿಪುರ, ರಂಗನಾಥಪುರ, ಕೆಸಿಜಿ ಇಂಡಿ ಏರಿಯಾ, ನಂಜಪ್ಪ ಇಂಡಿ. ಎಸ್ಟೇಟ್, ಸುನ್ನದಗೋಡು, ಸೆಲ್ವಂ ಇಂಡಸ್ಟ್ರಿಯಲ್ ಎಸ್ಟೇಟ್, ಬಲ್ಲಯ್ಯನ ಕೆರೆ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ಕಾವೇರಿಪುರ 1ನೇ ಬ್ಲಾಕ್, 2ನೇ ಬ್ಲಾಕ್, 5ನೇ ಬ್ಲಾಕ್, 5ನೇ ಬ್ಲಾಕ್, ಬ್ಲಾಕ್, 7 ನೇ ಬ್ಲಾಕ್, 8 ನೇ ಬ್ಲಾಕ್,


    ನಾಗರಭಾವಿ 11 ನೇ ಬ್ಲಾಕ್, KHB ಕಾಲೋನಿ, HVR ಲೇಔಟ್, ಸಿಂಡಿಕೇಟ್ ಬ್ಯಾಂಕ್ ಕಾಲೋನಿ ಮತ್ತು ಸುತ್ತಮುತ್ತಲಿನ ಪ್ರದೇಶ, ಸಿದ್ದಯ್ಯ ಪುರಾಣಿಕ ರಸ್ತೆ, ಪಾಪಯ್ಯ ಗಾರ್ಡನ್ KHB ಕಾಲೋನಿ, KHB ಕಾಲೋನಿ, ಮಾಗಡಿ ಮುಖ್ಯ ರಸ್ತೆ, ಅಗ್ರಹಾರ ದಸರಾ ಹಳ್ಳಿಯ ಭಾಗ,


    ಸಾಂದರ್ಭಿಕ ಚಿತ್ರ


    ಫೆಬ್ರವರಿ 14 ರಂದು: ಬೆಂಗಳೂರಿನ ಪೂರ್ವ ಪಶ್ಚಿಮ ಮತ್ತು ದಕ್ಷಿಣ ಉತ್ತರ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ವಿದ್ಯುತ್ ಕಡಿತವಾಗಲಿದೆ. ಜಯನಗರ S5, S12 ಉಪ ವಿಭಾಗ, ಜಯನಗರದ S5, S12 ಉಪ ವಿಭಾಗ, ಕೋರಮಂಗಲ ಮತ್ತು ಇಂದಿರಾನಗರ ರಾಜಾಜಿನಗರ, ಪೀಣ್ಯ ಡಿವಿ


    ಅರೇಹಳ್ಳಿ, ಇಟ್ಟಮಡು, ಎಜಿಎಸ್ ಲೇಔಟ್, ಚೀಕಲಸಂದ್ರ, ಟಿಜಿ ಲೇಔಟ್, ರಾಮಾಂಜೆನಾಯನಗರ, ಭುವನೇಶ್ವರಿನಗರ ಹಾಗೂ ಉಪ ಕೇಂದ್ರದ ಸುತ್ತಮುತ್ತಲಿನ ಪ್ರದೇಶಗಳು.


    ಫೆಬ್ರವರಿ 10 ಮತ್ತು 11ರಂದು: ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಮೌನೇಶ್ವರ್, ನ್ಯಾಮತಿ, ಚೀಲೂರು, ಸೌಲಂಗಾ, ಮಲ್ಲಾಪುರ, ಹೊನ್ನಾಳಿ, ಕಟ್ಟಿಗೆ, ಭಾನುವಳ್ಳಿ, ನಂದಿಗುಡಿ,


    ಇದನ್ನೂ ಓದಿ: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ವಿದ್ಯುತ್ ವ್ಯತ್ಯಯ


    ಮಲೆಬೆನ್ನೂರು, DB ಕೆರೆ, ಕುಂದೂರು, ಸಾಸ್ವೆಹಳ್ಳಿ, ತ್ಯಾವಣಗಿ, ಬಸವಪಟ್ಟಣ, ಮತ್ತು ಸಂಪರ್ಕಿತ ಐಪಿಪಿಎಸ್. ಸುತ್ತಮುತ್ತಲಿನ ಪ್ರದೇಶಗಳುಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

    Published by:renukadariyannavar
    First published: