Power Cut: ಬೆಂಗಳೂರಲ್ಲಿ ಇಂದು ಮತ್ತು ನಾಳೆ ಪವರ್​ ಕಟ್, ಲಿಸ್ಟ್​​ನಲ್ಲಿ ನಿಮ್ಮ ಏರಿಯಾ ಇದೆಯಾ ನೋಡಿ

Bescom: ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನೀಲಗಿರಿ ಥಾಪ್ ರಸ್ತೆ, ಶ್ರುಸ್ತಿ ನಗರ, ವೀರಭದ್ರೇಶ್ವರ ನಗರ, ಡಿ ಗ್ರೂಪ್ ಲೇಔಟ್, ಪ್ರಸನಾ ಲೇಔಟ್, ಜಿಪಿ ವಿದ್ಯಾ ಮಂದಿರ, ಮಾರುತಿ ನಗರ ಮತ್ತು ಭೈರವೇಶ್ವರ ಇಂಡಸ್ಟ್ರಿಯಲ್ ರಸ್ತೆ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರಿಗರಿಗೆ(Bengaluru) ಪ್ರತಿನಿತ್ಯ ಇರುವ ಹಲವು ಸಮಸ್ಯೆಗಳ ಜೊತೆ ವಿದ್ಯುತ್ ಕಡಿತ(Power Cut) ಸಂಪರ್ಕ ಸಮಸ್ಯೆಯು ದೊಡ್ಡ ತೊಂದರೆಯಾಗಿ ಪರಿಣಮಿಸಿದೆ.. ಈಗಾಗಲೇ ಒಂದಲ್ಲ ಒಂದು ಕಾರಣ ಹೇಳಿ ಪ್ರತಿನಿತ್ಯ ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ಬೆಸ್ಕಾಂ(BESCOM) ವಿದ್ಯುತ್ ಕಡಿತ ಮಾಡುತ್ತಲೇ ಇದೆ.. ಹೀಗಾಗಿ ಎಷ್ಟೋ ಜನರು ತಮ್ಮ ಹಲವು ಅಗತ್ಯಗಳನ್ನು ಪೂರೈಕೆ ಮಾಡಿಕೊಳ್ಳಲಾಗದ ಸ್ಥಿತಿಯಲ್ಲಿ ಇದ್ದಾರೆ.. ಅದರಲ್ಲೂ ವರ್ಕ್ ಫ್ರಮ್ ಹೋಮ್(Work From Home) ಎಂದು ಕಾರ್ಯ ನಿರ್ವಹಣೆ ಮಾಡುತ್ತಿರುವ  ಜನರು ಪ್ರತಿನಿತ್ಯ ವಿದ್ಯುತ್ ಕಡಿತವಾಗುತ್ತಿರುವುದಕ್ಕೆ ತೊಂದರೆಗೆ ಒಳಗಾಗಿದ್ದಾರೆ.. ಇದು ಸಾಲದು ಎಂಬಂತೆ ರಾಜ್ಯದಲ್ಲಿ ತೀವ್ರ ಚಳಿ(Winter) ಶುರುವಾಗಿದ್ದು, ಜನರು ಮನೆಯಿಂದ(Home) ಹೊರ ಬರಲಾರದೆ ಸಂಕಷ್ಟ ಪಡುತ್ತಿದ್ದಾರೆ. ಹೀಗಾಗಿ ವಾರಾಂತ್ಯದ ವೇಳೆಯಲ್ಲಿ ಕುಟುಂಬಸ್ಥರು ಜೊತೆಗೆ ಕುಳಿತು ಮನೆಯಲ್ಲಿ ಕಾಲ ಕಳೆಯುತ್ತಾ ಟಿವಿ ನೋಡಬೇಕು ಎಂದುಕೊಳ್ಳುತ್ತಿರುವವರಿಗೂ ಬೆಸ್ಕಾಂ ವಿದ್ಯುತ್ ಕಡಿತ ಮಾಡುತ್ತಿರುವುದು ದೊಡ್ಡ ರಗಳೆಯಾಗಿದೆ.ಅಲ್ಲದೆ ಡಿಸೆಂಬರ್ 26,27 ಹಾಗೂ 28ರಂದು ಬೆಂಗಳೂರಲ್ಲಿ ತುರ್ತು ವಿದ್ಯುತ್ ನಿರ್ವಹಣೆ ಕಾಮಗಾರಿ ಇರುವುದರಿಂದ ವಿದ್ಯುತ್ ವ್ಯತ್ಯಯ ಆಗಲಿದೆ

  ಡಿಸೆಂಬರ್ 26 ರಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

  1) ದಕ್ಷಿಣ ವಲಯ: ಬೆಳಗ್ಗೆ 10ರಿಂದ ಸಂಜೆ 5ರವರೆಗೆ   ಜೆಸಿ ಇಂಡಸ್ಟ್ರಿಯಲ್ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ ಮತ್ತು ದೊಡ್ಡತೊಗೂರು ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

  ಇದನ್ನೂ ಓದಿ: 'ಅಪ್ಪ ನಾನು ಸಾಯ್ತಾ ಇದ್ದೇನೆ.. ಇನ್ಮುಂದೆ ನನ್ನ ಹೆಂಡತಿ-ಮಕ್ಕಳಿಗೆ ಕಾಟ ಕೊಡಬೇಡ..'

  2)ಉತ್ತರ ವಲಯ: ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ಸುಂದರ್ ನಗರ, ಬಿಇಎಲ್ ಇಂಡಸ್ಟ್ರಿಯಲ್ ಎಸ್ಟೇಟ್, ಶೆಟ್ಟಿಹಳ್ಳಿ, ಮಲ್ಲಸಂದ್ರ, ಗಿಣಿ ರಸ್ತೆ, ಪೀಣ್ಯ 1ನೇ ಹಂತ ಮತ್ತು ಎಸ್‌ಆರ್‌ಎಸ್ ರಸ್ತೆ ಸೇರಿ ಹಲವು ಪ್ರದೇಶದಲ್ಲಿ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ

  3) ಪಶ್ಚಿಮ ವಲಯ: ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನೀಲಗಿರಿ ಥಾಪ್ ರಸ್ತೆ, ಶ್ರುಸ್ತಿ ನಗರ, ವೀರಭದ್ರೇಶ್ವರ ನಗರ, ಡಿ ಗ್ರೂಪ್ ಲೇಔಟ್, ಪ್ರಸನಾ ಲೇಔಟ್, ಜಿಪಿ ವಿದ್ಯಾ ಮಂದಿರ, ಮಾರುತಿ ನಗರ ಮತ್ತು ಭೈರವೇಶ್ವರ ಇಂಡಸ್ಟ್ರಿಯಲ್ ರಸ್ತೆ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

  ಡಿಸೆಂಬರ್ 27 ರಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

  1) ದಕ್ಷಿಣ ವಲಯ: ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ಬಿಕಾಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಜರಗನಹಳ್ಳಿ, ಕೃಷ್ಣ ದೇವರಾಯ ನಗರ, ಕನಕ ಲೇಔಟ್, ಗೌಡನಪಾಳ್ಯ, ಜೆಪಿ ನಗರ 6ನೇ ಹಂತ, ಪುಟ್ಟೇನಹಳ್ಳಿ, ಬಿಡಿಎ ಕಾಂಪ್ಲೆಕ್ಸ್ ಸುತ್ತಮುತ್ತ, ಅಂಬೇಡ್ಕರ್ ನಗರ, ಉತ್ತರಹಳ್ಳಿ, ಬನಶಂಕರಿ 2ನೇ ಹಂತ, ಶಾತೇತ್ರಿ ಬ್ಯಾಂಕ್ ಸ್ಟೇಜ್ , ರಾಜೀವ್ ನಗರ, ಜೆಪಿ ನಗರ, ಡಾಲರ್ಸ್ ಲೇಔಟ್, ಕಾವೇರಿ ನಗರ, ವಿವೇಕಾನಂದ ನಗರ, ಕತ್ರಿಗುಪ್ಪೆ ಮುಖ್ಯ ರಸ್ತೆ, ಕತ್ರಿಗುಪ್ಪೆ ಪೂರ್ವ, ಬನಶಂಕರಿ 3 ನೇ ಹಂತ, ಸಿದ್ದಾಪುರ,  ದೊಮ್ಮಲೂರು ಅಥವಾ ಅಮರಜ್ಯೋತಿ ಈಸ್ಟ್ ವಿಂಗ್, ಸೇಂಟ್ ಬೆಡ್, ಶ್ರೀನಿವಾಗಿಲು, ದೊಡ್ಡನಹಳ್ಳಿ, ದೊಡ್ಡನಹಳ್ಳಿ, ವಿಜಯ ಕೊಂಡಿಹಳ್ಳಿ, ವಿಜಯನಗರ, ವಿಜಯನಗರ , ಐಐಎಂಬಿ ಪ್ರದೇಶ ಮತ್ತು ಅಂಜನಾಪುರ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

  2)ಉತ್ತರ ವಲಯ: ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ಗೌತಮ್ ನಗರ, ಅಂಬೇಡ್ಕರ್ ನಗರ, ಶ್ರೀರಾಮಪುರಂ, ಯಶವಂತಪುರ, ಎಲ್‌ಎನ್ ಕಾಲೋನಿ, ಪಂಪಾ ನಗರ, ಮೋಹನ್ ಕುಮಾರ್ ನಗರ, ಕಮ್ಮಗೊಂಡನಹಳ್ಳಿ, ಟಾಟಾನಗರ, ದೇವಿ ನಗರ, ಲೊಟ್ಟೆಗೋಳಹಳ್ಳಿ, ರಿಂಗ್ ರಸ್ತೆಯ ಭಾಗ, ತಿಂಡ್ಲು ಮುಖ್ಯ ರಸ್ತೆ, ರಾಘವೇಂದ್ರ ಕಾಲೋನಿ, ಕೋಗಿಲು ಲೇಔಟ್, ಜಕ್ಕೂರು ರಸ್ತೆ, ವಿನಾಯಕ ನಗರ, ದ್ವಾರಕಾ ನಗರ, ವಿನಾಯಕ ನಗರ, ಹೆಸರಘಟ್ಟ ಮುಖ್ಯರಸ್ತೆ, ಭುವನೇಶ್ವರಿ ನಗರ, ಟಿ ದಾಸರಹಳ್ಳಿ, ಶೆಟ್ಟಿಹಳ್ಳಿ, ಸಂಜಯ್ ನಗರ, CKM ರಸ್ತೆ, RMV 2 ನೇ ಹಂತ, ಬೋಪಸಂದ್ರ ರಸ್ತೆ  ಮತ್ತು ಮಲ್ಲಸಂದ್ರ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

  ಇದನ್ನೂ ಓದಿ: ಬೆಳಗಾವಿ ಅಧಿವೇಶನ ವ್ಯರ್ಥ; ಕರ್ನಾಟಕ ಬಂದ್​ನಿಂದ ಮಹಾರಾಷ್ಟ್ರಕ್ಕೆ ಹಾನಿ ಇಲ್ಲ: ಕುಮಾರಸ್ವಾಮಿ

  3)ಪಶ್ಚಿಮ ವಲಯ: ಬೆಳಗ್ಗೆ 9ರಿಂದ ಸಂಜೆ 5ರವರೆಗೆ   ತಿಮ್ಮಯ್ಯ ರಸ್ತೆ, ಬಸವೇಶ್ವರನಗರ, ಮಂಜುನಾಥ ನಗರ, ಕಮಲಾನಗರ, ಮಾಳಗಾಲ, ಜನತಾ ಕಾಲೋನಿ, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ವಿದ್ಯಾಪೀಠ ರಸ್ತೆ, ಉಳ್ಳಾಲ ನಗರ, ಮಾರುತಿ ನಗರ, ಕೋಡಿಪಾಳ್ಯ, ಕುವೆಂಪು ಮುಖ್ಯರಸ್ತೆ, ಬಿಇಎಲ್, ಗಂಗಾ. 1 ನೇ ಹಂತ ಮತ್ತು BEL 2 ನೇ ಹಂತದಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

  4)ಪೂರ್ವ ವಲಯ: ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಜೋಗುಪಾಳ್ಯ, ಇಲ್ಪೆ ತೋಪು, ಸುದ್ದಗುಂಟೆ ಪಾಳ್ಯ, ಎಂವಿ ನಗರ, ಕನಕದಾಸ ಸರ್ಕಲ್, ನಾರ್ತ್ ಅವೆನ್ಯೂ ರಸ್ತೆ, ಬಿಳೇಶಿವಾಲೆ, ಎಂಎಸ್ ರಾಮಯ್ಯ ಉತ್ತರ ನಗರ, ಸದಾಮಂಗಲ ಮತ್ತು ಕೊಡಿಗೇಹಳ್ಳಿಯಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.
  Published by:ranjumbkgowda1 ranjumbkgowda1
  First published: