ಬಾಗಲಕೋಟೆ: ಅದು ಬಡ (Poor) ಕುಟುಂಬ (Family), ಆತ ಗ್ಯಾರೇಜ್ ಮೆಕ್ಯಾನಿಕ್ (Garage Mechanic)ಆಗಿ ಕೆಲ್ಸ ಮಾಡಿಕೊಂಡಿದ್ದವ. ಬಡತನದ (Poverty) ಮಧ್ಯೆಯೂ ಬದುಕು ಸಾಗಿಸುತ್ತಾ ತನ್ನ ಮೂವರು ಹೆಣ್ಣು ಮಕ್ಕಳಿಗೆ (Daughters) ಉತ್ತಮ ಶಿಕ್ಷಣ (Education) ಕೊಡಿಸಿದ್ರು. ಇದರ ಪರಿಣಾಮವಾಗಿ ತಂದೆಯ (Father) ಸಂಕಷ್ಟದ ದಿನಗಳಲ್ಲಿಯೇ ಓದಿದ ಮಗಳು ರುಬಿನಾ ಇದೀಗ ಫಸ್ಟ್ ರ್ಯಾಂಕ್ (First Rank) ಪಡೆಯೋ ಮೂಲಕ ಗಮನ ಸೆಳೆದಿದ್ದಾಳೆ. ಆದರೆ ಮುಂದೆ ವಿದ್ಯಾಭ್ಯಾಸ ಮಾಡಿ, ಉತ್ತನ ಸ್ಥಾನಕ್ಕೆ ಏರಬೇಕು ಎಂಬ ಕನಸಿದೆ (Dreams) ಆಕೆಗೆ. ಆದರೆ ಆ ಕನಸಿಗೆ ಅಡ್ಡಿಯಾಗಿರುವುದು ಮನೆಯಲ್ಲಿನ ಬಡತನ. ಇದೀಗ ಮುಂದಿನ ಶಿಕ್ಷಣಕ್ಕಾಗಿ ಸರ್ಕಾರದಿಂದ (Government) ಸಹಾಯ ಯಾಚಿಸಿದ್ದಾಳೆ.
ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ
ಹೌದು, ಗ್ಯಾರೇಜ್ನಲ್ಲಿ ಕೆಲ್ಸ ಮಾಡುವ ರಫೀಕ್ ಲೋಕಾಪೂರ, ವೃತ್ತಿಯಿಂದ ಮೆಕಾನಿಕ್. ಬಡತನದ ಮಧ್ಯೆ ಜೀವನ ಕಳೆದ್ರೂ ತನ್ನ ಮೂವರು ಹೆಣ್ಣು ಮಕ್ಕಳು ಸೇರಿದಂತೆ ಗಂಡು ಮಗನಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ದುಡಿದಿದ್ದೆಲ್ಲಾ ಮಕ್ಕಳ ಓದಿಗಾಗಿ ಖರ್ಚು ಮಾಡಿರೋ ರಫಿಕ್ ತಾನು 7ನೇ ತರಗತಿ ಓದಿದ್ರೂ ಮಕ್ಕಳಿಗೆ ಶಿಕ್ಷಣ ಕಡಿಮೆ ಆಗಬಾರದು ಅನ್ನೋ ಉದ್ದೇಶ ಹೊಂದಿದ್ರು. ಇದರ ಪರಿಣಾಮ ಎರಡನೇ ಮಗಳು ರಾಣಿ ಚೆನ್ನಮ್ಮ ಯುನಿವರ್ಸಿಟಿಯಲ್ಲಿ ಸ್ನಾತಕೋತ್ತರದ ಅರ್ಥಶಾಸ್ತ್ರ ವಿಭಾಗದಲ್ಲಿ ಫಸ್ಟ್ ರ್ಯಾಂಕ್ ಪಡೆದುಕೊಂಡಿದ್ದಾಳೆ.
ಸರ್ಕಾರದ ಸಹಾಯ ಹಸ್ತದ ನಿರೀಕ್ಷೆ
ಇನ್ನು ರುಬಿನಾಗೆ ಹೇಗಾದ್ರೂ ಮಾಡಿ ಒಳ್ಳೆಯ ನೌಕರಿ ಪಡೆದು ಇತರರಿಗೆ ಸಹಾಯ ಮಾಡಬೇಕೆಂಬ ಕನಸಿದ್ದು, ಇದೀಗ ಐಎಎಸ್, ಪಿಎಚ್ಡಿ ಮಾಡಬೇಕೆಂಬ ಹಂಬಲವಿದೆ. ಹೀಗಾಗಿ ಸರ್ಕಾರ ಉಚಿತ ಕೋಚಿಂಗ್ ಸೇರಿದಂತೆ ಮುಂದಿನ ಶಿಕ್ಷಣಕ್ಕೆ ನೆರವಿಗೆ ಬರಲಿ ಅನ್ನೋ ಆಶಯವನ್ನ ರುಬಿನಾ ವ್ಯಕ್ತಪಡಿಸಿದ್ದಾಳೆ.
ಇದನ್ನೂ ಓದಿ: Mushroom Farming: ಕ್ರೀಡಾ ಶಾಲೆ ವಿದ್ಯಾರ್ಥಿಗೆ ಕೃಷಿಯೇ ಖುಷಿಯಂತೆ! ಅಣಬೆ ಬೆಳೆಯುತ್ತಿದ್ದಾನೆ ಈ ಪೋರ
ಮಗಳ ಬಗ್ಗೆ ತಂದೆಗೆ ಹೆಮ್ಮೆ
ಇನ್ನು ತಂದೆ ರಫೀಕ್ ಅವರು ತಮ್ಮ ಮಗಳ ಸಾಧನೆಯಿಂದ ಹೆಮ್ಮೆಪಡುತ್ತಿದ್ದು, ಕಳೆದ ಹಲವು ವರ್ಷಗಳ ಹಿಂದೆ ರಸ್ತೆಯ ಪಕ್ಕದಲ್ಲಿಯೇ ಮೆಕಾನಿಕ್ ಕೆಲ್ಸ ಮಾಡುತ್ತಾ ಬಡತನದಲ್ಲಿಯೂ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ್ರು. ಯಾರೇ ಏನೇ ಅಂದ್ರು ತಮ್ಮ ಹೆಣ್ಣು ಮಕ್ಕಳಿಗೆ ಓದಿಸುವುದನ್ನು ಮಾತ್ರ ಬಿಡಲಿಲ್ಲ.
ಮುಂಜಾನೆ 4ಕ್ಕೆ ಶುರುವಾಗುತ್ತಿತ್ತು ಓದು
ಬೆಳಿಗ್ಗೆ 4 ಗಂಟೆಗೆ ಎದ್ದು ಮಕ್ಕಳನ್ನು ಎಬ್ಬಿಸಿ ನಿತ್ಯ ಓದಲು ಪ್ರೇರಿಪಿಸುತ್ತಾ ಬಂದವರು. ಇದರ ಪರಿಣಾಮ ಇಂದು ಮೂವರು ಹೆಣ್ಣು ಮಕ್ಕಳ ಪೈಕಿ ಓರ್ವಳು ಬಿಎಸ್ಸಿ ಬಿಎಡ್, ಮತ್ತೋರ್ವಳು ಬಿಎ ಬಿಎಡ್ ಕಲಿತಿದ್ದು, ಇನ್ನೋರ್ವ ಮಗ ಡಿಪ್ಲೋಮಾ ಕಲಿತಿದ್ದಾನೆ. ಹೀಗೆ ತಾವು ಬಡತನದಲ್ಲಿ ಬಂದ್ರು ಮಕ್ಕಳಿಗಾಗಿ ನಿತ್ಯ ದುಡಿದು ಅವರಿಗೆ ಸಾರ್ಥಕ ಬದುಕಿನ ಶಿಕ್ಷಣವನ್ನ ರಫೀಕ್ ನೀಡಿಸಿದ್ದಾರೆ. ಇದರ ಪರಿಣಾಮ ಇಂದು ಮಕ್ಕಳು ವಿದ್ಯಾವಂತರಾಗಿದ್ದು, ಇನ್ನು ಯುನಿರ್ಸಿಟಿಗೆ ರ್ಯಾಂಕ್ ಪಡೆದಿದ್ದಾಳೆ.
ಉನ್ನತ ಶಿಕ್ಷಣಕ್ಕೆ ಅಡ್ಡಿಯಾದ ಬಡತನ
ಮಗಳು ಇದೀಗ ಐಎಎಸ್ , ಪಿಎಚ್ಡಿ ಕಲಿಕೆ ಮಾಡಬೇಕೆಂಬ ಆಶಯ ಹೊತ್ತಿದ್ದು, ಇದಕ್ಕೆ ಸರ್ಕಾರ ಉಚಿತ ಕೋಚಿಂಗ್ ಸೇರಿದಂತೆ ನೆರವಿಗೆ ಬಂದಲ್ಲಿ ಇನ್ನಷ್ಟು ಅನುಕೂಲವಾಗಲಿದೆ ಅನ್ನೋ ಆಶಯವನ್ನ ರಫೀಕ್ ಹೊಂದಿದ್ದರೆ, ಇತ್ತ ಸ್ಥಳೀಯರು ಸಹ ರಫೀಕ್ ಅವರ ಮಗಳು ರುಬಿನಾ ಸಾಧನೆ ಕಂಡು ಹೆಮ್ಮೆ ಪಟ್ಟು ಈ ವಿದ್ಯಾರ್ಥಿನಿಗೆ ಸರ್ಕಾರ ನೆರವು ನೀಡುವಂತಾಗಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Summer Camp: ಕಾಡಿನಲ್ಲೊಂದು ವಿಶೇಷ ಬೇಸಿಗೆ ಶಿಬಿರ; ಕೋಟೆ-ಬೆಟ್ಟ ಏರಿ, ಕಾಡು ಹಣ್ಣು ತಿಂದು ಪುಟಾಣಿಗಳ ಸಂಭ್ರಮ
ಒಟ್ಟಿನಲ್ಲಿ ಬಡತನದಲ್ಲಿ ಬೆಳೆದು ಬಂದ ವಿದ್ಯಾರ್ಥಿನಿಯೋರ್ವಳು ಇದೀಗ ಯುನಿವರ್ಸಿಟಿಗೆ ಫಸ್ಟ್ ರ್ಯಾಂಕ್ ಪಡೆಯುವ ಮೂಲಕ ಗಮನ ಸೆಳೆದಿದ್ದು, ಈ ವಿದ್ಯಾರ್ಥಿನಿಗೆ ಸರ್ಕಾರ ನೆರವು ನೀಡಿ ಆಕೆಯ ಸಾಧನೆಗೆ ಪ್ರೇರಣೆಯಾಗಲಿ ಅನ್ನೋದೆ ಎಲ್ಲರ ಆಶಯ..
(ವರದಿ: ಮಂಜುನಾಥ್ ತಳವಾರ) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ