LockDown Effect: ಕೋಳಿ ಫಾರಂ​ ಮೇಲೂ ಕೊರೋನಾ ಕರಿನೆರಳು; ಸಂಕಷ್ಟದಲ್ಲಿ ಮಾಲೀಕರು

ರೆಸ್ಟೋರೆಂಟ್​ಗಳು, ಹೋಟೆಲ್​​​ಗಳು ಹಾಗೂ ಮಾಂಸಾಹಾರಿ ಖಾನಾವಳಿಗಳು ಬಂದ್​ ಆಗಿವೆ. ಇದರ ಪರಿಣಾಮ ಪೌಲ್ಟ್ರಿ ಉದ್ಯಮಸ್ಥರು ಕೂಡ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ರೆಸ್ಟೋರೆಂಟ್​ಗಳು, ಹೋಟೆಲ್​​​ಗಳು ಹಾಗೂ ಮಾಂಸಾಹಾರಿ ಖಾನಾವಳಿಗಳು ಬಂದ್​ ಆಗಿವೆ. ಇದರ ಪರಿಣಾಮ ಪೌಲ್ಟ್ರಿ ಉದ್ಯಮಸ್ಥರು ಕೂಡ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ರೆಸ್ಟೋರೆಂಟ್​ಗಳು, ಹೋಟೆಲ್​​​ಗಳು ಹಾಗೂ ಮಾಂಸಾಹಾರಿ ಖಾನಾವಳಿಗಳು ಬಂದ್​ ಆಗಿವೆ. ಇದರ ಪರಿಣಾಮ ಪೌಲ್ಟ್ರಿ ಉದ್ಯಮಸ್ಥರು ಕೂಡ ಸಂಕಷ್ಟಕ್ಕೆ ಒಳಗಾಗಿದ್ದಾರೆ.

  • Share this:
ಕೊಪ್ಪಳ (ಜೂ. 11): ಕಳೆದೊಂದುವರೆ ವರ್ಷದಿಂದ ಕೋವಿಡ್​ ಸಾಂಕ್ರಾಮಿಕದಿಂದ ಜನರು ತತ್ತರಿಸಿದ್ದಾರೆ. ಸೋಂಕಿನ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜನತಾ ಕರ್ಫ್ಯೂ, ಲಾಕ್ ಡೌನ್  ಘೋಷಣೆ ಮಾಡಿದ ಪರಿಣಾಮ ಜನರ ಜೀವನ ಹಾಗೂ ಉದ್ಯಮದ ಮೇಲೆ ಸಾಕಷ್ಟು  ಪರಿಣಾಮ  ಬೀರಿದೆ.  ಜಿಲ್ಲೆಯಲ್ಲಿಯೂ ಅನೇಕ ಉದ್ಯಮಗಳು ಭಾರೀ ಹೊಡೆತ ಅನುಭವಿಸಿದೆ.  ಅದರಲ್ಲಿ ಕೋಳಿ ಉದ್ಯಮ  (ಪೌಲ್ಟ್ರಿ ಉದ್ಯಮ)  ಮತ್ತು ಕಾರ್ಮಿಕರಿಗೂ ತೊಂದರೆಯಾಗಿದೆ. ಕೊರೋನಾ ಕರ್ಫ್ಯೂ ಹಾಗೂ ಲಾಕ್​ಡೌನ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಅನೇಕ ವ್ಯಾಪಾರ- ವಹಿವಾಟುಗಳು ಸ್ಥಗಿತಗೊಂಡಿವೆ. ರೆಸ್ಟೋರೆಂಟ್​ಗಳು, ಹೋಟೆಲ್​​​ಗಳು ಹಾಗೂ ಮಾಂಸಾಹಾರಿ ಖಾನಾವಳಿಗಳು ಬಂದ್​ ಆಗಿವೆ. ಇದರ ಪರಿಣಾಮ ಪೌಲ್ಟ್ರಿ ಉದ್ಯಮಸ್ಥರು ನಿರೀಕ್ಷೆ ಮೀರಿದ ವಾಹಿವಾಟು ನಡೆಸದ ಹಿನ್ನಲೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಕುಸಿದ ಮೊಟ್ಟೆ ದರ 

ಅತಿ ಹೆಚ್ಚು ಲಾಭಾ ಗಳಿಸುತ್ತಿದ್ದ ಕೋಳಿ ಹಾಗೂ ಮೊಟ್ಟೆಯ ವ್ಯಾಪಾರದಲ್ಲಿ ಬಹಳಷ್ಟು ಕುಂಠಿತವಾಗಿದೆ. ಜಿಲ್ಲೆಯಲ್ಲಿ ಮಾಂಸ ಮತ್ತು ಮೊಟ್ಟೆ ಉತ್ಪಾದನೆಯ ಸುಮಾರು 30 ಕ್ಕೂ ಹೆಚ್ಚು ಕೋಳಿ ಫಾರಂ ​​​ಗಳಿವೆ. ನೂರಾರು ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೀಗೆ ಲಾಭಾವಿಲ್ಲದೇ ಕಂಗೆಟ್ಟಿದ್ದಾರೆ. ಕಳೆದ ತಿಂಗಳು ಒಂದು ಮೊಟ್ಟೆ ಬೆಲೆ 5 ರೂಪಾಯಿ ಇತ್ತು. ಈಗ 4 ರೂಪಾಯಿಗೆ ಒಂದರಂತೆ ಮೊಟ್ಟೆ ದರವಿದೆ. ಮೊಟ್ಟೆ ಹಾಗೂ ಕೋಳಿ ಸಾಗಾಣಿಕೆಗೆ ಅವಕಾಶವಿದ್ದರೂ ಸಹ ಶೇಕಡಾ 30 ರಷ್ಟು ಪ್ರಮಾಣದ ವ್ಯವಹಾರ ಕಡಿಮೆಯಾಗಿದೆ ಎನ್ನುತ್ತಾರೆ ಪೌಲ್ಟ್ರಿ ಫಾರಂ​ ಉದ್ಯಮಿಗಳು.

ಕಾರ್ಮಿಕ ಸಮಸ್ಯೆ

ಇನ್ನು ಕೊರೋನಾ ಕರ್ಫ್ಯೂ ಹಾಗೂ ಲಾಕ್​ಡೌನ್​ನಿಂದ ಕಾರ್ಮಿಕರ ಸಮಸ್ಯೆಯೂ ಎದುರಾಗಿದೆ. ಬೇರೆ ಬೇರೆ ಗ್ರಾಮಗಳಿಂದ ಪೌಲ್ಟ್ರಿ ಫಾರಂ​​​ ಕೆಲಸಕ್ಕೆ ಕಾರ್ಮಿಕರು ಬರುತ್ತಾರೆ. ಈಗ ಲಾಕ್​ಡೌನ್ ಇರುವುದರಿಂದ ಕಾರ್ಮಿಕರು ಬರುವುದಕ್ಕೆ ಅಡ್ಡಿಯಾಗುತ್ತಿದೆ. ಕಾರ್ಮಿಕರು ಬರದಿರುವುದರಿಂದ ಪೌಲ್ಟ್ರಿ ಫಾರಂ​ನ ನಿತ್ಯದ ಕೆಲಸಗಳು ನಿಂತು ಹೋಗುತ್ತಿದ್ದು, ಮೊಟ್ಟೆಗಳು ಹಾಳಾಗುತ್ತಿವೆ. ಒಟ್ಟಾರೆಯಾಗಿ ಕೊರೊನಾ ಎರಡನೇ ಅಲೆಯ ಕರ್ಫ್ಯೂ, ಲಾಕ್​ಡೌನ್ ಅನೇಕ ಉದ್ಯಮ ಹಾಗೂ ವಹಿವಾಟಿನ‌ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಇದನ್ನು ಓದಿ: ಕೊರೋನಾ ನಡುವೆಯೂ ರಾಜಕೀಯ ದಳ್ಳುರಿಗೆ ಸಾಕ್ಷಿಯಾದ ಹಾತಲಗೇರಿ ಗ್ರಾಮ

ಕೋಳಿ ಫಾರಂ​ ಬಂದ್​

ರಾಜ್ಯದಲ್ಲಿಯೇ ಅತಿ ಹೆಚ್ಚು ಕೋಳಿ ಮೊಟ್ಟೆ ಉತ್ಪಾದನೆಯು ಕೊಪ್ಪಳ ಜಿಲ್ಲೆಯಲ್ಲಾಗುತ್ತಿದೆ. ಜಿಲ್ಲೆಯಿಂದ ನಿತ್ಯ 65-70 ಲಕ್ಷ ಮೊಟ್ಟೆಗಳು ಉತ್ಪಾದನೆಯಾಗುತ್ತಿದೆ, ಇದೇ ಸಂದರ್ಭದಲ್ಲಿ ಒಟ್ಟು 27 ಮೊಟ್ಟೆ ಉತ್ಪಾದಿಸುವ ಕೋಳಿ ಫಾರಂ ಗಳಿವೆ. ಈ ಮೊದಲು 12 ಕೋಳಿ ಮಾಂಸದ ಫಾರಂ ಗಳಿದ್ದವು. ಮೊದಲು ಅಲೆ ಬಂದಾಗಲೇ ಬಾಯ್ಲರ್ ಕೋಳಿ ಫಾರಂ ಗಳು ಬಂದ್ ಆಗಿವೆ. ಈಗ ಕೋಳಿ ಮೊಟ್ಟೆ ಫಾರಂ ಗಳಿಂದ‌ ಉತ್ಪಾದನೆಯಾಗುವ ಮೊಟ್ಟೆಗಳ ಸಾಗಾಟವಾಗುತ್ತಿದ್ದರೂ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಮಾರುಕಟ್ಟೆ ಇಲ್ಲದೆ ಕೋಳಿ ಉದ್ಯಮ ನಲುಗಿದೆ. ಕೋಳಿ ಉದ್ಯಮದ ಮೇಲೆ ಕೊರೋನಾ ಕರಿನೆರಳು ಆವರಿಸಿದೆ,

ಮೊಟ್ಟೆ ದರ ಇಳಿಕೆಯಿಂದಾಗಿ ಉತ್ಪಾದನೆ ಇಳಿಕೆಯಾಗಿದೆ. ಇದರಿಂದ ಈಗ ಕಾರ್ಮಿಕ ಪ್ರತಿ ಫಾರಂನಲ್ಲಿಯೂ ಶೇ 50 ರಷ್ಟು ಕಾರ್ಮಿಕರ ಕಡಿತ ಮಾಡಲಾಗಿದೆ. ಲಾಕ್ ಡೌನ್ ಪರಿಣಾಮ ಕೋಳಿ ಫಾರಂ ಮೇಲೆ ಗಂಭೀರ ಪರಿಣಾಮ ಬೀರಿದೆ.  ಓದು ಕಡೆ ಲಾಭಾವಿಲ್ಲದೇ ಮಾಲೀಕರು ಕಂಗೆಟ್ಟರೆ, ಕೆಲಸವಿಲ್ಲದೇ  ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ.  ಸದ್ಯ ಸರ್ಕಾರ ಜಿಲ್ಲೆಯಲ್ಲಿ ಅನ್ ಲಾಕ್ ಮುಂದಾಗಿದ್ದು, ಮುಂದೆಯಾದರೂ ಕೋಳಿ ಉದ್ಯಮ ಚೇತರಿಸಿಕೊಳ್ಳುತ್ತದೆಯೋ ಕಾದು ನೋಡಬೇಕಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Seema R
First published: