Ramanagara: ಆರು ತಿಂಗಳ ಹಿಂದೆ ಡಾಂಬರೀಕರಣಗೊಂಡಿದ್ದ ರಾಜ್ಯ ಹೆದ್ದಾರಿ ಗುಂಡಿಮಯ; ಸ್ಥಳೀಯರಿಂದ ಪ್ರತಿಭಟನೆ

ಇದರಿಂದ ಆಕ್ರೋಶಗೊಂಡ ಸ್ಥಳೀಯ ನಿವಾಸಿಗಳು ಶನಿವಾರ ಹೆದ್ದಾರಿಯನ್ನ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಇದೀಗ ಹದಗೆಟ್ಟ ರಸ್ತೆಯನ್ನ ಕೇವಲ ಆರು ತಿಂಗಳ ಹಿಂದೆ ಲಕ್ಷಾಂತರ ರೂ ವೆಚ್ಚ ಮಾಡಿ ಡಾಂಬರಿಕರಣ ಸಹ ಮಾಡಲಾಗಿತ್ತು.

ರಸ್ತೆ ಬಂದ್ ಮಾಡಿ ಪ್ರತಿಭಟನೆ

ರಸ್ತೆ ಬಂದ್ ಮಾಡಿ ಪ್ರತಿಭಟನೆ

  • Share this:
ರಾಮನಗರ: ರಾಮನಗರ (Ramanagara) ಜಿಲ್ಲಾ ಕೇಂದ್ರದಿಂದ ಮಾಗಡಿ (Magadi) ತಾಲೂಕಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ (State Highway) ಸಂಪೂರ್ಣವಾಗಿ ಹದಗೆಟ್ಟಿದ್ದು, ರಸ್ತೆಯಲ್ಲಿ ಮಾರುದ್ದ ಗುಂಡಿಗಳು (Potholes) ಬಿದ್ದು, ಮಂಡಿವರೆಗೂ ನೀರು ನಿಂತಿದೆ. ಇನ್ನು ಸಂಪೂರ್ಣವಾಗಿ ಹದಗೆಟ್ಟ ರಸ್ತೆಯಲ್ಲಿ ಮೂರು ಪ್ರತಿಷ್ಠಿತ ಶಾಲೆಗಳು, ಮನೆಗಳು, ಮಳಿಗೆಗಳು ಇವೆ. ಇದೇ ರಸ್ತೆಯಲ್ಲಿಯೇ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರಿಸುತ್ತವೆ. ಆದರೆ ಈ ಹದಗೆಟ್ಟ ರಸ್ತೆಯಲ್ಲಿ ಸಂಚಾರಿಸಲು ಪ್ರಾಣವನ್ನ ಕೈಯಲ್ಲಿ ಹಿಡಿದು ಹೋಗುವ ಪರಿಸ್ಥಿತಿ ಬಂದಿದೆ. ರಸ್ತೆ ಸರಿಪಡಿಸುವಂತೆ ನೂರಾರು ಮನವಿ ಮಾಡಿದರೂ ಸ್ಥಳೀಯ ಜನಪ್ರತಿನಿಧಿ, ಸಂಬಂಧಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ.

ಇದರಿಂದ ಆಕ್ರೋಶಗೊಂಡ ಸ್ಥಳೀಯ ನಿವಾಸಿಗಳು ಶನಿವಾರ ಹೆದ್ದಾರಿಯನ್ನ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಇದೀಗ ಹದಗೆಟ್ಟ ರಸ್ತೆಯನ್ನ ಕೇವಲ ಆರು ತಿಂಗಳ ಹಿಂದೆ ಲಕ್ಷಾಂತರ ರೂ ವೆಚ್ಚ ಮಾಡಿ ಡಾಂಬರಿಕರಣ ಸಹ ಮಾಡಲಾಗಿತ್ತು.

ರಸ್ತೆ ಬಂದ್ ಮಾಡಿ ಸ್ಥಳೀಯರಿಂದ ಪ್ರತಿಭಟನೆ

ಆದರೆ ಆರೇ ತಿಂಗಗಳಿಗೆ ಇಡೀ ರಸ್ತೆ ಸಂಪೂರ್ಣವಾಗಿ ಹದಗೆಟ್ಟು, ರಸ್ತೆಯಲ್ಲಿ ಗುಂಡಿಗಳು ಬಿದ್ದು, ನೀರು ತುಂಬಿಕೊಂಡಿತ್ತು. ನೂರಾರು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಮಾತ್ರ ಖ್ಯಾರೆ ಅಂದಿರಲಿಲ್ಲ. ಆದರೆ ಶನಿವಾರ ಏಕಾಏಕಿ ರಸ್ತೆ ತಡೆಗಟ್ಟಿ ಪ್ರತಿಭಟನೆ ನಡೆಸಿದ್ದರಿಂದ ಎಚ್ಚೆತ್ತ ಅಧಿಕಾರಿಗಳು ತರಾತುರಿಯಲ್ಲಿ ಬಂದು ಹದಗೆಟ್ಟ ರಸ್ತೆಯನ್ನ ಸರಿಪಡಿಸಲು ಮುಂದಾಗಿದ್ದರು.

ಇದನ್ನೂ ಓದಿ:  Chikkamagaluru Rains: ಜಿಲ್ಲೆಯಲ್ಲಿ 328 ಮನೆಗಳಿಗೆ ಹಾನಿ, ಮೂಖ ಪ್ರಾಣಿಗಳಿಗೂ ಮಳೆ ಸಂಕಟ 

ಒಬ್ಬರು ಮತ್ತೊಬ್ಬರತ್ತ ಬೊಟ್ಟು ಮಾಡ್ತಿರೋ ಅಧಿಕಾರಿಗಳು

ಇನ್ನು ಅಧಿಕಾರಿಗಳ ಮೇಲೆ ಜನರು ಚೀ ತೂ ಅನ್ನುತ್ತಿದ್ದಂತೆ ಒಂದೊಂದು ಇಲಾಖೆಗಳ ಮೇಲೆ ಒಬ್ಬರೊಬ್ಬರು ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ರಸ್ತೆ ಹದಗೆಡಲು ನಗರಸಭೆ ಕಾರಣವೆಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದರೇ, ನಮ್ಮದೇನು ಇಲ್ಲ ಇದು ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಹದಗೆಟ್ಟಿದೆ ಎಂದು ನಗರಸಭೆ ಅಧ್ಯಕ್ಷೆ ಪಾರ್ವತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹಲವು ವರ್ಷಗಳಿಂದ ಇದೇ ಸಮಸ್ಯೆ, ಕಣ್ಮುಚ್ಚಿದೆ ತಾಲೂಕು ಆಡಳಿತ

ರಾಮನಗರ - ಮಾಗಡಿ ರಸ್ತೆಯಲ್ಲಿ ಈ ಸಮಸ್ಯೆ ಬಹಳ ವರ್ಷಗಳಿಂದ ಇದ್ದರೂ ಸಹ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವರ್ಗ ಹಾಗೂ ರಾಮನಗರದಲ್ಲಿ ಆಡಳಿತ ನಡೆಸುವ ಜನಪ್ರತಿನಿಧಿಗಳು ಇದೇ ರಸ್ತೆಯಲ್ಲಿ ಸಂಚಾರ ಬೆಳೆಸಿದರೂ ಸಹ ಯಾವುದೇ ಕ್ರಮವಹಿಸದೇ ದುರಂಕಾರ ಮೆರೆಯುತ್ತಿದ್ದಾರೆ.

ಈ ರಸ್ತೆಯ ಕಾಮಗಾರಿ ವ್ಯಾಪ್ತಿ ನಗರಸಭೆಗೆ ಬರುವುದಿಲ್ಲ, ಇದು ಲೋಕೋಪಯೋಗಿ ಇಲಾಖೆಗೆ ಬರಲಿದೆ ಎನ್ನಲಾಗಿದೆ. ಆದರೆ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಇದರ ಬಗ್ಗೆ ಯಾವುದೇ ಕ್ರಮವಹಿಸುತ್ತಿಲ್ಲ ಎಂಬುದು ನಿಜಕ್ಕೂ ಇವರೆಲ್ಲರ ಅಹಂಕಾರ ತೋರಿಸುತ್ತದೆ.

ಶಾಲೆಯ ಮಕ್ಕಳಿಗೆ ದಿನನಿತ್ಯ ಧರ್ಮಸಂಕಟ, ಎಲ್ಲಿದ್ದಾರೆ ಅಧಿಕಾರಿಗಳು, ಶಾಸಕರು?

ಈ ಸಮಸ್ಯೆ ಎಷ್ಟೋ ವರ್ಷಗಳ ಹಿಂದಿನಿಂದಲೂ ಇದೆ. ಆದರೆ ರಾಮನಗರದ ಸರ್ಕಾರಿ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಎಲ್ಲಿದ್ದಾರೆಂದು ರಾಮನಗರದ ಜನರು ಪ್ರಶ್ನೆ ಮಾಡಿದ್ದಾರೆ.

ಅಭಿವೃದ್ಧಿ ಮಾಡ್ತಿದ್ದೇವೆಂದು ಹೇಳುವ ಶಾಸಕಿ‌ ಅನಿತಾ ಕುಮಾರಸ್ವಾಮಿಯವರಿಗೆ ಇಂತಹ ದೊಡ್ಡ ಸಮಸ್ಯೆ ಕಾಣಲಿಲ್ಲವಾ ಎಂಬುದು ಇಲ್ಲಿನ‌ ಜನ ಪ್ರಶ್ನೆಯಾಗಿದೆ. ಇದೇ ರಸ್ತೆಯಲ್ಲಿ ಸಾಕಷ್ಟು ಬಾರಿ ಸಂಚಾರ ಮಾಡಿರುವ ಅನಿತಾ ಕುಮಾರಸ್ವಾಮಿಯವರು ಈಗಲಾದರೂ ಸಮಸ್ಯೆಗೆ ಸ್ಪಂದಿಸಲಿ ಎಂದು ಜನರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:  Hubballi: ಮಳೆಯಿಂದ ರಾಜ್ಯದಲ್ಲಿ ತೀವ್ರ ಹಾನಿ! ಕೆಲವೇ ದಿನಗಳಲ್ಲಿ ಕೇಂದ್ರಕ್ಕೆ ವರದಿ

ಇನ್ನು ಇಲ್ಲಿನ ಅಧಿಕಾರಿಗಳು ಹಾಗೆಯೇ ಇದ್ದಾರೆ. ರಾಜನಂತೆ ಪ್ರಜೆಗಳು ಎಂಬಂತೆ ಗೊತ್ತಿದ್ದರೂ ಗೊತ್ತಿಲ್ಲದಂತೆ ಕಣ್ಣಮುಚ್ಚಾಲೇ ಆಟವಾಡ್ತಿದ್ದಾರೆ ಅಧಿಕಾರಿಗಳು. ಆದರೆ ಮುಂದೊಂದು ದಿನ ನಿಜಕ್ಕೂ ಅಧಿಕಾರಿಗಳನ್ನ ರಸ್ತೆಯಲ್ಲಿ ಅಡ್ಡಹಾಕಿ ಛೀಮಾರಿ ಹಾಕುವ ಕೆಲಸವನ್ನ ಜನರೇ ಮಾಡ್ತಾರೆ.‌
Published by:Mahmadrafik K
First published: