ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಟ್ರಾಫಿಕ್‌ಗಿಂತ (Bengaluru Traffic) ದೊಡ್ಡ ಸಮಸ್ಯೆ ಎಂದರೆ ಯಮರೂಪಿ ಗುಂಡಿಗಳು (Potholes). ವರ್ಷಕ್ಕೆ ಹಲವು ಪ್ರಯಾಣಿಕರು (Passengers) ಈ ಗುಂಡಿಗಳಿಂದಲೇ ಸಾವನ್ನಪ್ಪುತ್ತಿದ್ದಾರೆ. ಈ ವರ್ಷವಂತೂ ಬೆಂಗಳೂರಲ್ಲಿ (Bengaluru Roads) ಹಲವಾರು ಮಾರಣಾಂತಿಕ ಅಪಘಾತಗಳಿಗೆ (Bengaluru Potholes Acciddent) ಹೊಂಡ-ಗುಂಡಿಗಳು ಕಾರಣವಾಗಿವೆ. ಗುಂಡಿಗಳ ಬಗ್ಗೆ ಜನ ಬಿಬಿಎಂಪಿ (BBMP) ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಹೀಗಾಗಿ ಹೊಂಡಗಳನ್ನು ಮುಚ್ಚಲು ಸರ್ಕಾರ ಸದ್ಯ ಕ್ರಮ ತೆಗೆದುಕೊಂಡಿದೆ. ಸಿವಿಕ್ ಟೆಕ್ ಸ್ಟಾರ್ಟ್ ಅಪ್ ಆಗಿರುವ ʼಪಾಟ್ ಹೋಲ್ ರಾಜʼ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ನಾಗರಿಕರೊಂದಿಗೆ ಗುಂಡಿ ಬಿದ್ದ ರಸ್ತೆಗಳನ್ನು ಮುಕ್ತಗೊಳಿಸಲು ಕೆಲಸ ಮಾಡುತ್ತಿದೆ.
30,000 ರಸ್ತೆ ಗುಂಡಿಗಳನ್ನು ಮುಚ್ಚಿದ ʼಪಾಟ್ ಹೋಲ್ ರಾಜʼ
ಭಾರತದ ವಾಯುಸೇನಯಲ್ಲಿ ಪೈಲಟ್ ಆಗಿದ್ದ ಪ್ರತಾಪ್ ಭೀಮಸೇನ ರಾವ್ ಮತ್ತು ಸೌರಭ್ ಕುಮಾರ್ ಈ ಸಂಸ್ಥೆ ಸ್ಥಾಪಿಸಿದ್ದು, ಈ ಸ್ಟಾರ್ಟಪ್ ದೇಶಾದ್ಯಂತ ಸುಮಾರು 30,000 ರಸ್ತೆ ಗುಂಡಿಗಳನ್ನು ಸರಿಪಡಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಗ್ರಿಡ್‌ಮ್ಯಾಟ್ಸ್ ರಸ್ತೆ
ಕಂಪನಿಯು ಈ ವರ್ಷ ಜುಲೈನಲ್ಲಿ ಬೆಳ್ಳಂದೂರಿನ ಇಕೋವರ್ಲ್ಡ್ ಕ್ಯಾಂಪಸ್‌ನ ಹೊರಗೆ ತನ್ನದೇ ಪೇಟೆಂಟ್ ಉತ್ಪನ್ನವಾದ ಗ್ರಿಡ್‌ಮ್ಯಾಟ್ಸ್ ಅನ್ನು ಬಳಸಿಕೊಂಡು ರಸ್ತೆಯನ್ನು ನಿರ್ಮಿಸಿದೆ.
ರಸ್ತೆಯನ್ನು ಹಾಕಲು ಬಳಸುವ ವಸ್ತುವನ್ನು ಕಂಪನಿಯು ಮರುಬಳಕೆಯ ಪಾಲಿಪ್ರೊಪಿಲೀನ್‌ನಿಂದ ತಯಾರು ಮಾಡುತ್ತದೆ. ನೂರಕ್ಕೆ ನೂರರಷ್ಟು ಪ್ಲಾಸ್ಟಿಕ್ ಅನ್ನೇ ಬಳಸಿ ನಿರ್ಮಿಸಲಾದ ಈ ರಸ್ತೆಯನ್ನು ‘GridMats’ ಎಂದು ಕರೆಯಲಾಗುತ್ತಿದೆ.
ಈ ರಸ್ತೆ ಪರಿಸರ ಸ್ನೇಹಿ ಹಾಗೂ ದೀರ್ಘಕಾಲ ಬಾಳಿಕೆ ಬರುವ, ಪಾದಚಾರಿ ಮಾರ್ಗಗಳನ್ನು ನಿರ್ಮಿಸಲು ಅನುಕೂಲವಾಗಿದೆ.
ಗ್ರಿಡ್‌ಮ್ಯಾಟ್ಸ್ ವಿಶೇಷತೆ
ಪರಿಸರ ಸ್ನೇಹಿಯಾಗಿರುವ ಈ ರಸ್ತೆ ಡಾಂಬರು ಹಾಗೂ ಕಾಂಕ್ರಿಟ್ ರಸ್ತೆಗಳ ಗುಣಮಟ್ಟವನ್ನೂ ಮೀರಿಸುತ್ತದೆ. ಸಾಂಪ್ರದಾಯಿಕವಾಗಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಗಳಲ್ಲಿ ಬಳಸಿದಂತೆ ತಂತ್ರಜ್ಞಾನವು ಉಕ್ಕಿನ ಬಲವರ್ಧನೆಗಳನ್ನು ಇಲ್ಲಿ ಬಳಸುವುದಿಲ್ಲ.
ಗ್ರಿಡ್‌ಮ್ಯಾಟ್ಸ್ ಕುರಿತು ಮತ್ತಷ್ಟು ವಿವರಿಸಿದ ಕುಮಾರ್, "ಇದು ನಮ್ಮ ಪೇಟೆಂಟ್ ತಂತ್ರಜ್ಞಾನವಾಗಿದೆ ಮತ್ತು ಇದು ಸಂಪೂರ್ಣವಾಗಿ ಮರುಬಳಕೆಯ ಪ್ಲಾಸ್ಟಿಕ್ (ಪಾಲಿಪ್ರೊಪಿಲೀನ್ ಪ್ಲಾಸ್ಟಿಕ್ ತ್ಯಾಜ್ಯ) ನಿಂದ ಮಾಡಲ್ಪಟ್ಟಿದೆ. ಇದಕ್ಕೆ ಯಾವುದೇ ರಾಸಾಯನಿಕಗಳನ್ನು ನಾವು ಸೇರಿಸುವುದಿಲ್ಲ" ಎಂದಿದ್ದಾರೆ.
ತಣ್ಣನೆಯ ಡಾಂಬರ್ ಬಳಕೆ
ಇನ್ನೂ ವಿಶೇಷ ಎಂದರೆ ರಸ್ತೆಯ ಹೊಂಡಗಳನ್ನು ಮುಚ್ಚಲು ಕಂಪನಿ ಕೋಲ್ಡ್ ಡಾಂಬರ್ ಬಳಸುತ್ತಾರೆ. ಸಾಮಾನ್ಯವಾಗಿ ಹೊಂಡಗಳನ್ನು ಮುಚ್ಚಲು ಬಿಸಿ ಡಾಂಬರ್ ಬಳಸುತ್ತಾರೆ. ಆದರೆ ಇದನ್ನು ಕೇವಲ 3-4 ಗಂಟೆ ಸಂಗ್ರಹಿಸಿಡಬಹುದು. ಆದರೆ ಕೋಲ್ಡಾ ಡಾಂಬರನ್ನು 10 ತಿಂಗಳ ಕಾಲ ಇಡಬಹುದಾಗಿದೆ. ಮತ್ತು ಇದನ್ನು ಬಳಸುವುದೂ ಸುಲಭವಾಗಿದೆ.
ಹೀಗಾಗಿ ಕೆಲವಡೆ ಜನರೇ ಚಿಕ್ಕಪುಟ್ಟ ಗುಂಡಿಗಳನ್ನು ಜನರೇ ಮುಚ್ಚಲು ನಮ್ಮಲ್ಲಿ ತಣ್ಣನೆಯ ಡಾಂಬರು ಮಿಶ್ರಣವನ್ನು ತೆಗೆದುಕೊಂಡು ಹೋಗುತ್ತಾರೆ ಎಂದು ಕುಮಾರ್ ಹೇಳಿದರು
ಗ್ರಿಡ್‌ಮ್ಯಾಟ್‌ಗೆ ಎಲ್ಲಾ ಕಡೆಯಿಂದ ಬೇಡಿಕೆ
ನಮ್ಮ ಸಂಸ್ಥೆ ಬೆಂಗಳೂರು ಮತ್ತು ಮುಂಬೈನಂತಹ ನಗರಗಳಲ್ಲಿ 5,000 ಚದರ ಮೀಟರ್ ಪಿಎಫ್ ಗ್ರಿಡ್‌ಮ್ಯಾಟ್ ಅನ್ನು ಇಲ್ಲಿಯವರೆಗೆ ಸ್ಥಾಪಿಸಿದೆ ಮತ್ತು ಶೀಘ್ರದಲ್ಲೇ ನಾವು ಹೈದರಾಬಾದ್‌ನಲ್ಲಿಯೂ ನಮ್ಮ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತೇವೆ.
ಉತ್ತರ ಭಾರತದಿಂದಲೂ ನಮ್ಮ ರಸ್ತೆಗಳಿಗೆ ಬೇಡಿಕೆ ಬರುತ್ತಿದೆ. ಹಾಗೆಯೇ ವಿದೇಶಗಳು ಕೂಡ ನಮ್ಮನ್ನು ಸಂಪರ್ಕ ಮಾಡಿದ್ದಾವೆ. ಆಫ್ರಿಕಾ ದೇಶ ನಮ್ಮ ತಂತ್ರಜ್ಞಾನವನ್ನು ಅಲ್ಲಿ ಪರಿಚಯಿಸಲು ಆಸಕ್ತಿ ತೋರಿಸುತ್ತಿದೆ ಎಂದಿದ್ದಾರೆ.
ಬೆಂಗಳೂರಿನ ಹಲವೆಡೆ ಮರುಬಳಕೆ ಪ್ಲಾಸ್ಟಿಕ್ ತ್ಯಾಜ್ಯದ ರಸ್ತೆ ನಿರ್ಮಾಣ
ಬೆಳ್ಳಂದೂರಿನ ಇಕೋವರ್ಲ್ಡ್ ಕ್ಯಾಂಪಸ್ ಮತ್ತು ಹೊರ ವರ್ತುಲ ರಸ್ತೆಯನ್ನು ಸಂಪರ್ಕಿಸುವ ರಸ್ತೆಯ ಕುರಿತು ಮಾತನಾಡಿದ ಕುಮಾರ್, ನಾವು ಗ್ರಿಡ್‌ಮ್ಯಾಟ್ಸ್‌ನಿಂದ ರಸ್ತೆಯನ್ನು ಮಾಡಿದ್ದೇವೆ. ಆ ಯೋಜನೆಯಲ್ಲಿ ನಾವು ಸುಮಾರು 3,000 ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿದ್ದೇವೆ.
ಸಾಂಪ್ರದಾಯಿಕ ಕಾಂಕ್ರೀಟ್ ರಸ್ತೆ ಹಾಕುವ ಪ್ರಕ್ರಿಯೆಗಿಂತ ಇದು ಸುಮಾರು 40 ಪ್ರತಿಶತ ಅಗ್ಗವಾಗಿದೆ. ಬೂದಿಗೆರೆ ರಸ್ತೆಯಲ್ಲಿರುವ ಸುಪ್ರಸಿದ್ಧ ಅಪಾರ್ಟ್‌ಮೆಂಟ್ ಕಮ್ಯುನಿಟಿ ಒಳಗೆ ರಸ್ತೆಗಳನ್ನೂ ನಿರ್ಮಿಸಿದ್ದೇವೆ. ಇದಲ್ಲದೆ, ನಾವು ಹೊಸೂರು ಮತ್ತು ತುಮಕೂರಿನ ಕಾರ್ಖಾನೆಯೊಳಗೂ ಈ ರಸ್ತೆಗಳನ್ನು ಹಾಕಿದ್ದೇವೆ” ಎಂದು ಅವರು ಹೇಳಿದರು.
ʼಪಾಟ್ ಹೋಲ್ ರಾಜʼ ಬಹಳಷ್ಟು ರಸ್ತೆ ಅಭಿವೃದ್ಧಿ ಯೋಜನೆಗಳಿಗೆ ಬಿಬಿಎಂಪಿ ಜೊತೆ ಪಾಲುದಾರರಾಗಿದೆ. ಬಿಬಿಎಂಪಿ ಜೊತೆ ಕೆಲಸ ಮಾಡುವುದು ಹೊಸ ಯೋಜನೆಗಳಿಗೆ ಕಾರಣವಾಗಿದೆ ಎಂದು ಕುಮಾರ್ ಹೇಳಿದ್ದಾರೆ.
ʼಪಾಟ್ ಹೋಲ್ ರಾಜʼ ಕಂಪನಿ ಉದಯ
ಸಂಸ್ಥೆ ಉದಯದ ಬಗ್ಗೆ ದಿ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಪೋಟ್‌ಹೋಲ್‌ರಾಜ ನಿರ್ದೇಶಕ ಸೌರಭ್ ಕುಮಾರ್, ಗುಂಡಿಗಳಿಂದ ಸಾವನ್ನಪ್ಪುವ ಪ್ರಕರಣಗಳೇ ನಮ್ಮ ಸಂಸ್ಥೆಯ ಸ್ಥಾಪನೆಗೆ ಕಾರಣವಾಯಿತು ಎಂದು ಹೇಳುತ್ತಾರೆ.
ಇದನ್ನೂ ಓದಿ: Moral Policing: ಮುಸ್ಲಿಂ ಯುವಕನ ಜೊತೆ ಹಿಂದೂ ಯುವತಿ ಪ್ರಯಾಣ; ಬಸ್ ತಡೆದು ನೈತಿಕ ಪೊಲೀಸ್ಗಿರಿ
ಪ್ರತಾಪ್‌ಗೆ, ಪಾಟ್ ಹೋಲ್ ರಾಜ ಕಂಪನಿ ಪ್ರಾರಂಭಿಸಲು ಮತ್ತೊಂದು ಪ್ರಮುಖ ಅಂಶವೆಂದರೆ ಅವರು ವಿದೇಶದಲ್ಲಿ ವಿವಿಧ ಕಂಪನಿಗಳೊಂದಿಗೆ ಕೆಲಸ ಮಾಡುವಾಗ ಮತ್ತು ವಿವಿಧ ದೇಶಗಳಿಗೆ ಪ್ರಯಾಣಿಸುತ್ತಿದ್ದಾಗ, ಜನರು ಯಾವಾಗಲೂ ಭಾರತವನ್ನು ಅದ್ಭುತ ಸಂಸ್ಕೃತಿಯ ಸುಂದರ ದೇಶ ಎಂದು ಹೊಗಳುತ್ತಿದ್ದರು,
ಆದರೆ ರಸ್ತೆಗಳು ಮಾತ್ರ ತುಂಬಾ ಭಯಾನಕವಾಗಿವೆ ಎಂದು ಹೇಳುತ್ತಿದ್ದರು. ಇದು ನಮ್ಮಿಬ್ಬರಿಗೂ ಈ ಕಂಪನಿ ಕಟ್ಟಲು ಕಾರಣವಾಯಿತು ಎನ್ನುತ್ತಾರೆ ಸೌರಭ್,
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ