ಕೊಚ್ಚಿಹೋದ ಕುಂಬಾರರ ಬದುಕು; ಸಹಾಯಕ್ಕಾಗಿ ಅಂಗಲಾಚಿ ಕಣ್ಣೀರು ಹಾಕಿದ ವೃದ್ದೆ

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ವೃದ್ದೆ ಮಹಾದೇವಮ್ಮ ಮಾತನಾಡಿ, ನನಗೆ ನನ್ನ ಮಗ ಮನೆಯಿಂದ ಹೊರ ಹಾಕಿದ. ನಾನು ಪಣತೆ ಮಾರಾಟ ಮಾಡಿ ಜೀವನ ನಡೆಸುತ್ತಿದ್ದೆ. ಈಗ ನೀರಿನಲ್ಲಿ ಕೊಚ್ಚಿ ಹೋಗಿವೆ. ಯಾರಾದರೂ ನನಗೆ ಸಹಾಯ ಮಾಡಿ ಎಂದು ಕಣ್ಣೀರು ಹಾಕಿದ್ದಾಳೆ.

news18-kannada
Updated:October 17, 2020, 3:45 PM IST
ಕೊಚ್ಚಿಹೋದ ಕುಂಬಾರರ ಬದುಕು; ಸಹಾಯಕ್ಕಾಗಿ ಅಂಗಲಾಚಿ ಕಣ್ಣೀರು ಹಾಕಿದ ವೃದ್ದೆ
ವೃದ್ಧೆ
  • Share this:
ಯಾದಗಿರಿ(ಅ.17): ದೀಪಾವಳಿ ಹಬ್ಬದ ಹಿನ್ನಲೆ ಹಣತೆಗಳನ್ನು ಸಿದ್ದ ಮಾಡಿದ್ದ ಕುಂಬಾರರ ಬದುಕು ಈಗ ಬೀದಿಪಾಲಾಗಿದೆ. ಕುಂಬಾರರು ಈಗ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ವಾಸವಾಗಿರುವ 6 ಜನ ಕುಂಬಾರ ಕುಟುಂಬವು ಈಗ ಕಣ್ಣೀರು ಹಾಕುತ್ತಿದೆ. ಭೀಮಾನದಿ ಪ್ರವಾಹ ಹಿನ್ನಲೆ ಭೀಮಾನದಿ ಹಿನ್ನಿರು ಗ್ರಾಮಕ್ಕೆ ನುಗ್ಗಿದ್ದವು. ಈ ಹಿನ್ನಲೆ ಮನೆಯಲ್ಲಿರುವ ದವಸ ಧಾನ್ಯ ಹಾಗೂ ಹಣತೆಗಳು ಕೂಡ ಹಾನಿಯಾಗಿವೆ.ಮಡಿಕೆ ಮಾಡಲು ತೆಗೆದುಕೊಂಡು ಬಂದ ಮಣ್ಣು ,ಮಡಿಕೆ, ಪಣತೆಗಳು ನೀರಿಗೆ ಕೊಚ್ಚಿಕೊಂಡು ಹೋಗಿವೆ. ಅದೇ ರೀತಿ ಮಡಕೆ ಮಾಡುವ ಬಟ್ಟಿಗೆ ಹಾನಿಯಾಗಿದೆ‌. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ನಾಗರಾಜ್ ಮಾತನಾಡಿ, ದೀಪಾವಳಿ ಹಿನ್ನಲೆ ಹಣತೆಗಳನ್ನು ಮಾಡಿದ್ದೆವು. ಹಣತೆಗಳು, ಮಡಕೆಗಳು ಕೂಡ ಹೋಗಿವೆ. ನಾವು ಹೇಗೆ ಬದುಕು ಸಾಗಿಸಬೇಕೆಂದು ನೋವು ತೊಡಿಕೊಂಡರು.

ಮಗ ಹೊರ ಹಾಕಿದ್ದಾನೆ, ನಮಗೆ ನೀವೆ ದೇವರು ಸಹಾಯ ಮಾಡಿ..!

ನಾಯ್ಕಲ್ ಗ್ರಾಮದ ವೃದ್ದೆ ಮಹಾದೇವಮ್ಮ ದೀಪ ಮಾಡಿಕೊಂಡು ಸ್ವಾಭಿಮಾನದಿಂದ ಬದುಕು ಸಾಗಿಸುತ್ತಿದ್ದಳು. ಆದರೆ, ಅಜ್ಜಿಯ ಸ್ವಾಭಿಮಾನದ ಬದುಕನ್ನು ಭೀಮಾನದಿ ‌ಕಸಿದುಕೊಂಡಿದೆ. ಮಗ ಮನೆಯಿಂದ ಹೊರ ಹಾಕಿದ್ದು ವೃದ್ದೆ ಮಹಾದೇವಮ್ಮ ಕಳೆದ ನಾಲ್ಕು ವರ್ಷದಿಂದ  ಮನೆ ಮುಂಭಾಗದಲ್ಲಿ ವಾಸವಾಗಿದ್ದಾಳೆ.

ಭೀಮಾ ನದಿಯಲ್ಲಿ ಪ್ರವಾಹ; ಜೀವ ಉಳಿಸಿಕೊಳ್ಳಲು ಜನರ ಹರಸಾಹಸ

ಪಣತೆ ಮಾಡಿ ಬದುಕು ನಡೆಸುತ್ತಿದ್ದಳು. ವೃದ್ದೆಗೆ ವಿಧವಾ  ವೇತನ ಕೂಡ ಬಂದಿಲ್ಲ. ನಮ್ಮ ಗೋಳು ಯಾರು ಕೇಳಲು ಬಂದಿಲ್ಲ ಎಂದು ಕಣ್ಣೀರು ಹಾಕಿದ್ದಾಳೆ.ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ವೃದ್ದೆ ಮಹಾದೇವಮ್ಮ ಮಾತನಾಡಿ, ನನಗೆ ನನ್ನ ಮಗ ಮನೆಯಿಂದ ಹೊರ ಹಾಕಿದ. ನಾನು ಪಣತೆ ಮಾರಾಟ ಮಾಡಿ ಜೀವನ ನಡೆಸುತ್ತಿದ್ದೆ. ಈಗ ನೀರಿನಲ್ಲಿ ಕೊಚ್ಚಿ ಹೋಗಿವೆ. ಯಾರಾದರೂ ನನಗೆ ಸಹಾಯ ಮಾಡಿ ಎಂದು ಕಣ್ಣೀರು ಹಾಕಿದ್ದಾಳೆ.
ಸದ್ಯಕ್ಕೆ ಪ್ರವಾಹ ತಗ್ಗಿದರೂ ಜನರ ನೆಮ್ಮದಿ ಮಾತ್ರ ತಪ್ಪಿಲ್ಲ.ಅಧಿಕಾರಿಗಳು ಭೇಟಿ ನೀಡಿ ಕುಂಬಾರರಿಗೆ ಆಶ್ರಯವಾಗಬೇಕಿದೆ.
Published by: Latha CG
First published: October 17, 2020, 3:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading