ಬೆಂಗಳೂರು (ಜೂ 6): ರಾಜ್ಯದ ಜನರಿಗೆ ಬೆಲೆ ಏರಿಕೆ (Price Hike) ವಿಚಾರ ಹೊಸದೇನು ಅಲ್ಲ. ಇತ್ತೀಚಿನ ದಿನಗಳಲ್ಲಿ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗಿ, ಜೀವನವೇ ದುಬಾರಿ ಆಗಿ ಹೋಗಿದೆ. ಪೆಟ್ರೋಲ್, ಡಿಸೇಲ್ ಹೆಚ್ಚಳ ಬಳಿಕ ಟೋಲ್ಗಳ ದರ ಕೂಡ ಹೆಚ್ಚಾಗಿತ್ತು. ನೈಸ್ ರಸ್ತೆ ಟೋಲ್ ಹೆಚ್ಚಳ ಮಾಡಿದ್ದ ಸಂಸ್ಥೆ ಜುಲೈ 1 ರಿಂದ ಶುಲ್ಕ ಹೆಚ್ಚಳ (Fee Increases From July 1) ಮಾಡುವುದಾಗಿ ನೈಸ್ ಟೋಲ್ (Nice Road) ಕಂಪನಿ ಹೇಳಿತ್ತು. ಹೊಸೂರು ರಸ್ತೆಯಿಂದ ತುಮಕೂರು ರಸ್ತೆಯವರೆಗಿನ ನೈಸ್ ಟೋಲ್ ರಸ್ತೆ, ಮಾಗಡಿ ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆಯ ಟೋಲ್ ಗೆ ಅನುಗುಣವಾಗಿ ಟೋಲ್ ಶುಲ್ಕ (Toll Fee) ಹೆಚ್ಚಳ ಮಾಡುವುದಾಗಿ ಪ್ರಕಟಣೆ ಹೊರಡಿಸಿತ್ತು. ಆದರೆ ಇದೀಗ ಶುಲ್ಕ ಏರಿಕೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಂಸ್ಥೆಯು ದರ ಏರಿಕೆಯನ್ನು ಮುಂದೂಡಿದ್ದರಿಂದ ಪ್ರಯಾಣಿಕರಿಗೆ (Passengers) ರಿಲೀಫ್ ಸಿಕ್ಕಿದೆ.
ಟೋಲ್ ದರ ಏರಿಕೆ ಮುಂದೂಡಿಕೆ
ಬೆಂಗಳೂರಿನ ನೈಸ್ ರಸ್ತೆ ಟೋಲ್ ದರವನ್ನು ಕೂಡ ಹೆಚ್ಚಳ ಮಾಡಲಾಗುತ್ತದೆ. ಪರಿಷ್ಕೃತ ದರ ನಾಳೆಯಿಂದ ಜಾರಿಗೆ ಬರಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಹೊಸೂರು-ಬನ್ನೇರುಘಟ್ಟ ರಸ್ತೆಯಲ್ಲಿ ನೀವು ಸಂಚರಿಸುವ ಬೈಕ್ಗಳಿಗೆ 20 ರೂ. ಟೋಲ್ ದರ, ಕಾರುಗಳಿಗೆ ಟೋಲ್ ದರ 45 ರೂ.ಗೆ ಹೆಚ್ಚಳ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದ್ರೆ ಇದೀಗ ಟೋಲ್ ದರ ಮುಂದೂಡಲಾಗಿದೆ.
ಇದನ್ನೂ ಓದಿ: Bengaluru Traffic: ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಸೋಷಿಯಲ್ ಮೀಡಿಯಾದಲ್ಲಿ ಪರಿಹಾರ! ನೀವೂ ಹೀಗೆ ಮಾಡಿ
ನೈಸ್ ರಸ್ತೆ ಟೋಲ್ ದರ:
ಹೊಸೂರು ಟು ಬನ್ನೇರುಘಟ್ಟ ರಸ್ತೆ: ದ್ವಿಚಕ್ರ: 20, ಕಾರು: 45, ಬಸ್: 125, ಟ್ರಕ್: 85, ಎಲ್ಸಿವಿ: 45, ಎಂಎವಿ: 90 ರೂ.
ಬನ್ನೇರುಘಟ್ಟ ಟು ಕನಕಪುರ ರಸ್ತೆ: ದ್ವಿಚಕ್ರ: 12, ಕಾರು: 35, ಬಸ್: 100, ಟ್ರಕ್: 65, ಎಲ್ಸಿವಿ: 35, ಎಂಎವಿ: 70 ರೂ.
ಕನಕಪುರ ರಸ್ತೆ ಟು CLOVER LEAF: ದ್ವಿಚಕ್ರ: 8, ಕಾರು: 25, ಬಸ್: 65, ಟ್ರಕ್: 40, ಎಲ್ಸಿವಿ: 25, ಎಂಎವಿ: 40 ರೂ.
ಕ್ಲವರ್ ಲೀಫ್ ಟು ಮೈಸೂರು ರಸ್ತೆ: ದ್ವಿಚಕ್ರ: 8, ಕಾರು: 20, ಬಸ್: 55, ಟ್ರಕ್: 35, ಎಲ್ಸಿವಿ: 25, ಎಂಎವಿ: 40 ರೂ.
ಮೈಸೂರು ರಸ್ತೆ ಟು ಮಾಗಡಿ ರಸ್ತೆ: ದ್ವಿಚಕ್ರ: 20, ಕಾರು: 45, ಬಸ್: 135, ಟ್ರಕ್: 90, ಎಲ್ಸಿವಿ: 55, ಎಂಎವಿ: 95 ರೂ.
ಮಾಗಡಿ ರಸ್ತೆ ಟು ತುಮಕೂರು ರಸ್ತೆ: ದ್ವಿಚಕ್ರ: 12, ಕಾರು: 40, ಬಸ್: 105, ಟ್ರಕ್: 70, ಎಲ್ಸಿವಿ: 40, ಎಂಎವಿ: 75 ರೂ.
ಲಿಂಕ್ ರಸ್ತೆ: ದ್ವಿಚಕ್ರ: 18, ಕಾರು: 50, ಬಸ್: 130, ಟ್ರಕ್: 90, ಎಲ್ಸಿವಿ: 50, ಎಂಎವಿ: 105 ರೂ.
ಇದನ್ನೂ ಓದಿ: Bengaluru Traffic Police: ಟ್ರಾಫಿಕ್ ಪೊಲೀಸರು ಈ ಸಂದರ್ಭಗಳಲ್ಲಿ ದಂಡ ಹಾಕುವಂತಿಲ್ಲ! ವಾಹನ ತಡೆಯುವಂತಿಲ್ಲ!
ಇಲ್ಲೆಲ್ಲ ಸಂಪರ್ಕ ಕಲ್ಪಿಸುತ್ತದೆ ನೈಸ್ ರಸ್ತೆ
NICE ರಸ್ತೆಯು ಬೆಂಗಳೂರು ಮತ್ತು ಮೈಸೂರನ್ನು ಸಂಪರ್ಕಿಸುವ 111 ಕಿ. ಮೀ ಉದ್ದದ ರಸ್ತೆಯಾಗಿದೆ. ಬೆಂಗಳೂರಿನೊಳಗೆ, ಇದು ಹೊಸೂರು ರಸ್ತೆಯಿಂದ ತುಮಕೂರು ರಸ್ತೆಗೆ ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆ ಮೂಲಕ 41 ಕಿಲೋಮೀಟರ್ಗಳವರೆಗೆ ಅರೆ-ಪೆರಿಫೆರಲ್ ರಸ್ತೆಯಲ್ಲಿ ಸಂಪರ್ಕ ಕಲ್ಪಿಸುತ್ತದೆ. ನೈಸ್ ರಸ್ತೆ, ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಎಕ್ಸ್ಪ್ರೆಸ್ವೇ ಮತ್ತು ಏರ್ಪೋರ್ಟ್ ರಸ್ತೆ ಬೆಂಗಳೂರಿನ ಮೂರು ಸುಂಕದ ಮಾರ್ಗಗಳಾಗಿವೆ.
ನಂದಿ ಎಕನಾಮಿಕ್ ಕಾರಿಡಾರ್ ಎಂಟರ್ಪ್ರೈಸಸ್ ಲಿಮಿಟೆಡ್ ಕಂಪನಿಯು ಕರ್ನಾಟಕ ಮಕ್ಕಳ ಪಕ್ಷ ಎಂಬ ತಮ್ಮದೇ ಆದ ಪಕ್ಷವನ್ನು ಸ್ಥಾಪಿಸಿದ ಉದ್ಯಮಿ ಅಶೋಕ್ ಖೇಣಿಯ ಅವರದ್ದಾಗಿದೆ. ಅಶೋಕ್ ಖೇಣಿ 2013 ರಿಂದ 2018 ರವರೆಗೆ ಬೀದರ್ ದಕ್ಷಿಣ ಶಾಸಕರಾಗಿಯೂ ಆಯ್ಕೆಯಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ