• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Janothsava: ಉಮೇಶ್ ಕತ್ತಿ ನಿಧನ ಹಿನ್ನೆಲೆ ಜನೋತ್ಸವ ಮುಂದೂಡಿಕೆ, ಭಾನುವಾರ ನಡೆಸಲು ತೀರ್ಮಾನ

Janothsava: ಉಮೇಶ್ ಕತ್ತಿ ನಿಧನ ಹಿನ್ನೆಲೆ ಜನೋತ್ಸವ ಮುಂದೂಡಿಕೆ, ಭಾನುವಾರ ನಡೆಸಲು ತೀರ್ಮಾನ

ಉಮೇಶ್ ಕತ್ತಿ  ನಿಧನ ಹಿನ್ನೆಲೆ ಜನೋತ್ಸವ ಮುಂದೂಡಿಕೆ

ಉಮೇಶ್ ಕತ್ತಿ ನಿಧನ ಹಿನ್ನೆಲೆ ಜನೋತ್ಸವ ಮುಂದೂಡಿಕೆ

ಉಮೇಶ್ ಕತ್ತಿ ನಿಧನ ಹಿನ್ನೆಲೆ ಸರ್ಕಾರದ ಜನೋತ್ಸವ ಕಾರ್ಯಕ್ರಮ ಮುಂದೂಡಿಕೆಯಾಗಿದೆ. ಭಾನುವಾರ ಜನೋತ್ಸವ ನಡೆಸಲು ಸರ್ಕಾರ ನಿರ್ಧರಿಸಿದೆ. ರಾಜ್ಯ ನಾಯಕರ ಸಲಹೆ ಮೇರೆಗೆ ಸಿಎಂ ಬಸವರಾಜ ಬೊಮ್ಮಾಯಿಯವರು ಮನಸ್ಸು ಬದಲಿಸಿ ಭಾನುವಾರಕ್ಕೆ ಮುಂದೂಡಿದರು.

  • Share this:

ಉಮೇಶ್ ಕತ್ತಿ (Umesh Katti) ನಿಧನ ಹಿನ್ನೆಲೆ ಸರ್ಕಾರದ ಜನೋತ್ಸವ (Janothsava) ಕಾರ್ಯಕ್ರಮ ಮುಂದೂಡಿಕೆಯಾಗಿದೆ (Postpone). ಭಾನುವಾರ (Sunday) ಜನೋತ್ಸವ ನಡೆಸಲು ಸರ್ಕಾರ ನಿರ್ಧರಿಸಿದೆ. ರಾಜ್ಯ ನಾಯಕರ ಸಲಹೆ ಮೇರೆಗೆ ಸಿಎಂ ಬಸವರಾಜ ಬೊಮ್ಮಾಯಿಯವರು (Basavaraj Bommai) ಮನಸ್ಸು ಬದಲಿಸಿದರು. ಮಾತ್ರವಲ್ಲದೇ ಬಿಜೆಪಿ ವರಿಷ್ಠರಿಂದಲೂ ಸಿಎಂ ಬೊಮ್ಮಾಯಿಗೆ ಸಂದೇಶ ಬಂದಿದ್ದು ಬಳಿಕ ಜನೋ ತ್ಸವವನ್ನು ಭಾನುವಾರಕ್ಕೆ ಮುಂದೂಡಲಾಯ್ತು. ನಾಳೆ ದೊಡ್ಡಬಳ್ಳಾಪುರದಲ್ಲಿ (Doddaballapura) ಜನೋತ್ಸವಕ್ಕೆ ನಿರ್ಧರಿಸಲಾಗಿತ್ತು. ಉಮೇಶ್ ಕತ್ತಿ ನಿಧನದ ಹಿನ್ನೆಲೆ ಶಾಸಕರು, ಸಚಿವರಿಂದಲೂ ಜನೋತ್ಸವ ಮುಂದೂಡಿಕೆಗೆ ಅಭಿಪ್ರಾಯ ಮೂಡಿಬಂದಿತ್ತು. ಉಮೇಶ್ ಕತ್ತಿನ ಸಾವಿನ ಸಂದರ್ಭದಲ್ಲಿ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದರೂ ಬೆಳಗ್ಗೆ ಜನೋತ್ಸವದ ಬಗ್ಗೆ ಸಿಎಂ ಬೊಮ್ಮಾಯಿ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ.


ಸರ್ಕಾರದ ಜನೋತ್ಸವ ಕಾರ್ಯಕ್ರಮ ಎರಡನೇ ಬಾರಿಗೆ ಮುಂದೂಡಿಕೆಯಾಗಿದೆ. ಇದಕ್ಕೂ ಮೊದಲು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಸಾವಿನ ಹಿನ್ನೆಲೆ ಜನೋತ್ಸವ ಮುಂದೂಡಿಕೆಯಾಗಿತ್ತು. ಇದೀಗ ಸಚಿವ ಉಮೇಶ್ ಕತ್ತಿಯವರ ನಿಧನ ಹಿನ್ನೆಲೆ ಮತ್ತೆ ಜನೋತ್ಸವ ಮುಂದೂಡಿಕೆಯಾಗಿದೆ.


ಸಿಎಂಗೆ ಬಂದ ಖಡಕ್ ಸಂದೇಶ
ಉಮೇಶ್ ಕತ್ತಿಯವರ ಸಾವಾಗಿದ್ದರೂ ಸರ್ಕಾರ ಮತ್ತು ಸಿಎಂ ಬಸವರಾಜ ಬೊಮ್ಮಾಯಿಯವರು ಜನೋತ್ಸವ ರದ್ದು ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಆದರೆ ಸಿಎಂ ಬೊಮ್ಮಾಯಿಯವರಿಗೆ ಹೈಕಮಾಂಡ್ನಿಂದ ಖಡಕ್ ಸಂದೇಶ ಬಂದಿದೆ. ಆಗ ಸಿಎಂ ತಮ್ಮ ನಿರ್ಧಾರ ಬದಲಿಸಿದರು.


ಇದನ್ನೂ ಓದಿ: ಉಮೇಶ್ ಕತ್ತಿ ನಿಧನ; ರಾಜ್ಯ ಬಿಜೆಪಿಯಲ್ಲೀಗ ಜನೋತ್ಸವದ ಜಂಜಾಟ; ಸಿದ್ದರಾಮಯ್ಯ ಆಕ್ರೋಶ


ಸಾವಿನ ಸಂದರ್ಭದಲ್ಲಿ ಸಂಭ್ರಮ ಸರಿಯಲ್ಲ- ಹೈಕಮಾಂಡ್
ಸಚಿವ ಉಮೇಶ್ ಕತ್ತಿಯವರ ಸಾವಿನ ಸಂದರ್ಭದಲ್ಲಿ ಸಂಭ್ರಮ ಸರಿಯಲ್ಲ ಎಂಬ ಸಂದೇಶವನ್ನು ಹೈಕಮಾಂಡ್ ರವಾನಿಸಿದೆ. ಹಾಗಾಗಿ ಸಿಎಂ ಬೊಮ್ಮಾಯಿ ಜನೋತ್ಸವವನ್ನು ಮುಂದೂಡಿದರು. ಭಾನುವಾರ ಸರ್ಕಾರದ ಜನೋತ್ಸವ ನಡೆಯಲಿದೆ.


ಎರಡನೇ ಬಾರಿಗೆ ಜನೋತ್ಸವ ಮುಂದೂಡಿಕೆ
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಹಿಂದೆ ದೊಡ್ಡಬಳ್ಳಾಪುರದಲ್ಲಿ ಜುಲೈ 28ರಂದು ಸಾಧನಾ ಸಮಾವೇಶ ‘ಜನೋತ್ಸವ’ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಲಾಗಿತ್ತು. ಆದರೆ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆ ಅಂದು ಮುಂದೂಡಿಕೆಯಾಗಿತ್ತು. ನಂತರ ಅದನ್ನು ಸೆಪ್ಟೆಂಬರ್ 8ರಂದು ನಡೆಸಲು ಪ್ಲ್ಯಾನ್ ಮಾಡಲಾಗಿತ್ತು.


ಸಚಿವ ಮುನಿರತ್ನ ಮಾತನಾಡಿ, ಉಮೇಶ್ ಕತ್ತಿಯವರು ನಮ್ಮನ್ನೆಲ್ಲಾ ಅಗಲಿದ್ದಾರೆ. ಬಹಳ ನೋವಿನ ಸಂಗತಿ ಇದು. ನಾವೆಲ್ಲಾ ಶೋಕದಲ್ಲಿದೀವಿ, ರಾಜ್ಯದಲ್ಲಿ ಶೋಕಾಚರಣೆ ಇದೆ. ಈ ಕಾರಣದಿಂದ ನಾಳೆ ಜನೋತ್ಸವ ನಡೆಯಲ್ಲ ಅಂತಾ ಹೇಳಿದ್ರು.


ಭಾನುವಾರ ಎಲ್ಲರೂ ಬನ್ನಿ- ಸಚಿವ ಮುನಿರತ್ನ
ಸೆಪ್ಟೆಂಬರ್ 8ರಂದು ಜನೋತ್ಸವ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಸದ್ಯ ಮುಂದೂಡಲಾಗಿದ್ದು, ಭಾನುವಾರ ಜನೋತ್ಸವ ನಡೆಸಲು ನಿರ್ಧರಿಸಿದ್ದೇವೆ. ಜನೋತ್ಸವಕ್ಕೆ ಬರುವ ಕಾರ್ಯಕರ್ತರು, ಮುಖಂಡರು ಭಾನುವಾರ ಬರಬೇಕಾಗಿ ವಿನಂತಿ ಮಾಡ್ಕೋತೇವೆ ಎಂದು ಸಚಿವ ಮುನಿರತ್ನ ತಿಳಿಸಿದ್ದಾರೆ.


ನಾಳೆಯೇ ಜನೋತ್ಸವ ಮಾಡಲು ಮನಸ್ಸು ಮಾಡಿದ್ದ ಸಿಎಂ
ಗೃಹಕಚೇರಿ ಕೃಷ್ಣದಿಂದ ಬೆಳಗಾವಿಗೆ ಹೊರಡುವಾಗಲೂ ನಾಳೆಯೇ ಜನೋತ್ಸವ ಮಾಡಲು ಸಿಎಂ ಬೊಮ್ಮಾಯಿ ಮನಸ್ಸು ಮಾಡಿದ್ದರು. ಆ ನಂತರ ಬೆಂಗಳೂರಿಂದ ಬೆಳಗಾವಿಗೆ ವಿಮಾನದಲ್ಲಿ ಹೋಗುವಾಗ ಸಚಿವರು ಸಿಎಂ ಬೊಮ್ಮಾಯಿಯವರಿಗೆ ಸಲಹೆ ನೀಡಿದ್ದಾರೆ. ಬಹುತೇಕ ಸಂಪುಟದ ಸಚಿವರು ಜನೋತ್ಸವ ಮುಂದೂಡಿಕೆಗೆ ಸಲಹೆ ಕೊಟ್ಟರು. ನಂತರ ಸಿಎಂ ಮುಂದೂಡಿ ಘೋಷಣೆ ಮಾಡಿದರು.


ಯಡಿಯೂರಪ್ಪರಿಂದಲೂ ಬೊಮ್ಮಾಯಿಗೆ ಸೂಚನೆ
ಸಚಿವರು ಮಾತ್ರವಲ್ಲದೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಬೊಮ್ಮಾಯಿಗೆ ಜನೋತ್ಸವ ಮುಂದೂಡಲು ಸೂಚನೆ ಕೊಟ್ಟರು. ಹೈಕಮಾಂಡ್, ಸಚಿವರು, ಯಡಿಯೂರಪ್ಪರ ಸಲಹೆಯಿಂದಾಗಿ ಸಿಎಂ ಬೊಮ್ಮಾಯಿ ಅಂತಿಮವಾಗಿ ಜನೋತ್ಸವ ಮುಂದೂಡುವ ನಿರ್ಧಾರ ಮಾಡಿದರು.


ಇದನ್ನೂ ಓದಿ:  ಉಮೇಶ್ ಕತ್ತಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

top videos


    ಜನೋತ್ಸವಕ್ಕೆ ಭರ್ಜರಿ ಸಿದ್ದತೆ ನಡೆಸಿದ್ದ ಸಚಿವರು
    ಎಲ್ಲರ ಸಲಹೆ ಹಿನ್ನೆಲೆ ಜನೋತ್ಸವ ಮುಂದೂಡಿಕೆ ಬಗ್ಗೆ ಉಸ್ತುವಾರಿ ಸಚಿವರಿಗೂ ಸಿಎಂ ಬೊಮ್ಮಾಯಿ ಕರೆ ಮಾಡಿ ತಿಳಿಸಿದರು. ನಾಳೆ ಜನೋತ್ಸವ ಮಾಡೋದು ಬೇಡ, ಭಾನುವಾರಕ್ಕೆ ಮಾಡಿಕೊಳ್ಳೋಣ ಎಂದು ಸೂಚನೆ ಕೊಟ್ಟರು. ಅದಾಗಲೇ ದೊಡ್ಡಬಳ್ಳಾಪುರದಲ್ಲಿ ಜನೋತ್ಸವಕ್ಕೆ ಸಚಿವರುಗಳು ಭರ್ಜರಿ ಸಿದ್ದತೆ ನಡೆಸಿದ್ದರು.

    First published: