News18 India World Cup 2019

ಅನುಮಾನಾಸ್ಪದ ಸಾವು ಪ್ರಕರಣ: ಹೂತಿದ್ದ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ

news18
Updated:September 1, 2018, 3:21 PM IST
ಅನುಮಾನಾಸ್ಪದ ಸಾವು ಪ್ರಕರಣ: ಹೂತಿದ್ದ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ
news18
Updated: September 1, 2018, 3:21 PM IST
-ವೀರೇಶ್​ ಜಿ. ಹೊಸೂರ್, ನ್ಯೂಸ್​ 18 ಕನ್ನಡ

ಚಿಕ್ಕಮಗಳೂರು,(ಸೆ.01): ಕಳೆದ ತಿಂಗಳು ಮೃತಪಟ್ಟಿದ್ದ ಚಿಕ್ಕಮಗಳೂರು ತಾಲೂಕಿನ‌ ಹಿರೇಕೊಳಲೆ ಗ್ರಾಮದ ವಿನೋದ್ ಕುಮಾರ್ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ.  ವಿನೋದ್ ಪತ್ನಿ‌ ರಂಗಮ್ಮ ನನ್ನ ಗಂಡನ ಸಾವು ಸಹಜ ಸಾವು ಅಲ್ಲ ಇದೊಂದು ಕೊಲೆ ಎಂದು ಎಸ್ಪಿ ಗೆ ದೂರು ನೀಡಿದ ಹಿನ್ನಲೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಹೊರತೆಗೆಯಲಾಗಿದೆ.

ಆಗಸ್ಟ್ 12 ರಂದು ಮೃತ ವಿನಯ್ ಹಿರೇಕೊಳಲೆ ಗ್ರಾಮದ ಸಮೀಪ‌ ತೋಟವೊಂದರಲ್ಲಿ ಅರೆಪ್ರಜ್ಞಾ ಸ್ಥಿತಿ ಬಿದ್ದಿದ್ದರು. ಈ ವೇಳೆ ವಿನೋದ್ ತಾಯಿ‌ ಹಾಗೂ ಪತ್ನಿ ಮನೆಗೆ ಕರೆದುಕೊಂಡು ಬಂದಿದ್ದರು. ಆದರೆ ತಲೆಗೆ ಪೆಟ್ಟುಬಿದ್ದು ರಕ್ತಸ್ರಾವವಾಗಿದ್ದರಿಂದ ವಿನಯ್ ಸಾವನ್ನಪ್ಪಿದ್ದರು.

ಆದರೆ ಮರಣೋತ್ತರ ಪರೀಕ್ಷೆ ನಡೆಸದೇ ಶವಸಂಸ್ಕಾರ ನಡೆಸಲಾಗಿತ್ತು. ವಿನಯ್ ಸಾವನ್ನಪ್ಪಿದ ದಿನ ತಾನು ಕೆಲಸ ಮಾಡುತ್ತಿದ್ದ ತೋಟದ ಮಾಲೀಕರ ಜೊತೆ ಸಂಬಳದ ವಿಷಯವಾಗಿ ಜಗಳವಾಗಿದೆ ಎಂಬ ವಿಷಯ ತಡವಾಗಿ ಪತ್ನಿ ರಂಗಮ್ಮ ಗೆ ತಿಳಿದಿದೆ. ಹಾಗಾಗಿ ತೋಟದ ಮಾಲೀಕ ತೀರ್ಥೇಗೌಡ ವಿರುದ್ಧ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ಶವಸಂಸ್ಕಾರ ಮಾಡಲಾಗಿದ್ದ ಮೃತದೇಹವನ್ನು ಹೊರತಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ವೇಳೆ ಶವಸಂಸ್ಕಾರ ಮಾಡಿದ್ದ ಮೃತದೇಹ ಹೊರತಗೆದಾಗ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ವರದಿ ಬಂದ ನಂತರವೇ ಇದು ಕೊಲೆಯೇ ಅಥವಾ ಸಹಜ ಸಾವೇ ಎಂಬುದು ಬಯಲಿಗೆ ಬರಲಿದೆ.
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...