ಮಲ್ಲಿಕಾರ್ಜುನ ಖರ್ಗೆಗೆ ಒಲಿಯಲಿದೆಯಾ ಸಿಎಂ ಪಟ್ಟ?; ಸಾಧ್ಯತೆಯನ್ನು ಮುಂದಿಟ್ಟಿದೆ ಹೆಚ್​.ಡಿ. ದೇವೇಗೌಡರ ಈ ನಡೆ

ಸಿದ್ದರಾಮಯ್ಯ ಸಿಎಂ ಆಗೋದಾದ್ರೆ ನಾವು ಬೆಂಬಲ ವಾಪಾಸ್ ತಗೋತೀವಿ. ಆರಂಭದಿಂದಲೂ ಇವೆಲ್ಲಾ ಆಗ್ತಿರೋದೆ ಅವರಿಂದ, ಅವರ ಶಿಷ್ಯಂದಿರೇ ರಾಜೀನಾಮೆ ನೀಡಿದ್ದಾರೆ. ಶಿಷ್ಯರ ಮೂಲಕ ರಾಜೀನಾಮೆ ನೀಡಿಸಿ ಹಿಂದೆಯಿಂದ ಹೀಗೆ ಹೇಳಿ ಕಳುಹಿಸುತ್ತಿದ್ದಾರೆ. ನಾಲ್ಕಾರು ಶಾಸಕರು ಹೇಳಿದ ತಕ್ಷಣ ಅವರಿಗೆ ಸಿಎಂ ಸ್ಥಾನ ನೀಡಲೂ ಸಾಧ್ಯವಿಲ್ಲ ಎಂದು ದೇವೇಗೌಡ ಡಿಕೆಶಿ ಬಳಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

MAshok Kumar | news18
Updated:July 7, 2019, 2:40 PM IST
ಮಲ್ಲಿಕಾರ್ಜುನ ಖರ್ಗೆಗೆ ಒಲಿಯಲಿದೆಯಾ ಸಿಎಂ ಪಟ್ಟ?; ಸಾಧ್ಯತೆಯನ್ನು ಮುಂದಿಟ್ಟಿದೆ ಹೆಚ್​.ಡಿ. ದೇವೇಗೌಡರ ಈ ನಡೆ
ಹೆಚ್​.ಡಿ. ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ
  • News18
  • Last Updated: July 7, 2019, 2:40 PM IST
  • Share this:
ಬೆಂಗಳೂರು (ಜುಲೈ.07); ರಾಜೀನಾಮೆ ಮೂಲಕ ಕೈ ಶಾಸಕರು ಈಗಾಗಲೇ ಮೈತ್ರಿ ಸರ್ಕಾರದ ಬೆವರಿಳಿಸಿದ್ದಾರೆ. ಅಲ್ಲದೆ ಮತ್ತೊಮ್ಮೆ ಸಿದ್ದರಾಮ್ಯನವರೇ ಸಿಎಂ ಆಗಲಿ ಎಂಬ ಕೂಗು ಸಹ ಅತೃಪ್ತರಿಂದ ಜೋರಾಗಿ ಕೇಳಿ ಬರುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗೋದಾದ್ರೆ ಜೆಡಿಎಸ್ ಬೆಂಬಲ ನೀಡೋದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಈಗಾಗಲೇ ಸಿಎಂ ಸ್ಥಾನವನ್ನು ಬಿಟ್ಟುಕೊಡುವುದೂ ಸೇರಿದಂತೆ ಕಾಂಗ್ರೆಸ್​ ಪಕ್ಷದ ಎಲ್ಲಾ ನಿರ್ಧಾರಕ್ಕೂ ಜೆಡಿಎಸ್ ಸಿದ್ಧವಿರುವುದಾಗಿ ಈಗಾಗಲೇ ಪಕ್ಷ ತಿಳಿಸಿದೆ. ಹೀಗಾಗಿ ಭಾನುವಾರ ಮಧ್ಯಾಹ್ನದ ಹೊತ್ತಿಗೆ ದೇವೇಗೌಡ ಅವರ ಬಳಿ ದೂರವಾಣಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ಕಾಂಗ್ರೆಸ್​ ಕೆಲ ಅತೃಪ್ತ ಶಾಸಕರು ಸಿದ್ದರಾಮಯ್ಯ ಸಿಎಂ ಆಗಲಿ ಎನ್ನುತ್ತಿದ್ದಾರೆ ಎಂಬ ವಿಷಯವನ್ನು ಪ್ರಸ್ತಾಪಿಸಿದ್ದರು. ಆದರೆ, ಡಿಕೆಶಿ ಅವರ ಈ ಪ್ರಸ್ತಾಪಕ್ಕೆ ದೇವೇಗೌಡರು ಕೆಂಡಾಮಂಡಲರಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಸರ್ಕಾರ ಪತನದ ಹಿಂದೆ ಸಿದ್ದರಾಮಯ್ಯನವರ ಷಡ್ಯಂತ್ರ ಇದೆ; ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಆರೋಪ

ಈ ಕುರಿತು ಡಿಕೆಶಿ ಬಳಿ ಖಡಕ್ ಆಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ದೇವೇಗೌಡ, “ಸಿದ್ದರಾಮಯ್ಯ ಸಿಎಂ ಆಗೋದಾದ್ರೆ ನಾವು ಬೆಂಬಲ ವಾಪಾಸ್ ತಗೋತೀವಿ. ಆರಂಭದಿಂದಲೂ ಇವೆಲ್ಲಾ ಆಗ್ತಿರೋದೆ ಅವರಿಂದ, ಅವರ ಶಿಷ್ಯಂದಿರೇ ರಾಜೀನಾಮೆ ನೀಡಿದ್ದಾರೆ. ಶಿಷ್ಯರ ಮೂಲಕ ರಾಜೀನಾಮೆ ನೀಡಿಸಿ ಹಿಂದೆಯಿಂದ ಹೀಗೆ ಹೇಳಿ ಕಳುಹಿಸುತ್ತಿದ್ದಾರೆ. ನಮ್ಮವರು ಯಾರೂ ಇದಕ್ಕೆ ಒಪ್ಪಲ್ಲ. ನಾಲ್ಕಾರು ಶಾಸಕರು ಹೇಳಿದ ತಕ್ಷಣ ಅವರಿಗೆ ಸಿಎಂ ಸ್ಥಾನ ನೀಡಲೂ ಸಾಧ್ಯವಿಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ಸಿಎಂ ಸ್ಥಾನವನ್ನು ಬಿಟ್ಟುಕೊಡುವ ಕುರಿತು ಸಹ ಮಾಹಿತಿ ನೀಡಿರುವ ದೇವೇಗೌಡ, “ಸಿಎಂ ಸ್ಥಾನವನ್ನು ಕಾಂಗ್ರೆಸ್​ಗೆ ಬಿಟ್ಟುಕೊಡಲು ಜೆಡಿಎಸ್ ಸಿದ್ಧವಿದೆ. ಆದರೆ, ಸಿದ್ದರಾಮಯ್ಯನವರನ್ನು ಬಿಟ್ಟು ಬೇರೆಯವರು ಸಿಎಂ ಆಗಲಿ. ಖರ್ಗೆ ಸಿಎಂ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಹೀಗಾಗಿ ಖರ್ಗೆ ಆಗೋದಾದ್ರೆ ನೋಡೋಣ ಖರ್ಗೆ ಅವರ ಬಳಿ ಮಾತಾಡಿ ಎಂದು ದೇವೇಗೌಡ ತಿಳಿಸಿದ್ದಾರೆ  ಎಂದು ತಿಳಿದುಬಂದಿದೆ.

ಹೀಗಾಗಿ ರಾಜ್ಯ ರಾಜಕೀಯದ ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ : ಮೈತ್ರಿ ಸರ್ಕಾರವನ್ನು ಕೆಡವುವ ಹಿಂದೆ ಕೇಂದ್ರದ ಕೈವಾಡ ಇದೆ; ಮಲ್ಲಿಕಾರ್ಜುನ ಖರ್ಗೆ ಆರೋಪ
First published: July 7, 2019, 2:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading