• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಧಾರವಾಡ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಶೇ.15ಕ್ಕೆ ಏರಿಕೆಯಾಗಿದೆ; ಆಕ್ಸಿಜನ್-ಬೆಡ್ ಸಮಸ್ಯೆ ಇಲ್ಲ; ಸಚಿವ ಜಗದೀಶ್​ ಶೆಟ್ಟರ್​

ಧಾರವಾಡ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಶೇ.15ಕ್ಕೆ ಏರಿಕೆಯಾಗಿದೆ; ಆಕ್ಸಿಜನ್-ಬೆಡ್ ಸಮಸ್ಯೆ ಇಲ್ಲ; ಸಚಿವ ಜಗದೀಶ್​ ಶೆಟ್ಟರ್​

ಜಗದೀಶ್ ಶೆಟ್ಟರ್.

ಜಗದೀಶ್ ಶೆಟ್ಟರ್.

ಕೊರೋನಾ ಎರಡನೇ ಅಲೆ ಅಬ್ಬರದಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. 3489 ಕೋವಿಡ್ ಪ್ರಕರಣಗಳಿವೆ. ಈ ಪೈಕಿ 2486  ಜನರು ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 228  ಅನ್ಯ ಜಿಲ್ಲೆಯವರಿದ್ದಾರೆ. ಅನ್ಯ ಜಿಲ್ಲೆ-ರಾಜ್ಯದಿಂದ ಬಂದವರ ಮೇಲೆ ಜಿಲ್ಲಾಡಳಿತ ನಿಗಾ ವಹಿಸಿದೆ ಎಂದರು.

ಮುಂದೆ ಓದಿ ...
  • Share this:

ಧಾರವಾಡ(ಏ.30): ನಿತ್ಯವೂ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸೋಂಕು ಹತೋಟಿಗೆ ಹಾಗೂ ನಿರ್ಮೂಲನೆಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಆಕ್ಸಿಜನ್, ಬೆಡ್, ವೆಲ್ಟಿಲೇಟರ್ ಸಮಸ್ಯೆ ಇಲ್ಲ. ಆದರೆ ಸೋಂಕು ಹತೋಟಿಗೆ ಮೂರು ವಾರ ಕರ್ಫ್ಯೂ ಅಗತ್ಯದ ಬಗ್ಗೆ ತಜ್ಞರ ಸಮಿತಿ ವರದಿ ನೀಡಿದೆ. ಪ್ರತಿ ನಿತ್ಯವೂ1300 ಜನರನ್ನು ಕೋವಿಡ್ ತಪಾಸಣೆ ಒಳಪಡಿಸುತ್ತಿದೆ. ಇದೀಗ ಸೋಂಕು ಹತೋಟಿಗೆ ಸಾರ್ವಜನಿಕರ ಸಹಕಾರ ಅಗತ್ಯವಿದೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.


ಧಾರವಾಡದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಖ್ಯಮಂತ್ರಿಗಳ ವಿಡಿಯೋ ಸಂವಾದದ ನಂತರ ಅಧಿಕಾರಿಗಳ ಸಭೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಕಿಮ್ಸ್​​​ನಲ್ಲಿ 42 ಕೆಎಲ್ ಆಕ್ಸಿಜನ್  ಸಂಗ್ರಹವಿದೆ. ಅದರಂತೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲೂ ಕೂಡ 6 ಕೆಎಲ್ ಆಕ್ಸಿಜನ್ ಸಂಗ್ರಹವಿದೆ ಎಂದು  ತಿಳಿಸಿದರು.


ಜಿಲ್ಲಾಸ್ಪತ್ರೆ ಹಾಗೂ ಕಿಮ್ಸ್ ಸೇರಿ ವಿವಿಧ ಆಸ್ಪತ್ರೆಲ್ಲಿ ಎರಡು ಸಾವಿರಕ್ಕೂ ಅಧಿಕ ಬೆಡ್‌ಗಳಿವೆ. ಇನ್ನೂ 1074 ಬೆಡ್‌ಗಳು ಖಾಲಿ ಇವೆ.  397 ಆಕ್ಸಿಜನ್ ಬೆಡ್, 80 ಐಸಿಯು ಬೆಡ್‌ಗಳಿವೆ. ಜೊತೆಗೆ 104 ಕ್ಕೂ ಹೆಚ್ಚು ವೆಲ್ಟಿಲೇಟರ್ ಇವೆ. ಜಿಲ್ಲೆಯಲ್ಲಿ ಶೇ.11 ರಷ್ಟು ಪಾಸಿಟಿವಿಟಿ ರೇಟ್ ಇದ್ದು, ಬುಧವಾರ ಶೇ.15 ಕ್ಕೆ ಏರಿದೆ ಎಂದರು.


COVID-19 Vaccine: ದೆಹಲಿಯಲ್ಲಿ ವ್ಯಾಕ್ಸಿನ್​​ ಕೊರತೆ; ನಾಳೆಯಿಂದ ಶುರುವಾಗಲ್ಲ ಲಸಿಕೆ ನೀಡುವ ಅಭಿಯಾನ; ಸಿಎಂ ಕೇಜ್ರಿವಾಲ್


ಜಿಲ್ಲೆಯ ಯಾವುದೇ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಇಲ್ಲ. 740 ರೆಮಿಸ್ಡಿಯರ್ ಔಷಧ ಲಭ್ಯವಿದೆ. ಕೊರತೆ ಬಗ್ಗೆ ಕೇವಲ ಊಹಾಪೋಹ ಸೃಷ್ಠಿಸಲಾಗುತ್ತಿದೆ. ಕೋವಿಡ್ ಬಗ್ಗೆ ಯಾವುದೇ ರೀತಿಯ ಸಮಸ್ಯೆಗಳಿಲ್ಲ. ಬೇರೆ ಜಿಲ್ಲೆಯಿಂದ ಬಂದವರಿಗೆ ಪರೀಕ್ಷೆ ನಡೆಸಿ, ಒಂದೆರಡು ದಿನದಲ್ಲಿ ವರದಿ ನೀಡುತ್ತಿದೆ ಎಂದರು.


ಕಳೆದ ಬಾರಿ ಕೊರೋನಾದ ಬಗ್ಗೆ ಅರಿವೇ ಇರಲಿಲ್ಲ. ಹೀಗಾಗಿ ಕೆಲಸ-ಕಾರ್ಯದಲ್ಲಿ ವಿಳಂಬವಾಗಿತ್ತು. ಈಗ ಎರಡನೇ ಅಲೆಯೂ ಇಷ್ಟೊಂದು ಪ್ರಮಾಣದಲ್ಲಿ ಪಸರಿಸುತ್ತದೆ ಎಂಬುವುದು ಗೊತ್ತಿರಲಿಲ್ಲ. ಆದರೆ, ಪ್ರಸಕ್ತ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರ ನೇತೃತ್ವದಲ್ಲಿ ಉತ್ತಮ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.


ಕೊರೋನಾ ಎರಡನೇ ಅಲೆ ಅಬ್ಬರದಿಂದ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. 3489 ಕೋವಿಡ್ ಪ್ರಕರಣಗಳಿವೆ. ಈ ಪೈಕಿ 2486  ಜನರು ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 228  ಅನ್ಯ ಜಿಲ್ಲೆಯವರಿದ್ದಾರೆ. ಅನ್ಯ ಜಿಲ್ಲೆ-ರಾಜ್ಯದಿಂದ ಬಂದವರ ಮೇಲೆ ಜಿಲ್ಲಾಡಳಿತ ನಿಗಾ ವಹಿಸಿದೆ ಎಂದರು.


ಜಿಲ್ಲೆಯಲ್ಲಿ 1212 ಸೋಂಕಿತರ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಹತೋಟಿಗೆ ಮೂರು   ವಾರ ಕರ್ಫ್ಯೂ ಅಗತ್ಯದ ಬಗ್ಗೆ ತಜ್ಞರ ಸಮಿತಿ ವರದಿ ನೀಡಿದೆ. ಪ್ರತಿ ನಿತ್ಯವೂ 370 ಜನರನ್ನು ಕೋವಿಡ್ ತಪಾಸಣೆ ಒಳಪಡಿಸುತ್ತಿದೆ. ಇದೀಗ ಸೋಂಕು ಹತೋಟಿಗೆ ಸಾರ್ವಜನಿಕರ ಸಹಕಾರ ಅಗತ್ಯವಿದೆಂದು ಹೇಳಿದರು.

Published by:Latha CG
First published: