• Home
  • »
  • News
  • »
  • state
  • »
  • Building Collapse: ಭಾರೀ ಮಳೆಗೆ ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನ ಕಟ್ಟಡ ಕುಸಿತ! ಕಾಲೇಜಿಗೆ ರಜೆ ಘೋಷಣೆ

Building Collapse: ಭಾರೀ ಮಳೆಗೆ ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನ ಕಟ್ಟಡ ಕುಸಿತ! ಕಾಲೇಜಿಗೆ ರಜೆ ಘೋಷಣೆ

ಕಾಲೇಜು ಕಟ್ಟಡ ಕುಸಿತ

ಕಾಲೇಜು ಕಟ್ಟಡ ಕುಸಿತ

ಮೈಸೂರಿನ ಮಹಾರಾಣಿ ಕಾಲೇಜು ಕಟ್ಟಡ ತುಂಬಾ ಹಳೆಯ ಕಟ್ಟಡವಾಗಿದೆ. ಕಟ್ಟಡದ ಉಳಿದ ಭಾಗಗಳ ಬಗ್ಗೆ ಆಡಳಿತ ಮಂಡಳಿಯವರಲ್ಲಿ ಆತಂಕ ಸೃಷ್ಟಿಯಾಗಿದೆ.

  • News18 Kannada
  • Last Updated :
  • Karnataka, India
  • Share this:

ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದೆ (Heavy Rain). ಮಳೆಯ ಆರ್ಭಟಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಹಲವೆಡೆ ವರುಣ ಅವಾಂತರ ಸೃಷ್ಟಿಸಿದ್ದಾನೆ. ಅನೇಕ ಕಡೆಗಳಲ್ಲಿ ಕಟ್ಟಡಗಳು ಕುಸಿದು (Building Collapse) ಬಿದ್ದಿದೆ. ಮತ್ತೊಂದೆಡೆ ರಸ್ತೆಗಳು ಬಿರುಕುಬಿಟ್ಟಿವೆ. ಇತ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ (Mysuru) ಮಳೆಯ ಆರ್ಭಟ ಜೋರಾಗಿದೆ. ಮಳೆಯ ರೌದ್ರಾವತಾರಕ್ಕೆ ಕಾಲೇಜು ಕಟ್ಟಡವೇ (College Building) ಕುಸಿದು ಬಿದ್ದಿದೆ. ಮೈಸೂರಿನ ಝಾನ್ಸಿ ಲಕ್ಷ್ಮಿ ಬಾಯಿ ರಸ್ತೆಯಲ್ಲಿರುವ ಶತಮಾನದಷ್ಟು ಹಳೆಯದಾದ ಮಹಾರಾಣಿ ವಿಜ್ಞಾನ ಕಾಲೇಜಿನ (Maharani Science College) ಕಟ್ಟಡದ ಒಂದು ಭಾಗವು ಇಂದು ಬೆಳಿಗ್ಗೆ ಕುಸಿದಿದೆ.


ಕ್ಯಾಂಪಸ್​ ಕಟ್ಟಡ ಕುಸಿತದಿಂದ ಆತಂಕ


ದಿಡೀರ್​ ಎಂದು ಕಟ್ಟಡ ಕುಸಿದಿದ್ದು ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿಗಳಲ್ಲಿ ಆತಂಕ ಮನೆ ಮಾಡಿದೆ. ಕುಸಿದಿರೋ ಕಾಲೇಜು ಕಟ್ಟಡದ ಒಂದು ಭಾಗದಲ್ಲಿ ಮೂರು ಪ್ರಯೋಗಾಲಯಗಳು ಸಂಪೂರ್ಣ ಕುಸಿದಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಜೊತೆಗೆ ಯಾರು  ಗಾಯಗೊಂಡಿಲ್ಲ. ಆದ್ರೆ ಘಟನೆಯಿಂದ ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.


2 ದಿನಗಳ ಕಾಲ ಕಾಲೇಜು ರಜೆ ಘೋಷಣೆ


ಮೈಸೂರಿನ ಮಹಾರಾಣಿ ಕಾಲೇಜು ಕಟ್ಟಡ ತುಂಬಾ ಹಳೆಯ ಕಟ್ಟಡವಾಗಿದೆ. ಕಟ್ಟಡದ ಉಳಿದ ಭಾಗಗಳ ಬಗ್ಗೆ ಆಡಳಿತ ಮಂಡಳಿಯವರಲ್ಲಿ ಆತಂಕ ಸೃಷ್ಟಿಯಾಗಿದೆ. ಈ ನಡುವೆ ಕಾಲೇಜು ಆಡಳಿತ ಮಂಡಳಿ 2 ದಿನಗಳ ಕಾಲ ಕಾಲೇಜಿಗೆ ರಜೆ ಘೋಷಿಸಿದೆ. ಪಾರಂಪರಿಕ ಕಟ್ಟಡದ ದುರಸ್ತಿ ಮತ್ತು ಸಂರಕ್ಷಣೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ₹2 ಕೋಟಿ ಬಿಡುಗಡೆಯಾಗಿದೆ. ಅಕ್ಟೋಬರ್ 22 ರಂದು ಭೂಮಿಪೂಜೆ ಸಮಾರಂಭ ಆಯೋಜಿಸಲಾಗಿತ್ತು.


ಇದನ್ನೂ ಓದಿ: Bengaluru: ಒಂದೇ ಫ್ಯಾಮಿಲಿಯ ಮೂವರು ಆತ್ಮಹತ್ಯೆ; ಸೀಮೆಎಣ್ಣೆ ಸುರಿದುಕೊಂಡು ಸಾವಿಗೆ ಶರಣಾದ ಕುಟುಂಬ


ಬಿರುಕು ನೋಡಿ ಎಚ್ಚೆತ್ತುಕೊಂಡ ಪ್ರಿನ್ಸಿಪಾಲ್​


ಈ  ಬಗ್ಗೆ ಮಾತನಾಡಿದ ಕಾಲೇಜು ಪ್ರಾಂಶುಪಾಲ ಡಾ. ಡಿ.ರವಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಆಗುತ್ತಿದೆ. ಹಳೆಯ ಕಟ್ಟಡವಾಗಿರುವ ಹಿನ್ನೆಲೆ ಒಂದು ಭಾಗವು ಬಿರುಕು ಬಿಟ್ಟಿದ್ದರಿಂದ ಕಟ್ಟಡ ಕುಸಿದಿದೆ ಎಂದು ಹೇಳಿದ್ರು. ಬೆಳಿಗ್ಗೆ 10.25ರ ಕಟ್ಟಡದಲ್ಲಿ ಬಿರುಕು ನೋಡಿದೆ. ಮೊದಲ ಮಹಡಿ ಪರಿಶೀಲಿಸಿದ ನಂತರ, ಪ್ರಯೋಗಾಲಯಗಳನ್ನು ಮುಚ್ಚಲಾಯ್ತು. ಬಳಿಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ವಿಭಾಗಕ್ಕೆ ಪ್ರವೇಶ ನಿರ್ಬಂಧಿಸಲು ನಾನು ಅಟೆಂಡರ್‌ಗಳಿಗೆ ಸೂಚಿಸಿದೆ. ಬಳಿಕ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಸೂಚಿಸಲಾಗಿತ್ತು ಎಂದು ಹೇಳಿದ್ರು.


ಸ್ಥಳಕ್ಕೆ ಅಗ್ನಿಶಾಮಕ ದಳ, ರಕ್ಷಣಾ ಸಿಬ್ಬಂದಿ ಭೇಟಿ


ಘಟನಾ ಸ್ಥಳಕ್ಕೆ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಭೇಟಿ ನೀಡಿದ್ದಾರೆ. ಅವಶೇಷಗಳು ಮತ್ತು ಕುಸಿದ ಕಟ್ಟಡ ಪರಿಶೀಲಿಸಿದ ನಂತರ, ಒಳಗೆ ಯಾರೂ ಇಲ್ಲ ಎಂದು ತಿಳಿಸಿದ್ದಾರೆ.


ಪ್ರಯೋಗಾಲಯ ಶಿಫ್ಟ್ ಮಾಡಲು ಚಿಂತನೆ


ಕೆಲವು ತರಗತಿಗಳು ಮತ್ತು ಪ್ರಯೋಗಾಲಯಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು. ಇದರಲ್ಲಿ 25 ತರಗತಿ ಕೊಠಡಿಗಳಿವೆ. ವಿಜ್ಞಾನ ವಿಭಾಗದ ಪ್ರತಿ ವಿಭಾಗವು 2 ರಿಂದ 3 ಪ್ರಯೋಗಾಲಯಗಳನ್ನು ಹೊಂದಿದ್ದು, ಇದರಿಂದ ಪ್ರಯೋಗಾಲಯದ ಕಾರ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಡಾ.ರವಿ ಹೇಳಿದರು.


ಕಟ್ಟಡ ಸುರಕ್ಷತೆ ಮೌಲ್ಯಮಾಪನ ನಡೆಯಲಿ


ಆದರೆ ಕಾಲೇಜು ಅಧಿಕಾರಿಗಳು ಈಗ ಆವರಣದಲ್ಲಿ ತರಗತಿಗಳನ್ನು ಪುನರಾರಂಭಿಸುವ ಮೊದಲು ಸಂಪೂರ್ಣ ಕಟ್ಟಡದ ಸುರಕ್ಷತೆಯನ್ನು ಮೌಲ್ಯಮಾಪನ ಮಾಡಲು ಶಿಫಾರಸು ಮಾಡಲಾಗಿದೆ.


ಇದನ್ನೂ ಓದಿ: Honour Killing: ಇಬ್ಬರನ್ನ ಒಂದು ಮಾಡ್ತೀವಿ ಬನ್ನಿ ಅಂತ ಕರೆಸಿ ಕೊಲೆ; ಬಾಗಲಕೋಟೆಯಲ್ಲಿ ಮರ್ಯಾದಾ ಹತ್ಯೆ


ಶಾಸಕ ಎಲ್.ನಾಗೇಂದ್ರ, ಅಧಿಕಾರಿಗಳು ಭೇಟಿ


ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ 200 ಬೋಧಕ ಸಿಬ್ಬಂದಿ ಮತ್ತು 50 ಬೋಧಕೇತರ ಸಿಬ್ಬಂದಿಯನ್ನು ಹೊರತುಪಡಿಸಿ 3,850 ವಿದ್ಯಾರ್ಥಿಗಳು ಇದ್ದಾರೆ. ಘಟನಾ ಸ್ಥಳಕ್ಕೆ ಶಾಸಕ ಎಲ್.ನಾಗೇಂದ್ರ ಹಾಗೂ ಕೆಲ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Published by:ಪಾವನ ಎಚ್ ಎಸ್
First published: