news18-kannada Updated:January 21, 2021, 7:27 PM IST
ಗೃಹ ಸಚಿವ ಬಸವರಾಜ ಬೊಮ್ಮಾಯಿ
ಬೆಂಗಳೂರು; ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ ನಡೆಯಿತು. ಸಭೆಯ ಬಳಿಕ ಸಚಿವರಾದ ಬಸವರಾಜ್ ಬೊಮ್ಮಾಯಿ, ಡಿಸಿಎಂ ಲಕ್ಷ್ಮಣ ಸವದಿ, ಆರ್ ಅಶೋಕ್, ವಿ ಸೋಮಣ್ಣ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಕೈಮಗ್ಗ ಅಭಿವೃದ್ದಿ ನಿಗಮಕ್ಕೆ 31 ಕೋಟಿ ದುಡಿಮೆ ಬಂಡವಾಳ ಸಾಲ ಪಡೆಯಲು ಬ್ಯಾಂಕ್ ಗ್ಯಾರಂಟಿ ಒಂದು ವರ್ಷ ಮುಂದುವರಿಕೆ ಮಾಡಲಾಗಿದೆ. ಸರ್ಕಾರಿ ನೌಕರರ ಅನುಕಂಪ ಆಧಾರಿತ ನೌಕರಿ ನೀಡಲು ನಿಯಮಾವಳಿ ತಿದ್ದುಪಡಿ ವಿವಾಹಿತ ಹೆಣ್ಣುಮಕ್ಕಳಿಗೂ ಅನುಕಂಪ ಆಧಾರಿತ ನೌಕರಿ ಕೊಡಲು ನಿಯಮ ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದರು.
224 ತಾಲೂಕು ಪಂಚಾಯ್ತಿ ಕಚೇರಿಗಳು 5 ಪ್ರಾದೇಶಿಕ ಆಯುಕ್ತರ ಕಚೇರಿಗಳಿಗೆ ವಿಡಿಯೋ ಕಾನ್ಫರೆನ್ಸ್ ಸೌಲಭ್ಯ ನೀಡಲು 35 ಕೋಟಿ ರೂ.ಬಿಡುಗಡೆ, ಸ್ವಚ್ಛ ಭಾರತ ಮಿಷನ್ ಅಡಿ 5.50 ಲಕ್ಷ ಮನೆಗಳಿಗೆ ಮುಂದಿನ ಮೂರು ವರ್ಷದಲ್ಲಿ ಶೌಚಾಲಯ ನಿರ್ಮಾಣ ಮಾಡಲು ಅನುಮತಿ ನೀಡಲಾಗಿದೆ. ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಬೆನಕೇನಹಳ್ಳಿ ಏತ ನೀರಾವರಿ ಯೋಜನೆಗೆ 48 ಕೋಟಿ ಅನುದಾನ ನೀಡಲು ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಇದನ್ನು ಓದಿ; ಖಾತೆ ಹಂಚಿಕೆಯಲ್ಲಿ ನನ್ನ ಹಸ್ತಕ್ಷೇಪವಿಲ್ಲ, ಆರೋಪಗಳೆಲ್ಲವೂ ಶುದ್ಧ ಸುಳ್ಳು ಎಂದ ವಿಜಯೇಂದ್ರ
ಸಚಿವ ಸಂಪುಟ ವಿಸ್ತರಣೆ ನಂತರ ಇಂದು ಖಾತೆಗಳ ಹಂಚಿಕೆ ಆಗಿದೆ. ಕೆಲವು ಖಾತೆಗಳು ಬದಲಾವಣೆಯಾಗಿದೆ. ಸಿಎಂ ನಿನ್ನೆ ಮತ್ತು ಇಂದು ತುಮಕೂರಿಗೆ ಹೋಗಿ ಬಂದ ನಂತರ ಸಚಿವರೊಂದಿಗೆ ಮಾತನಾಡಿದ್ದಾರೆ. ಅವರನ್ನು ಸಮಾಧಾನ ಪಡಿಸಿದ್ದಾರೆ. ಇಂದು ಸಚಿವ ಸಂಪುಟಕ್ಕೆ ಗೈರು ಹಾಜರಾದವರು ಪೂರ್ವಾನುಮತಿ ಪಡೆದಿದ್ದರು. ಎಲ್ಲವನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ನಮ್ಮ ಮುಖ್ಯಮಂತ್ರಿಯವರಿಗೆ ಇದೆ. ಎಲ್ಲವೂ ಸುಗಮವಾಗಿದೆ. ಹಿಂದೆಯೂ ಇಂತಹ ಸಂದರ್ಭಗಳಾಗಿವೆ. ಆಗಲೂ ಸಹ ಸಿಎಂ ಕರೆಸಿ ಮಾತುಕತೆ ನಡೆಸಿದ್ದರು. ಈಗಲೂ ಮಾತುಕತೆ ಆಡಿ ಸರಿ ಮಾಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಖಾತೆಗಳ ಬದಲಾವಣೆ ಆಗುತ್ತದೆ. ರಾಜಕಾರಣದಲ್ಲಿ ಮಾತುಕತೆ ವಿಚಾರ ವಿನಿಮಯ ಸಮಯ ಸಂದರ್ಭಾನುಸಾರ ಆಗುತ್ತಲೇ ಇರುತ್ತದೆ. ಈಗಲೂ ಮಾತುಕತೆ ಮೂಲಕ ಸಿಎಂ ಎಲ್ಲವನ್ನೂ ಸರಿಪಡಿಸುತ್ತಾರೆ ಎಂದು ಬೊಮ್ಮಾಯಿ ಹೇಳಿದರು.
ಸಂಪುಟ ಸಭೆಗೆ ಅಸಮಾಧಾನಿತರ ಗೈರು ವಿಚಾರವಾಗಿ ಸಚಿವ ಆರ್.ಅಶೋಕ್ ಮಾತನಾಡಿ, ಸಿಎಂ ಬಳಿ ಮಾತನಾಡಿ ಯಾವುದೇ ಅಸಮಾಧಾನವಿಲ್ಲವೆಂದಿದ್ದಾರೆ. ಬೇರೆ ಕಾರಣಕ್ಕೆ ಅವರು ಸಭೆಗೆ ಬರಲಿಲ್ಲ. ನಾರಾಯಣಗೌಡ ಅವರು ಬಂದ್ರು, ಎಂಟಿಬಿ, ಉಳಿದವರು ಬರಲಿಲ್ಲ. ಆದರೆ ಅವರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ ಎಂದರು. ಎರಡು ದಿನದಲ್ಲಿ ಬೇರೆ ಖಾತೆಗೆ ಎಂಟಿಬಿ ಪಟ್ಟು ವಿಚಾರವಾಗಿ ಸದ್ಯಕ್ಕೆ ಖಾತೆಗಳ ಬದಲಾವಣೆ ಇಲ್ಲ ಎಂದು ಹೇಳಿದರು.
Published by:
HR Ramesh
First published:
January 21, 2021, 7:27 PM IST