ಬೆಂಗಳೂರು: ನೂತನ ಸಚಿವರಿಗೆ ಖಾತೆಗಳು ಹಂಚಿಕೆಯಾಗಿದ್ದು, ನಿರೀಕ್ಷೆಯಂತೆ ಮೂರು ಮಂದಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ಸೃಷ್ಟಿಸಲಾಗಿದೆ. ಅಲ್ಲದೇ, ಎಲ್ಲರ ವಿರೋಧ, ಅಸಮಾಧಾನದ ನಡುವೆಯೂ ಲಕ್ಷ್ಮಣ ಸವದಿ ಮತ್ತು ಅಶ್ವತ್ಥ್ ನಾರಾಯಣ ಅವರಿಗೂ ಡಿಸಿಎಂ ಸ್ಥಾನ ಕಲ್ಪಿಸಲಾಗಿದೆ.
ಕೊನೆಗೂ ನೀರಾವರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಯಾರಿಗೂ ಕೊಡದ ಸಿಎಂ ತನ್ನ ಬಳಿಯಲ್ಲೇ ಇಟ್ಟುಕೊಂಡಿದ್ದಾರೆ. ಈಗಾಗಲೇ ನೀರಾವರಿ ಖಾತೆ ಮೇಲೆ ರಮೇಶ್ ಜಾರಕಿಹೊಳಿ ಕಣ್ಣಿಟ್ಟಿದ್ದು, ಅವರು ಬಂದ ಬಳಿಕ ಈ ಖಾತೆಯನ್ನು ಅವರಿಗೆ ನೀಡಲು ಕಾಯ್ದಿರಿಸಿಟ್ಟುಕೊಂಡಿದ್ದಾರೆ.
- ಗೋವಿಂದ ಕಾರಜೋಳ- ಉಪಮುಖ್ಯಮಂತ್ರಿ, ಲೋಕೋಪಯೋಗಿ, ಸಮಾಜ ಕಲ್ಯಾಣ
- ಅಶ್ವತ್ಥ್ ನಾರಾಯಣ- ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ, ಐಟಿ-ಬಿಟಿ
- ಲಕ್ಷ್ಮಣ ಸವದಿ- ಉಪಮುಖ್ಯಮಂತ್ರಿ, ಸಾರಿಗೆ
- ಕೆ.ಎಸ್.ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ
- ಆರ್.ಅಶೋಕ್- ಕಂದಾಯ, ಮುಜುರಾಯಿ
- ಜಗದೀಶ್ ಶೆಟ್ಟರ್- ಮಧ್ಯಮ ಮತ್ತು ಭಾರಿ ಕೈಗಾರಿಕೆ, ಸಕ್ಕರೆ
- ಬಿ.ಶ್ರೀರಾಮುಲು- ಅರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ
- ಎಸ್.ಸುರೇಶ್ ಕುಮಾರ್- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಸಕಾಲ
- ವಿ.ಸೋಮಣ್ಣ- ವಸತಿ
- ಸಿ.ಟಿ.ರವಿ- ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
- ಬಸವರಾಜ ಬೊಮ್ಮಾಯಿ- ಗೃಹ ಇಲಾಖೆ
- ಕೋಟಾ ಶ್ರೀನಿವಾಸ ಪೂಜಾರಿ- ಮೀನುಗಾರಿಗೆ, ಬಂದರು ಮತ್ತು ಒಳನಾಡು ಸಾರಿಗೆ
- ಜೆ.ಸಿ.ಮಾದುಸ್ವಾಮಿ- ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ
- ಸಿಸಿ ಪಾಟೀಲ್- ಗಣಿ ಮತ್ತು ಭೂ ವಿಜ್ಞಾನ
- ಎಚ್.ನಾಗೇಶ್- ಅಬಕಾರಿ ಇಲಾಖೆ
- ಪ್ರಭು ಚೌಹಾಣ್- ಪಶು ಸಂಗೋಪನೆ
- ಶಶಿಕಲಾ ಜೊಲ್ಲೆ- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿರಿಯ ನಾಗರಿಕ ಸಬಲೀಕರಣ