Basanagouda Patil Yatnal| ಶಾಸಕರ ಭವನದ ಯತ್ನಾಳ್ ಕೊಠಡಿ ಬಾಗಿಲಿಗೆ ಅಶ್ಲೀಲ ಭಿತ್ತಿಪತ್ರ; ಆರೋಪಿಗಾಗಿ ಪೊಲೀಸರ ಶೋಧ

ಕಾಂಗ್ರೆಸ್​ ಕಾರ್ಯಕರ್ತರು ಶಾಸಕರ ಭವನದ ಬಸನಗೌಡ ಪಾಟೀಲ್ ಯತ್ನಾಳ್ ಕೊಠಡಿಯ ಬಾಗಿಲಿಗೆ ಅವಾಚ್ಯ ಶಬ್ದಗಳಿಂದ ಅವರನ್ನು ನಿಂದಿಸಿರುವ ಭಿತ್ತಿಪತ್ರ ಅಂಟಿಸುವ ಮೂಲಕ ಪ್ರತಿಭಟಿಸಿದ್ದಾರೆ.

ಬಸನಗೌಡ ಪಾಟೀಲ ಯತ್ನಾಳ್.

ಬಸನಗೌಡ ಪಾಟೀಲ ಯತ್ನಾಳ್.

  • Share this:
    ಬೆಂಗಳೂರು (ಆಗಸ್ಟ್​ 24); ವಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಆಗಿಂದಾಗ್ಗೆ ಕಾಂಗ್ರೆಸ್​ ನಾಯಕರು, ಅದರಲ್ಲೂ ಮುಖ್ಯವಾಗಿ ಮಾಜಿ ಕಾಂಗ್ರೆಸ್​ ರಾಷ್ಟ್ರಾಧ್ಯಕ್ಷ ರಾಹುಲ್  ಗಾಂಧಿ (Rahul Gandhi) ವಿರುದ್ಧ ಕಿಡಿಕಾರುವುದು ಮಾಮೂಲಿ ವಿಚಾರವಾಗಿಬಿಟ್ಟಿದೆ. ಸೋಮವಾರ ಸಹ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದ ಬಸನಗೌಡ ಪಾಟೀಲ್ ಯತ್ನಾಳ್, "ರಾಹುಲ್ ಗಾಂಧಿ ಓರ್ವ ಹುಚ್ಚ. ಆತ ಹಿಂದುವೋ? ಕ್ರಿಶ್ಚಿಯನ್ನೋ? ಬಲ್ಲವರಾರು" ಎಂದು ಅವಹೇಳನ ಮಾಡಿದ್ದರು. ಆದರೆ, ಇದಕ್ಕೆ ಪ್ರತಿಯಾಗಿ ಇಂದು ಕಾಂಗ್ರೆಸ್​ (Congress) ಕಾರ್ಯಕರ್ತರು ಶಾಸಕರ ಭವನದ ಬಸನಗೌಡ ಪಾಟೀಲ್ ಯತ್ನಾಳ್ ಕೊಠಡಿಯ ಬಾಗಿಲಿಗೆ ಅವಾಚ್ಯ ಶಬ್ದಗಳಿಂದ ಅವರನ್ನು ನಿಂದಿಸಿರುವ ಭಿತ್ತಿಪತ್ರ ಅಂಟಿಸುವ ಮೂಲಕ ಪ್ರತಿಭಟಿಸಿದ್ದಾರೆ.

    ಕೈ ಕಾರ್ಯಕರ್ತರು ಕೆಟ್ಟ ಪದಗಳನ್ನು ಬಳಸಿ ಯತ್ನಾಳ್ ರನ್ನು ನಿಂದಿಸಿರುವ ಭಿತ್ತಿ ಪತ್ರಗಳನ್ನು ಅವರ ಕೊಠಡಿ ಬಾಗಿಲಿಗೆ ಅಂಟಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಪೊಲೀಸರು ಯತ್ನಾಳ್ ಅವರ ಕೊಠಡಿಗೆ ಆಗಮಿಸಿ ಆ ಭಿತ್ತಿಪತ್ರಗಳನ್ನು ತೆರವುಗೊಳಿಸುವ ಕೆಲಸದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಅಲ್ಲದೆ, ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ಶೀಘ್ರದಲ್ಲಿ ಈ ಭಿತ್ತಿ ಪತ್ರಗಳನ್ನು ಅಂಟಿಸಿದವರ ವಿರುದ್ಧಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
    Published by:MAshok Kumar
    First published: