• Home
  • »
  • News
  • »
  • state
  • »
  • Population Control: ಕೋಳಿ ಕೇಳಿ ಮಸಾಲೆ ಅರೆಯಲ್ಲ, ಸಂಜಯ್ ಗಾಂಧಿ ಬ್ರಿಗೇಡ್​ ಮಾದರಿಯಲ್ಲೂ ಜಾರಿಗೆ ತರಲ್ಲ-ಸಿ ಟಿ ರವಿ

Population Control: ಕೋಳಿ ಕೇಳಿ ಮಸಾಲೆ ಅರೆಯಲ್ಲ, ಸಂಜಯ್ ಗಾಂಧಿ ಬ್ರಿಗೇಡ್​ ಮಾದರಿಯಲ್ಲೂ ಜಾರಿಗೆ ತರಲ್ಲ-ಸಿ ಟಿ ರವಿ

ಸಿ ಟಿ ರವಿ

ಸಿ ಟಿ ರವಿ

ಜಯ್‌ ಗಾಂಧಿ ಬ್ರಿಗೇಡ್ ಮಾದರಿಯಲ್ಲಿ ಜಾರಿಗೆ ತರಲ್ಲ. ಇಂದಿರಾಗಾಂಧಿ ಕಾಲದಲ್ಲಿ ಸಂಜಯ್‌ಗಾಂಧಿ ಬ್ರಿಗ್ರೇಡ್‌ ಸಿಕ್ಕವರನ್ನು ಕರೆದುಕೊಂಡು ಬಂದು ಕಟ್‌ ಮಾಡುತ್ತಿದ್ದರು. ನಾವು ಹಾಗೇ ಮಾಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

  • Share this:

ಬೆಂಗಳೂರು: ಜನಸಂಖ್ಯೆ ನಿಯಂತ್ರಣದ ವಿಚಾರದಲ್ಲಿ ಕಾನೂನು ಜಾರಿಯಾಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ (Press Meet) ಮಾತಾಡಿದ ಸಿಟಿ ರವಿ (C T Ravi) ದೇಶದಲ್ಲಿ ಎಲ್ಲಾ ಧರ್ಮೀಯರಿಗೂ ಅನ್ವಯ ಆಗುವಂತೆ ಜನಸಂಖ್ಯೆ ನಿಯಂತ್ರಣ ಆಗಬೇಕು ಎಂದು ಆರ್‌ಎಸ್‌ಎಸ್‌ ಸರಸಂಘ ಚಾಲಕ ಮೋಹನ್ ಭಾಗವತ್‌ (Mohan Bhagavath) ಅವರು ನೀಡಿರುವ ಸಲಹೆ ವ್ಯಾಪಕವಾಗಿ ಸಾರ್ವಜನಿಕವಾಗಿ ಚರ್ಚೆ ಆಗಬೇಕು ಎಂದ್ರು.  ಬಳಿಕ ಎಲ್ಲ ರಾಜ್ಯಗಳ ವಿಧಾನಸಭೆಗಳು (Assembly) ಮತ್ತು ಸಂಸತ್ತಿನಲ್ಲೂ ಚರ್ಚೆ ನಡೆಸಿ ಕಾನೂನು ಜಾರಿ ಆಗಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.


ಸಂಜಯ್‌ ಗಾಂಧಿ ಬ್ರಿಗೇಡ್ ಮಾದರಿಯಲ್ಲಿ ಜಾರಿಗೆ ತರಲ್ಲ


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಂಖ್ಯಾ ನಿಯಂತ್ರಣ ನೀತಿಯನ್ನು ಸಂಜಯ್‌ ಗಾಂಧಿ ಬ್ರಿಗೇಡ್ ಮಾದರಿಯಲ್ಲಿ ಜಾರಿಗೆ ತರಲ್ಲ. ಇಂದಿರಾಗಾಂಧಿ ಕಾಲದಲ್ಲಿ ಸಂಜಯ್‌ಗಾಂಧಿ ಬ್ರಿಗ್ರೇಡ್‌ ಸಿಕ್ಕವರನ್ನು ಕರೆದುಕೊಂಡು ಬಂದು ಕಟ್‌ ಮಾಡುತ್ತಿದ್ದರು. ನಾವು ಹಾಗೇ ಮಾಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.


ವಿಸ್ತೃತ ಚರ್ಚೆ ಬಳಿಕವೇ ಜಾರಿ ಆಗ್ಲಿ


ಕೋಳಿ ಕೇಳಿ ಮಸಾಲೆ ಅರೆಯುವುದಿಲ್ಲ ಎಂಬುದು ಹಳ್ಳಿ ಕಡೆಯಲ್ಲಿ ಚಾಲ್ತಿಯಲ್ಲಿರುವ ಮಾತು. ಆದರೆ, ನಾವು ಆ ರೀತಿ ವರ್ತಿಸುವುದಿಲ್ಲ. ಜನಸಂಖ್ಯೆ ನಿಯಂತ್ರಣದ ವಿಷಯ ವಿಸ್ತೃತ ಚರ್ಚೆ ಆಗಬೇಕು ಎಂದು ಬಯಸುತ್ತೇವೆ. ಬಳಿಕವೇ ಜಾರಿ ಆಗಲಿ ಎಂದ್ರು.


ಇದನ್ನೂ ಓದಿ: DK Shivakumar: ಡಿಕೆಶಿ ಮನವಿಯನ್ನು ತಿರಸ್ಕರಿಸಿ ಶಾಕ್ ಕೊಟ್ಟ ED


ಜಾತಿಯತೆ, ಅಸ್ಪೃಶ್ಯತೆ ಮುಕ್ತ ಸಮಾಜ ನಿರ್ಮಾಣವಾಗ್ಲಿ


ದೇಶದಲ್ಲಿ ಜಾತಿಯತೆ ಮುಕ್ತ ಮತ್ತು ಅಸ್ಪೃಶ್ಯತೆ ಮುಕ್ತ ಹಿಂದೂ ಸಮಾಜ ನಿರ್ಮಾಣವಾಗಬೇಕು. ಯಾವುದೇ ತಾರತಮ್ಯಗಳು ಇರಬಾರದು ಎಂಬುದು ಭಾಗವತ್ ಅವರ ಉದ್ದೇಶ. ಆರ್‌ಎಸ್‌ಎಸ್‌ ಹಿಂದಿನಿಂದಲೂ ಇದೇ ಸಂಸ್ಕಾರವನ್ನು ಬೆಳೆಸಿಕೊಂಡು ಬಂದಿದೆ. ಬಿಜೆಪಿ ಅದಕ್ಕೆ ಬದ್ಧವಾಗಿದೆ ಎಂದು ಅವರು ಹೇಳಿದರು.


ಸೋನಿಯಾ ಹೇಳಿದಂತೆ ಖರ್ಗೆ ಕೇಳ್ತಿದ್ದಾರೆ ಅಷ್ಟೇ


ಮಲ್ಲಿಕಾರ್ಜುನ ಖರ್ಗೆಯವರು ಸ್ವ ಇಚ್ಚೆಯಿಂದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿಲ್ಲ. ಸೋನಿಯಾಗಾಂಧಿ ಅವರ ನಿರ್ದೇಶನದಂತೆ ನಾಮಪತ್ರ ಸಲ್ಲಿಸಿದ್ದಾರೆ. ಅವರು ಬಯಸಿದರೆ ಚುನಾವಣೆ ನಡೆಯಬಹುದು. ಇಲ್ಲದಿದ್ದರೆ ಏನು ಬೇಕಾದರೂ ಆಗಬಹುದು.


ಖರ್ಗೆ ಗುಲಾಮಿ ಮನಸ್ಥಿಯಿಂದ ಹೊರಬರಬೇಕು


ಮಲ್ಲಿಕಾರ್ಜುನ ಖರ್ಗೆ ಅವರು ಮೊದಲು ಗುಲಾಮಿ ಮನಸ್ಥಿಯಿಂದ ಹೊರಬರಬೇಕು. ಸುದೀರ್ಘ ರಾಜಕೀಯ ಅನುಭವ ಇರುವ ಅವರ ವ್ಯಕ್ತಿತ್ವ ಜೀತದ ಮನಸ್ಥಿತಿಯನ್ನು ಒಪ್ಪುವಂತಹದ್ದಲ್ಲ ಎಂದು ಭಾವಿಸಿದ್ದೇನೆ. ಮುಳುಗುತ್ತಿರುವ ದೋಣಿಯ ನಾವಿಕನಂತಿರುವ ಪಕ್ಷಕ್ಕೆ ಯಾರೇ ನಾಯಕರಾದರೂ ಏನು ಪ್ರಯೋಜನ ಎಂದು ಪ್ರಶ್ನಿಸಿದರು.


ಇದನ್ನೂ ಓದಿ: CM Basavaraj Bommai: ರಾಹುಲ್ ಗಾಂಧಿ ಪತ್ರಕ್ಕೆ ಸ್ಪಂದಿಸಿದ ಸಿಎಂ ಬೊಮ್ಮಾಯಿ


RSS  ಸದುದ್ದೇಶವೇ ಇದಾಗಿದೆ


ಜಾತಿಯತೆ ಮುಕ್ತ, ಅಸ್ಪೃಶ್ಯತೆ ಮುಕ್ತ ಹಿಂದೂ ಸಮಾಜ ನಿರ್ಮಾಣವಾಗಬೇಕೆಂಬುದು ಭಾಗವತ್ ಅವರ ಸದುದ್ದೇಶ. ಹಿಂದೂ ಸಮಾಜದಲ್ಲಿ ಯಾವುದೇ ರೀತಿಯ ತಾರತಮ್ಯ ಇರಬಾರದು ಎಂದು ಹೇಳಿದ್ದಾರೆ. ಹಲವಾರು ವರ್ಷಗಳಿಂದ ಸಂಘವೂ ಇದೇ ಸಂಸ್ಕಾರವನ್ನು ಮಾಡಿದೆ ಎಂದು ಹೇಳಿದರು. ದತ್ತಾತ್ರೇಯ ಹೊಸಬಾಳೆ ಅವರು ಅಸಮಾನತೆ, ನಿರುದ್ಯೋಗ ಕುರಿತು ಸುದುದ್ದೇಶದಿಂದ ಕೆಲವು ಮಾತುಗಳನ್ನು ಹೇಳಿದ್ದಾರೆ. ಅದನ್ನು ಪಕ್ಷ ಸ್ವೀಕಾರ ಮಾಡುತ್ತದೆ ಎಂದರು.

Published by:ಪಾವನ ಎಚ್ ಎಸ್
First published: