Belagavi: ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿ ನುಸಿ ಮಿಶ್ರಿತ ಆಹಾರ; ವಿದ್ಯಾರ್ಥಿಗಳ ಧರಣಿ, ಊಟದ ರುಚಿ ನೋಡಿದ ಶಾಸಕ, ಡಿಸಿ

ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ‌ನಿತೇಶ್ ಪಾಟೀಲ್, ಶಾಸಕ ಅನಿಲ್ ‌ಬೆನಕೆ ವಸತಿ ‌ನಿಲಯದ ಅಡುಗೆ ಕೋಣೆಗೆ ಭೇಟಿ ನೀಡಿದರು. ನುಶಿ-ಜಿರಳೆ ಇರುವುದನ್ನು ಕಂಡು ಆಕ್ರೋಶ ‌ಹೊರಹಾಕಿದರು.

ಶಾಸಕ ಅನಿಲ್ ಬೆನಕೆ

ಶಾಸಕ ಅನಿಲ್ ಬೆನಕೆ

  • Share this:
    ಬೆಳಗಾವಿ: ಇಡ್ಲಿ-ಸಾಂಬಾರಿನಲ್ಲಿ ನುಸಿ-ಜಿರಳೆ ಮಿಶ್ರಣ, ಆಹಾರಿಟ್ಟಿದ್ದ ಬಾಂಡೆ (ಪಾತ್ರೆ) ಸಮೇತ ಪ್ರತಿಭಟನೆ, ಆಹಾರ ಬೇಡ, ವಿಷ ನೀಡಿ ಎಂದು ಗೋಗರೆಯುತ್ತಿರುವ ವಸತಿ ನಿಲಯದ (Hostel) ವಿದ್ಯಾರ್ಥಿಗಳು. ಸ್ಥಳಕ್ಕೆ ದೌಡಾಯಿಸಿ ಅಧಿಕಾರಿಗಳನ್ನು (Officers) ‌ತರಾಟೆಗೆ ತೆಗೆದುಕೊಳ್ಳುತ್ತಿರುವ ಶಾಸಕ, ಡಿಸಿ. ಹೌದು ಈ ದೃಶ್ಯ ಕಂಡು ಬಂದಿದ್ದು ಬೆಳಗಾವಿಯ ಸಂಗಮೇಶ್ವರ ನಗರದಲ್ಲಿ. ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ (Dr BR Ambedkar Hostel). ನಾಡಿನಾದ್ಯಂತ ಗಣೇಶ ಚತುರ್ಥಿ ಹಬ್ಬ. ಪ್ರತಿಯೊಬ್ಬರು ಮನೆಯಲ್ಲಿ ರುಚಿಕರ ಆಹಾರ ಸವಿದು ಹಬ್ಬ ಆಚರಣೆ ಮಾಡ್ತಿದ್ದಾರೆ. ಆದರೆ ಇಲ್ಲಿನ ಮಕ್ಕಳಿಗೆ ಮಾತ್ರ ಕಳಪೆ ಆಹಾರ ನೀಡಲಾಗಿತ್ತು. ಇದರಿಂದ ರೊಚ್ಚಿಗೆದ್ದ ಮಕ್ಕಳಿಂದು ಪ್ರತಿಭಟನೆ (Protest) ನಡೆಸಿದ್ರು. ವಸತಿ ನಿಲಯದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

    ಒಳ್ಳೆಯ ಆಹಾರ ನೀಡಲಾಗದಿದ್ರೆ ವಿಷ ನೀಡಿ ಎಂದು ಆಕ್ರೋಶ ಹೊರಹಾಕಿದ್ರು. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಶಾಸಕ ಅನಿಲ್ ಬೆನಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಕೂಡ ಸ್ಥಳಕ್ಕೆ ದೌಡಾಯಿಸಿದರು.

    ವಿದ್ಯಾರ್ಥಿಗಳ ಆಕ್ರೋಶ

    ಈ ವೇಳೆ ಮಾತನಾಡಿದ ವಸತಿ ನಿಲಯದ ವಿದ್ಯಾರ್ಥಿ ವಿಕ್ರಮ್, ನಿತ್ಯ ಕಳಪೆ ಆಹಾರ ಸೇವಿಸುತ್ತಿದ್ದೇವೆ. ಸರ್ಕಾರ ನಮಗೆ ಸೌಲಭ್ಯ ನೀಡ್ತಿದೆ. ಆದ್ರೆ ಅಧಿಕಾರಿಗಳು ಮಾತ್ರ ನಮಗೆ ಸಮರ್ಪಕ ಆಹಾರ ಪೂರೈಸುತ್ತಿಲ್ಲ. ಬೆಳಗ್ಗೆಯಿಂದ ಉಪಹಾರ ಸೇವಿಸದೇ ಪ್ರತಿಭಟನೆ ನಡೆಸುತ್ತಿದ್ದೇವೆ. ನುಸಿ-ಜಿರಳೆ ಮಿಶ್ರಿತ ಆಹಾರ ಸೇವಿಸುವುದು ಹೇಗೆ? ಒಳ್ಳೆಯ ಆಹಾರ ಕೊಡಲಾಗದಿದ್ರೆ ವಿಷ ಆದರೂ ನೀಡಿ ಎಂದು ಆಕ್ರೋಶ ‌ವ್ಯಕ್ತಪಡಿಸಿದರು.

    ಇದನ್ನೂ ಓದಿ:  Bengaluru Rains: ಮಳೆಯಿಂದ Rainbow Layout ಜಲಾವೃತ; ಆಸ್ಪತ್ರೆಗೆ ತೆರಳಲಾರದೇ ವೃದ್ಧ ಸಾವು; ರಾಜಧಾನಿಯಲ್ಲಿ ಇದೆಂತಾ ಸ್ಥಿತಿ?

    ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ‌ನಿತೇಶ್ ಪಾಟೀಲ್, ಶಾಸಕ ಅನಿಲ್ ‌ಬೆನಕೆ ವಸತಿ ‌ನಿಲಯದ ಅಡುಗೆ ಕೋಣೆಗೆ ಭೇಟಿ ನೀಡಿದರು. ನುಸಿ-ಜಿರಳೆ ಇರುವುದನ್ನು ಕಂಡು ಆಕ್ರೋಶ ‌ಹೊರಹಾಕಿದರು. ಆರು ತಿಂಗಳಕ್ಕೆ ಬೇಕಾಗುವಷ್ಟು ಆಹಾರ ಪದಾರ್ಥ ಏಕಕಾಲದಲ್ಲಿ ಸಂಗ್ರಹಿಟ್ಟಿರುವುದ್ದಕ್ಕೆ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರು.

    ಅಗತ್ಯ ಸೌಕರ್ಯದ ಭರವಸೆ

    ಬಳಿಕ ಮಾತನಾಡಿದ ಡಿಸಿ ನಿತೇಶ್ ಪಾಟೀಲ್, 6 ತಿಂಗಳಕ್ಕೆ ಬೇಕಾಗುವಷ್ಟು ಆಹಾರ ಪದಾರ್ಥ ಒಮ್ಮೆ ಸಂಗ್ರಹಿಸಿ ಇಡಲಾಗಿತ್ತು. ಇದರಿಂದ ಆಹಾರ ಪದಾರ್ಥಕ್ಕೆ ನುಸಿ ತಾಗಿವೆ. ಎಲ್ಲ ಬದಲಿಸಿ, ಬೇರೆ ಆಹಾರ ಪದಾರ್ಥ ತರಿಸಿಕೊಳ್ಳಲು ಸೂಚಿಸಿದ್ದೇನೆ. ವಸತಿ ನಿಲಯದ ಮಕ್ಕಳಿಗೆ ಅಗತ್ಯ ಸೌಕರ್ಯ ಒದಗಿದಲಾಗುವುದು ಎಂದರು.

    Poor quality food distribution hostel students protest in belagavi csb mrq
    ಹಾಸ್ಟೆಲ್ ಊಟ ಸೇವಿಸಿದ ಶಾಸಕರು


    ವಿದ್ಯಾರ್ಥಿಗಳ ಜೊತೆಗೆ ಊಟ

    ಶಾಸಕ ಅನಿಲ್ ಬೆ‌ನಕೆ ಮಾತನಾಡಿ, ಸಮಸ್ಯೆ ಸರಿಪಡಿಸಿಕೊಳ್ಳಲು ಸೂಚನೆ ನೀಡಿದ್ದೇವೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇವೆ. ವಸತಿ ನಿಲಯಕ್ಕೆ ಡಿಜಿಟಲ್ ಲೈಬ್ರರಿ ಅವಶ್ಯಕತೆ ಇದೆ. ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುತ್ತೇನೆ ಎಂದರು.

    ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಡಿಸಿ ಹಾಗೂ ಶಾಸಕರು ಮಕ್ಕಳನ್ನು ಊಟದ ಕೊಣೆಗೆ ಕರೆದೊಯ್ದರು. ಮಕ್ಕಳ ಜೊತೆಗೆ ಮಧ್ಯಾಹ್ನದ ಊಟ ಸವಿದರು.

    ಗಣೇಶ ಹಬ್ಬದಂದೇ ಭೀಕರ ರಸ್ತೆ ಅಪಘಾತ‌, 8 ತಿಂಗಳ ಮಗು ದುರ್ಮರಣ!

    ಗಣೇಶ ಹಬ್ಬ ಅಂದ್ರೆ ಸಡಗರ, ಸಂಭ್ರಮ. ಆದರೆ ಇಲ್ಲೊಂದು ಕಡೆ ಗಣೇಶ ಹಬ್ಬದಂದೇ (Ganesha Festival) ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದೆ. ಪರಿಣಾಮ 8 ತಿಂಗಳ ಮಗು (8 Month Baby), 35 ವರ್ಷದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರುಗಳು (Car)ಹಾಗೂ ಸರ್ಕಾರಿ ಬಸ್ (Bus) ಮಧ್ಯೆ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲಿಯೇ (Spot out) ಅಸುನೀಗಿದ್ದಾರೆ.

    ಇದನ್ನೂ ಓದಿ: Savadi Car Accident: ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾರು ಅಪಘಾತ, ಪ್ರಾಣಾಪಾಯದಿಂದ ಪಾರು!

    ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಕುಬಕಡ್ಡಿ ಕ್ರಾಸ್ ಬಳಿ ಘಟನೆ ಸಂಭವಿಸಿದೆ. ಮೃತರ ಕುಟುಂಬಸ್ಥರ ಆಕ್ರಂದನ (Crying) ಮುಗಿಮುಟ್ಟಿದೆ. ಕಾರು ಓವರ್ ಟೇಕ್ ಮಾಡಲು ಹೋಗಿ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ಆ ಕಾರು ಬಸ್​ಗೆ ಬಡಿದಿದೆ. ಪರಿಣಾಮ ದುರ್ಘಟನೆ ಸಂಭವಿಸಿದೆ.
    Published by:Mahmadrafik K
    First published: