• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Last-mile Connectivity: ಈ ಸಮಸ್ಯೆಗೆ ಪರಿಹಾರ ಸಿಗದಿದ್ರೆ ಸಾರ್ವಜನಿಕ ಸಾರಿಗೆಗೆ ಲಾಭ ಆಗೋದು ಕಷ್ಟ!

Last-mile Connectivity: ಈ ಸಮಸ್ಯೆಗೆ ಪರಿಹಾರ ಸಿಗದಿದ್ರೆ ಸಾರ್ವಜನಿಕ ಸಾರಿಗೆಗೆ ಲಾಭ ಆಗೋದು ಕಷ್ಟ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Namma Bengaluru: ಬೆಂಗಳೂರು ಸುಮಾರು 14,000 ಕಿಮೀ ರಸ್ತೆಗಳನ್ನು ಹೊಂದಿದೆ ಮತ್ತು ಕೇವಲ 50 ಕಿಮೀ ಸಮರ್ಪಕವಾದ, ಅಗಲವಾದ, ಸಂಪರ್ಕ ಮತ್ತು ಗುಣಮಟ್ಟದ ಕಾಲುದಾರಿಗಳನ್ನು ಹೊಂದಿದೆ ಎಂದು ತಜ್ಞರು ಹೇಳುತ್ತಾರೆ.

  • Share this:

ಬೆಂಗಳೂರು: 2011 ರಲ್ಲಿ 6.7 ಕಿಲೋಮೀಟರ್ ಬೆಂಗಳೂರು ಮೆಟ್ರೋದ (Namma Metro) ಮೊದಲ ವಿಭಾಗವನ್ನು ಪ್ರಾರಂಭಿಸಿದಾಗ, ಪ್ರಯಾಣಿಕರು ನಗರದ ಟ್ರಾಫಿಕ್ (Traffic) ಜಾಮ್‌ನಿಂದ ಪಾರಾಗಲು ಆಶಿಸಿದರು. ದಿನಗಳೆದಂತೆ "ನಮ್ಮ ಮೆಟ್ರೋ" ನೆಟ್‌ವರ್ಕ್ 68.6 ಕಿಲೋಮೀಟರ್‌ಗಳಷ್ಟು ವ್ಯಾಪಿಸಿ ಹತ್ತು ಪಟ್ಟು ವಿಸ್ತರಿಸಿತು. ಆದರೂ ಬೆಂಗಳೂರಿಗರು (Bangalorean) ನಿತ್ಯ ಸಂಚರಿಸುವಾಗ ಮನೆಯಿಂದ ಆರಂಭಿಕ ಹಾಗೂ ಕೆಲಸ ಮುಗಿಸಿ ಮನೆಗೆ ಬರುವಾಗ ಕೊನೆಯ ನಿಲ್ದಾಣದಿಂದ ಮನೆಯವರೆಗಿನ ಅಂತಿಮ ಮಾರ್ಗಗಳು (ಇದನ್ನೇ ಲಾಸ್ಟ್ ಮೈಲ್ ಕನೆಕ್ಟಿವಿಟಿ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ) ಒಂದು ದೊಡ್ಡ ಸಮಸ್ಯೆಯಾಗಿದ್ದು ಅದನ್ನು ಪರಿಹರಿಸಲು ಸರ್ಕಾರಗಳು ವಿಫಲವಾಗಿವೆ.


ಪರಿಣಾಮವಾಗಿ, ಇದು ಬೆಂಗಳೂರಿನಲ್ಲಿ ಈ ಸಾರ್ವಜನಿಕ ಸಾರಿಗೆಯು ಅತ್ಯಂತ ಜನಪ್ರಿಯ ಪ್ರಯಾಣದ ಆಯ್ಕೆಯಾಗಿಲ್ಲ. ಅಲ್ಲದೆ, ನಗರದಲ್ಲಿ 10 ಮಿಲಿಯನ್ ಖಾಸಗಿ ಕಾರುಗಳಿವೆ ಹಾಗೂ ಆ ಸಂಖ್ಯೆಯು ಗಗನಕ್ಕೇರುತ್ತಲೇ ಇದೆ.


ಸಾರ್ವಜನಿಕ ಸಾರಿಗೆ ಬಳಕೆಗೆ ನಿರುತ್ಸಾಹ


ಕಳಪೆ ಕೊನೆಯ ಮೈಲಿ ಸಂಪರ್ಕದ ಜೊತೆಗೆ, ಕಳಪೆಯ ಪಾದಚಾರಿ ಮಾರ್ಗಗಳು, ಸರಿಯಾಗಿ ಉರಿಯದ ಬೀದಿ ದೀಪಗಳು ಮತ್ತು ಸರಿಯಾದ ಬಸ್ ಶೆಲ್ಟರ್‌ಗಳ ಕೊರತೆ ಸೇರಿದಂತೆ ಇತರ ಅಂಶಗಳು ದೇಶದ ಟೆಕ್ ಹಬ್‌ಗಳಲ್ಲಿ ಒಂದಾದ ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಳಸದಂತೆ ಜನರನ್ನು ನಿರುತ್ಸಾಹಗೊಳಿಸುತ್ತಿವೆ.


ಹೆಚ್ಚಿನ ಮೆಟ್ರೋ ನಿಲ್ದಾಣಗಳಲ್ಲಿ ಶೇರ್ ವಾಹನಗಳ ಕೊರತೆ, ಕಡಿಮೆಯಾಗಿ ಲಭ್ಯವಿರುವ ಟ್ಯಾಕ್ಸಿ/ಕಾರುಗಳು, ಕಳಪೆ ಫೀಡರ್ ಬಸ್ ಸೇವೆ ಮತ್ತು ಪಾರ್ಕಿಂಗ್ ಸೌಲಭ್ಯಗಳ ಕೊರತೆ ಪ್ರಮುಖ ಸಮಸ್ಯೆಗಳಾಗಿವೆ ಎಂದು ಪ್ರಯಾಣಿಕರು ಉಲ್ಲೇಖಿಸಿದ್ದಾರೆ.


ದ್ವಿಚಕ್ರ ವಾಹನದ ಆಯ್ಕೆ


"ಬಸ್ ಪ್ರಯಾಣದ ದರವು ಅಗ್ಗವಾಗಿದೆ ಆದರೆ ಬಸ್ ನಿಲ್ದಾಣದಿಂದ ಮನೆಗೆ ಹೋಗಲು ಆಟೋ ದರವು ದುಬಾರಿಯಾಗಿದೆ. ಇದರಿಂದ ಜನರು ಸಂಪೂರ್ಣ ಪ್ರಯಾಣಕ್ಕೆ ದ್ವಿಚಕ್ರ ವಾಹನವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ" ಎಂದು ಸುಸ್ಥಿರ ಚಲನೆಯನ್ನು ಪ್ರೋತ್ಸಾಹಿಸುವ ಕಾರ್ಯಕರ್ತರಾಗಿರುವ ಸತ್ಯಶಂಕರನ್ ಮನಿ ಕಂಟ್ರೋಲ್‌ಗೆ ತಿಳಿಸಿದ್ದಾರೆ.


"ಸಾರ್ವಜನಿಕ ಸಾರಿಗೆ ನಿರ್ವಾಹಕರು ಖಾಸಗಿ ಕಾರುಗಳೊಂದಿಗೆ ಸ್ಪರ್ಧಿಸಲು ಬಯಸಿದರೆ, ನಾವು ಸೈಕ್ಲಿಂಗ್, ವಾಕಿಂಗ್ ಮತ್ತು ಹಂಚಿಕೆಯ ಚಲನಶೀಲತೆಯಂತಹ ಅಗ್ಗದ ಪ್ರಯಾಣದ ಆಯ್ಕೆಗಳನ್ನು ಉತ್ತೇಜಿಸಬೇಕು. ಬಸ್ ನಿರ್ವಾಹಕರು ತಮ್ಮ ಸೇವೆಗಳ ವಿಸ್ತರಣೆಯಾಗಿ ಕೊನೆಯ ಮೈಲಿಯನ್ನು ಪರಿಗಣಿಸಬೇಕು ಮತ್ತು ಏಕೀಕರಣವನ್ನು ಸುಧಾರಿಸಬೇಕು.


ಸಮಸ್ಯೆಗೆ ಪರಿಹಾರ ಏನು?


ಇದಕ್ಕೆ ವಿರುದ್ಧವಾಗಿ, ಅವರು ಕೊನೆಯ ಮೈಲಿ ಶೇರ್‌ ವಾಹನ ಮಾದರಿಯನ್ನು ಪ್ರತಿಸ್ಪರ್ಧಿಯಾಗಿ ನೋಡುವುದನ್ನು ಮುಂದುವರಿಸಿದರೆ, ಈ ಜನರನ್ನು ಸಾರ್ವಜನಿಕ ಸಾರಿಗೆಯತ್ತ ಸೆಳೆಯಲು ಸಾಧ್ಯವಿಲ್ಲ ಹಾಗೂ ಸಾರ್ವಜನಿಕ ಸಾರಿಗೆಯ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗುವುದಿಲ್ಲ ಎಂದು ಸತ್ಯಶಂಕರನ್ ಹೇಳುತ್ತಾರೆ.


ಜನರು 500 ಮೀಟರ್‌ಗಳಿಗಿಂತ ಹೆಚ್ಚು ನಡೆಗೆಯನ್ನು ರೂಢಿಸಿಕೊಳ್ಳುತ್ತಿದ್ದಾರೆ ಅಥವಾ ಸಾರಿಗೆ ನಿಲ್ದಾಣದಿಂದ ಮನೆಯವರಿಗೆ ಆಟೋ ಅಥವಾ ಕಾರು ಬದಲಿಗೆ ಸೈಕಲ್‌ ಬಳಸಲು ಇಷ್ಟಪಡುತ್ತಿದ್ದಾರೆ. ಇದರಿಂದ ಸಾರ್ವಜನಿಕ ಸಾರಿಗೆಯನ್ನು ಬಳಸುವ ಜನರು ಕಡಿಮೆಯಾಗಬಹುದು ಎಂದು ಶಂಕರನ್ ಹೇಳಿದರು.




ಅಂತಿಮ ಸ್ಥಾನ!


"ನಾವು ಕೊನೆಯ ಮೈಲಿಯನ್ನು ಸುಧಾರಿಸದಿದ್ದರೆ, ಮೆಟ್ರೋದಂತಹ ಯೋಜನೆಗಳಿಗೆ ನೂರಾರು ಕೋಟಿ ಖರ್ಚು ಮಾಡಿದರೂ ಸಾರ್ವಜನಿಕ ಸಾರಿಗೆಯ ಪಾಲು ಹೆಚ್ಚಾಗುವುದಿಲ್ಲ.


ಬೆಂಗಳೂರು ಮೆಟ್ರೋಪಾಲಿಟನ್ ಭೂ ಸಾರಿಗೆ ಪ್ರಾಧಿಕಾರ (BMLTA) ಎಲ್ಲಾ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಒಂದೇ ಸೂರಿನಡಿ ಕೇಂದ್ರೀಕರಿಸುತ್ತದೆ. ನಗರದಲ್ಲಿ ವಿವಿಧ ಸಾರಿಗೆ ವಿಧಾನಗಳ ಏಕೀಕರಣ ಸಮನ್ವಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ.


50 ಕಿಲೋಮೀಟರ್‌ಗಳಿಗಿಂತ ಕಡಿಮೆ ನಿರಂತರ, ವಿಶಾಲವಾದ ಪಾದಚಾರಿ ಮಾರ್ಗಗಳು


ಬೆಂಗಳೂರು ಸುಮಾರು 14,000 ಕಿಮೀ ರಸ್ತೆಗಳನ್ನು ಹೊಂದಿದೆ ಮತ್ತು ಕೇವಲ 50 ಕಿಮೀ ಸಮರ್ಪಕವಾದ, ಅಗಲವಾದ, ಸಂಪರ್ಕ ಮತ್ತು ಗುಣಮಟ್ಟದ ಕಾಲುದಾರಿಗಳನ್ನು ಹೊಂದಿದೆ ಎಂದು ತಜ್ಞರು ಹೇಳುತ್ತಾರೆ.


ಇದನ್ನೂ ಓದಿ:  Vote from Home: 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನ; ನಾಳೆಯಿಂದ ಬ್ಯಾಲೆಟ್ ಪೇಪರ್ ವೋಟಿಂಗ್ ಶುರು


ಹೊರ ವರ್ತುಲ ರಸ್ತೆಯಲ್ಲಿರುವ ಟೆಕ್ ಹಬ್‌ಗಳು ಮತ್ತು ಇಂದಿರಾ ನಗರ ಮತ್ತು ಕೋರಮಂಗಲದಂತಹ ಉನ್ನತ ಮಾರುಕಟ್ಟೆ ಪ್ರದೇಶಗಳಲ್ಲಿ ಸರಿಯಾದ ಪಾದಚಾರಿ ಮಾರ್ಗಗಳು, ಬಸ್ ಶೆಲ್ಟರ್‌ಗಳು ಮತ್ತು ಬೀದಿ ದೀಪಗಳ ಕೊರತೆಯಿದೆ ಎಂದು ವರದಿಗಳ ಮೂಲಕ ತಿಳಿದುಬಂದಿದೆ.

top videos
    First published: