ಬಡವರಿಗೆ ಬಂಪರ್ ಭಾಗ್ಯ- ಸರ್ಕಾರಿ ಆಸ್ಪತ್ರೆಯಲ್ಲಿ ರೊಟೋ ವೈರಸ್ ಲಸಿಕೆ ಉಚಿತವಾಗಿ ಲಭ್ಯ; ಶ್ರೀರಾಮುಲು

ಹೆರಿಗೆ ಆಸ್ಪತ್ರೆಗಳಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರ ಜತೆಗೆ ಬರುವ ಸಂಬಂಧಿಕರಿಗಾಗಿ ವಸತಿ, ಬಿಸಿ ನೀರಿನ ವ್ಯವಸ್ಥೆ ಹಾಗೂ ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಕ್ಯಾಂಟಿನ್ ಆರಂಭಿಸುವುದಾಗಿ ಸಚಿವರು ಘೋಷಿಸಿದರು.

G Hareeshkumar | news18
Updated:August 30, 2019, 3:52 PM IST
ಬಡವರಿಗೆ ಬಂಪರ್ ಭಾಗ್ಯ- ಸರ್ಕಾರಿ ಆಸ್ಪತ್ರೆಯಲ್ಲಿ ರೊಟೋ ವೈರಸ್ ಲಸಿಕೆ ಉಚಿತವಾಗಿ ಲಭ್ಯ; ಶ್ರೀರಾಮುಲು
ಶ್ರೀರಾಮುಲು
  • News18
  • Last Updated: August 30, 2019, 3:52 PM IST
  • Share this:
ವಿಜಯಪುರ (ಆ.30) : ನವಜಾತ ಶಿಶುಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದ್ದ  4500 ರೂಪಾಯಿ ಮೌಲ್ಯದ ರೊಟೊ ವೈರಸ್ ಲಸಿಕೆಗಳು ಇನ್ನು ಮುಂದೆ ಸರಕಾರಿ ಆಸ್ಪತ್ರೆಗಳಲ್ಲಿಯೇ ಉಚಿತವಾಗಿ ಸಿಗಲಿದೆ. ಅಷ್ಟೇ ಅಲ್ಲ, ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಜನೌಷಧ ಕೇಂದ್ರಗಳನ್ನು ತೆರೆಯುವಂತೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಆದೇಶ ನೀಡಿದ್ದಾರೆ.

ವಿಜಯಪುರದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಸಚಿವ ಬಿ. ಶ್ರೀರಾಮುಲು, ಗರ್ಭಿಣಿಯರು ಮತ್ತು ಬಾಣಂತಿಯರನ್ನು ಭೇಟಿ ಮಾಡಿದರು. ನೆಲದ ಮೇಲೆ ಕುಳಿದು ಅಹವಾಲು ಸ್ವೀಕರಿಸಿದ ಅವರು, ನಂತರ ವಾರ್ಡಿಗೆ ತೆರಳಿ ನವಜಾತ ಶಿಶುವನ್ನು ಕೈಯಲ್ಲಿ ಎತ್ತಿಕೊಂಡು ಆರೋಗ್ಯ ವಿಚಾರಿಸಿದರು.

 minister b sriramulu
ನವಜಾತ ಶಿಶುವನ್ನು ಕೈಯಲ್ಲಿ ಎತ್ತಿಕೊಂಡು ಆರೋಗ್ಯ ವಿಚಾರಿಸಿದ ಸಚಿವ ಶ್ರೀರಾಮುಲು


ಈ ಹಿಂದೆ ಆರೋಗ್ಯ ಸಚಿವರಾಗಿದ್ದಾಗ ಆರೋಗ್ಯ ಕವಚ 108 ಆ್ಯಂಬುಲೆನ್ಸ್​​ ಸೌಲಭ್ಯ ಆರಂಭಿಸಿದ್ದರು. ಇದೀಗ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ರೋಟೋ ವೈರಸ್ ಲಸಿಕೆ ನೀಡಿದ್ದಾರೆ.

ಇದನ್ನೂ ಓದಿ : ಡಿಕೆ ಶಿವಕುಮಾರ್​ ತಪ್ಪು ಮಾಡಿಲ್ಲ ಎಂದರೆ ಚಿಂತೆ ಯಾಕೆ; ಶ್ರೀರಾಮುಲು ಪ್ರಶ್ನೆ

ನನಗೂ ನಾಲ್ಕು ಜನ ಮಕ್ಕಳಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಸಕಲ ಸೌಲಭ್ಯಗಳನ್ನು ಒದಗಿಸಲು ಬದ್ಧನಾಗಿರುವುದಾಗಿ ತಿಳಿಸಿದ ಸಚಿವರು, ಹೆರಿಗೆ ಆಸ್ಪತ್ರೆಗಳಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರ ಜತೆಗೆ ಬರುವ ಸಂಬಂಧಿಕರಿಗಾಗಿ ವಸತಿ, ಬಿಸಿ ನೀರಿನ ವ್ಯವಸ್ಥೆ ಹಾಗೂ ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಕ್ಯಾಂಟಿನ್ ಆರಂಭಿಸುವುದಾಗಿ ಈ ಸಂದರ್ಭದಲ್ಲಿ ಘೋಷಿಸಿದರು.

ವರದಿ: ಮಹೇಶ ವಿ ಶಟಗಾರಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:August 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ