ಅಮ್ಮನ ದಾರಿಯನ್ನೇ ಕಾಯುತ್ತಿವೆ ಮುಗ್ಧ ಮಕ್ಕಳು: ಕ್ಯಾನ್ಸರ್​ ಚಿಕಿತ್ಸೆಗೆ ಈ ಬಡ ಕುಟುಂಬಕ್ಕೆ ಬೇಕಿದೆ ನಿಮ್ಮ ನೆರವು


Updated:October 2, 2018, 5:52 PM IST
ಅಮ್ಮನ ದಾರಿಯನ್ನೇ ಕಾಯುತ್ತಿವೆ ಮುಗ್ಧ ಮಕ್ಕಳು: ಕ್ಯಾನ್ಸರ್​ ಚಿಕಿತ್ಸೆಗೆ ಈ ಬಡ ಕುಟುಂಬಕ್ಕೆ ಬೇಕಿದೆ ನಿಮ್ಮ ನೆರವು
  • Share this:
ನ್ಯೂಸ್​ 18 ಕನ್ನಡ

ದಾವಣಗೆರೆ(ಅ.02): ಕ್ಯಾನ್ಸರ್​ ಎಂದ ಕೂಡಲೇ ಎಂತಹವರೂ ಒಂದು ಬಾರಿ ಬೆಚ್ಚಿ ಬೀಳುತ್ತಾರೆ. ಈ ಖಾಯಿಲೆ ಶತ್ರುಗಳಿಗೂ ಬಾರದಿರಲಿ ಎಂದು ಚಿಕಿತ್ಸೆ ಪಡೆದು ಗುಣಮುಖರಾಗುವವರು ಪ್ರಾರ್ಥಿಸುತ್ತಾರೆ. ಚಿಕಿತ್ಸೆ ವೇಳೆ ಅನುಭವಿಸುವ ಆ ನೋವು, ಹೇಳಿಕೊಳ್ಳಲಾಗದ ಅತೀವ ಸಂಕಟವೇ ಇದಕ್ಕೆ ಕಾರಣ. ಇನ್ನು ಇದಕ್ಕೆ ತಗುಲುವ ವೆಚ್ಚವೂ ಅಷ್ಟೇ ದುಬಾರಿ, ಶ್ರೀಮಂತರಿಗೆ ಕ್ಯಾನ್ಸರ್​ಗೆ ಚಿಕಿತ್ಸೆಗೆ ಹಣ ಭರಿಸುವುದು ಅಷ್ಟೇನೂ ಕಷ್ಟವಲ್ಲದಿದ್ದರೂ, ಬಡವರಿಗೆ ಮಾತ್ರ ಇದು ಏಳು ಸಮುದ್ರ ದಾಟಿ ಸಿಕ್ಕ ನಿಧಿಯಂತೆ. ಇಂತಹುದೇ ವೇದನೆ ಸದ್ಯ ದಾವಣಗೆರೆಯ 28 ವರ್ಷದ ಶ್ರೀಲಕ್ಷ್ಮಿ ಎಂಬ ಮಹಿಳೆ ಅನುಭವಿಸುತ್ತಿದ್ದಾರೆ. ಬಡ ವರ್ಗದ ಕುಟುಂಬದ ಗೃಹಿಣಿ, ಪುಟ್ಟ ಮಕ್ಕಳ ತಾಯಿಯಾಗಿರುವ ಇವರಿಗೆ ಬ್ಲಡ್​ ಕ್ಯಾನ್ಸರ್​ ಎಂಬ ಮಹಾಮಾರಿಯನ್ನು ಹೊಡೆದೋಡಿಸಲು ಸಹೃದಯ ದಾನಿಗಳ ಆರ್ಥಿಕ ಸಹಾಯದ ಅವಶ್ಯಕತೆ ಇದೆ.

ಖುಷಿಯಾಗಿದ್ದ ಪುಟ್ಟ ಕುಟುಂಬಕ್ಕೆ ಆಘಾತ​ ನೀಡಿದ ಕ್ಯಾನ್ಸರ್​ ಸುದ್ದಿ: ತಾಯಿಯ ಬರುವಿಕೆಗೆ ಕಾಯುತ್ತಿದ್ದಾರೆ ಪುಟ್ಟ ಮಕ್ಕಳುಹೌದು ದಾವಣಗೆರೆಯ ಶ್ರೀ ಲಕ್ಷ್ಮಿ ಹಾಗೂ ವಿಜಯ್​ ದಂಪತಿಗೆ ಇಬ್ಬರು ಪುಟ್ಟ ಮಕ್ಕಳು. ಸರ್ಕಾರಿ ಅನುದಾನಿತ ಶಾಲೆಯಲ್ಲಿ ಶಿಕ್ಷಕರಾಗಿದ್ದ ವಿಜಯ್ ಕುಟುಂಬ ಬಡತನದಲ್ಲಿದ್ದರೂ ಖುಷಿಯಿಂದ ಜೀವನ ಸಾಗಿಸುತ್ತಿದ್ದರು. ಆದರೆ ಸಂಭ್ರಮದಿಂದಿದ್ದ ಕುಟುಂಬದಲ್ಲಿ ಕಳೆದ 20 ದಿನಗಳ ಹಿಂದೆ ಬಿರುಗಾಳಿ ಬೀಸಿತ್ತು, ಇದ್ದಕ್ಕಿದ್ದಂತೆ ಶ್ರೀಲಕ್ಷ್ಮಿ ಆರೋಗ್ಯದಲ್ಲಿ ಏರುಪೇರಾಗಿತ್ತು. ದಾವಣಗೆರೆಯ ಬಾಪೂಜಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ನಡೆಸಿ ಬಿಳಿ ರಕ್ತ ಕಣದಲ್ಲಿ ಇಳಿತವಾಗಿದೆ ಎಂದು ರಕ್ತ ನೀಡಿದ್ದರು. ಎಲ್ಲವೂ ಸರಿಯಾಯ್ತು ಎನ್ನುವಷ್ಟರಲ್ಲಿ ಮತ್ತೆ ಸುಸ್ತು, ಬಳಲಿಕೆ ಆರಂಭವಾಗಿತ್ತು. ಈ ವೇಳೆ ಪರೀಕ್ಷಿಸಿದ ವೈದ್ಯರು ಅವರನ್ನು ಮಣಿಪಾಲ ಆಸ್ಪತ್ರೆಗೆ ಹೆಚ್ಚಿನ ಪರೀಕ್ಷೆ ನಡೆಸಲು ಕಳುಹಿಸಿದ್ದರು.

ಮಣಿಪಾಲ ಆಸ್ಪತ್ರೆಗೆ ಬಂದು ಪರೀಕ್ಷೆ ನಡೆಸಿದಾಗ ಆಘಾತವೇ ಕಾದಿತ್ತು. ಪರೀಕ್ಷೆ ನಡೆಸಿದ್ದ ವೈದ್ಯರು ಶ್ರೀಲಕ್ಷ್ಮಿ ಕ್ಯಾನ್ಸರ್​ ರೋಗಕ್ಕೀಡಾಗಿದ್ದಾರೆಂದು ತಿಳಿಸಿದ್ದರು. ಅಲ್ಲದೇ ಬೋನ್​ ಮ್ಯಾರೋ ಮಾಡಿದರೆ ಇದನ್ನು ಸಂಪೂರ್ಣವಾಗಿ ಶಮನಗೊಳಿಸಲು ಸಾಧ್ಯ ಎಂದಿದ್ದರು. ಈ ವಿಚಾರ ಕೇಳಿದ ವಿಜಯ್ ದಂಪತಿಗೆ ಬರಸಿಡಿಲು ಬಡಿದಂತಾಗಿತ್ತು. ಯಾಕೆಂದರೆ ಬೋನ್​ ಮ್ಯಾರೋಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತವೆ ಇಷ್ಟು ಹಣ ಒಂದುಗೂಡಿಸುವುದು ಬಡ ದಂಪತಿಗೆ ಅಸಾಧ್ಯದ ಮಾತು. ಹೀಗಿದ್ದರೂ ಚಿಕಿತ್ಸೆ ನೀಡದೇ ಸುಮ್ಮನಿದ್ದರೂ ಆತಂಕ ತಪ್ಪಿದ್ದಲ್ಲ. ಹೀಗಾಗಿ ಮತ್ತೇನನ್ನೂ ಯೋಚಿಸದ ಅವರು ಚಿಕಿತ್ಸೆಗಾಗಿ ಬಂದದ್ದು ಬೆಂಗಳೂರಿನ ನಾರಾಯಣ ಹೃದಯಾಲಯದ 'ಮಜುಂದಾರ್​ ಷಾ' ಆಸ್ಪತ್ರೆಗೆ. ಇಲ್ಲಿ ಮತ್ತಷ್ಟು ಪರೀಕ್ಷೆ ನಡೆಸಿದ ವೈದ್ಯರು. 3 ಲಕ್ಷ ವೆಚ್ಚದ ಕಿಮೋಥೆರಪಿ ನೀಡಿ ಬಳಿಕ ಬೋನ್​ ಮ್ಯಾರೋ ಚಿಕಿತ್ಸೆ ನೀಡಬಹುದೆಂಬ ಸಲಹೆ ನೀಡಿದ್ದರು. ಆದರೆ ಇದಕ್ಕೆ ಒಟ್ಟು 18 ಲಕ್ಷ ಖರ್ಚಾಗುತ್ತದೆ ಎಂದೂ ತಿಳಿಸಿದ್ದರು.

ಶ್ರೀಲಕ್ಷ್ಮಿ ಗಂಡ ವಿಜಯ್​ 14 ವರ್ಷದಿಂದ ಅನುದಾನಿತ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಿದ್ದರೂ ಹೆಂಡತಿಯ ಚಿಕಿತ್ಸೆಗೆ ಯಾವುದೇ ಆರ್ಥಿಕ ನೆರವು ಸಿಗಲಿಲ್ಲ. ಆದರೂ ಎದೆಗುಂದದ ಅವರು ಸಾಲ ಸೋಲ ಮಾಡಿ ಕಿಮೋಥೆರಪಿ ಮಾಡಿಸಿದ್ದಾರೆ. ಕಳೆದ 12 ದಿನಗಳಿಂದ ನಾರಾಯಣ ಹೃದಯಾಲಯದಲ್ಲಿ ಕಿಮೋಥೆರಪಿ ಪಡೆಯುತ್ತಿರುವ ಶ್ರೀಲಕ್ಷ್ಮಿ ಚಿಕಿತ್ಸೆಗೆ ಈಗಾಗಲೇ ಸುಮಾರು 3 ಲಕ್ಷ ಖರ್ಚಾಗಿದೆ. ಆದರೆ ಮುಂದೇನು ಎಂಬುವುದು ತಿಳಿದಿಲ್ಲ. ಬೋನ್​ ಮ್ಯಾರೋಗೆ ಈ ಬಡ ಕುಟುಂಬಕ್ಕೆ ಇನ್ನೂ 15 ಲಕ್ಷದ ಅಗತ್ಯವಿದೆ. ಇತ್ತ ಅಜ್ಜಿ ಮನೆಯಲ್ಲಿರುವ ಈಗಷ್ಟೇ ಶಾಲೆಗೆ ಸೇರಿ ಭವಿಷ್ಯದ ಕನಸು ಕಾಣುತ್ತಿರುವ ನಾಲ್ಕೂವರೆ ವರ್ಷದ ಮಗು ಹಾಗೂ ಅಂಬೆಗಾಲನ್ನಿಟ್ಟು ಈಗಷ್ಟೇ ನಡೆಯಲು ಕಲಿತಿರುವ ಒಂದೂವರೆ ವರ್ಷದ ಪುಟ್ಟ ಕಂದಮ್ಮ, ಇಬ್ಬರೂ ಮಕ್ಕಳು ಅಮ್ಮ ಗುಣಮುಖಳಾಗಿ ಇವತ್ತು ಬರುತ್ತಾರೆ, ಎಂಬ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಸಾಲ ಮಾಡಿ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ಸಹೃದಯಿ ದಾನಿಗಳ ಆರ್ಥಿಕ ನೆರವಿನ ಅಗತ್ಯವಿದೆ. ಕುಟುಂಬಕ್ಕೆ ನೆರವು ಮಾಡಲು ಬಯಸುವವರು ಈ ಕೆಳಗೆ ನೀಡಿರುವ ಬ್ಯಾಂಕ್​ ಅಕೌಂಟ್​ಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಬೇಕು ಎಂಬುವುದಷ್ಟೇ ನಮ್ಮ ಮನವಿ.

ಖಾತೆದಾರರ ಹೆಸರು: Mrs SHREE LAKSHMI B. L
ಬ್ಯಾಂಕ್​ ಅಕೌಂಟ್​ ನಂಬರ್​: 64145728472
IFSC Number: SBIN0040946


ಈ ಕುಟುಂಬದಲ್ಲಿ ಮನೆ ಮಾಡಿರುವ ದುಃಖವನ್ನು ಹೋಗಲಾಡಿಸಿ ಮತ್ತೆ ನಗು ತರಿಸಲು ದಾನಿಗಳಿಂದಷ್ಟೇ ಸಾಧ್ಯ. ಈ ನಗುವಿನಲ್ಲಿ ನಮ್ಮದೂ ಒಂದು ಪಾಲಿರಲಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಶೀಲಾ, ಕುಟುಂಬಸ್ಥರು: 8296317642
First published:October 2, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ