Polygraph Test: ಸ್ಯಾಂಡಲ್​ವುಡ್ ಡ್ರಗ್ ಕೇಸ್; ಸತ್ಯಾಂಶ ತಿಳಿಯಲು ಸಿಸಿಬಿಯಿಂದ ವಿರೇನ್ ಖನ್ನಾಗೆ ಪಾಲಿಗ್ರಾಫ್ ಟೆಸ್ಟ್​

Sandalwood Drug Case: ಪಾಲಿಗ್ರಾಫ್ ಪರೀಕ್ಷೆಯಿಂದ ಸುಳ್ಳು ಹೇಳಿಕೆಗಳನ್ನು ಕಂಡುಹಿಡಿಯಬಹುದು. ಪಾಲಿಗ್ರಾಪ್ ಎಂಬುದು ಸೈಕಲಾಜಿಕಲ್ ಎಕ್ಸಾಮಿನೇಷನ್​ನ ಒಂದು ಭಾಗ. ಆರೋಪಿಗಳ ಸುಳ್ಳು ಹೇಳಿಕೆ ಪತ್ತೆ ಮಾಡಲು ಪಾಲಿಗ್ರಾಫ್ ಪರೀಕ್ಷೆ ನಡೆಸಲಾಗುತ್ತದೆ.

news18-kannada
Updated:October 2, 2020, 1:05 PM IST
Polygraph Test: ಸ್ಯಾಂಡಲ್​ವುಡ್ ಡ್ರಗ್ ಕೇಸ್; ಸತ್ಯಾಂಶ ತಿಳಿಯಲು ಸಿಸಿಬಿಯಿಂದ ವಿರೇನ್ ಖನ್ನಾಗೆ ಪಾಲಿಗ್ರಾಫ್ ಟೆಸ್ಟ್​
ಫ್ಯಾಷನ್ ಕಾರ್ಯಕ್ರಮವೊಂದರಲ್ಲಿ ಪೊಲೀಸ್ ವೇಷದಲ್ಲಿರುವ ವಿರೇನ್ ಖನ್ನಾ
  • Share this:
 ಬೆಂಗಳೂರು (ಅ. 2): ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಸ್ಯಾಂಡಲ್​ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರೇನ್ ಖನ್ನಾ ಮಾಹಿತಿಯನ್ನು ಮರೆಮಾಚಿದ್ದರು. ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ವಿರೇನ್ ಖನ್ನಾಗೆ ಪಾಲಿಗ್ರಾಫ್ ಪರೀಕ್ಷೆ ನಡೆಸಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಆ ಮನವಿಗೆ ಒಪ್ಪಿಗೆ ನೀಡಿರುವ ನ್ಯಾಯಾಲಯ ವಿರೇನ್ ಖನ್ನಾಗೆ ಪಾಲಿಗ್ರಾಫ್ ಟೆಸ್ಟ್ ನಡೆಸಲು ಅನುಮತಿ ನೀಡಿದೆ. ಈಗಾಗಲೇ ಬಂಧಿತನಾಗಿರುವ ವಿರೇನ್ ಖನ್ನಾ ಪೊಲೀಸರ ವಿಚಾರಣೆ ವೇಳೆ ಯಾವ ಮಾಹಿತಿಯನ್ನೂ ನೀಡಿಲ್ಲ. ಸರಿಯಾದ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಪಾಲಿಗ್ರಾಫ್ ಟೆಸ್ಟ್ ನಡೆಸಲು ಅನುಮತಿ ಕೋರಿ ಸಿಸಿಬಿ ಪೊಲೀಸರು ನ್ಯಾಯಾಲಯದ ಮೊರೆಹೋಗಿದ್ದರು.

ಎಸ್​.ಪಿ. ರವೀಂದ್ರ ಅವರ ವಾದದ ಮೇರೆಗೆ ಪಾಲಿಗ್ರಾಫ್ ಟೆಸ್ಟ್​ಗೆ ನ್ಯಾಯಾಲಯ ಅನುಮತಿ ನೀಡಿದೆ. ಪಾಲಿಗ್ರಾಫ್ ಟೆಸ್ಟ್ ಪರೀಕ್ಷೆಯ ಉಪಕರಣ ಮಡಿವಾಳದ ಎಫ್​ಎಸ್ಎಲ್​ನಲ್ಲಿದೆ. ಹಾಗಿದ್ದರೆ ಏನಿದು ಪಾಲಿಗ್ರಾಫ್ ಪರೀಕ್ಷೆ? ಎಂದು ನೀವು ಯೋಚಿಸುತ್ತಿರಬಹುದು. ಈ ಪಾಲಿಗ್ರಾಫ್ ಪರೀಕ್ಷೆಯಿಂದ ಸುಳ್ಳು ಹೇಳಿಕೆಗಳನ್ನು ಕಂಡುಹಿಡಿಯಬಹುದು. ಪಾಲಿಗ್ರಾಪ್ ಎಂಬುದು ಸೈಕಲಾಜಿಕಲ್ ಎಕ್ಸಾಮಿನೇಷನ್​ನ ಒಂದು ಭಾಗ. ಆರೋಪಿಗಳ ಸುಳ್ಳು ಹೇಳಿಕೆ ಪತ್ತೆ ಮಾಡಲು ಪಾಲಿಗ್ರಾಫ್ ಪರೀಕ್ಷೆ ನಡೆಸಲಾಗುತ್ತದೆ.

ಇದನ್ನೂ ಓದಿ: ಮನೆಯಿಂದ ಹೊರಹೋಗುವ ಮುನ್ನ ಎಚ್ಚರ!; ಮಾಸ್ಕ್ ಧರಿಸದಿದ್ದರೆ 1,000 ರೂ. ದಂಡ

ಬೆಂಗಳೂರಿನ ಮಡಿವಾಳ ಎಫ್ಎಸ್​ಎಲ್​ನಲ್ಲಿ ಇದರ ವಿಭಾಗವಿದೆ. ಆರೋಪಿ ಕೊಡುವ ಹೇಳಿಕೆಗಳು ಅಸ್ಪಷ್ಟ ಮತ್ತು ಸುಳ್ಳಾಗಿದ್ದು ತನಿಖೆಗೆ ಅಗತ್ಯವಿದ್ದರೆ ಈ ಪರೀಕ್ಎ ನಡೆಸಲು ನ್ಯಾಯಾಲಯದ ಅನುಮತಿ ಕೇಳಬೇಕು. ಆರೋಪಿಯ ದೇಹದ ಐದು ಭಾಗದಲ್ಲಿ ವೈರ್ ಮಾದರಿಯ ವಸ್ತುವನ್ನು ಹಚ್ಚಲಾಗುತ್ತದೆ. ಸೈಕಲಾಜಿಸ್ಟ್ ಅವರೇ ಇದರ ನಿರ್ವಹಣೆ ಮಾಡಲಿದ್ದಾರೆ. ದೇಹದ ಐದು ಭಾಗದಲ್ಲಿ ವೈರ್ ಹಚ್ಚಿದ ಬಳಿದ ತನಿಖಾಧಿಕಾರಿಗಳು ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸುತ್ತಾರೆ.



ಅಧಿಕಾರಿಗಳು ಒಂದಷ್ಟು ಕ್ಲಿಷ್ಟಕರವಾದ ಪ್ರಶ್ನೆಗಳನ್ನ ಕೇಳಲಿದ್ದು, ಆಗ ಆರೋಪಿ ಸುಳ್ಳು ಮಾಹಿತಿ ಉತ್ತರಿಸುವಾಗ ದೇಹದಲ್ಲಿ ವೇರಿಯೇಷನ್ ಕಂಡು‌ಬರುತ್ತದೆ. ಆರೋಪಿ ಈ ಹಿಂದೆ ಹೇಳಿಕೆ ದಾಖಲಿಸಿರೋ ಬಗ್ಗೆಯೂ ಅಧಿಕಾರಿಗಳು ಪ್ರಶ್ನೆ ಮಾಡಲಿದ್ದಾರೆ. ಆಗ ಸುಳ್ಳು ಹೇಳಿಕೆ ನೀಡುವಾಗ ದೇಹದಲ್ಲಿ ವೈಬ್ರೇಷನ್ ಕಂಡು ಬರುತ್ತದೆ. ಹೀಗಾಗಿ ಯಾವುದು ಸುಳ್ಳು ಮತ್ತು ಯಾವುದು ಸತ್ಯ ಎಂಬ ಹೇಳಿಕೆಗಳನ್ನು ಪತ್ತೆ ಹಚ್ಚಲು ಪಾಲಿಗ್ರಾಫ್ ಪರೀಕ್ಷೆ ನಡೆಸಲಾಗುತ್ತದೆ.
Published by: Sushma Chakre
First published: October 2, 2020, 12:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading