• Home
  • »
  • News
  • »
  • state
  • »
  • Belagavi Politics: ಬೆಳಗಾವಿಯಲ್ಲಿ ನವರಾತ್ರಿ ಸಂಭ್ರಮ; ದಾಂಡಿಯಾ ಹೆಸರಿನಲ್ಲಿ ಇಬ್ಬರು ನಾಯಕರ ಪಾಲಿಟಿಕ್ಸ್!

Belagavi Politics: ಬೆಳಗಾವಿಯಲ್ಲಿ ನವರಾತ್ರಿ ಸಂಭ್ರಮ; ದಾಂಡಿಯಾ ಹೆಸರಿನಲ್ಲಿ ಇಬ್ಬರು ನಾಯಕರ ಪಾಲಿಟಿಕ್ಸ್!

ಬೆಳಗಾವಿ ನಾಯಕರ ಪಾಲಿಟಿಕ್ಸ್​

ಬೆಳಗಾವಿ ನಾಯಕರ ಪಾಲಿಟಿಕ್ಸ್​

ದಾಂಡಿಯಾ ಉತ್ಸವದಲ್ಲಿ ಫುಲ್ ಆ್ಯಕ್ಟೀವ್ ಆಗಿ ಭಾಗವಹಿಸುತ್ತಿದ್ದಾರೆ. ಸದ್ಯ ಬೆಳಗಾವಿ ಉತ್ತರ ಕ್ಷೇತ್ರದ ಹಾಲಿ ಶಾಸಕರಾಗಿರುವ ಅನಿಲ್ ಬೆನಕೆ ಮರಾಠಾ ಸಮುದಾಯಕ್ಕೆ ಸೇರಿದ್ದಾರೆ. ಇಲ್ಲಿ ಮರಾಠ ಲಿಂಗಾಯತ ಕಾಂಬಿನೇಶ್ ಆದ್ರೆ ಮಾತ್ರ ಬಿಜೆಪಿ ಗೆಲುವು ಸುಲಭವಾಗಿದೆ.

  • Share this:

ಬೆಳಗಾವಿ (ಅ.2): ಬೆಳಗಾವಿಯಲ್ಲಿ ಗಣೇಶೋತ್ಸವ ಬಳಿಕ ನವರಾತ್ರಿ (Navaratri) ಸಂಭ್ರಮ ಜೋರಾಗಿದೆ. 2023ರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಈಗ ಟಿಕೆಟ್ ಗಾಗಿ (Ticket) ಕಸರತ್ತು ಈಗಿನಿಂದಲೇ ಆರಂಭವಾಗಿದೆ. ನವರಾತ್ರಿ ಉತ್ಸವದಲ್ಲಿ ಬೆಳಗಾವಿ (Belagavi) ಉತ್ತರ ಮತಕ್ಷೇತ್ರದ ಬಿಜೆಪಿ ನಾಯಕರ (BJP Leaders) ಮಧ್ಯೆ ದಾಂಡಿಯಾ ಪಾಲಿಟಿಕ್ಸ್ (Dandiya Politics) ನಡೆಯುತ್ತಿದೆ.


ಟಿಕೆಟ್ ಆಕಾಂಕ್ಷಿಗಳು ಫುಲ್ ಆ್ಯಕ್ಟಿವ್


ಅದು ಚುನಾವಣೆ ಸಮೀಪಿಸುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳು (Ticket Aspirants) ಫುಲ್ ಆ್ಯಕ್ಟಿವ್ ಆಗಿದ್ದಾರೆ. ಕ್ಷೇತ್ರದ ಜನರ ಗಮನ ಸೆಳೆಯಲು ನಾನಾ ಕಸರತ್ತು ಆರಂಭಿಸಿದ್ದಾರೆ. ಇನ್ನೂ ಹಾಲಿ ಬಿಜೆಪಿ ಶಾಸಕ ಅನಿಲ್ ಬೆನಕೆ ಮತ್ತು ಮಹಾನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮುರುಘೇಂದ್ರಗೌಡ ಪಾಟೀಲ್ ಮಧ್ಯೆ ಮುಸುಕಿನ ಗುದ್ದಾಟಕ್ಕೆ ನಾಂದಿ ಹಾಡಿದೆ. ನವರಾತ್ರಿ ಉತ್ಸವದಲ್ಲಿ ಫುಲ್ ಆ್ಯಕ್ಟೀವ್ ಆಗಿರುವ ಉಭಯ ನಾಯಕರು 9 ದಿನಗಳ ದಸರಾ ಪ್ರಯುಕ್ತ ದಾಂಡಿಯಾ ಆಯೋಜನೆ ಮಾಡಿದ್ದಾರೆ.


ದಾಂಡಿಯಾ ಉತ್ಸವದಲ್ಲಿ ರಾಜಕೀಯ ನಾಯಕರು


ದಾಂಡಿಯಾ ಉತ್ಸವದಲ್ಲಿ ಫುಲ್ ಆ್ಯಕ್ಟೀವ್ ಆಗಿ ಭಾಗವಹಿಸುತ್ತಿದ್ದಾರೆ. ಸದ್ಯ ಬೆಳಗಾವಿ ಉತ್ತರ ಕ್ಷೇತ್ರದ ಹಾಲಿ ಶಾಸಕರಾಗಿರುವ ಅನಿಲ್ ಬೆನಕೆ ಮರಾಠಾ ಸಮುದಾಯಕ್ಕೆ ಸೇರಿದ್ದಾರೆ. ಇಲ್ಲಿ ಮರಾಠ ಲಿಂಗಾಯತ ಕಾಂಬಿನೇಶ್ ಆದ್ರೆ ಮಾತ್ರ ಬಿಜೆಪಿ ಗೆಲುವು ಸುಲಭವಾಗಿದೆ. ಇನ್ನೂ ಬಿಜೆಪಿಯಲ್ಲಿ ಸದ್ಯಕ್ಕೆ ಹಾಲಿ ಶಾಸಕನನ್ನು ಬದಲಾಯಿಸುವ ಆಲೋಚನೆ ನಮ್ಮ ಮುಂದಿಲ್ಲ. ನಮ್ಮ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ ಅಂದ್ರೆ ಬಿಜೆಪಿ ಪಕ್ಷದ ಸ್ಟ್ರಾಂಗ್ ಆಗಿದೆ ಎಂದರ್ಥ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಹೇಳಿದ್ದಾರೆ.


ಇದನ್ನೂ ಓದಿ: Rain Update: ಮತ್ತೆ ಹಲವೆಡೆ ವರುಣನ ಆರ್ಭಟ; ರಾಜ್ಯದಲ್ಲಿ ಇನ್ನೂ 5 ದಿನ ಭಾರೀ ಮಳೆ
ಲಿಂಗಾಯತ ಕೋಟಾದಡಿ ಟಿಕೆಟ್ ಗಿಟ್ಟಿಸಲು ಕಸರತ್ತು


ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಈಗ ಬೆಳಗಾವಿ ಬಿಜೆಪಿ ಪಾಳ್ಯದಲ್ಲಿ ಸಾಕಷ್ಟು ಚರ್ಚೆ ಗೆ ಗ್ರಾಸವಾಗಿದೆ. ಒಂದೆಡೆ  ಹಾಲಿ ಶಾಸಕರು ನೆಮ್ಮದಿಯ ನಿಟ್ಟುಸಿರು ಬಿಟ್ಟರೆ. ಅತ್ತ ಆಕಾಂಕ್ಷಿಗಳು ಮಾತ್ರ ಇಟ್ಟ ಹೆಜ್ಜೆಯಿಂದ ಹಿಂದೆ ಸರಿಯುವ ಲಕ್ಷಣಗಳು ಮಾತ್ರ ಗೋಚರಿಸುತ್ತಿಲ್ಲ.


ಯಾಕೆಂದರೆ ಮಹಾನಗರ ಪಾಲಿಕೆ ಚುನಾವಣೆ, ಬುಡಾ ಅಧ್ಯಕ್ಷರ ನೇಮಕ ವೇಳೆ ಲಿಂಗಾಯತರಿಗೆ ತಾರತಮ್ಯ ಆರೋಪ ಕೇಳಿ ಬರುತ್ತಿದೆ. ಇದೇ ಕಾರಣಕ್ಕೆ ಲಿಂಗಾಯತ ಕೋಟಾದಡಿ ಟಿಕೆಟ್ ಗಿಟ್ಟಿಸಲು ಮುರುಘೇಂದ್ರಗೌಡ ಪಾಟೀಲ್ ಕಸರತ್ತು ನಡೆಸಿದ್ದಾರೆ. ಒಂದು ವೇಳೆ ಪಕ್ಷದವರು ಸಮೀಕ್ಷೆಗೆ ಮುಂದಾದ್ರೆ ತನ್ನ ಹೆಸರು ಮುಂಚೂಣಿಯಲ್ಲಿ ಇರಲಿ ಎಂದು ಮುರುಘೇಂದ್ರಗೌಡ ಪಾಟೀಲ್ ಫುಲ್ ಆಕ್ಟಿವ್ ಆಗಿದ್ದಾರೆ.


ಇದನ್ನೂ ಓದಿ: Cleanest City: ಅತ್ಯಂತ ಸ್ವಚ್ಛನಗರವಾಗಿ ಹೊರಹೊಮ್ಮಿದ ಇಂದೋರ್‌, ಮೈಸೂರಿಗೆ ಎಷ್ಟನೇ ಸ್ಥಾನ ಗೊತ್ತಾ?


ಉಭಯ ನಾಯಕರಲ್ಲಿ ಟಿಕೆಟ್ ಫೈಟ್, ಜನರಲ್ಲಿ ಗೊಂದಲ


ಶಾಸಕ‌ ಅನಿಲ್ ಬೆನಕೆ ಸಹ ಈಗಿಂದಲೇ ಚುನಾವಣೆಗೆ ವೇದಿಕೆ ರೂಪಿಸುತ್ತಿದ್ದಾರೆ. ಅದರಲ್ಲೂ ಬಿಜೆಪಿ ನಾಯಕರೇ ಏಟು ಎದುರೇಟು ಎಂಬಂತೆ ದಾಂಡಿಯಾ ಕಾರ್ಯಕ್ರಮವನ್ನ ಆಯೋಜನೆ ಮಾಡ್ತಿದ್ದಾರೆ. ಬೆಳಗಾವಿ ಬಿಜೆಪಿಯಲ್ಲಿ ಈಗ ಎಲ್ಲವೂ ಸರಿಯಲ್ಲ. ಸವದಿ ಜಾರಕಿಹೊಳಿ ಬಣದ ಎಫೆಕ್ಟ್ ಈಗ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಕಂಡು ಬರುತ್ತಿದೆ. ಉಭಯ ನಾಯಕರಲ್ಲಿನ‌ ಟಿಕೆಟ್ ಫೈಟ್ ಜನರಲ್ಲಿ ಗೊಂದಲ ಸೃಷ್ಟಿಸಿದೆ.

Published by:ಪಾವನ ಎಚ್ ಎಸ್
First published: