Shivamogga Murder: ಶಾಸಕ ಸ್ಥಾನವಲ್ಲ, ಹಿಂದುತ್ವವೇ ಮುಖ್ಯ, ಇನ್ನು ಎಟ್ಯಾಕ್ ಮಾಡಿದ್ರೆ ಸುಮ್ನಿರಲ್ಲ ಎಂದ ರೇಣುಕಾಚಾರ್ಯ

ನನಗೆ ಶಾಸಕ ಸ್ಥಾನ, ಹುದ್ದೆ ಮುಖ್ಯವಲ್ಲ. ನನಗೇ ಹಿಂದುತ್ವ ಮುಖ್ಯ. ಸವಾಲು ಹಾಕುತ್ತೇನೆ, ಇನ್ಮುಂದೆ ಅಟ್ಯಾಕ್ ಮಾಡಿದ್ರೆ ಸುಮ್ಮನಿರಲ್ಲ. ಗುರುವಾರ ಹರ್ಷನ ಮನೆಗೆ ಭೇಟಿ ಕೊಡುತ್ತೇನೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ಎಂ.ಪಿ. ರೇಣುಕಾಚಾರ್ಯ

ಎಂ.ಪಿ. ರೇಣುಕಾಚಾರ್ಯ

  • Share this:
ಬೆಂಗಳೂರು(ಫೆ.22): ಬೆಂಳೂರಿನಲ್ಲಿ (Bengaluru) ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ (Renukacharya) ಮಾಧ್ಯಮಗೋಷ್ಠಿ ಮಾಡಿದ್ದು, ನನಗೆ ಶಾಸಕ ಸ್ಥಾನ, ಹುದ್ದೆ ಮುಖ್ಯವಲ್ಲ. ನನಗೇ ಹಿಂದುತ್ವ (Hindutwa) ಮುಖ್ಯ. ಸವಾಲು ಹಾಕುತ್ತೇನೆ, ಇನ್ಮುಂದೆ ಅಟ್ಯಾಕ್ ಮಾಡಿದ್ರೆ ಸುಮ್ಮನಿರಲ್ಲ. ಗುರುವಾರ ಹರ್ಷನ ಮನೆಗೆ ಭೇಟಿ ಕೊಡುತ್ತೇನೆ ಎಂದಿದ್ದಾರೆ. ಶಿವಮೊಗ್ಗದಲ್ಲಿ (Shivamogga) ನಡೆದ ಹರ್ಷನ ಕೊಲೆ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶಿವಮೊಗ್ಗದಲ್ಲಿ ಅಪ್ರತಿಮ ದೇಶಭಕ್ತನ ಕೊಲೆಯಾಗಿದೆ. ಇನ್ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು. ರಾಜ್ಯದಲ್ಲಿ ಮತ್ತು ದೇಶದಲ್ಲಿ ನಮ್ಮದೇ ಸರ್ಕಾರವಿದೆ. ಪ್ರಕರಣದ ತನಿಖೆಯನ್ನು ಎನ್ಐಎಗೆ (NIA) ವಹಿಸಬೇಕು. ಹರ್ಷನ ಕುಟುಂಬಕ್ಕೆ ನಾನು ವೈಯಕ್ತಕವಾಗಿ 2 ಲಕ್ಷ ರೂ. ಕೊಟ್ಟಿದ್ದೇನೆ ಎಂದು ಅವರು ಹೇಳಿದ್ದಾರೆ. ಹರ್ಷನ ಕುಟುಂಬಕ್ಕೆ 6 ಲಕ್ಷ ನೆರವು ಆರೋಪಿಗಳನ್ನು ಬಂಧಿಸಿದರೆ ಸಾಲದು ಅವರನ್ನು ಎನ್ ಕೌಂಟರ್ ಮಾಡಬೇಕು. ಅವರ ಕುಟುಂಬದ ಕಣ್ಣೀರನ್ನು ನೋಡಲು ಆಗುತ್ತಿಲ್ಲ. ಅವನಿಗೆ ಇಬ್ಬರು ಸಹೋದರಿಯರಿದ್ದಾರೆ. ನಿನ್ನೆ ಘೋಷಣೆ ಮಾಡಿದ್ದ 2 ಲಕ್ಷ ರೂ.ಗಳೊಂದಿಗೆ ಮತ್ತೆ 4 ಲಕ್ಷ ರೂ. ಸೇರಿಸಿ ಒಟ್ಟು 6 ಲಕ್ಷ ರೂ. ಕೊಟ್ಟು ಬರುತ್ತೇನೆ ಎಂದು ಅವರು ಹೇಳಿದ್ದಾರೆ.

ಮೃತ ಹರ್ಷನ ದೇಹದಲ್ಲಿ ನಮ್ಮದೆ ಹಿಂದೂ ರಕ್ತ ಹರಿಯುತ್ತಿತ್ತು. ಎಲ್ಲ ಮುಸ್ಲಿಮರು ಭಯೋತ್ಪಾದಕರಲ್ಲ. ಘಟನೆಗೆ ಸಂಬಂಧಿಸಿದಂತೆ ನಾನು ಮುಸ್ಲಿಮರ ಬಗ್ಗೆ ಮಾತನಾಡುವುದಿಲ್ಲ. ನಮ್ಮ ಮೃಧುಧೋರಣೆ ತೋರಿದ್ದೇವೆ. ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಶಾಸಕ ರೇಣುಕಾರ್ಯ ಹೇಳಿದ್ದಾರೆ.

ಎಚ್​ಡಿಕೆ ಹೇಳಿಕೆ ಬಗ್ಗೆ ಪ್ರತಿಕ್ರಿಯೆ

ಸರ್ಕಾರದ ವೈಫಲ್ಯದಿಂದ ಘಟನೆ ಆಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಕೊಟ್ಟಿರುವ ಬಗ್ಗೆ ರೇಣುಕಾಚಾರ್ಯ ಹೇಳಿಕೆ ನೀಡಿದ್ದು, ಡಿಕೆಶಿ, ಸಿದ್ದರಾಮಯ್ಯ, ಕುಮಾರಸ್ವಾಮಿ ಅವರ ಪ್ರಚೋದನಕಾರಿ ಹೇಳಿಕೆಗಳು ಇದಕ್ಕೆ ಕಾರಣ. ಇಂಥ ಸಂದರ್ಭದಲ್ಲಿ ಸರ್ಕಾರದ ಜೊತೆ ನಿಲ್ಲಬೇಕಿತ್ತು ಎಂದಿದ್ದಾರೆ. . ಆಗ ನಮ್ಮ ಪಕ್ಷದ ತಾಲೂಕಾ ಘಟಕದಿಂದ ಸಂಗ್ರಹಿಸಿರುವ 1 ಲಕ್ಷ ರೂ. ಹಾಗೂ ವೈಯಕ್ತಿಕವಾಗಿ ನಾನು 5 ಲಕ್ಷ ರೂ. ಗಳನ್ನು ಕೊಡುತ್ತೇವೆ ಎಂದು ಅವರು ಹೇಳಿದ್ದಾರೆ.

ಆರೋಪಿಗಳು ಬೆಂಗಳೂರಿಗೆ ಎಸ್ಕೇಪ್

ಶಿವಮೊಗ್ಗ ಯುವಕನ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸುದ್ದಿ ಮಾಡುತ್ತಿದ್ದು, ಬೆಂಗಳೂರಿನಲ್ಲು (Bengaluru) ಪೊಲೀಸರು (Police) ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹರ್ಷ ಕೊಲೆ ಬಳಿಕ ಆರೋಪಿಗಳು ಬೆಂಗಳೂರು ಕಡೆಗೆ ಎಸ್ಕೇಪ್ (Escape) ಆಗಿರುವ ಶಂಕೆ ವ್ಯಕ್ತವಾಗಿದ್ದು ನಗರದಲ್ಲಿ ಅನುಮಾನಸ್ಪದ ವ್ಯಕ್ತಿಗಳನ್ನು ಪೊಲೀಸರು ತೀವ್ರವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಶಿವಮೊಗ್ಗದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣ ಸೇರಿ ಹಲವು ಕಡೆಗಳಲ್ಲಿ ನಿಗಾ ಇರಿಸಿದ್ದಾರೆ.

ಹಲವರನ್ನು ವಶಕ್ಕೆ ಪಡೆದು ವಿಚಾರಣೆ:

ಈ ವೇಳೆ ಕೆಲವು ಯುವಕರನ್ನ ವಶಕ್ಕೆ (Custody) ಪಡೆದು ಪೊಲೀಸರ ವಿಚಾರಣೆ ನಡೆಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಭಜರಂಗದಳದಲ್ಲಿ (Bhajarangdal) ಗುರುತಿಸಿಕೊಂಡಿದ್ದ ಹಿಂದೂ ಕಾರ್ಯಕರ್ತ ಹರ್ಷ ಕೊಲೆಯ ನಂತರ ಶಿವಮೊಗ್ಗದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದು ಪೊಲೀಸರು ಪ್ರದೇಶದ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ. ಘಟನೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ಬಹಳಷ್ಟು ಜನ ಈಗಾಗಲೇ ಪ್ರತಿಭಟನೆ ಮಾಡಿದ್ದಾರೆ.

ಅಂತಿಮ ಮೆರವಣಿಗೆಯಲ್ಲೂ ಕಿರಿಕ್

ಕಾರ್ಯಕರ್ತ ಹರ್ಷ ಅಂತಿಮ ಮೆರವಣಿಗೆ (Procession) ವೇಳೆಯೂ ಕಿರಿಕ್ ನಡೆದಿದ್ದು, ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕರು ವಾಹನಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ, ಕೆಲ ವಾಹನಗಳಿಗೆ ಬೆಂಕಿ ಹಚ್ಚಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕದಳ (Fire Force) ಸ್ಥಳಕ್ಕಾಗಮಿಸಿದೆ. 10ಕ್ಕೂ ಹೆಚ್ಚು ವಾಹನಗಳು ಹಾನಿಗೊಂಡಿದ್ದು ಹಣ್ಣಿನ ಅಂಗಡಿ ಸೇರಿದಂತೆ ಹಲವು ಅಂಗಡಿಗಳು ಧ್ವಂಸವಾಗಿದೆ. ಶಿವಮೊಗ್ಗ ಓ ಟಿ ರಸ್ತೆಯಲ್ಲಿ ಘಟನೆ ನಡೆದಿದೆ.
Published by:Divya D
First published: