ರಾಜಾಹುಲಿ ಯಡಿಯೂರಪ್ಪರನ್ನು ಬಿಜೆಪಿ ಹೈಕಮಾಂಡ್ ಕಡೆಗಣಿಸಿಲ್ಲ ಎಂಬ ಸಂದೇಶವನ್ನು ಇಂದು ರವಾನಿಸಿದೆ. ಬಿಜೆಪಿ (BJP) ನೂತನ ಸಂಸದೀಯ ಮಂಡಳಿಯನ್ನು ರಚಿಸಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರಿಗೆ ಬಿಜೆಪಿ ರಾಷ್ಟ್ರಮಟ್ಟದ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಲಾಗಿದೆ. ಮುಖ್ಯಮಂತ್ರಿ (Chief Minister) ಸ್ಥಾನದಿಂದ ಕೆಳಗಿಳಿದ ಬಳಿಕ ಯಡಿಯೂರಪ್ಪ ಒಳಗೊಳಗೆ ಬೇಸರ ಹೊಂದಿದ್ದರು. ಈಗ ಹೈಕಮಾಂಡ್ (High command) ಬಿಜೆಪಿ ರಾಷ್ಟ್ರಮಟ್ಟದ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿದೆ. ಹೊಸ ಸ್ಥಾನ ಸಿಗುತ್ತಿದ್ದಂತೆ ಯಡಿಯೂರಪ್ಪ ಸಂತೋಷಗೊಂಡಿದ್ದು (Happy), ಸಿಎಂ ಬೊಮ್ಮಾಯಿ ಸೇರಿದಂತೆ ಪ್ರಮುಖ ನಾಯಕರು ಶುಭಕೋರುತ್ತಿದ್ದಾರೆ. ಬಿಎಸ್ವೈ ಕೂಡ ಸುದ್ದಿಗೋಷ್ಠಿ ನಡೆಸಿ, ನಾನು ರಾಜಕೀಯ (Political) ನಿವೃತ್ತಿ ಜೀವನ ಎಂದಿಗೂ ಬಯಸಿಲ್ಲ, ಕೈಕಾಲು ಗಟ್ಟಿ ಇರೋವರೆಗೆ ಕೆಲಸ ಮಾಡ್ತೀನಿ ಅಂದ್ರು.
ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಹೈಕಮಾಂಡ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಇಂದು ಹೈಕಮಾಂಡ್ ಬಿಎಸ್ವೈಗೆ ರಾಷ್ಟ್ರಮಟ್ಟದ ಸಮಿತಿಯನ್ನು ಸ್ಥಾನ ನೀಡಿದ್ದು ಸಂತಸ ತಂದಿದೆ. ಈ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಬಿಎಸ್ವೈ ಸಂತಸ ಹಂಚಿಕೊಂಡರು.
ಹೈಕಮಾಂಡ್ ದೊಡ್ಡ ಜವಾಬ್ದಾರಿ ನೀಡಿದೆ-ಬಿಎಸ್ವೈ
ಬಿಜೆಪಿಯ ಕೇಂದ್ರೀಯ ಸಂಸತ್ತು ಮಂಡಳಿಗೆ ಮತ್ತು ಕೇಂದ್ರೀಯ ಚುನಾವಣಾ ಸಮಿತಿಗೆ ನನ್ನನ್ನು ಆಯ್ಕೆ ಮಾಡಿ, ಬಹಳ ದೊಡ್ಡ ಜವಾಬ್ದಾರಿಯನ್ನು ವರಿಷ್ಠರು ನೀಡಿದ್ದಾರೆ. ನಾನು ಯಾವತ್ತಿಗೂ ಯಾವುದೇ ಸ್ಥಾನಮಾನ ನಿರೀಕ್ಷೆ ಮಾಡಿರಲಿಲ್ಲ. ಈಗ ತುಂಬಾ ಸಂತೋಷವಾಗಿದೆ ಅಂದರು.
ಇದನ್ನೂ ಓದಿ: ರಾಷ್ಟ್ರಮಟ್ಟದಲ್ಲಿ ಬಿ ಎಸ್ ಯಡಿಯೂರಪ್ಪಗೆ ಸ್ಥಾನ ನೀಡಿದ ಬಿಜೆಪಿ
ರಾಜಕೀಯ ನಿವೃತ್ತಿ ಬಯಸಿಲ್ಲ
ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುವುದು ನನ್ನ ಕನಸು. ದಕ್ಷಿಣ ಭಾರತದ ರಾಜ್ಯಗಳ ಪ್ರವಾಸ ಮಾಡಿ, ವರಿಷ್ಠರು ಏನು ಹೇಳ್ತಾರೋ ಅದರಂತೆ ಅಲ್ಲಿ ಕೆಲಸ ಮಾಡುತ್ತೇನೆ. ನಾನು ಎಂದಿಗೂ ರಾಜಕೀಯ ಜೀವನವನ್ನು ನಿವೃತ್ತಿ ಜೀವನ ಎಂದಿಗೂ ಬಯಸಿಲ್ಲ ಅಂದರು.
ಎಲ್ಲರಿಗೂ ನಾನೇ ಉದಾಹರಣೆ
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ನನಗೆ ಒಂದೇ ಒಂದು ಸಂಕಲ್ಪ ಇತ್ತು. ಕರ್ನಾಟಕದಲ್ಲಿ ಎಲ್ಲಾ ನಾಯಕರ ಜೊತೆಗೂಡಿ ಮತ್ತೆ ಅಧಿಕಾರಕ್ಕೆ ತರಬೇಕು ಅನ್ನೋದು ಆಸೆಯಿತ್ತು. ಈಗ ದಕ್ಷಿಣ ಭಾರತ ರಾಜ್ಯಗಳನ್ನು ನೋಡುವಂತೆಯೂ ವರಿಷ್ಠರು ಸೂಚನೆ ನೀಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಸಾಮಾನ್ಯ ಕಾರ್ಯಕರ್ತನ ಕೆಲಸ ಗುರುತಿಸ್ತಾರೆ ಅನ್ನೋದಕ್ಕೆ ನಾನೇ ಉದಾಹರಣೆ ಅಂತಾ ಹೇಳಿದರು.
ಇದನ್ನೂ ಓದಿ: ಮುರುಗೇಶ್ ನಿರಾಣಿ ಮುಂದಿನ ಮುಖ್ಯಮಂತ್ರಿ?- ಬಾಗಲಕೋಟೆಯಲ್ಲಿ ಪೋಸ್ಟರ್ ವಿವಾದ!
ಬೇರೆ ಪಕ್ಷ ಬರಲು ಬಿಡುವುದಿಲ್ಲ
ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಬೇರೆ ಪಕ್ಷವನ್ನು ಅಧಿಕಾರಕ್ಕೆ ಬರಲು ಬಿಡುವುದಿಲ್ಲ ಅಂತಾ ಯಡಿಯೂರಪ್ಪ ಗುಡುಗಿದ್ದಾರೆ. ನಾವೆಲ್ಲರೂ ಒಟ್ಟಾಗಿ ಪ್ರವಾಸ ಮಾಡುತ್ತೇವೆ. ದಕ್ಷಿಣ ಭಾರತದ ರಾಜ್ಯಗಳಲ್ಲೂ ಪ್ರವಾಸ ಮಾಡಿ ಅಲ್ಲಿ ನಾನು ಪಕ್ಷ ಸಂಘಟಿಸುತ್ತೇನೆ. ಎಲ್ಲಾ ನಾಯಕರ ಜೊತೆಗೂಡಿ ರಾಜ್ಯಾದ್ಯಂತ ಪ್ರವಾಸ ಮಾಡಿ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಅಂದರು.
ಕೈ ಕಾಲು ಗಟ್ಟಿ ಇರುವವರೆಗೂ ಕೆಲಸ!
ಬಿಜೆಪಿ ಹೈಕಮಾಂಡ್ ನನಗೆ ಎಲ್ಲಾ ರೀತಿಯ ಸ್ಥಾನಮಾನ ನೀಡಿದೆ. ನನಗೆ ಯಾವುದೇ ಕೊರತೆ ಮಾಡಿಲ್ಲ. ನನಗೆ ಹೆಚ್ಚಿನ ಜವಾಬ್ದಾರಿ ಕೊಟ್ಟಿದ್ದಾರೆ. ಪಕ್ಷ ಬಲಪಡಿಸುವ ಕೆಲಸವನ್ನು ನಾನು ಮಾಡುತ್ತೇನೆ. ಕೈ ಕಾಲು ಗಟ್ಟಿ ಇರುವವರೆಗೂ ಪಾರ್ಟಿ ಬೆಳೆಸಲು ಕೆಲಸ ಮಾಡುತ್ತೇನೆ ಎಂದರು.
ಬೊಮ್ಮಾಯಿಗೆ ಬಿಎಸ್ವೈ ಬಹುಪರಾಕ್
ಸಿಎಂ ಬಸವರಾಜ ಬೊಮ್ಮಾಯಿಯವರು ಒಳ್ಳೆಯ ಕೆಲಸ ಮಾಡ್ತಿದ್ದಾರೆ. ಹೆಚ್ಚು ಅಭಿವೃದ್ಧಿ ಮಾಡುತ್ತಿದ್ದಾರೆ. ಹೊಸ ಜವಾಬ್ದಾರಿಯಿಂದ ನಿಶ್ಚಿತವಾಗಿ ಕಾರ್ಯಕರ್ತರಿಗೆ ವಿಶ್ವಾಸ ಹೆಚ್ಚಾಗಿದೆ. ನೀವೇ ನೋಡುವಿರಂತೆ ರಾಜ್ಯದಲ್ಲಿ ಯಾವ ರೀತಿ ಬದಲಾವಣೆ ಆಗುತ್ತೆ ಅಂತಾ ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ