ಬೆಂಗಳೂರು: ಕಾಂಗ್ರೆಸ್ (Congress) ತನ್ನ ಪಕ್ಷದ ನಾಯಕ ಕೆಜಿಎಫ್ ಬಾಬು (KGF Babu) ಅವರನ್ನು ಅಮಾನತುಗೊಳಿಸಿದೆ. ಕಳೆದ ನಾಲ್ಕು ತಿಂಗಳಿನಿಂದ ಚಿಕ್ಕಪೇಟೆ (Chikpet) ವಿಧಾನಸಭಾ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಕೆಜಿಎಫ್ ಬಾಬು, ಪಕ್ಷದ ವಿರೋಧದ ನಡುವೆಯೂ ಹಣ ಹಂಚಿಕೆಯಂತಹ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದರು. ಇದೀಗ ಕೆಜಿಎಫ್ ಬಾಬು ಅವರನ್ನು ಅಮಾನತುಗೊಳಿಸಿ ಕಾಂಗ್ರೆಸ್ ಆದೇಶ ಹೊರಡಿಸಿದೆ. ಇದೀಗ ಕೆಜಿಎಫ್ ಬಾಬು ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಜೆಡಿಎಸ್ (JDS) ಮತ್ತು ಎಎಪಿ (ಆಪ್ AAP) ಪ್ರಯತ್ನಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (JDS State President CM Ibrahim) ಖುದ್ದು ಕರೆ ಮಾಡಿ, ಪಕ್ಷ ಸೇರುವಂತೆ ಆಹ್ವಾನ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೊಂದು ಕಡೆ ಎಎಪಿ ನಾಯಕರು ಸಹ ಕೆಜಿಎಫ್ ಬಾಬು ಅವರನ್ನ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದೆ ಎನ್ನಲಾಗುತ್ತಿದೆ.
ಇನ್ನೊಂದ್ಕಡೆ ಆಪ್ ಮುಖಂಡರು ಕೂಡ ಕಾಲ್ ಮಾಡಿದ್ದಾರೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (CM Arvind Kejriwal) ಸಮ್ಮುಖದಲ್ಲೇ ಪಕ್ಷಕ್ಕೆ ಸೇರ್ಪಡೆ ಮಾಡಿಸೋದಾಗಿ ಬಾಬುಗೆ ಆಪ್ ಮುಖಂಡರು ತಿಳಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ನಿಂದ ಹೊರ ಬಂದಿರುವ ಕೆಜಿಎಫ್ ಬಾಬು ತಮ್ಮ ಮುಂದಿನ ನಡೆ ಏನು ಅನ್ನೋದನ್ನು ಬಹಿರಂಗಗೊಳಿಸಿಲ್ಲ.
ಪಕ್ಷದ ಕಚೇರಿಯಲ್ಲಿ ಕಾಂಗ್ರೆಸ್ ವಿರುದ್ಧ ಹೇಳಿಕೆ
ಶುಕ್ರವಾರ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ್ದ ಕೆಜಿಎಫ್ ಬಾಬು, ಕಾಂಗ್ರೆಸ್ಗೆ ಈ ಬಾರಿ 80 ಸೀಟು ಬರೋದಿಲ್ಲ ಎಂದು ಹೇಳಿದ್ದರು. ಇದಕ್ಕೆ ಕಾಂಗ್ರೆಸ್ ಮುಖಂಡ ಮನೋಹರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಕಚೇರಿಯಲ್ಲಿ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಕೆಜಿಎಫ್ ಬಾಬು ವಿರುದ್ಧ ಗಲಾಟೆ ಮಾಡಿದ್ದರು.
ಆದ್ರೆ ನೀವು ನನ್ನ ವಿರುದ್ಧ ರೌಡಿಸಂ ಮಾಡ್ತೀದೀರಾ ಎಂದು ಕೆಜಿಎಫ್ ಬಾಬು ಕಿಡಿಕಾರಿದ್ದರು. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೀತು. ಬಳಿಕ ಮಾತಾಡಿದ ಕೆಜಿಎಫ್ ಬಾಬು ಮತ್ತೆ ಕಾಂಗ್ರೆಸ್ 80 ಸ್ಥಾನ ಗೆಲ್ಲಲ್ಲ ಎಂದಿದ್ದರು.
ಸಲೀಂ ಅಹಮದ್ ವಿರುದ್ಧ ಕಿಡಿ
ಸಲೀಂ ಅಹಮದ್ ವಿರುದ್ಧವೂ ಕಿಡಿಕಾರಿದ್ದ ಕೆಜಿಎಫ್ ಬಾಬು, ಅವನು ಸಲೀಂ ಅಹಮದ್ ಯಾರು ಅಂತಾನೇ ಗೊತ್ತಿಲ್ಲ. ಸಲೀಂ ಅಹಮದ್ ನೋಡಿ ಯಾರೂ ವೋಟ್ ಹಾಕೋದಿಲ್ಲ. ಸಲೀಂ ಅಹಮದ್ ಏನು ಮೈನಾರಿಟಿ ಲೀಡರ್ ಅಲ್ಲ. ಅವ್ನು ಮುಸ್ಲಿಮೇ ಅಲ್ಲ. ಸಲೀಂ ಅಹಮದ್ಗೆ ಬರೀ ಆಕ್ಟೀಂಗ್ ಅಷ್ಟೇ ಗೊತ್ತು ಅಂತ ಕೆಜಿಎಫ್ ಬಾಬು ಗುಡುಗಿದ್ದರು.
‘ಕಳ್ಳನ ಮನಸ್ಸು ಹುಳ್ಳಗೆ’ - ಹೆಚ್ಡಿಕೆ
ಬಾಂಬೆ ಫೈಲ್ಸ್ ತೆರೆದಿಟ್ಟಿದ್ದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (Former CM HD Kumaraswamy) ಇದೀಗ ಸಚಿವ ಎಸ್ಟಿ ಸೋಮಶೇಖರ್ (Minister ST Somashekhar) ವಿರುದ್ಧ ಕಿಡಿಕಾರಿದ್ದಾರೆ. ಬಾಂಬೆಗೆ ಇಲ್ಲಿಂದ ಹುಡುಗಿಯರನ್ನ ಕರೆದೊಯ್ಯಲಾಗಿತ್ತು ಅಂತ ಹೆಚ್ಡಿಕೆ ಹೇಳಿದ್ರು. ಇದಕ್ಕೆ ಎಸ್ಟಿ ಸೋಮಶೇಖರ್ ತಿರುಗೇಟು ನೀಡಿದ್ರು. ಇದೀಗ ಕಳ್ಳನ ಮನಸ್ಸು ಉಳ್ಳುಳ್ಳಗೆ ಅಂತ ಸೋಮಶೇಖರ್ಗೆ ಹೆಚ್ಡಿಕೆ ಟಾಂಗ್ ಕೊಟ್ಟಿದ್ದಾರೆ.
ಇದೇ ವೇಳೆ ಎಸ್ಟಿ ಸೋಮಶೇಖರ್ ಹಾಗೂ ಬಾಂಬೆ ರವಿ ಜೊತೆಗಿರೋ ಫೋಟೋ ತೋರಿಸಿದ್ದಾರೆ. ನನ್ನ ಕೆಣಕಿದ್ದಕ್ಕೆ ಈ ವಿಡಿಯೋ ಬಿಟ್ಟಿದ್ದೀನಿ, ಇದು ಎಲ್ಲ ಕಡೆ ವೈರಲ್ ಆಗ್ತಿದೆ ಅಂತ ಹೆಚ್ಡಿಕೆ ಹೇಳಿದ್ರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ