ಆರಿಲ್ಲ ಮಹಾದಾಯಿ ಬಿಸಿ; ಹೋರಾಟಗಾರರ ಬೆವರಿನಲ್ಲಿ ಬೇಳೆ ಬೇಯಿಸಿಕೊಳ್ಳಲು ರಾಜಕೀಯ ಪಕ್ಷಗಳ ಯತ್ನ

ಮಹದಾಯಿಗಾಗಿ ಬೂಟಿನೇಟು, ಲಾಟಿ ಏಟು ತಿಂದ ರೈತರನ್ನು ರಾಜಕೀಯ ಪಕ್ಷಗಳು ಓಟ್‌ಬ್ಯಾಂಕ್‌ ಮಾಡಿಕೊಳ್ಳಲು ಹೊರಟಿವೆ. ಎದುರಾಳಿ ಪಕ್ಷಗಳ ವಿರುದ್ಧ ವೇಫಲ್ಯವನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿವೆ.

G Hareeshkumar | news18
Updated:April 19, 2019, 10:02 PM IST
ಆರಿಲ್ಲ ಮಹಾದಾಯಿ ಬಿಸಿ; ಹೋರಾಟಗಾರರ ಬೆವರಿನಲ್ಲಿ ಬೇಳೆ ಬೇಯಿಸಿಕೊಳ್ಳಲು ರಾಜಕೀಯ ಪಕ್ಷಗಳ ಯತ್ನ
ಪ್ರಲ್ಹಾದ್ ಜೋಶಿ ಹಾಗೂ ವಿನಯ್​​ ಕುಲಕರ್ಣಿ
G Hareeshkumar | news18
Updated: April 19, 2019, 10:02 PM IST
- ಪರಶುರಾಮ್​​ ತಹಶೀಲ್ದಾರ್​​

ಹುಬ್ಬಳ್ಳಿ(ಏ.19): ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣಾ ಅಖಾಡದಲ್ಲಿ ಮಹದಾಯಿ ವಿವಾದ ಸದ್ದು ಮಾಡುತ್ತಿದೆ. ಯೋಜನೆ ಜಾರಿ ವಿಚಾರದಲ್ಲಿ ಬಿಜೆಪಿ ಮತ್ತು ದೋಸ್ತಿ ನಾಯಕರು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ತಮ್ಮದೇನೂ ತಪ್ಪಿಲ್ಲ ಎನ್ನುವಂತೆ ಸಮಜಾಯಿಷಿ ನೀಡುತ್ತಿದ್ದಾರೆ. ತಾವಷ್ಟೇ ಸಾಚಾಗಳು ಎಂದು ಬಿಂಬಿಸಿಕೊಳ್ಳಲು ಹೊರಟಿದ್ದು ಮಹದಾಯಿಯಲ್ಲಿ ಮತ ಹುಡುಕಲು ಹಗ್ಗಜಗ್ಗಾಟ ನಡೆಯುತ್ತಿದೆ.

ಹುಬ್ಬಳ್ಳಿ- ಧಾರವಾಡ, ಗದಗ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಒಂಭತ್ತು ತಾಲ್ಲೂಕುಗಳಲ್ಲಿ ಮಹದಾಯಿ ಮತ್ತು ಕಳಸಾ- ಬಂಡೂರಿ ಯೋಜನೆ ಜಾರಿಗಾಗಿ ಕಳೆದ ನಾಲ್ಕು ದಶಕಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ಮಹದಾಯಿಯಿಂದ ಮಲಪ್ರಭೆಗೆ ನೀರು ಹರಿಸುವಂತೆ ರೈತರು ಸಾಕಷ್ಟು ಹೋರಾಟಗಳನ್ನು ನಡೆಸುತ್ತಾ ಬಂದಿದ್ದಾರೆ. ಆದರೆ ಚುನಾವಣೆ ಬಂದಾಗಲಷ್ಟೇ ಮಹದಾಯಿ ವಿಚಾರ ರಾಜಕೀಯ ನಾಯಕರಿಗೆ ಚರ್ಚೆಯ ವಿಷಯವಾಗುತ್ತೆ. ಈಗ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ಪಕ್ಷಗಳ ನಾಯಕರು ಮಹದಾಯಿ ಯೋಜನೆ ಜಾರಿ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಾರೆ.

ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದ ವಿನಯ ಕುಲಕರ್ಣಿ

ಹುಬ್ಬಳ್ಳಿಯಲ್ಲಿ ನಡೆದ ಕಾಂಗ್ರೆಸ್ ಮತ್ತು ಜೆಡಿಎಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಹದಾಯಿ ವಿಚಾರ ಸದ್ದು ಮಾಡಿದೆ. ದೋಸ್ತಿ ಅಭ್ಯರ್ಥಿ ವಿನಯ್ ಕುಲಕರ್ಣಿ ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದಿದ್ದಾರೆ. ಪ್ರಲ್ಹಾದ್ ಜೋಶಿಯವರು ಮಹದಾಯಿ ಯೋಜನೆ ಜಾರಿ ವಿಚಾರದಲ್ಲಿ ರೈತರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸಿಎಂ ಕುಮಾರಸ್ವಾಮಿಯವರು ಕೂಡ ಯೋಜನೆ ಜಾರಿಯಾಗದಿರುವುದಕ್ಕೆ ಬಿಜೆಪಿಯೇ ಕಾರಣ ಎಂದು ಟೀಕಿಸಿದ್ದಾರೆ. ನ್ಯಾಯಾಧಿಕರಣ 7.56 ಟಿಎಮ್‌ಸಿ ನೀರು ಬಳಸಿಕೊಳ್ಳಲು ಹೇಳಿದರೂ ಕೇಂದ್ರ ಸರ್ಕಾರದ ಸಹಕಾರ ಸಿಗುತ್ತಿಲ್ಲ. ಬಿಜೆಪಿಯವರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಕೇಂದ್ರ ಸರ್ಕಾರ ನೋಟಿಫಿಕೇಷನ್‌ ಹೊರಡಿಸಿದ್ರೆ ತಕ್ಷಣ ಯೋಜನೆ ಜಾರಿಗೆ ಸಿದ್ಧ ಎನ್ನುತ್ತಿದ್ದಾರೆ.

ಮಹದಾಯಿ ವಿಚಾರವನ್ನು ಲೋಕಸಭೆಯಲ್ಲಿ ಎತ್ತಿದ್ದೇ ನಾವು - ಪ್ರಲ್ಹಾದ್​​ ಜೋಶಿ
Loading...

ಮಹದಾಯಿ ವಿಚಾರದಲ್ಲಿ ನೀರಿಗಿಂತ ಹೆಚ್ಚು ರಾಜಕೀಯ ಹರಿದಿದೆ. ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥ ಸಾಧ್ಯವಿಲ್ಲವೆಂದು ಕಾರಣ ನೀಡಿ ವಿವಾದವನ್ನು ನ್ಯಾಯಾಧಿಕರಣಕ್ಕೆ ಒಪ್ಪಿಸಿದ್ದು ಯುಪಿಎ ಸರ್ಕಾರ ಎಂದು ಬಿಜೆಪಿ ವಾದಿಸುತ್ತಿದೆ. ಮಹದಾಯಿ ವಿಚಾರವನ್ನು ಲೋಕಸಭೆಯಲ್ಲಿ ಎತ್ತಿದ್ದೇ ನಾವು. ಆತ್ಮಸಾಕ್ಷಿಯಾಗಿ ಹೇಳುತ್ತೇನೆ ಮಹದಾಯಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಿಲ್ಲ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಸಮರ್ಥನೆ ನೀಡುತ್ತಿದ್ದಾರೆ. ಸದ್ಯಕ್ಕೆ ಗೋವಾ ಮತ್ತು ಕರ್ನಾಟಕ ಸರ್ಕಾರಗಳು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿವೆ. ಹೀಗಾಗಿ ಎರಡೂ ರಾಜ್ಯಗಳ ಒಪ್ಪಿಗೆಯಿಲ್ಲದೆ ಕೇಂದ್ರ ಸರ್ಕಾರಕ್ಕೆ ನೋಟಿಫಿಕೇಷನ್ ಹೊರಡಿಸಲು ಬರಲ್ಲ ಎಂದವರು ಹೇಳುತ್ತಿದ್ದಾರೆ.

ಇದನ್ನೂ ಓದಿ :ಧಾರವಾಡ ಮತಕ್ಷೇತ್ರ: ಬಿಜೆಪಿ ಭದ್ರಕೋಟೆ ಛಿದ್ರಗೊಳಿಸಲು ಕಾಂಗ್ರೆಸ್ ಯತ್ನ; ಲಿಂಗಾಯತ ಮತಗಳೇ ನಿರ್ಣಾಯಕವಾಗುವ ಸಾಧ್ಯತೆ

ಮಹದಾಯಿಗಾಗಿ ಬೂಟಿನೇಟು, ಲಾಟಿ ಏಟು ತಿಂದ ರೈತರನ್ನು ರಾಜಕೀಯ ಪಕ್ಷಗಳು ಓಟ್‌ಬ್ಯಾಂಕ್‌ ಮಾಡಿಕೊಳ್ಳಲು ಹೊರಟಿವೆ. ಎದುರಾಳಿ ಪಕ್ಷಗಳ ವಿರುದ್ಧ ವೈಫಲ್ಯವನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿವೆ. ಹೋರಾಟಗಾರರನ್ನು ಪ್ರಚೋದಿಸಿ ಮತ ಗಳಿಕೆಗೆ ತಂತ್ರ ರೂಪಿಸುತ್ತಿವೆ. ಮಹದಾಯಿ ಯೋಜನೆ ಜಾರಿಯಾಗದಿರಲು ಎಲ್ಲ ಪಕ್ಷಗಳದ್ದೂ ಸಮಾನ ಕೊಡುಗೆಯಿದೆ ಎನ್ನುವುದು ಜನರಿಗೆ ಗೊತ್ತಿದೆ. ಹೀಗಾಗಿ ಮತದಾರ ಪ್ರಭುಗಳು ಎಲ್ಲವನ್ನೂ ಸೂಕ್ಷ್ಮವಾಗಿಯೇ ಗಮನಿಸುತ್ತಿದ್ದು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಕಾಯ್ದು ನೋಡಬೇಕು.

First published:April 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626