ವಿಧಾನಸಭಾ ಚುನಾವಣೆ ಹಿನ್ನೆಲೆ: ಸಾಮಾಜಿಕ ಜಾಲಾತಾಣಗಳನ್ನು ಅಸ್ತ್ರವಾಗಿ ಪಕ್ಷಗಳಿಂದ ಬಳಕೆ


Updated:January 7, 2018, 5:04 PM IST
ವಿಧಾನಸಭಾ ಚುನಾವಣೆ ಹಿನ್ನೆಲೆ: ಸಾಮಾಜಿಕ ಜಾಲಾತಾಣಗಳನ್ನು ಅಸ್ತ್ರವಾಗಿ ಪಕ್ಷಗಳಿಂದ ಬಳಕೆ

Updated: January 7, 2018, 5:04 PM IST
-ನ್ಯೂಸ್ 18 ಕನ್ನಡ

ಬೆಂಗಳೂರು(ಜ.07): ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ರಾಜಕೀಯ ಪಕ್ಷಗಳು ಪ್ರಧಾನ ಅಸ್ತ್ರವಾಗಿ ಬಳಸುತ್ತಿದ್ದು, ಇದಕ್ಕಾಗಿ ಸುಮಾರು ₹ 100 ರಿಂದ 150 ಕೋಟಿವರೆಗೆ ಖರ್ಚು ಮಾಡಲಿವೆ ಅನ್ನೋ ಮಾಹಿತಿ ಹೊರಬಿದ್ದಿದೆ.

ಸಾಂಪ್ರದಾಯಿಕ 'ಮೈದಾನ ರಾಜಕಾರಣ'ದ ಜೊತೆಗೆ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿ ಬಳಸಲು ಮಾಹಿತಿ ತಂತ್ರಜ್ಞಾನ, ಮಾಧ್ಯಮ ಕ್ಷೇತ್ರಗಳಲ್ಲಿರುವ ಪ್ರತಿಭಾವಂತರನ್ನು ಮೂರೂ ರಾಜಕೀಯ ಪಕ್ಷಗಳು ಬಳಸಿಕೊಳ್ಳುತ್ತಿವೆ. ಆಯಾ ಸಿದ್ಧಾಂತಕ್ಕೆ ಸರಿ ಹೊಂದುವವರನ್ನು ಆಯಾಯ ಪಕ್ಷಗಳು ಆಯ್ಕೆ ಮಾಡಿಕೊಂಡು ಅವುಗಳಿಗೆ ಹಣ ನೀಡುತ್ತಿವೆ ಎಂದು ಮಾಹಿತಿ ಸಿಕ್ಕಿದೆ.

ಪ್ರಧಾನವಾಗಿ ಟ್ವಿಟರ್‌, ಫೇಸ್‌ಬುಕ್‌, ವಾಟ್ಸ್‌ ಆಪ್‌ ಮತ್ತು ಇನ್‌ಸ್ಟಾಗ್ರಾಮ್ ಬಳಸಲಾಗುತ್ತಿದೆ. ಟ್ವಿಟರ್‌ ಮೂಲಕ ಯಾವುದೊ ಒಂದು ವಿಷಯವನ್ನು 'ಟ್ರೆಂಡ್‌ ಸೆಟ್‌' ಮಾಡಿ, ಅದರ ಮೇಲೆ ಚರ್ಚೆಯನ್ನು ಮುನ್ನಡೆಸುವ ತಂತ್ರವನ್ನು ಅನುಸರಿಸಲಾಗುತ್ತಿದೆ. ಅಭಿವೃದ್ಧಿ, ಹಿಂದುತ್ವ, ಮಠ ಮಂದಿರ, ರಾಜಕೀಯ ಹತ್ಯೆ ಹೀಗೆ ವಿವಿಧ ವಿಷಯಗಳಲ್ಲಿ ದಿನದ ವಿದ್ಯಮಾನ ನೋಡಿ ಟ್ರೆಂಡ್‌ ಸೆಟ್‌ ಮಾಡಲಾಗುತ್ತದೆ ಎನ್ನಲಾಗ್ತಿದೆ.
First published:January 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...