ಕೊರೋನಾ ನಡುವೆಯೂ ರಾಜಕೀಯ ದಳ್ಳುರಿಗೆ ಸಾಕ್ಷಿಯಾದ ಹಾತಲಗೇರಿ ಗ್ರಾಮ

ಈ ಘರ್ಷಣೆಯಲ್ಲಿ 15 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಗಲಾಟೆ ನಿಯಂತ್ರಣ ಮಾಡಲು ಮುಂದಾಗಿದ್ದ ಪೊಲೀಸ್​ ಸಿಬ್ಬಂದಿಗೆ ಗಾಯವಾಗಿದೆ

ಗ್ರಾಮದ ದೃಶ್ಯ

ಗ್ರಾಮದ ದೃಶ್ಯ

  • Share this:
ಗದಗ (ಜೂ. 11): ದೇಶದೆಲ್ಲೆಡೆ ಸದ್ಯ ಕೊರೋನಾ ಮಹಾಮಾರಿಯಿಂದ ಜೀವ ಉಳಿಕೊಳ್ಳಲು ಜನರು ಹೋರಾಟ ನಡೆಸಿದ್ದಾರೆ. ಆದರೆ, ಈ ಗ್ರಾಮದಲ್ಲಿ ಮಾತ್ರ ಕೋವಿಡ್​ ನಡುವೆಯೂ ಹಳೇ ರಾಜಕೀಯ ವೈಷಮ್ಯದಿಂದ ಎರಡು ಗುಂಪುಗಳ ನಡುವೆ ಮಾರಾಮಾರಿ ಘರ್ಷಣೆ  ನಡೆದಿದೆ. ಹೀಗಾಗಿ ಇಡೀ ಗ್ರಾಮದ ಜನರು ಮನೆಯಿಂದ ಹೊರಗಡೆ ಬರಲು ಭಯ ಪಡುತ್ತಿದ್ದಾರೆ‌. ಗ್ರಾಮದಲ್ಲಿಯೇ ಪೊಲೀಸರು ಬೀಡುಬಿಟ್ಟು ಪರಿಸ್ಥಿತಿ ಹತೋಟಿಗೆ ತರಲು ಶ್ರಮಿಸುತ್ತಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆ ಮುಗಿದು, ಆರು ತಿಂಗಳು ಗತಿಸಿದರೂ ಗದಗ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ  ಇನ್ನೂ ರಾಜಕೀಯ ದ್ವೇಷದ ಕಿಡಿ ಮುಂದುವರೆದಿದೆ.  ಹಳೇ ರಾಜಕೀಯ ವೈಷಮ್ಯದಿಂದ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಹೀಗಾಗಿ 15 ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಗಲಾಟೆ ನಿಯಂತ್ರಣ ಮಾಡಲು ಮುಂದಾಗಿದ್ದ ಪೊಲೀಸ್​ ಸಿಬ್ಬಂದಿಗೆ ಗಾಯವಾಗಿದೆ.  ಹಾತಲಗೇರಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ, ಸತೀಶ ದೊಡ್ಡಮನಿ ಹಾಗೂ ಈರಪ್ಪ ಬೇಲೇರಿ ನಡುವೆ ಬಹಳ ತುರುಸಿನ ಚುನಾವಣೆ ನಡೆದಿತ್ತು.

ಈ ಚುನಾವಣೆಯಲ್ಲಿ ಎರಡು ಮತಗಳ‌ ಅಂತರದಿಂದ ಈರಪ್ಪ ಬೇಲೇರಿ ಗೆಲುವು ಸಾಧಿಸಿದ್ದರು. ಹೀಗಾಗಿ ಎರಡು ಗುಂಪುಗಳ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಆದರೆ ನಿನ್ನೆ ಎರಡು ಗುಂಪುಗಳ ನಡುವೆ ಕಲ್ಲು, ಕಟ್ಟಿಗೆಯಿಂದ ಪರಸ್ಪರ ಮಾರಾಮಾರಿ ನಡೆದಿದ್ದು, ಇದರ ಪರಿಣಾಮವಾಗಿ 15 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸದ್ಯ ಗ್ರಾಮದಲ್ಲಿ ಪೊಲೀಸರು ಬೀಡುಬಿಟ್ಟು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಗದಗ ಗ್ರಾಮೀಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಗದಗ ಪೊಲೀಸ್​ ವರಿಷ್ಠಾಧಿಕಾರಿ ಯತೀಶ್ ಎನ್ ತಿಳಿಸಿದ್ದಾರೆ

17 ಜನರನ್ನು ವಶಕ್ಕೆ ಪಡೆದ ಪೊಲೀಸರು..

ಇನ್ನೂ ಗಲಾಟೆಯಲ್ಲಿ ಗಾಯಗೊಂಡವರನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದ್ರೆ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಡಿವೈಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಗ್ರಾಮದಲ್ಲಿ ಬೀಡುಬಿಟ್ಟಿದ್ದಾರೆ. ಗಲಾಟೆಯಲ್ಲಿ ಭಾಗಿಯಾದವರನ್ನು ಪತ್ತೆ ಮಾಡುತ್ತಾ ಇದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಗ್ರಾಮದ ಯುವಕರು ಹಾಗೂ ಗಲಾಟೆಯಲ್ಲಿ ಭಾಗಿಯಾದವರನ್ನು ಪತ್ತೆ ಮಾಡುವದರಲ್ಲಿ ಪೊಲೀಸರು ನಿರತರಾಗಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆ ಮುಗಿದ ಬಳಿಕ ಎರಡು ಗುಂಪುಗಳ ವೈಮನಸ್ಸುಯಿದ್ದು,  ಈಗ ವಿಕೋಪಕ್ಕೆ ತಿರುಗಿ, ಎರಡು ಗುಂಪುಗಳ ನಡುವೆ ಮಾರಾಮಾರಿಗೆ ಕಾರಣವಾಗಿದೆ. ಒಂದು ಗುಂಪಿನವರು ಏಕಾಏಕಿ ಕಲ್ಲು ತೂರಾಟ ಮಾಡಿದರು.  ಪೊಲೀಸರು ನಿಯಂತ್ರಣ ಮಾಡಿರೋದರಿಂದ ಜೀವ ಹಾನಿ ತಪ್ಪಿದೆ ಎನ್ನುತ್ತಿದ್ದಾರೆ ಸ್ಥಳೀಯರು.

ಇದನ್ನು ಓದಿ: ಮೋದಿ ಯೋಗಿ ನಡುವಿನ ಭೇಟಿ; ನಾಯಕತ್ವ ಬದಲಾವಣೆ ಬಗ್ಗೆ ಮೂಡಿತಾ ಅಪಸ್ವರ?

ಗ್ರಾಮದಲ್ಲಿ ಶಾಂತಿ ಕಾಪಾಡುವ ಉದ್ದೇಶದಿಂದ ಎರಡು ಗುಂಪಿನ ಜನರನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ. ಹೀಗಾಗಿ ಪೊಲೀಸರ ಭಯದಿಂದ ಕೆಲವು ಜನ್ರು ಊರು ಖಾಲಿ ಮಾಡಿದ್ದಾರೆ. ಆದ್ರೂ ಕೂಡಾ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಾಗಿದ್ದು, ಪೊಲೀಸರು ಸೂಕ್ತವಾದ ಬಂದೋಬಸ್ತ್​ ನಡೆಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Seema R
First published: