• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Ramanagar: ಜಿಲ್ಲಾಸ್ಪತ್ರೆ ಉದ್ಘಾಟನೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿದ ರಾಜಕೀಯ ನಾಯಕರು

Ramanagar: ಜಿಲ್ಲಾಸ್ಪತ್ರೆ ಉದ್ಘಾಟನೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿದ ರಾಜಕೀಯ ನಾಯಕರು

ಜಿಲ್ಲಾಸ್ಪತ್ರೆ ಉದ್ಘಾಟನೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿದ ರಾಜಕೀಯ ನಾಯಕರು

ಜಿಲ್ಲಾಸ್ಪತ್ರೆ ಉದ್ಘಾಟನೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿದ ರಾಜಕೀಯ ನಾಯಕರು

ಎಲ್ಲಾ ಸರ್ಕಾರ ಬಂದಾಗಲೂ ಒಂದೊಂದು ಹಂತದ ಕೆಲಸ ಆಗಿದ್ದು, ನನಗೆ ಬೇಕಿರುವುದು ಅಭಿವೃದ್ಧಿ. ರಾಜಕೀಯ ಮಾತನಾಡಲ್ಲ, ಆದರೆ ರಾಜೀವ್ ಗಾಂಧಿ ವಿವಿ ಆದಷ್ಟು ಬೇಗ ಆಗಲಿ.  ನನ್ನ 16 ವರ್ಷದ ಕನಸಿಗೆ ಈಗ ಫೌಂಡೇಶನ್ ಬೀಳ್ತಿದೆ.

  • Share this:

ರಾಮನಗರ: ಜಿಲ್ಲಾಸ್ಪತ್ರೆ (Ramanagar District Hospital) ಉದ್ಘಾಟನೆ ವಿಚಾರಕ್ಕೆ ಗಲಾಟೆ ನಡೆದಿದೆ. ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (Former CM HD Kumaraswamy) ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ (MLA Anitha Kumaraswamy) ಬರೋ ಮುನ್ನವೇ ಆಸ್ಪತ್ರೆ ಉದ್ಘಾಟನೆ ಮಾಡಿದ್ದಕ್ಕೆ ಜೆಡಿಎಸ್ ಕಾರ್ಯಕರ್ತರು ಗಲಾಟೆ ಮಾಡಿ, ಪ್ರತಿಭಟನೆ ನಡೆಸಿದರು. ಸಚಿವ ಅಶ್ವತ್ಥ್ ನಾರಾಯಣ್ (Minister Ashwath Narayan), ಡಾ. ಸುಧಾಕರ್ (Minister Sudhakar) ವಿರುದ್ಧ ಘೋಷಣೆ ಕೂಗಲಾಯ್ತು. ಒಂದ್ಕಡೆ ಕಾರ್ಯಕರ್ತರು ಕಿತ್ತಾಡ್ತಿದ್ರೆ, ಇನ್ನೊಂದು ಕಡೆ ನಾಯಕರು ಒಗ್ಗಟ್ಟು ಪ್ರದರ್ಶಿಸಿದರಿ. ಒಂದೇ ವೇದಿಕೆಯಲ್ಲಿ ಹೆಚ್​ಡಿ ಕುಮಾರಸ್ವಾಮಿ, ಅಶ್ವತ್ಥ್ ನಾರಾಯಣ್, ಸಂಸದ ಡಿಕೆ ಸುರೇಶ್ (MP DK Suresh) ಕಾಣಿಸಿಕೊಂಡ್ರು. ಆಸ್ಪತ್ರೆ ನಿರ್ಮಿಸೋದರ ಹಿಂದೆ ಕುಮಾರಸ್ವಾಮಿಅವರ ಶ್ರಮ ಇದೆ ಎಂದು ಡಿ.ಕೆ ಸುರೇಶ್ ಹೇಳಿದರು. ಇದೇ ವೇಳೆ ಡಿಕೆ ಶಿವಕುಮಾರ್, ಡಿಕೆ ಸುರೇಶ್ ಬಗ್ಗೆ HDK ಮೆಚ್ಚುಗೆ ವ್ಯಕ್ತಪಡಿಸಿದ್ರು. ಡಿಕೆ ಸುರೇಶ್, ಹೆಚ್​ಡಿಕೆಯವರನ್ನ ಅಶ್ವತ್​ ನಾರಾಯಣ್​ ಹಾಡಿಹೊಗಳಿದ್ರು.


ಕಾರ್ಯಕ್ರಮಕ್ಕೂ ಮುನ್ನ ಜಟಾಪಟಿಯೂ ನಡೀತು. ತಮ್ಮನ್ನು ಸರಿಯಾಗಿ ಆಹ್ವಾನಿಸಿಲ್ಲ ಎಂದು ಸಂಸದ ಡಿ.ಕೆ. ಸುರೇಶ್‌ ಆರೋಪಿಸಿದರು. ಯಾರು ಅದು ಡೆಪ್ಯುಟಿ ಕಮಿಷನರ್‌? ಕರೀರಿ ಇಲ್ಲಿ ಎಂದರು. ಅತ್ತ ಹೋಗುತ್ತಿದ್ದ ಅಶ್ವತ್ಥ್ ನಾರಾಯಣರನ್ನ ನೋಡಿ ರೀ.. ಮಂತ್ರಿಗಳೇ ನಿಂತ್ಕೊಳ್ರಿ. ನಾನೂ ಇಲ್ಲಿ ಜನಪ್ರತಿನಿಧಿ. ಶಿಷ್ಟಾಚಾರ ನಿಮಗೊಬ್ಬರಿಗೇ ಇಲ್ಲ ನಮಗೂ ಇದೆ ಎಂದರು.


ಕಡೆಗೆ ಸಚಿವ ಸುಧಾಕರ್ ಹಾಗೂ ಅಶ್ವತ್ಥ ನಾರಾಯಣ್ ಸಮಾಧಾನ ಮಾಡಿ, ಡಿಕೆ ಸುರೇಶ್ ಅವರನ್ನ ಕರೆದುಕೊಂಡು ಹೋದರು.


ಎಲ್ಲರಿಗೂ ಅಭಿನಂದನೆ ಸಲ್ಲಿಸಿದ HDK


ಜಿಲ್ಲಾಸ್ಪತ್ರೆ ಉದ್ಘಾಟನೆ ಬಳಿಕ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಬಡವರು ಬಂದಾಗ ಒಳ್ಳೆಯ ರೀತಿ ಚಿಕಿತ್ಸೆ ನೀಡಿ ಎಂದು ಆರೋಗ್ಯ ಇಲಾಖೆ ಸಿಬ್ಬಂದಿಗೆ ಮನವಿ ಮಾಡಿಕೊಳ್ಳುತ್ತೇನೆ. ಆಗಿನ‌ ಕೇಂದ್ರದ ಮಂತ್ರಿಗಳು ಆಸಕ್ತಿ ತೋರಲಿಲ್ಲ. ನಂತರ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು.ಡಿಕೆ ಶಿವಕುಮಾರ್ ಮಂತ್ರಿಯಾಗಿದ್ದ ವೇಳೆಯೂ ಜಿಲ್ಲಾಸ್ಪತ್ರೆ ಬಗ್ಗೆ ಚರ್ಚೆ ನಡೆಸಿದ್ದೇನೆ. ಇಂದು ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.


ಇದನ್ನೂ ಓದಿ: Anitha Kumaraswamy: “ಈಗ ಎಷ್ಟು ಬೇಕೋ ಅಷ್ಟು ಸಾಲ ಮಾಡಿ, ಮುಂದೆ ಕುಮಾರಣ್ಣ ಮನ್ನಾ ಮಾಡ್ತಾರೆ!


ಎಲ್ಲಾ ಸರ್ಕಾರ ಬಂದಾಗಲೂ ಒಂದೊಂದು ಹಂತದ ಕೆಲಸ ಆಗಿದ್ದು, ನನಗೆ ಬೇಕಿರುವುದು ಅಭಿವೃದ್ಧಿ. ರಾಜಕೀಯ ಮಾತನಾಡಲ್ಲ, ಆದರೆ ರಾಜೀವ್ ಗಾಂಧಿ ವಿವಿ ಆದಷ್ಟು ಬೇಗ ಆಗಲಿ.  ನನ್ನ 16 ವರ್ಷದ ಕನಸಿಗೆ ಈಗ ಫೌಂಡೇಶನ್ ಬೀಳ್ತಿದೆ. ಹೈ ವೋಲ್ಟೇಜ್ ಸಭೆ ಆಗಬಹುದು ಎಂಬ ಮಾಧ್ಯಮದವರ ನಿರೀಕ್ಷೆ ಇತ್ತು. ಆದರೆ ಮಾಧ್ಯಮದವರಿಗೆ ನಿರಾಸೆ ಯಾಗಿದೆಅಂತಿಮವಾಗಿ ಜನತೆ ನಿರ್ಧಾರ ಮಾಡಲಿದ್ದಾರೆ ಎಂದು ಹೇಳಿದರು.
ಸಂತಸ ವ್ಯಕ್ತಪಡಿಸಿದ ಅಶ್ವತ್ಥ್ ನಾರಾಯಣ್


ಎಲ್ಲರ ಸಹಕಾರದಿಂದ ಜಿಲ್ಲಾಸ್ಪತ್ರೆ ಪ್ರಾರಂಭ ಆಗಿದೆ‌. ಬಹುದಿನದ ಬೇಡಿಕೆ ಇದೀಗ ಈಡೇರಿದೆ. 500 ಬೆಡ್ ಇರುವಂತಹ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ ಎಂದು ಅಶ್ವತ್ಥ್ ನಾರಾಯಣ್ ಸಂತಸ ವ್ಯಕ್ತಪಡಿಸಿದರು. ಇದ್ದ ಸಮಯದಲ್ಲಿ ಎಲ್ಲಾ ವ್ಯವಸ್ಥಿತಿವಾಗಿ ನಡೆದಿದೆ. ವೇದಿಕೆಯ ಮೇಲೂ ಸಹ ಒಗ್ಗಟ್ಟಿನ ಮಂತ್ರ ಹೇಳಿದ್ದೇವೆ. ಒಗ್ಗಟ್ಟು, ಪ್ರೀತಿ ವಿಶ್ವಾಸದಿಂದ, ಸೌರ್ಹದಯುತವಾಗಿ ಲೋಕಾರ್ಪಣೆ ನಡೆದಿದೆ ಎಂದರು.


ವೇದಿಕೆಯ ಮೇಲೆ ಇದ್ದವರು ಮೂರು ಪಕ್ಷದವರು ಬೇರೆ ಬೇರೆ ನಾಯಕರು. ಇದಕ್ಕಿಂತ ದೊಡ್ಡ ಒಗ್ಗಟ್ಟು ಇನ್ನೇನು ಬೇಕು ಎಂದು ಹೇಳಿದರು.
ನಾರಾಯಣಗೌಡರು ಬಹದ್ದೂರ್ ಗಂಡು


ಇದೇ ವೇಳೆ ಸಚಿವ ನಾರಾಯಣ್ ಗೌಡ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಅಶ್ವತ್ಥ್ ನಾರಾಯಣ್ , ನಮ್ಮ ನಾರಾಯಣಗೌಡರು ಬಹದ್ದೂರ್ ಗಂಡು. ಕೆ.ಆರ್ ಪೇಟೆಯಲ್ಲಿ ನಮ್ಮ ಪಕ್ಷದಿಂದ ಖಾತೆ ಓಪನ್ ಮಾಡಿದ್ದಾರೆ. ನಾರಾಯಣ ಗೌಡರ ಬಗ್ಗೆ ಅಪಾರವಾದ ಗೌರವ ಇದೆ‌. ನೂರಕ್ಕೆ ನೂರರಷ್ಟು ನಮ್ಮ ಪಕ್ಷದಲ್ಲಿ, ಪಕ್ಷದ ಅಭ್ಯರ್ಥಿಯಾಗಿಯೇ ಇರ್ತಾರೆ. ಇದರಲ್ಲಿ ಯಾವುದೇ ರೀತಿಯ ಅನುಮಾನಗಳು ಬೇಡ. ಮತ್ತೊಮ್ಮೆ ಮಂತ್ರಿಯಾಗಿ ಅವರು ಮಂಡ್ಯದಲ್ಲಿ ಕೆಲಸ ಮಾಡ್ತಾರೆ ಎಂದು ಭವಿಷ್ಯ ನುಡಿದರು.

Published by:Mahmadrafik K
First published: