Ayodhya Verdict: ಅಯೋಧ್ಯೆ ತೀರ್ಪು ಸ್ವಾಗತಿಸಿದ ರಾಜಕೀಯ ನಾಯಕರು

ಎಲ್ಲರಲ್ಲಿಯೂ ಕುತೂಹಲ ಮೂಡಿಸಿದ್ದ ಈ ತೀರ್ಪನ್ನು ರಾಜಕೀಯ ನಾಯಕರು ಸ್ವಾಗತಿಸಿದ್ದು, ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ. ತೀರ್ಪು ಪ್ರಕಟವಾಗುತ್ತಿದ್ದಂತೆ ಹಲವು ರಾಜಕೀಯ ನಾಯಕರು ಪ್ರತಿಕ್ರಿಯಿಸಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

Seema.R | news18-kannada
Updated:November 9, 2019, 12:21 PM IST
Ayodhya Verdict: ಅಯೋಧ್ಯೆ ತೀರ್ಪು ಸ್ವಾಗತಿಸಿದ ರಾಜಕೀಯ ನಾಯಕರು
ಸಾಂದರ್ಭಿಕ ಚಿತ್ರ
Seema.R | news18-kannada
Updated: November 9, 2019, 12:21 PM IST
ಬೆಂಗಳೂರು (ನ.9): ವಿವಾದಿತ ರಾಮಜನ್ಮಭೂಮಿ ಪ್ರಕರಣ ಕುರಿತು ಸುಪ್ರೀಂಕೋರ್ಟ್​ನ ಪಂಚ ಸದಸ್ಯಪೀಠ ಇಂದು ತೀರ್ಪು ಪ್ರಕಟಿಸಿದೆ. ವಿವಾದಿತ ಅಯೋಧ್ಯೆಯಲ್ಲಿನ ಜಾಗವನ್ನು ಹಿಂದೂಗಳಿಗೆ ಕೆಲವು ಷರತ್ತುಗಳನ್ನು ವಿಧಿಸಿ ನೀಡಲಾಗಿದೆ.  ಇನ್ನು ಮುಸ್ಲಿಂ ಸಮುದಾಯಕ್ಕೆ ಬದಲಿ ಜಾಗವನ್ನು ನೀಡಲು ಸಹ ಸುಪ್ರೀಂ ಕೋರ್ಟ್​ ಆದೇಶಿಸಿದ್ದು, ಈ ಮೂಲಕ ವಿವಾದಕ್ಕೆ ತೆರೆ ಎಳೆದಿದೆ. 

ಎಲ್ಲರಲ್ಲಿಯೂ ಕುತೂಹಲ ಮೂಡಿಸಿದ್ದ ಈ ತೀರ್ಪನ್ನು ರಾಜಕೀಯ ನಾಯಕರು ಸ್ವಾಗತಿಸಿದ್ದು, ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ. ತೀರ್ಪು ಪ್ರಕಟವಾಗುತ್ತಿದ್ದಂತೆ ಹಲವು ರಾಜಕೀಯ ನಾಯಕರು ಪ್ರತಿಕ್ರಿಯಿಸಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಕೇಂದ್ರ ಸಾರಿಗೆ ಸಚಿವ ನಿತಿನ್​ ಗಡ್ಕರಿ, ಸುಪ್ರೀಂಕೋರ್ಟ್​ ತೀರ್ಪನ್ನು ಸ್ವಾಗತಿಸಿದ್ದು, ಜನರು ಯಾವುದೇ ಗಲಭೆಗಳಿಗೆ ಆಹ್ವಾನಿಸದೇ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ. ತೀರ್ಪು ಪ್ರಕಟವಾಗುತ್ತಿದ್ದಂತೆ ದೆಹಲಿಯ ಸುತ್ತಮುತ್ತ ನಿಷೇದಾಜ್ಞೆ ಹೊರಡಿಸಲಾಗಿದೆ.



Loading...

ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​, ಅಯೋಧ್ಯೆ ಪ್ರಕರಣದ ಕುರಿತು ಎಲ್ಲಾ ದಾವೆಗಳ ವಾದ ಪ್ರತಿವಾದವನ್ನು ಸುಪ್ರೀಂ ಕೋರ್ಟ್​ ಆಲಿಸಿದೆ.  ಹಲವು ದಶಕಗಳ ಈ ವಿವಾದದ   ಕುರಿತು ಸುಪ್ರೀಂಕೋರ್ಟ್​ನ ಪಂಚ ಸದಸ್ಯಪೀಠ ತೀರ್ಪು ನೀಡಿದೆ. ಈ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ತೀರ್ಪಿನ ಬಳಿಕ ಜನರು ಎಲ್ಲರೂ ಶಾಂತಿ-ಸೌಹರ್ದವನ್ನು ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.



ಸುಪ್ರೀಂಕೋರ್ಟ್​ನ ಈ ಆದೇಶವನ್ನು ತುಂಬಿದ ಹೃದಯದಿಂದ ಸ್ವೀಕರಿಸೋಣ. ಇದು ಯಾರ ಸೋಲು ಅಲ್ಲ. ಯಾರ ಗೆಲುವು ಅಲ್ಲ. ಈ ಕುರಿತು ಭಾವನಾತ್ಮಕವಾಗಿ ಪ್ರತಿಕ್ರಿಯಿಸೋದು ಬೇಡ. ಶಾಂತಿ ಮತ್ತು ಸಾಮರಸ್ಯ ಮೇಲುಗೈ ಸಾಧಿಸಲಿ ಎಂದು ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪ ಟ್ವೀಟ್​ ಮಾಡಿದ್ದಾರೆ.



ಸುಪ್ರೀಂಕೋರ್ಟ್​ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿಟಿ ರವಿ, ಮುಸ್ಲಿಂರಿಗೆ 5 ಎಕರೆ ಬದಲಿ ಜಾಗ ನೀಡಿದ ಕ್ರಮ ನೀಡಿದ್ದು ಸರಿಯಾದ ಕ್ರಮ ಎಂದು ಸುಪ್ರೀಂ ಕೋರ್ಟ್​ ತೀರ್ಪು ಸ್ವಾಗತಿಸಿದ್ದಾರೆ.

 



ಅಯೋಧ್ಯೆ ಐತಿಹಾಸಿಕ ತೀರ್ಪನ್ನು ಎಲ್ಲರೂ ಸಮಚಿತ್ತದಿಂದ ಸ್ವೀಕರಿಸಬೇಕು ಎಂದು ಉಡುಪಿಯಲ್ಲಿ ಪೇಜಾವರ ಶ್ರೀಗಳು ಪ್ರತಿಕ್ರಿಯಿಸಿದ್ದಾರೆ. ಈ ತೀರ್ಪಿನ ಕುರಿತು ನನಗೆ ವೈಯಕ್ತಿಕ ಸಮ್ಮತ ಇದೆ. ಮುಸ್ಲಿಮರಿಗೂ 5 ಎಕರೆ ನೀಡುವಂತೆ ತೀರ್ಪಿನಲ್ಲಿದೆ . ಸರ್ಕಾರವೇ ರಾಮಮಂದಿರ ನಿರ್ಮಾಣ ಮಾಡಬೇಕು ಎಂದು ಸುಪ್ರೀಂಕೋರ್ಟ್​ ತೀರ್ಪಿನಲ್ಲಿ ಉಲ್ಲೇಖಿಸಿದೆ. ಹಿಂದೂಗಳಿಗೆ ಜನ್ಮಭೂಮಿಯ ಹಕ್ಕು ಮುಖ್ಯ. ಮುಸಲ್ಮಾನರಿಗೆ ಮಸೀದಿಗೆ ಜಾಗ ಮುಖ್ಯ ಎಂದಿದ್ದಾರೆ.

ಸುಪ್ರೀಂಕೋರ್ಟ್​ ತೀರ್ಪಿಗೆ ಒಪ್ಪಿಗೆ ಇದೆ. ಆದರೆ ತೀರ್ಪಿನ ಬಗ್ಗೆ ನಮಗೆ ತೃಪ್ತಿ ಇಲ್ಲ ಎಂದು ವಕೀಲ ಝಫ್ರಿಯಾಬ್ ಜಿಲಾನಿ  ತಿಳಿಸಿದ್ದಾರೆ. ಲಾ ಬೋರ್ಡ್​ನಿಂದ ತೀರ್ಪಿಗೆ ಒಪ್ಪಿಗೆ ಇದೆ. ತೀರ್ಪನ್ನು ಗೌರವಿಸುತ್ತೇವೆ. ಆದರೆ ನಮ್ಮ ನಿರೀಕ್ಷೆಗೆ ತಕ್ಕಂತಹ ತೀರ್ಪು ಬಂದಿಲ್ಲ. ತೀರ್ಪನ್ನ ಪರಾಮರ್ಶಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಮಸೀದಿ ನಿರ್ಮಾಣಕ್ಕೆ ಪ್ರತ್ಯೇಕ ಜಾಗ ನೀಡಿಕೆ ಸರಿಯಲ್ಲ. ಇದನ್ನು ನ್ಯಾಯ ಎಂದು ಸ್ವೀಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

First published:November 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...